ಡಾಲರ್‌ ಪಾರಮ್ಯ ಕೊನೆಗಾಣಲಿದೆಯೇ ?
ಜಿ.ಎಂ.ಇನಾಂದಾರ್‌
ಎರಡನೇ ಮಹಾಯುದ್ಧದ ನಂತರ ಶುರುವಾದ ಡಾಲರ್ ಪಾರಮ್ಯ ಅನೇಕ ದಶಕಗಳ ಕಾಲ ಅನಭಿಷಿಕ್ತ ಚಕ್ರವರ್ತಿಯ ರೀತಿಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಆಳುತ್ತಲೇ ಬಂದಿತ್ತು. ಆದರೆ ಡಾಲರ್‌ನ ಪಾರಮ್ಯ ಮುಗಿಯುವ ಲಕ್ಷಣಗಳು ಗೋಚರವಾಗುತ್ತಿವೆ. ಅಮೆ ರಿಕಾದ ಹಣಕಾಸು ತಜ್ಞರು ಈ ರೀತಿಯ ಡಾಲರ್ ಕುಸಿತದ ಎಚ್ಚರಿಕೆ ನೀಡುತ್ತಿದ್ದಾರೆ.
ಅಂತಾರಾಷ್ಟ್ರೀಯ ವಲಯದಲ್ಲಿ ನಡೆಯುತ್ತಿರುವ ಅನೇಕ ಬೆಳವಣಿಗೆಗಳು ಜಗತ್ತು ಡಾಲರ್ ಬಿಟ್ಟು ಬೇರೆ ಪರ್ಯಾಯಗಳನ್ನು ಹುಡುಕುವ ಪ್ರಯತ್ನದಲ್ಲಿದೆ. ಬ್ರಿಕ್ಸ್ ರಾಷ್ಟ್ರಗಳು(    &  ) ಜಗತ್ತಿನ ೪೦% ಜನಸಂಖ್ಯೆ ಯನ್ನೂ ಹಾಗೂ ಜಗತ್ತಿನ ಹಣಕಾಸು ವ್ಯವ ಹಾರದ ೨೫% ಪ್ರತಿನಿಧಿಸುತ್ತವೆ. ಇತ್ತೀಚಿಗೆ ರಶಿಯಾದ  ದ ಅಲೆಕ್ಸಾಂಡರ್ ಬಾಬಾಕೋವ್ ಮಾರ್ಚ್ ೩೦ರಂದು ಬ್ರಿಕ್ಸ್ ರಾಷ್ಟ್ರಗಳು ಹೊಸ ಕರೆನ್ಸಿಯೊಂದನ್ನು ನಿರೂಪಿಸುವಲ್ಲಿ ಆಸಕ್ತಿ ಹೊಂದಿದ್ದು, ಡಬಾರ್‌ನಲ್ಲಿ ನಡೆಯುವ ಮುಂದಿನ ಶೃಂಗಸಭೆಯಲ್ಲಿ ಹೊಸ ಕರೆನ್ಸಿಯನ್ನು ಪ್ರಸ್ತುತ ಪಡಿಸಲಾಗುವುದು ಎಂದು ಘೋಷಿಸಿದ್ದಾರೆ.
ಬ್ರಿಕ್ಸ್ ರಾಷ್ಟ್ರಗಳಾದ ಚೀನಾ ಮತ್ತು ಬ್ರೆಜಿಲ್ ತಮ್ಮ ಕರೆನ್ಸಿಗಳಲ್ಲಿಯೇ ವ್ಯವಹರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಈವರೆಗೆಮಧ್ಯವರ್ತಿಕ ರೆನ್ಸಿಯಾಗಿದ್ದ, ಡಾಲರ್‌ಗೆ ಇದರಿಂದ ಪೆಟ್ಟು ಬೀಳಲಿದೆ. ಚೀನಾ ತನ್ನ ಕರೆನ್ಸಿಯಾದ ರೆನ್ಮಿನ್ಬಿ () ಯನ್ನು ವಿಶ್ವ ವ್ಯಾಪಾರದ ಕರೆನ್ಸಿಯಾಗಿಸಲು ತೀವ್ರ ಪ್ರಯತ್ನಕ್ಕಿಳಿದೆ.
ಮಾರ್ಚ್ ೨೮ ರಂದು ಅಖಉಅಘೆ ದೇಶಗಳ ಹಣಕಾಸು ಮಂತ್ರಿಗಳ ಇತ್ತೀಚಿನ ಸಭೆಯಲ್ಲಿ ಅಮೆರಿಕಾದ ಡಾಲರ್,ಯುರೋಪಿನ್ ಯೂರೋ, ಜಪಾನಿಯೆನ್ ಹಾಗೂ ಬ್ರಿಟಿಷ್ ಪೌಂಡ್‌ಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ತಮ್ಮದೇಕರೆನ್ಸಿಗಳಲ್ಲಿ ವ್ಯವಹರಿಸಲು ಯೋಜನೆ ಮಾಡಿವೆ (   ) ಇದು ಈ ಮೊದಲು (  -) ನ ಮುಂದುವರಿದ ಭಾಗವಾಗಿದೆ. ಇದರಿಂದ  ದೇಶಗಳ ನಡುವೆ ಡಿಜಿಟಲ್ ಹಣಕಾಸು ವ್ಯವಹಾರ ಸುರಳೀತಗೊಳಿಸಲು ಸಾಧ್ಯವಾಗುವುದಲ್ಲದೆ, ಆಯಾ ದೇಶಗಳ ಕರೆನ್ಸಿಯಲ್ಲಿ ವ್ಯವಹರಿಸಲು ಸಾಧ್ಯ ವಾಗಲಿದೆ. ಈ ತರಹದಒಪ್ಪಂದಕ್ಕೆ ಇಂಡೋನೇಷಿಯಾ, ಮಲೇಶಿಯಾ, ಸಿಂಗಾಪೂರ, ಫಿಲಿಪ್ಪೀನ್ಸ್ ಹಾಗೂ ಥೈಲ್ಯಾಂಡ್ ನವೆಂಬರ್ ೨೦೨೨ ರಲ್ಲಿಯೇ ಸಹಿ ಹಾಕಿವೆ.
ಇಂಡೋನೇಷಿಯಾದ ಸೆಂಟ್ರಲ್ ಬ್ಯಾಂಕ್ ತಮ್ಮದೇ ಹಣ ಕಾಸು ವ್ಯವಹಾರದ ಆಂತರಿಕ ವ್ಯವಸ್ಥೆಯನ್ನು ರೂಪಿಸುವುದಾಗಿ ಮಾರ್ಚ್ ೨೭ ರಂದು ಘೋಷಿಸಿದೆ. ಇದರಿಂದ ನಮ್ಮ  ತರಹದ ವ್ಯವಸ್ಥೆ ಅಲ್ಲಿ ರೂಪಗೊಳ್ಳಲಿದೆ. ಅತೀ ಮಹತ್ವದ ಬೆಳವಣೆಗೆಯೊಂದರಲ್ಲಿ ಸೌದಿ ಅರೇಬಿಯಾ ಪೆಟ್ರೋ ಡಾಲರ್‌ಗೆ ಪೆಟ್ಟು ಕೊಡುವ ನಿರ್ಧಾರ ಕೈಗೊಂಡಿದೆ. ಅದೇನೆಂದರೆ ಶಾಂಘೈ ಕೋಆಪರೇಶನ್ ಆರ್ಗನೈಸೇಷನ್‌ನಲ್ಲಿ ಸಂವಾದದಲ್ಲಿ ತೊಡಗಲು ಒಪ್ಪಿಕೊಂಡಿದೆ. ಈ ಸಂಸ್ಥೆಯಲ್ಲಿ ಚೀನಾ, ರಷ್ಯಾ, ಭಾರತ, ಪಾಕಿಸ್ತಾನ ಹಾಗೂ ಇನ್ನಿತರ ನಾಲ್ಕು ದೇಶಗಳು ಸದಸ್ಯರಾಗಿದ್ದು, ರಾಜಕೀಯ, ಭದ್ರತೆ ಹಾಗೂ ವ್ಯಾಪಾರವೃದ್ಧಿಯನ್ನು ಉದ್ದೇಶವಾಗಿ ಹೊಂದಿವೆ.
ಇದು ಸೌದಿ ಅರೇಬಿಯಾ ಅಮೆರಿಕಾದ ನೆರಳಿನಿಂದ ಹೊರಬಂದು ತನ್ನದೇ ಸ್ವತಂತ್ರ ನಿರ್ಧಾರ ಕೈಗೊಳ್ಳುವ ದೇಶವಾಗು ವತ್ತಲೂ ಹಾಗೂ ಚೀನಾದ ಜೊತೆಗೆ ಉತ್ತಮ ಬಾಂಧವ್ಯ ಹೊಂದುವ ಉಪಕ್ರಮವಾಗಿದೆ. ಸೌದಿ ಅರೇಬಿಯಾ ಅಮೆರಿಕಾ ಪ್ರಯೋಜಿತ ನಿರ್ಬಂಧಗಳ ಹೊರತಾಗಿಯೂ ರಶಿಯಾ ದಿಂದ ೨.೫ ದಶಲಕ್ಷ ಬ್ಯಾರಲ್ ತೈಲ ಆಯಾತ ಮಾಡುವ ನಿರ್ಧಾರ ಕೂಡ ಡಾಲರ್‌ಗೆ ಪೆಟ್ಟು ಬೀಳುವ ನಿರ್ಧಾರವಾಗಿದೆ.
ಚೀನಾ ಇತ್ತೀಚಿಗೆ  ವ್ಯಾಪಾರವನ್ನು ತನ್ನ  ನಲ್ಲಿಯೇ ಚುಕ್ತಾ ಮಾಡಿದೆ. ಚೀನಾ ದೇಶದ ಸರ್ಕಾರಿ ಸಂಸ್ಥೆ    65,000  ಟನ್  ಯನ್ನು  ನಿಂದ ಆಮದು ಮಾಡಿಕೊಂಡಿದ್ದು, ಈ ವಿಷಯವನ್ನು       ದೃಢಪಡಿಸಿದೆ. ಭಾರತ ಇತ್ತೀಚಿಗೆ ತನ್ನ ರೂಪಾಯಿಯನ್ನು ಡಾಲರ್‌ಗೆ ಬದಲು ಬಳಸಲು ಪ್ರೋತ್ಸಾಹಿಸುತ್ತಿದೆ. ಇದು ವಿದೇಶಿ ವಿನಿಮಯದ ಅಂದರೆ ಡಾಲರ್‌ನ ಕೊರತೆ ಎದುರಿಸುತ್ತಿರುವ ಶ್ರೀಲಂಕಾ ದಂಥ ದೇಶಗಳಿಗೆ ಆಕರ್ಷಕವಾಗಿ ಕಾಣುತ್ತಿದ್ದು, ಅನೇಕ ದೇಶಗಳು ಭಾರತದ ರೂಪಾಯಿಯನ್ನು ಡಾಲರ್‌ಗೆ ಬದಲಾಗಿ ಬಳಸಲು ಉತ್ಸುಕವಾಗಿವೆ.
ಭಾರತದ ವಾಣಿಜ್ಯ ಕಾರ್ಯದರ್ಶಿ ಸುನೀಲ್ ಬರ್ಥವಾಲ್ ಇದು ಭಾರತದ ವಿದೇಶಿ ವಾಣಿಜ್ಯ ನೀತಿಯ ಭಾಗವಾಗಿದೆ ಎಂದು ಇತ್ತೀಚಿಗೆ ದೆಹಲಿಯಲ್ಲಿ ತಿಳಿಸಿದ್ದಾರೆ. ಸೌದಿ ಅರೇಬಿಯಾ ಕಿನ್ಯಾಗೆ ರಫ್ತು ಮಾಡುವ ತನ್ನ ತೈಲದ ಬೆಲೆಯನ್ನು ಕಿನ್ಯಾದಶಿಲ್ಲಿಂಗ್ಸ್‌ನಲ್ಲಿ ಸ್ವೀಕರಿಸಲು ಒಪ್ಪಿಕೊಂಡಿದೆ. ಇತ್ತೀಚಿನವರೆಗೆ ಡಾಲರ್‌ನಲ್ಲಿ ಜರುಗುತ್ತಿದ್ದ, ಬೃಹತ್ ವ್ಯವಹಾರಗಳು ಈಗ ದೇಶೀಕರೆನ್ಸಿಗಳಲ್ಲಿ ಹಾಗೂ ಡಾಲರ್ ಹೊರತಾದ ಇತರ ಕರೆನ್ಸಿಗಳಲ್ಲಿ ನಡೆಯುತ್ತಿರುವುದು ಡಾಲರ್ ತನ್ನ ಪಾರಮ್ಯದ ಕೊನೆಯತ್ತಸಾಗುತ್ತಿರುವುದರ ಮುನ್ಸೂಚನೆಯಾಗಿದೆ.