ಅಷ್ಟಕ್ಕೂ ಅವರೇಕೆ ಮೊಣಕಾಲ ಕೆಳಗಿನ ಬುದ್ದಿ ತೋರೋದು !
ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@.
ಅಷ್ಟಕ್ಕೂ ಎಲ್ಲದಕ್ಕೂ ಹೆಣ್ಣೆ ಬಲಿಪಶು ಆಗಬೇಕು? ಗಂಡಸೇ ಏಕೆ ಆರೋಪಿ ಆಗಬೇಕು? ಕೆಲ ವರ್ಷಗಳ ಹಿಂದೆ ಒಂದು ಸುದ್ದಿ ದೊಡ್ಡ ಸದ್ದು ಮಾಡಿತ್ತು. ಅದು; ಜೋಮ್ಯಾಟೋ ಡೆಲಿವರಿ ವ್ಯಕ್ತಿಯೊಬ್ಬ, ಆರ್ಡರ್‌ವೊಂದನ್ನು ಕೊಡಲು ಹೋದಾಗ, ಹಿತೇಶಾ ಚಂದ್ರಾಣಿ ಎಂಬ ಮಹಿಳೆಯಿಂದ ಬಾಯಿಗೆ ಬಂದಂತೆ ಬೈಯಿಸಿಕೊಡು, ಚಪ್ಪಲಿಯಿಂದ ಹೊಡೆಸಿಕೊಂಡ.
ಮತ್ತೆ ಅದೇ ಮಹಿಳೆ ಈ ಸಂದರ್ಭದಲ್ಲಿ ತನ್ನ ಮೂಗಿಗೆ ಆದ ಚಿಕ್ಕ ಗಾಯವನ್ನೇ ದೊಡ್ಡದಾಗಿ ತೋರಿಸಿ, ಅದನ್ನು ವಿಡಿಯೋ ಮಾಡಿ, ಟ್ವಿಟರ್‌ನಲ್ಲಿ ಹರಿಬಿಟ್ಟಿ ದ್ದಳು. ಪರಿಣಾಮ ಆ ಬಡಪಾಯಿ ಡೆಲಿವರಿ ಬಾಯ್ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಗಿ, ಕೇಸ್ ಸಹ ಆಗಿ. ಅವನು ಕೆಲ ಕಾಲ ಜೈಲುವಾಸ ವನ್ನೂ ಅನುಭವಿಸಿದ. ಅದು ಅವಳದ್ದೇ ತಪ್ಪು ಎಂದು ಗೊತ್ತಾಗುವವರೆಗೂ ಅವನು ಸಾಮಾಜಿಕ ಜಾಲತಾಣಗಳ ‘ಎಕ್ಸ್‌ಪರ್ಟ್’ಗಳಿಂದ, ಸ್ನೇಹಿತರಿಂದ, ನೆರಹೊರೆ, ಬಂಧುಗಳಿಂದ ಹಿಗ್ಗಾಮುಗ್ಗ ದೂಷಣೆಗೊಳಗಾಗಿದ್ದ. ಮಾನಸಿಕ ಯಾತನೆಯನ್ನೂ ಅನುಭವಿಸಿದ.
ಕೆಲಸ ಕಳೆದುಕೊಂಡು ದುರ್ಬರ ಪರಿಸ್ಥಿತಿಗೆ ತಲುಪಿದ್ದ. ವಾಸ್ತವದಲ್ಲಿ ಹಿತೇಶಾ ಚಂದ್ರಾಣಿಯ ತಪ್ಪಿದ್ದರೂ, ಅವಳ ಕಣ್ಣೀರಿಗೆ ಸೋತು ಜನ ಬೊಟ್ಟು ಮಾಡಿದ್ದು ಆ ಡೆಲಿವರಿ ಬಾಯ್‌ನನ್ನೇ. ಅವನು ತನ್ನ ತಪ್ಪಿಲ್ಲ ಎಂದು ಎಷ್ಟೇ ಗೋಗರೆದರೂ ಅವನ ಮಾತನ್ನು ನಂಬಿದವರು ಎಷ್ಟು? ಅವನ ಮೇಲೆ ಕೇಸ್ ಆದಾಗ ಅವನ ಬೆನ್ನಿಗೆ ನಿಂತು ಸಪೋರ್ಟ್ ಮಾಡಿದವರೆಷ್ಟು? ಅವನ ಆ ವಿಷಣ್ಣತೆಗೆ ಕಾರಣ ಅವನು ಗಂಡಸು!
ಇದು ಆ ಡೆಲಿವರಿ ಬಾಯ್‌ನದ್ದಷ್ಟೇ ಅಲ್ಲ. ಅಂಥವರು ನಮ್ಮ ಸುತ್ತಮುತ್ತಲೇ ಸಾವಿರಾರು ಸಂಖ್ಯೆಯಲ್ಲಿ ಇದ್ದಾರೆ. ಇದೇ ರೀತಿ ೨೦೧೩-೧೪ ರಲ್ಲಿ ೩೦ ಸಾವಿರಕ್ಕೂ ಹೆಚ್ಚು ಕೇಸ್ ಗಳು ಹಿಂಸೆ, ಕಿರುಕುಳದ ನೆಪವೊಡ್ಡಿ ಪುರುಷರ ಮೇಲೆ ದಾಕಲಾಗಿದ್ದವು. ಆದರೆ, ಹಾಗೆ ಹಾಕಿದ್ದ ಕೇಸ್‌ಗಳಲ್ಲಿ ಶೇ.೭೫ಕ್ಕೂ ಹೆಚ್ಚು ಸುಳ್ಳು ಆರೋಪದಿಂದ ( ) ಕೂಡಿದ್ದವು. ಕೆಲವು ಸರ್ವೇಗಳ ಪ್ರಕಾರ ೬೫ ಸಾವಿರಕ್ಕೂ ಹೆಚ್ಚು ಗಂಡಂದಿರು ತನ್ನ ಹೆಂಡತಿಯ ಕಾಟದಿಂದ ಆತ್ಮಹತ್ಯೆಗೊಳಗಾಗಿದ್ದಾರೆ. ಅಷ್ಟೇ ಅಲ್ಲ, ಗಂಡ ಮತ್ತವರ ಮನೆಯವರ ಮೇಲೆ ಸುಳ್ಳು ಅಪಾದನೆ ಮಾಡುವ ಹೆಂಡತಿಯ ಪಟ್ಟಿಯಂತೂ ಇತ್ತೀಚೆಗೆ ಪಾರ್ಲರ್‌ಗಳ ಸಂಖ್ಯೆಗಿಂತ ಹೆಚ್ಚು ಬೆಳೆಯುತ್ತಲೇ ಇದೆ.
ಪ್ರತಿದಿನವೂ ಹೆಂಡತಿಯಿಂದ ಬೇಸತ್ತಿರುವ ಗಂಡನ ಸ್ಥಿತಿಯನ್ನು ಜೋಕ್, ಕತೆ, ಕಾಮಿಡಿ ಶೋಗಳಲ್ಲೂ ನೋಡುತ್ತಲೇ ಇದ್ದೇವೆ. ಅದು ಗಾಳಿಯ ತರ ಹಗುರವಾಗಿಯೇ ಇದೆ ಹೊರvತೂ ಎಂದಿಗೂ ಅದರ ಬಗ್ಗೆ ದೊಡ್ಡ ಮಟ್ಟದ ಚರ್ಚೆಗಳು ಎಲ್ಲಿಯೂ ಕೇಳಿಲ್ಲ.
ಹೇಳಲೂ ಯಾರಿಗೂ ಬಾಯಿಲ್ಲ! ಗಂಡನಿಂದ ಹೆಂಡತಿಗೆ ಕಿರುಕುಳವಾದಾಗ, ಗಂಡನ ಮನೆಯವರು, ಅಕ್ಕಪಕ್ಕದವರು, ಅವನ ಸ್ನೇಹಿತರಿಂದ ಹಿಡಿದು ಆ ಊರಿನ ಎಲ್ಲ ಸಂಘ ಸಂಸ್ಥೆಗಳು, ಮಹಿಳಾ ಸಂಸ್ಥೆಗಳೆಲ್ಲ ಹಿರಿಯರಾಗಿ, ಆ ಜಗಳ ಬಿಡಿಸಲು, ಅವನನ್ನು ಬೈಯಲು ಬರುತ್ತಿರುತ್ತಾರೆ. ಕೆಲವೊಮ್ಮೆ ಅದು ಮುಂದೆ ಹೋಗಿ ಟಿವಿ-ಪೇಪರ್‌ಗಳಲ್ಲಿ ಸುದ್ದಿಯಾಗಿಯೂ ವಿಜೃಂಭಿಸುತ್ತದೆ. ಆದರೆ, ಅದೇ ಆ ಹೆಂಡತಿ ತನ್ನ ಗಂಡನಿಗೆ ಕಿರುಕುಳ ನೀಡಿದ್ದರೆ, ಪಾಪದ ಗಂಡಸು ‘ನಾಮರ್ದ’ ಎಂದು ಕರೆಸಿಕೊಳ್ಳುತ್ತಾನೆ.
ಆ ‘ಅಮ್ಮಾವ್ರ ಗಂಡ’ನಾದರೂ ತನಗಾಗುತ್ತಿರುವ ಕಿರುಕುಳದ ಬಗ್ಗೆ ಎಷ್ಟು ಜನರ ಮುಂದೆ ಹೇಳಿಕೊಂಡಿರುತ್ತಾನೆ? ಯಾವಸ್ಟೇಷನ್‌ನಲ್ಲಿ ಪೊಲೀಸ್ ಕಂಪ್ಲೆಂಟ್ ಕೊಡುತ್ತಾನೆ? ಹೋಗ್ಲಿ ಅಂತ ಹೇಳಿದರೂ, ‘ನಿನ್ಯಾವ ಸೀಮೆ ಗಂಡಸು’ ಅನ್ನೋ ಮಾತು ಗಳಿಗೆ ಅವನು ಪಕ್ಕಾಗಬೇಕು. ಭಾರತದಲ್ಲಿ ಹೆಂಡತಿ, ಪ್ರೇಯಸಿ ಅಥವಾ ಸ್ನೇಹಿತೆಯರಿಂದ ಪ್ರತಿದಿನ ಕಿರುಕುಳ, ದೌರ್ಜನ್ಯ ಕ್ಕೊಳಗಾದವರ ಸಂಖ್ಯೆ ಶೇ.೫೧.೬೪. ಭಾರತದ ಅರ್ಧಕ್ಕಿಂತ ಹೆಚ್ಚಿನ ಜನರು ಕಿರಕುಳ ಅನುಭವಿಸಿದರೂ ಅದು ಯಾರಿಗೂ ಸುದ್ದಿ ಅಲ್ಲ.
ಅದರಿಂದ ಟಿಆರ್‌ಪಿ, ವ್ಯೂವ್ಸ್ ಸಹ ಸಿಗಲ್ಲ! ಯಾಕಂದ್ರೆ, ಅವನು ಗಂಡಸಲ್ವಾ? ‘ಬದುಕು ಜಟಕಾಬಂಡಿ’, ‘ಸತ್ಯಮೇವ ಜಯತೆ’ ಅಂತ ಕಾರ್ಯಕ್ರಮಗಳಲ್ಲೂ ಗಂಡಸಿನ ಕಷ್ಟಗಳು ಮುನ್ನೆಲೆಗೆ ಬರೋದೇ ಇಲ್ಲ! ಸೆಕ್ಷನ್ ೪೯೮ ಎ. ಇದು ಗಂಡ ಅಥವಾ ಅವರ ಮನೆಯವರಿಂದ ದೌರ್ಜನ್ಯಕ್ಕೆ ಒಳಗಾದ ಹೆಂಡತಿಯ ರಕ್ಷಣೆಗಾಗಿ ಮಾಡಿರುವ ಕಾಯಿದೆ. ಇದನ್ನೇ ಎಷ್ಟೋಜನ, ಎಷ್ಟೋ ಕಾರಣಗಳಿಗೆ ಅಥವಾ ಗಂಡ ಮತ್ತವನ ಕುಟಂಬವನ್ನು ಹೆದರಿಸುವುದಕ್ಕಾಗಿಯೋ ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಆದರೆ, ಪಾಪ ಗಂಡಸಿಗೆ ಆ ಕಾಯಿದೆಯನ್ನು ಬಳಸುವ ‘ಪುಣ್ಯ’ವೂ ಇಲ್ಲ. ಅಷ್ಟೇ ಏಕೆ? ಸೆಕ್ಷನ್ ೩೫೪ ಎ, ೩೫೪ ಡಿ, ೩೭೫ ಕಾಯಿದೆಗಳೆಲ್ಲವು ಹೆಣ್ಣುಮಕ್ಕಳ ಪರವಾಗಿಯೇ ಇದೆ. ಏಕೆಂದರೆ, ಹೆಣ್ಣು ಮಕ್ಕಳು ತೊಂದರೆ ಅಂತ ಬಂದಾಗ ಅಪರಾಧಿ ಗಂಡಸೇ ಅಂತ ಕೋರ್ಟ್ ಆಗಲೇ ತೀರ್ಮಾನ ಮಾಡಿ ಎಷ್ಟೋ ವರ್ಷ ಆಗಿದೆ. ಇಡೀ ಪ್ರಪಂಚ ಮುಂದುವರಿದಿದ್ದರೂ,ಸಂವಿಧಾನ ಮಾತ್ರ ಅಲ್ಲಿಯೇ ಇದೆ. ಎಲ್ಲರನ್ನೂ ಸಮಾನರನ್ನಾಗಿ ನೋಡುವ ಸಂವಿಧಾನ ಮತ್ತು ಕೋರ್ಟ್ ನ ತಕ್ಕಡಿ ಹಿಡಿದ ನ್ಯಾಯದೇವತೆಗೆ ಗಂಡಸರ ಮೇಲೆ ಸ್ವಲ್ಪ ಕೋಪವಿತ್ತೇನೋ ಅದಕ್ಕೆ ಭಾರತದಲ್ಲಿ ‘ ’ ಸೆಕ್ಷನ್‌ಗಳು! ಅದೆಲ್ಲ ಏಕೆ? ಗಂಡಸರು ಯಾವತ್ತೂ ಸಮಾನರಲ್ಲವೇ? ಹಲವಾರು ಪ್ರಕರಣಗಳಲ್ಲಿ ಗಂಡಸೇ ಅಪರಾಧಿ ಆಗಿದ್ದರೂ, ಬೇರೆ ಗಂಡಸಿಗೆ ಹಿಂಸೆ ಆಗುವುದಿಲ್ಲವೇ? ಅದೇ ರೀತಿ ಒಬ್ಬ ಗಂಡಸು ಹೆಂಗಸಿನಿಂದ ಅತ್ಯಾಚಾರಕ್ಕೆ ಒಳಪಟ್ಟರೂ (ಇದು ಹೊಸದೆನ್ನಿ ಸಬಹುದು, ಆದರೆ, ಹೆಣ್ಣುಮಕ್ಕಳಿಂದ ಅತ್ಯಾಚಾರಕ್ಕೆ ಒಳಪಟ್ಟ ಎಷ್ಟೋ ಜನರಿದ್ದಾರೆ) ಅವನಿಗೆ ಕಾನೂನಿನಡಿಯಲ್ಲಿ ಕೇಸ್ ದಾಖಲಿಸಲು ಆಗುವುದಿಲ್ಲ. ಸರಿ ಒಪ್ಪೋಣ, ಹಿಂದಿನ ಕಾಲದಲ್ಲಿ ಗಂಡಸಿನ ದೌರ್ಜನ್ಯಕ್ಕೆ ಒಳಗಾಗಿದ್ದ ಮಹಿಳೆಗೆ ಕಾನೂನಿನ ಅಡಿಯಲ್ಲಿ ಸವಲತ್ತುಗಳನ್ನು ಕೊಡಲೇಬೇಕಿತ್ತು.
ಆದರೆ, ಅದು ಈಗ ಎಷ್ಟರ ಮಟ್ಟಿಗೆ ಊರ್ಜಿತ? ಅವರಿಗೆ ಕೊಟ್ಟ ಸವಲತ್ತೇ ಇಂದು ಗಂಡುಮಕ್ಕಳ ಮೇಲೆಅಸ್ತ್ರವಾಗಿ ಬಳಕೆ ಯಾಗುತ್ತಿದೆಯಲ್ಲ! ಭಾರತದಲ್ಲಿ ಮಹಿಳೆಯರ ರಕ್ಷಣೆ, ಕಲ್ಯಾಣ ಮತ್ತು ಹಕ್ಕುಗಳ ರಕ್ಷಣೆಗೆ, ಮಕ್ಕಳ ಹಕ್ಕುಗಳ ರಕ್ಷಣೆಗೆ, ಪ್ರಾಣಿಪಕ್ಷಿ ಹೀಗೆ ಸಿಕ್ಕಸಿಕ್ಕದ್ದಕ್ಕೆಲ್ಲ ಸರಕಾರದ ಅಂಗಸಂಸ್ಥೆಗಳು ಇವೆ. (ಅದರ ಕೆಲಸ ಎಷ್ಟು ಮಾಡುತ್ತೆಂದು ಗೊತ್ತಿಲ್ಲ ಅಷ್ಟೇ!)ಆದರೆ, ಅದೇ ಗಂಡುಮಕ್ಕಳ ಹಕ್ಕುಗಳ ರಕ್ಷಣೆಗೆ ಯಾವ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳೂ ಇಲ್ಲ!
ಎಷ್ಟೋ ವರ್ಷಗಳಿಂದ ಗಂಡಸರೇ ಸರಕಾರ ಆಳಿದರೂ ಅವರಿಗೆ ಒಂದು ಸಲವೂ ಇದರ ಬಗ್ಗೆ (ಹನಿಟ್ರ್ಯಾಪ್‌ನಲ್ಲಿ ಸಿಕ್ಕಾಕಿ ಕೊಂಡವರಿಗೂ) ಅನ್ನಿಸಿಲ್ಲವೇನೋ! ಗಂಡಸರದ್ದೂ ಜೀವನವೇ, ಅದು ಎಷ್ಟೋ ಸಲ ಅದ್ಹೇಗೆ ಮರೆತುಕೊಂಡು ಬಿಡುತ್ತೆ! ಅದಕ್ಕೆ ಚಿಕ್ಕ ಉದಾಹರಣೆ; ಗಂಡಸರ ದಿನಾಚರಣೆ! ಮೊನ್ನೆ ಎಂಬಿಎ ಪದವೀಧರೆ ಮತ್ತು ಒಬ್ಬ ಡಾಕ್ಟರ್‌ನ ವಿಚ್ಛೇದನ ಪ್ರಕರಣದಲ್ಲಿ, ಆ ಮಹಿಳೆ ತನ್ನ ತನ್ನ ಜೀವನ ನಿರ್ವಹಣೆಗೆ ತಿಂಗಳಿಗೆ ೫೦ ಸಾವಿರ ರು. ಖರ್ಚನ್ನು ತನ್ನ ಗಂಡನಿಂದ ಭರಿಸಲು ಕೋರ್ಟ್‌ಗೆ ಕೋರಿದಾಗ, ಕೋರ್ಟ್ ‘ವಿಚ್ಛೇದನ ಪಡೆದ ಮಹಿಳೆಯು ಎಂಬಿಎ ಪದವೀಧರೆಯಾಗಿದ್ದಾರೆ.
ಹೀಗಾಗಿ ಅವರು ಉತ್ತಮ ಸಂಬಳದ ಕೆಲಸ ಪಡೆಯಬಲ್ಲ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರಿಂದ ಸ್ವಾವಲಂಬಿ ಬದುಕು ಸಾಧ್ಯ. ಹೀಗಿರುವಾಗ ಪತಿಯಿಂದ ಜೀವನಾಂಶ ಪಡೆದರೆ ಅದು ಮಹಿಳೆಯನ್ನು ಆಲಸ್ಯಕ್ಕೆ ದೂಡುತ್ತದೆ. ಹಾಗೆಯೇ, ಪತಿಯ ಮೇಲೆ ಹೆಚ್ಚು ಅವಲಂಬಿತಳಾಗಿ ಇರುವಂತೆ ಮಾಡುತ್ತದೆ. ಮಹಿಳೆಯು ದುಡಿದು ಜೀವನ ಸಾಗಿಸಲು ಅರ್ಹರಾಗಿರುವ ಕಾರಣ ಆಕೆಯೇ ಪರಿಹಾರ ಕೊಡಬೇಕು. ಮಹಿಳೆಯು ದುಡಿದು ಜೀವನ ಸಾಗಿಸಲು ಅರ್ಹರಾಗಿರುವ ಕಾರಣ ಪತಿಯಿಂದ ಜೀವನಾಂಶ ಕೇಳುವುದು ಉಚಿತವಲ್ಲ.
ಉನ್ನತ ಶಿಕ್ಷಣ ಪಡೆದಿರುವ ಪತ್ನಿ ದುಡಿದು ಬದುಕು ಸಾಗಿಸಲಿ. ಹಾಗಾಗಿ ಪತಿ ಪರಿಹಾರ ಕೊಡಬೇಕು ಎಂದು ಆದೇಶಿಸುವು ದಿಲ್ಲ’. ಎಂಬ ಆದೇಶವನ್ನು ಕೊಟ್ಟಿತು. ಇದೇ ರೀತಿ ಬಿಲ್ ಗೇಟ್ಸ್ ಅವರ ಹೆಂಡತಿ ಮಿಲಿಂದಾ ಗೇಟ್ಸ್ ಜತೆ ವಿಚ್ಛೇದನವಾದಾಗ ಅವಳು ಪೀಕಿದ್ದು ೬.೩ ಬಿಲಿಯನ್ ಡಾಲರ್. ಅಮೇಜಾನ್ ಸಂಸ್ಥಾಪಕ ಜೆಫ್ ಬೆಜೊಸ್ ವಿಚ್ಛೇದನವಾದಾಗ ಅವನ ಹೆಂಡತಿಗೆ ೩೮ ಬಿಲಿಯನ್ ಡಾಲರ್‌ಗಳಷ್ಟು ಹಣವನ್ನು ಅವಳ ಜೀವನ ನಡೆಸಲು ಕೊಟ್ಟಿದ್ದ.
ಎಷ್ಟೋ ಜನ ಬ್ಯುಸಿನೆಸ್‌ಮನ್ ಮದುವೆ ಆಗುವುದಕ್ಕಿಂತ ಮೊದಲೇ ತಕ್ಕ ಮಟ್ಟಿಗಿನ ಶ್ರೀಮಂತಿಕೆಯನ್ನು ಹೊಂದಿರುತ್ತಾರೆ. ಅವರೆಲ್ಲರೂ ತಮ್ಮ ಬ್ಯುಸಿನೆಸ್ ಅನ್ನು ನಡೆಸಿಕೊಂಡ ಹೋಗುವುದರಲ್ಲೇ ಮಗ್ನರಾಗಿರುತ್ತಾರೆ. ಅವರಿಗೆ ಹೆಂಡತಿಯ ಸಹಾಯವೂ ಇರುವುದಿಲ್ಲ. ಇದ್ದರೂ ಅದು ಎಲ್ಲೋ ಕೆಲವು ಕಡೆ ಮಾತ್ರ. ಹಾಗಿದ್ದರೂ ಸಾವಿರಾರು ಕೋಟಿ ಹೆಂಡತಿಗೆಕೊಡುವುದು ಏತಕ್ಕೆ? ಜೀವನ ನಡೆಸಲು ಕನಿಷ್ಠ ಹಣವನ್ನು ಕೊಟ್ಟರೆ ಸಾಕಾಗುವುದಿಲ್ಲವೇ? ಪತ್ನಿಗೆ ಯಾವುದೇ ಕೆಲಸವಿಲ್ಲದೇ, ತನ್ನ ಜೀವನವನ್ನು ಸಾಗಿಸುವುದು ಕಷ್ಟವೇ.
ಆದರೆ, ಎಲ್ಲ ರೀತಿಯ ವಿದ್ಯೆ, ಬುದ್ಧಿಯಿದ್ದು, ಕೈಯಲ್ಲಿ ಕೆಲಸವೂ ಇದ್ದು ಗಂಡನಿಂದ ಜೀವನಾಂಶ ಕೇಳುವುದು ಎಷ್ಟು ಸರಿ? ಅದೇ ಹೆಂಗಸಿಗೆ ಗಂಡನಿಗಿಂತ ಹೆಚ್ಚಿನ ಸಂಬಳದ ಕೆಲಸವಿದ್ದು, ವಿಚ್ಛೇದನವಾದರೆ, ತಾನೂ ತನ್ನ ಗಂಡನಿಗೆ ಜೀವನಾಂಶ ಕೊಡಬಲ್ಲಳೇ? ಎಲ್ಲ ಕ್ಷೇತ್ರದಲ್ಲಿಯೂ ಗಂಡಸಿಗೆ ಸರಿಸಮಾನವಾದಂತಹ ಕೆಲಸಗಳಲ್ಲೇ ಎಷ್ಟೋ ಜನ ಮಹಿಳೆಯರಿದ್ದಾರೆ.
ನಮ್ಮ ದೇಶದ ರಾಷ್ಟಪತಿಯೂ ಮಹಿಳೆಯಲ್ಲವೇ? ಭಾರತ ಪುರುಷ ಪ್ರಧಾನ ರಾಷ್ಟ್ರವಾಗಿದ್ದರೂ ಮನೆಯ ಯಜಮಾನ ಪ್ರತಿ ನಿರ್ಧಾರಗಳಿಗೂ ತನ್ನ ಹೆಂಡತಿಯ ಮಾತನ್ನು ಕೇಳಿಯೇ ಕೇಳಿರುತ್ತಾನೆ. ಆದರೆ, ಇಂದಿನ ದಿನಗಳಲ್ಲಿ ಅದೇ ಗಂಡಸಿನ ವಿರುದ್ಧ ಎಷ್ಟು ಕೇಸ್‌ಗಳು ಆಗುತ್ತಿವೆ? ಅದರಲ್ಲಿ ಎಷ್ಟು ಸುಳ್ಳು ಆಪಾದನೆಗಳು ಇರುತ್ತವೆ? ಈ ರೀತಿಯ ಸುಳ್ಳು ಆಪಾದನೆ ಗಳನ್ನು, ಸುಳ್ಳು ಪ್ರಕರಣಗಳನ್ನು ದಾಖಲಿಸುವುದನ್ನು ಆಗಾಗ ನೋಡುತ್ತಲೇ ಇದ್ದೇವೆ.
ಈ ರೀತಿಯ ಸುಳ್ಳು ಆಪಾದನೆಗಳನ್ನು ಹೊರಿಸುವವರು ನಮ್ಮ ಸುತ್ತಮುತ್ತಲೇ ಇದ್ದಾರೆ. ಹಾಗಾದರೆ, ಬರೀ ಮೋಸ ಮಾಡಲಿಕ್ಕೆಂದೇ ಇದರ ಬಳಕೆ ಆಗುತ್ತಿವೆಯೇ? ಇಂಥ ಸುಳ್ಳು ಆಪಾದನೆಗಳಿಂದ ಆ ಗಂಡಸಿಗೆ ಎಷ್ಟೆಲ್ಲ ನೋವು, ಹಿಂಸೆ ಗಳಾಗಬಹುದು? ಅವನ ಮನೆಯವರ ಮಾನ, ಮರ್ಯಾದೆ ಎಲ್ಲ ಏನಾಗಬಹುದು? ಇಂಥದ್ದೇ ಸುಳ್ಳು ಪ್ರಕರಣಗಳುದಾಖಲಾಗುತ್ತಾ ಹೋದರೆ, ನಿಜವಾಗಿಯೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಗಳ ಕತೆ ಏನಾಗಬಹುದು? ಅಷ್ಟಕ್ಕೂ ಹೆಂಗಸ ರೇಕೆ ಎಲ್ಲದರಲ್ಲೂ ತಮ್ಮ ಮೊಣಕಾಲು ಕೆಳಗಿನ ಬುದ್ಧಿಯನ್ನು ತೋರಿಸುವುದು!
ಇದನ್ನೆಲ್ಲ ಬರೆಯಲು ಮೊನ್ನೆ ಇದೇ ರೀತಿಯ ಸುಳ್ಳು ಆರೋಪಗಳಿಂದ ಬೇಸತ್ತಿದ್ದ ಒಬ್ಬನನ್ನು ನೋಡಿದ ಮೇಲೆ ಬರಿಯಲೇ ಬೇಕಾದಂತಹ ಸಂಭವ ಹುಟ್ಟಿತು!