ಹತ್ತರ ಜತೆಗೆ ಹನ್ನೊಂದು ಆದ ಆಮ್‌ ಆದ್ಮಿ ಪಕ್ಷ
ವಿಶ್ಲೇಷಣೆ
ಗಣೇಶ್ ಭಟ್, ವಾರಣಾಸಿ
ಇತ್ತೀಚೆಗೆ ದೆಹಲಿಯ ಲಿಕ್ಕರ್ ಹಗರಣದ ವಿಚಾರಣೆಗಾಗಿ ಸಮ ಪಡೆದಿದ್ದ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸಿಬಿಐ ನಿಂದ ಸತತವಾಗಿ ಒಂಭತ್ತು ಗಂಟೆಗಳ ಕಾಲ ವಿಚಾರಣೆಗೊಳಗಾದರು. ಇದೇ ಹಗರಣದಲ್ಲಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ವಿಚಾರಣೆಗೊಳಗಾಗಿ ಈಗಾಗಲೇ ಜೈಲುಸೇರಿದ್ದಾರೆ.
ಕೇಜ್ರಿವಾಲ್ ಸರಕಾರದ ಇನ್ನೋರ್ವ ಸಚಿವನಾಗಿದ್ದ ಸತ್ಯೆಂದ್ರ ಜೈನ್ ಅಕ್ರಮ ಹಣ ವರ್ಗಾವಣಾ ಕೇಸಿನಲ್ಲಿ ಜೈಲುಪಾಲಾಗಿ ಒಂದು ವರ್ಷವಾಗುತ್ತಿದೆ. ಅಣ್ಣಾ ಹಜಾರೆ ನೇತೃತ್ವದಲ್ಲಿ 2011 ನೇ ಇಸವಿಯಲ್ಲಿ ಆರಂಭವಾದ ಭ್ರಷ್ಟಾಚಾರವಿರೋಧಿಆಂದೋಲನದಲ್ಲಿ ಭಾಗವಹಿಸಿ ಮುನ್ನೆಲೆಗೆ ಬಂದ ಅರವಿಂದ ಕೇಜ್ರಿವಾಲ. ಜನಲೋಕಪಾಲ್‌ನ ಜಾರಿಗೆ ಒತ್ತಾಯಿಸಿ ಅಣ್ಣಾ ಹಜಾರೆಯವರ ಜೊತೆಗೆ ಕೇಜ್ರಿವಾಲ್ ಸರಣಿ ನಿರಶನದಲ್ಲಿ ಪಾಲ್ಗೊಂಡು ಭಾರೀ ಮಾಧ್ಯಮ ಪ್ರಚಾರವನ್ನು ಪಡೆದುಕೊಂಡರು. ತನಗೆ ಯಾವುದೇ ರಾಜಕೀಯ ಆಸೆ ಆಕಾಂಕ್ಷೆಗಳಿಲ್ಲ ಹಾಗೂ ತಾನು ಯಾವತ್ತೂ ಚುನಾವಣೆಗೆಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಿದ್ದ ಕೇಜ್ರಿವಾಲ್ 2012 ರಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಜನಲೋಕಪಾಲ್ ಮಸೂದೆಯನ್ನು ಜಾರಿಗೆ ತರುವಲ್ಲಿವಿಫಲವಾಗಿದೆ ಎಂದು ಆರೋಪಿಸಿ ತನ್ನ ಸಂಗಡಿಗರನ್ನು ಸೇರಿಸಿಕೊಂಡು, ಸಕ್ರಿಯ ರಾಜಕಾರಣಕ್ಕೆ ಕಾಲಿಟ್ಟು, ಆಮ್ ಆದ್ಮಿ ಪಾರ್ಟಿ ಎಂಬ ಪಕ್ಷವನ್ನು ಸ್ಥಾಪಿಸಿದರು.
ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಗುರುತಿಸಿಕೊಂಡು ರಾಜಕೀಯಕ್ಕೆ ಪ್ರವೇಶ ಪಡೆದ ಕೇಜ್ರಿವಾಲ್ ಈಗ ಮದ್ಯದ ಹಗರಣದಲ್ಲಿ ಸಿಲುಕಿಕೊಂಡಿರುವುದು ವಿಪರ್ಯಾಸವೇ ಸರಿ! ದೆಹಲಿ ಸರಕಾರದ ಎರಡನೇ ಅತೀ ಪ್ರಮುಖ ವ್ಯಕ್ತಿ ಮನೀಶ್ ಸಿಸೋಡಿಯಾ, ಸಚಿವನಾಗಿದ್ದ ಸತ್ಯೇಂದ್ರ ಜೈನ್ ಜೈಲುಪಾಲಾಗಿರುವುದು ಆಮ್ ಆದ್ಮಿ ಪಕ್ಷದ ಸಾಚಾತನವನ್ನು ಬಯಲುಮಾಡಿದೆ.
೨೦೧೩ ರಲ್ಲಿ ದೆಹಲಿಯ ರಾಜಕೀಯ ಪರಿಸ್ಥಿತಿ ಕೇಜ್ರಿವಾಲ್‌ರ ರಾಜಕೀಯ ಎಂಟ್ರಿಗೆ ಪಕ್ವವಾಗಿತ್ತು. ದೆಹಲಿಯನ್ನು ಸತತವಾಗಿ ೧೫ ವರ್ಷಗಳ ಕಾಲ ಆಳ್ವಿಕೆ ಮಾಡಿದ್ದ ಶೀಲಾ ದೀಕ್ಷಿತ್ ಸರಕಾರವು ಕಾಮನ್ವೆಲ್ತ ಗೇಮ್ಸ ಹಗರಣಗಳಂತಹ ಹಲವು ಹಗರಣ ಗಳಲ್ಲಿ ಸಿಲುಕಿಕೊಂಡು ಹೆಸರುಗೆಡಿಸಿಕೊಂಡಿತ್ತು. ವಿದ್ಯುತ್ ದರ ಹಾಗೂ ಹಾಗೂ ನೀರಿನ ದರ ವಿಪರೀತ ಹೆಚ್ಚಾಗಿ ಜನ ಸರಕಾರದ ಬಗ್ಗೆ ರೋಸಿ ಹೋಗಿದ್ದರು. ಈ ಸಂದರ್ಭವನ್ನು ಸದುಪಯೋಗಪಡಿಸಿಕೊಂಡ ಕೇಜ್ರಿವಾಲ್ ಆಮ್ ಆದ್ಮಿ ಪಕ್ಷವುಅಧಿಕಾರಕ್ಕೆ ಬಂದರೆ ಜನರಿಗೆ ಉಚಿತ ವಿದ್ಯುತ್ ಹಾಗೂ ನೀರನ್ನು ಪೂರೈಸುವುದಾಗಿ ಭರವಸೆ ನೀಡಿದರು.
೨೦೧೩ರ ಡಿಸೆಂಬರ್ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಸರಕಾರ ರಚಿಸುವಷ್ಟು ಸಂಖ್ಯೆಯ ಎಂಎಲ್‌ಎಗಳನ್ನು ಪಡೆಯದಿದ್ದರೂ ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂತು. ಕಾಂಗ್ರೆಸ್ ಅಥವಾ ಬಿಜೆಪಿಯ ಬೆಂಬಲದಿಂದಸರಕಾರವನ್ನು ರಚಿಸುವುದಿಲ್ಲ ಎಂದು ತನ್ನ ಮಕ್ಕಳ ತಲೆಯ ಮೇಲೆ ಕೈ ಇಟ್ಟು ಶಪಥ ಮಾಡಿದ್ದ ಕೇಜ್ರಿವಾಲ್ ೨೦೧೩ ರಲ್ಲಿ ಕಾಂಗ್ರೆಸ್ ಪಕ್ಷದ ಬಾಹ್ಯ ಬೆಂಬಲವನ್ನು ಪಡೆದು ದೆಹಲಿಯಲ್ಲಿ ಸರಕಾರ ರಚಿಸಿದರು.
ಯಾವ ಪಕ್ಷದ ಭ್ರಷ್ಟ ಆಡಳಿತವನ್ನು ದೂರುತ್ತಾ ಕೇಜ್ರಿವಾಲ್ಅಧಿಕಾರಕ್ಕೆ ಬಂದರೋ ಅದೇ ಪಕ್ಷದೊಡನೆ ಸೇರಿಅಧಿಕಾರ ವನ್ನು ಪಡೆದು ತನ್ನದೇ ಶಪಥವನ್ನು ಮುರಿದರು.ಅಧಿಕಾರಕ್ಕೆ ಬಂದೊಡನೆ ಕಾಮನ್ವೆಲ್ತ್ ಗೇಮ್ಸ್ಹಗರಣದಲ್ಲಿ ಶೀಲಾ ದೀಕ್ಷಿತ್ ಅವರ ಮೇಲೆ ಕಾನೂನು ಕ್ರಮವನ್ನು ಕೈಗೊಳ್ಳುತ್ತೇನೆ ಎಂದು ಅರವಿಂದ ಕೇಜ್ರಿವಾಲ್ ಹೇಳಿದ್ದರೂಅಧಿಕಾರಕ್ಕೆ ಬಂದ ನಂತರ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ.
ಕೇಜ್ರಿವಾಲರ ಮೊದಲ ಸರಕಾರವು ಕೇವಲ ೪೯ ದಿವಸಗಳಷ್ಟು ಮಾತ್ರ ಬಾಳಿತಾದರೂ ಈಅವಧಿಯಲ್ಲಿ ಉಚಿತ ನೀರು ಹಾಗೂ ವಿದ್ಯುತ್ ಪೂರೈಕೆಯ ಭರವಸೆಗಳನ್ನು ಪೂರೈಸಿದುದರಿಂದ ೨೦೧೫ ರಲ್ಲಿ ನಡೆದ ಮರು ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಭಾರೀ ಬಹುಮತಗಳೊಂದಿಗೆಅಧಿಕಾರಕ್ಕೆ ಬಂತು. ೨೦೨೦ ರಲ್ಲಿ ದೆಹಲಿಯ ವಿಧಾನಸಭೆಗೆನಡೆದ ಚುನಾವಣೆಯ ಸಂದರ್ಭದಲ್ಲಿ ಮತ್ತೊಂದು ಕಂತಿನ ಉಚಿತಗಳನ್ನು ಆಮ್ ಆದ್ಮಿ ಪಕ್ಷವು ಘೋಷಿಸಿ ದೆಹಲಿಯ ಮಹಿಳೆಯರಿಗೆ ನಗರ ಸಾರಿಗೆ ಬಸ್ ಹಾಗೂ ಮೆಟ್ರೋ ರೈಲಿನಲ್ಲಿ ಉಚಿತ ಪ್ರಯಾಣದ ಭರವಸೆಯನ್ನು ಕೊಟ್ಟಿತು.
ಇದರ ಪರಿಣಾಮವಾಗಿ ಮತ್ತೊಮ್ಮೆ ಆಮ್ ಆದ್ಮಿ ಪಕ್ಷವುಅಧಿಕಾರಕ್ಕೆ ಬಂತು. ಆದರೆ ಇದೀಗ ದೆಹಲಿಯ ಉಚಿತ ವಿದ್ಯುತ್ ಯೋಜನೆಯು ನಿಲ್ಲುವ ಸಾಧ್ಯತೆ ಕಂಡುಬರುತ್ತಿದೆ. ದೇಶದಲ್ಲಿ ಉಚಿತ ಕೊಡುಗೆಗೆಳ ಘೋಷಣೆಗಳ ಮೂಲಕ ಮತದಾರರನ್ನು ಓಲೈಸುವ ಪರಿಪಾಠವನ್ನು ಆರಂಭಿಸಿದ್ದು ಆಮ್ ಆದ್ಮಿ ಪಕ್ಷವೇ! ಜನಲೋ ಕಪಾಲ್ ಮಸೂದೆಯ ಜಾರಿಗಾಗಿ ಹೋರಾಟ ಮಾಡಿಅಧಿಕಾರಕ್ಕೆ ಬಂದ ಆಮ್ ಆದ್ಮಿ ಪಕ್ಷವು ದೆಹಲಿಯಲ್ಲಿಅಧಿಕಾರಕ್ಕೆ ಬಂದು ೮ ವರ್ಷಗಳೇ ಕಳೆದರೂ ಇನ್ನೂ ದೆಹಲಿಯಲ್ಲಿ ಜನಲೋಕಪಾಲ್ ಮಸೂದೆಯನ್ನು ಜಾರಿಗೊಳಿಸಿಲ್ಲ.
ಅರವಿಂದ್ ಕೇಜ್ರಿವಾಲ, ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಝಿಯಾ ಇಲ್ಮಿ ಹಾಗೂ ಆನಂದ್ ಕುಮಾರ್ ಇವರು ಆಮ್ ಆದ್ಮಿ ಪಕ್ಷದ ಸ್ಥಾಪಕರು. ಕೇಜ್ರಿವಾಲ್ ಪಕ್ಷದ ಮೇಲೆ ಯಾವ ರೀತಿಯ ಬಿಗಿ ಹಿಡಿತವನ್ನುಸಾಧಿಸಿದ್ದಾರೆ ಎಂದರೆ ಆಮ್ ಆದ್ಮಿ ಪಕ್ಷದ ಸಹ ಸಂಸ್ಥಾಪಕರಾದ ಯೋಗೇಂದ್ರ ಯಾದವ್, ಪ್ರಶಾಂತ್ ಭೂಷಣ್, ಶಾಝಿಯಾ ಇಲ್ಮಿ ಹಾಗೂಆನಂದ್ ಕುಮಾರ್ ಪಕ್ಷದಿಂದ ಹೊರ ತಳ್ಳಲ್ಪಟ್ಟಿದ್ದಾರೆ. ನಾಯಕರಾಗಿದ್ದ ಕುಮಾರ್ ವಿಶ್ವಾಸ್, ಆಶುತೋಷ್ ಮೊದಲಾದ ವರೂ ಪಕ್ಷವನ್ನು ತ್ಯಜಿಸಿದ್ದಾರೆ. ಪಕ್ಷದ ಆಂತರಿಕ ಪ್ರಜಾಪ್ರಭುತ್ವವನ್ನು ಕಾಪಾಡುವ ದೃಷ್ಟಿಯಿಂದ ಅಡ್ಮಿ ರಲ್ ಎಲ್ ರಾಮದಾಸ್ ಅವರನ್ನು ಪಕ್ಷದ ಲೋಕಪಾಲರನ್ನಾಗಿ ನೇಮಿಸಲಾಗಿತ್ತು.
ಆದರೆ ಪಕ್ಷದ ಒಳಗೆ ಆಂತರಿಕ ಪ್ರಜಾಪ್ರಭುತ್ವಕ್ಕೆ ಯಾವುದೇ ಅವಕಾಶವಿಲ್ಲ ಎಂದು ಆರೋಪಿಸಿ ಅಡ್ಮಿರಲ್ ಎಲ್ ರಾಮದಾಸ್ ರಾಜೀನಾಮೆ ಕೊಟ್ಟು ವರ್ಷಗಳೇ ಕಳೆದಿವೆ. ಕೇಜ್ರೀವಾಲರ ರಾಜಕೀಯ ಪ್ರವೇಶಕ್ಕೆ ಕಾರಣೀಭೂತರಾದ ಅಣ್ಣಾ ಹಜಾರೆಯವರು ಕೇಜ್ರಿವಾಲರನ್ನುಅಧಿಕಾರ ಮದೋನ್ಮತ್ತ ಎಂದು ಟೀಕಿಸಿದ್ದಾರೆಹಾಗೂ ಕೇಜ್ರಿವಾಲರನ್ನು ಮುನ್ನೆಲೆಗೆ ತಂದತಪ್ಪಿಗೆ ಪಶ್ಚಾತ್ತಾಪವನ್ನೂ ವ್ಯಕ್ತಪಡಿಸಿದ್ದಾರೆ.
ಉಚಿತ ಕೊಡುಗೆಗಳ ಕೆಲವು ಭರವಸೆಗಳನ್ನು ಪೂರೈಸಿದ್ದು ಬಿಟ್ಟರೆ ಉಳಿದ ಬಹುತೇಕ ಭರವಸೆಗಳು ಪೂರ್ತಿಯಾಗಿಯೇ ಇಲ್ಲ. ದೆಹಲಿಯ ಆಮ್ ಆದ್ಮಿ ಪಕ್ಷವು ೨೦೧೫ ರಿಂದಲೇ ಯಮುನಾ ನದಿಯನ್ನು ಶುದ್ಧೀಕರಿಸುವ ಮಾತುಗಳನ್ನು ಆಡುತ್ತಲೇ ಬಂದಿದೆ. ಆದರೆಅಧಿಕಾರಕ್ಕೆ ಬಂದು ೮ ವರ್ಷಗಳೇ ಕಳೆದರೂ ಯಮುನಾ ನದಿಯು ಸ್ವಚ್ಛವಾಗಿಲ್ಲ. ಯಮುನಾ ನದಿಗೆ ಸೇರುವ ಕೊಳಚೆಯಲ್ಲಿ ೭೫% ಕೊಳಚೆಯು ಸೇರುವುದು ದೆಹಲಿಯಲ್ಲಿ.
ಮುಂದಿನ ೫ ವರ್ಷಗಳಿಗೊಳಗಾಗಿ ಯಮುನಾ ನದಿಯನ್ನು ಶುದ್ಧೀಕರಿಸುವುದಾಗಿ ೨೦೧೫ ರಲ್ಲಿ ಕೇಜ್ರಿವಾಲ್ ಹೇಳಿದ್ದರು. ನದಿ ನೀರನ್ನು ಸ್ವಚ್ಛಗೊಳಿಸುವ ಕಾರ್ಯ ಆರಂಭವಾಗಲೇ ಇಲ್ಲ. ಮುಂದಿನ ೪ ವರ್ಷಗಳಿಗೊಳಗಾಗಿ ಯಮುನೆಯನ್ನು ಶುದ್ಧೀಕರಿಸುವುದಾಗಿ ೨೦೧೯ ರಲ್ಲಿ ಕೇಜ್ರಿವಾಲ್ ಹೇಳಿದ್ದರು. ನದಿಯ ಪರಿಸ್ಥಿತಿಯಲ್ಲಿ ಯಾವ ಸುಧಾರಣೆಯೂ ಆಗಲಿಲ್ಲ. ಇದೀಗ ೨೦೨೩ ರಲ್ಲಿಯೂ ಮುಂದಿನ ೫ ವರ್ಷಗಳಲ್ಲಿ ಯಮುನಾನದಿಯನ್ನು ಶುದ್ಧೀಕರಿಸಿ ದೆಹಲಿಗರು ನದಿಯ ಬಗ್ಗೆ ಹೆಮ್ಮೆಪಡುವಂತೆ ಮಾಡುತ್ತೇನೆ ಎಂದು ಹೇಳುತ್ತಿದ್ದಾzರೆ.
ನದಿ ನೈರ್ಮಲ್ಯೀಕರಣದ ಡೆಡ್‌ಲೈನ್ ಅನ್ನು ಕೇಜ್ರಿವಾಲ್ ಸತತವಾಗಿ ಮುಂದೂಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂಯಮುನಾ ನದಿಯ ಶುದ್ಧೀಕರಣ ಕೆಲಸ ಆರಂಭವಾಗಿಯೇ ಇಲ್ಲ. ನದಿಗೆ ಸೇರುವ ಕೊಳಚೆ ನೀರನ್ನು ಸಂಸ್ಕರಿಸಿಶುದ್ಧೀಕರಿಸುವ ಪ್ಲಾಂಟ್‌ಗಳನ್ನು ದೆಹಲಿ ಸರಕಾರವು ಆರಂಭಿಸಬೇಕಿತ್ತು. ಈ ಕೆಲಸವನ್ನೂ ದೆಹಲಿ ಸರಕಾರ ಮಾಡಿಲ್ಲ. ನೀರಿನಲ್ಲಿರುವ ರಾಸಾಯನಿಕಗಳಿಂದಾಗಿ ನದಿಯು ಕೆಟ್ಟ ನೊರೆಯಿಂದ ತುಂಬಿ ಹೋಗುತ್ತದೆ.
ಉತ್ತರ ಭಾರತದಲ್ಲಿ ಹಿಂದೂಗಳು ಆಚರಿಸುವ ಛಾತ್ ಪೂಜೆಯ ಸಂದರ್ಭದಲ್ಲಿ ಭಕ್ತರು ನದಿ ನೀರಿನಲ್ಲಿ ಮುಳುಗು ಹಾಕುವ ಸಂಪ್ರದಾಯವಿದೆ. ದೆಹಲಿಯಲ್ಲಿ ನೊರೆಯಿಂದ ತುಂಬಿದ ಯಮುನಾ ನದಿಯಲ್ಲಿ ಭಕ್ತರು ಮೀಯಬೇಕಾದ ಪರಿಸ್ಥಿತಿಯ ಬಗ್ಗೆ ಮಾಧ್ಯಮ ವರದಿ ಗಳನ್ನು ನಾವು ನೋಡಿಯೇ ಇದ್ದೇವೆ. ಆಮ್ ಆದ್ಮಿ ಸರಕಾರವು ಯಮುನೆಯನ್ನು ಶುದ್ಧೀಕರಿಸುವಲ್ಲಿ ಸಂಪೂರ್ಣವಾಗಿವಿ-ಲವಾಗಿದೆ. ದೆಹಲಿಯ ಗಾಳಿಯ ಗುಣಮಟ್ಟ ತೀರಾ ಕಳಪೆಯಾಗಿದೆ. ಪ್ರತೀ ವರ್ಷ ನವೆಂಬರ್, ಡಿಸೆಂಬರ್ ತಿಂಗಳುಗಳ ಸಮಯದಲ್ಲಿ ದೆಹಲಿಯ ವಾತಾವರಣವು ತೀರಾ ಕಲುಷಿತಗೊಂಡು ಜಾಗತಿಕವಾಗಿ ಅತೀ ಹೆಚ್ಚು ಕಲುಷಿತ ವಾತಾವರಣವನ್ನು ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರುತ್ತದೆ.
ವಾಹನ ದಟ್ಟಣೆ ಮತ್ತು ರೈತರು ಬೆಳೆ ತ್ಯಾಜ್ಯಗಳನ್ನು ತಮ್ಮ ಹೊಲಗಳಲ್ಲಿ ಉರಿಸುವುದರಿಂದ ದೆಹಲಿಯಲ್ಲಿ ದಟ್ಟ ಹೊಗೆ ತುಂಬುತ್ತದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಸರಕಾರವು ಅಽಕಾರಕ್ಕೆ ಬರುವ ಮೊದಲು ಅರವಿಂದ ಕೇಜ್ರಿವಾಲ್ ದೆಹಲಿಯ ಕಲುಷಿತ ವಾತಾವರಣಕ್ಕೆ ಪಂಜಾಬ್ ಮತ್ತು ಹರ್ಯಾಣಾ ರಾಜ್ಯಗಳ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದರು.ಹರ್ಯಾಣ ಸರಕಾರವು ತೆಗೆದುಕೊಂಡ ಕ್ರಮಗಳಿಂದಾಗಿ ಅಲ್ಲಿ ರೈತರು ಕೃಷಿ ತ್ಯಾಜ್ಯಗಳಿಗೆ ಬೆಂಕಿ ಕೊಡುವ ಪ್ರಮಾಣ೪೦% ಗೆ ಇಳಿದಿದೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಸರಕಾರವೇಅಧಿಕಾರಕ್ಕೆ ಬಂದಿದ್ದರೂ ಅಲ್ಲಿ ರೈತರು ಕೃಷಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುವ ಪ್ರಮಾಣದಲ್ಲಿ ಯಾವುದೇ ಕಡಿಮೆ ಆಗಿಲ್ಲ.
ಈಗ ಕೇಜ್ರಿವಾಲ್ ದೆಹಲಿಯ ಕಳಪೆಗುಣ ಮಟ್ಟದ ಗಾಳಿಗೆ ಪಂಜಾಬ್ ಅನ್ನು ದೂರುವಂತಿಲ್ಲ. ಕರೋನಾ ಕಾಲದಲ್ಲಿ ದೆಹಲಿಯಲ್ಲಿ ಕರೋನಾ ಕೇಸುಗಳು ಹೆಚ್ಚಾಗುತ್ತಿದ್ದಾಗಸೋಂಕು ಹಾಗೂ ಸಾವುಗಳನ್ನು ನಿಯಂತ್ರಿಸಲು ದೆಹಲಿ ಸರಕಾರವುವಿಫಲವಾಗಿ, ದೆಹಲಿಯ ಆಸ್ಪತ್ರೆಗಳಿಗೆ ಕೇಂದ್ರ ಸರಕಾರವು ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಪೂರೈಕೆ ಮಾಡುತ್ತಿಲ್ಲ ಎಂದುಕೇಜ್ರಿವಾಲ್ ಆರೋಪಿಸಿದ್ದರು. ಕೊನೆಗೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿ ದೆಹಲಿಯಲ್ಲಿ ಲಭ್ಯವಿರುವ ಆಕ್ಸಿಜನ್ ಪ್ರಮಾಣದ ಆಡಿಟ್ ಮಾಡಿಸಲು ಆದೇಶಿಸಿ ದಾಗ ಕೇಜ್ರಿವಾಲ್ ದೆಹಲಿಯ ಆಸ್ಪತ್ರೆಗಳಲ್ಲಿ ಸಾಕಷ್ಟು ಆಕ್ಸಿಜನ್ ಲಭ್ಯವಿದೆ ಎಂದು ಒಪ್ಪಿಕೊಂಡು ಆಡಿಟ್‌ನಿಂದ ತಪ್ಪಿಸಿಕೊಂಡಿದ್ದರು.
ಪ್ರಧಾನಿ ಮೋದಿಯವರು ಕರೋನಾ ವಿಚಾರವಾಗಿ ದೇಶದ ರಾಜ್ಯಗಳ ಮುಖ್ಯಮಂತ್ರಿಗಳೊಡನೆ ವಿಡಿಯೋ ಸಮಾಲೋಚನೆ ನಡೆಸುತ್ತಿzಗ ಈ ಸಮಾಲೋಚನಾ ಮಾತುಕತೆಗಳು ರಾಷ್ಟೀಯ ಚ್ಯಾನೆಲ್‌ಗಳಲ್ಲಿ ನೇರ ಪ್ರಸಾರವಾಗುವಂತೆ ಮಾಡಿ ನಂತರ ಪ್ರಧಾನಿಯಿಂದ ಛೀಮಾರಿಗೊಳಗಾಗಿ ಕ್ಷಮೆ ಕೇಳಿದ್ದರು ಕೇಜ್ರೀವಾಲ. ಕೇಂದ್ರ ಮಂತ್ರಿಗಳಾಗಿದ್ದ ಅರುಣ್ ಜೇಟ್ಲಿ ಹಾಗೂ ನಿತಿನ್ ಗಡ್ಕರಿಯವರ ಮೇಲೆ ಸುಳ್ಳು ಆರೋಪಗಳನ್ನು ಕೇಜ್ರಿವಾಲ್ ಹೊರಿಸಿದ್ದರು. ನಂತರ ಜೇಟ್ಲಿ ಹಾಗೂ ಗಡ್ಕರಿಯವರು ಇವರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ಹೂಡಿದಾಗ ಕೊನೆಗೆ ಅರವಿಂದ ಕೇಜ್ರಿವಾಲ್ ಸಾರ್ವಜನಿಕವಾಗಿ ಕ್ಷಮೆಯನ್ನು ಯಾಚಿಸಿದ್ದರು.
ದೆಹಲಿಯ ಆಮ್ ಆದ್ಮಿ ಸರಕಾರವು ಜಾಹೀರಾತಿಗಾಗಿ ಅತೀ ಹೆಚ್ಚು ಹಣವನ್ನು ವ್ಯಯಿಸುವ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ೨೦೧೫ ರ ನಂತರ ದೆಹಲಿ ಸರಕಾರದ ಜಾಹೀರಾತು ವ್ಯಯವು ೪೪ ಪಟ್ಟು ಹೆಚ್ಚಾಗಿದೆ. ಕರೋನಾ ಕಠಿಣ ಕಾಲದಲ್ಲೂ ಕೇಜ್ರಿವಾಲ್ ಸರಕಾರವು ೨೯೩ ಕೋಟಿ ರುಪಾಯಿಗಳನ್ನು ಜಾಹೀರಾತುಗಳಿಗಾಗಿ ವ್ಯಯಿಸಿತ್ತು! ಈ ವರ್ಷದ ಬಜೆಟ್‌ನಲ್ಲಿ ಜಾಹೀರಾತಿಗಾಗಿ ೫೫೮ ಕೋಟಿ ರುಪಾಯಿಗಳಷ್ಟು ದೊಡ್ಡ ಮೊತ್ತವನ್ನು ದೆಹಲಿ ಸರಕಾರವು ಮೀಸಲಿಟ್ಟಿರುವು ದನ್ನು ದೆಹಲಿಯ ಎಲ್ ಜಿ ಆಕ್ಷೇಪಿಸಿ ಬಜೆಟ್‌ನ್ನು ಸ್ವಲ್ಪ ದಿವಸಗಳ ಕಾಲ ತಡೆಹಿಡಿದಿದ್ದರು.
ಆಮ್ ಆದ್ಮಿ ಪಕ್ಷವುಅಧಿಕಾರದಲ್ಲಿರುವ ಪಂಜಾಬಿನ ಕಾನೂನು ವ್ಯವಸ್ಥೆ ಮತ್ತು ಆರ್ಥಿಕತೆ ದಿನೇ ದಿನೇ ಹದಗೆಡುತ್ತಿದೆ. ಪಂಜಾಬ್‌ನಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿ ಚಳುವಳಿ ದಿನೇ ದಿನೇ ಪ್ರಬಲವಾಗುತ್ತಿದೆ, ರೌಡಿಸಂ, ಗ್ಯಾಂಗ್ ವಾರ್, ಕೊಲೆಗಳು ಹೆಚ್ಚಾಗುತ್ತಿವೆ. ಖಲಿಸ್ತಾನೀ ನಾಯಕ ಅಮೃತ್ ಪಾಲ್ ಸಿಂಗ್ ತಲೆಮರೆಸಿಕೊಂಡು ಒಂದು ತಿಂಗಳೇ ಕಳೆದರೂ ಅವನನ್ನು ಪತ್ತೆಹಚ್ಚಿ ಹಿಡಿಯಲು ಪಂಜಾಬ್ ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ. ಉಚಿತ ಘೋಷಣೆಗಳನ್ನು ಜಾರಿಮಾಡಿ ಸಾಲದ ಸುಳಿಯಲ್ಲಿ ಸಿಲುಕಿರುವ ಪಂಜಾಬ್ ಇದೀಗ ದೇಶದಲ್ಲಿ ಅತೀ ಹೆಚ್ಚು ಸಾಲವನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ.
ದೋಷಯುಕ್ತ ಅಬಕಾರೀ ನೀತಿಯನ್ನು ಜಾರಿಗೆ ತಂದು ಭ್ರಷ್ಟಾಚಾರವೆಸಗಿ ಸಿಬಿಐ ಹಾಗೂ ಇಡಿಗಳ ತನಿಖೆಯಲ್ಲಿ ದೆಹಲಿ ಸರಕಾರವು ಸಿಕ್ಕಿಬಿದ್ದಿದೆ. ದೆಹಲಿಯಲ್ಲಿ ನಡೆದ ಕೋಮು ದಂಗೆಗೆ ಪ್ರಮುಖ ಕಾರಣನಾದ ವ್ಯಕ್ತಿ ಆಮ್ ಆದ್ಮಿ ಪಕ್ಷದ ಶಾಸಕಆಮಾನಾತು ಖಾನ್. ಉಚಿತ ಘೋಷಣೆಗಳ ನಿರತವಾಗಿರುವ ದೆಹಲಿಯು ಅಭಿವೃದ್ಧಿ ಕೆಲಸಗಳಲ್ಲಿ ಹಿಂದೆಬಿದ್ದಿದೆ. ದೆಹಲಿಯ ರಸ್ತೆಗಳು ಹದೆಗೆಟ್ಟು ಹೋಗಿವೆ. ಮಳೆನೀರು ಹೋಗಲು ವ್ಯವಸ್ಥೆ ಇಲ್ಲ. ಯಮುನಾ ನದಿ ಹಾಗೂ ಗಾಳಿ ಕಲುಷಿತವಾಗಿಯೇ ಉಳಿದಿವೆ. ಅಲ್ಲಿ ೨೦೧೫ ರ ನಂತರ ಹೊಸದಾಗಿ ಒಂದೇ ಒಂದು ಕಾಲೇಜನ್ನು ಆರಂಭಿಸಲಾಗಿಲ್ಲ. ಜನರು ಉಚಿತ ಕೊಡುಗೆ ಗಳ ಭರವಸೆಗಳಿಗೆ ಮರುಳಾಗಿ ಸರಕಾರವನ್ನು ಆಯ್ಕೆ ಮಾಡಿದರೆ ಅಂತಹ ಸರಕಾರದಿಂದ ಬೇರೇನನ್ನು ನಿರೀಕ್ಷಿಸ ಬಹುದು?