ಭಾರತದ ವಿರುದ್ದ ನಕಲಿ ಜಾಗತಿಕ ಸೂಚ್ಯಂಕಗಳು
ಅವಲೋಕನ
ಗಣೇಶ್ ಭಟ್, ವಾರಣಾಸಿ
ನಕಾರಾತ್ಮಕ ಅಂಕಿ ಅಂಶಗಳಿಂದ ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವುದು ಇದೇ ಮೊದಲೇನಲ್ಲ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಬಗ್ಗೆ ಪೂರ್ವಗ್ರಹ ಹೊಂದಿರುವ ಅನೇಕ ಸಂಸ್ಥೆಗಳು ವಿವಿಧ ರೀತಿಯ ಜಾಗತಿಕ ಸೂಚ್ಯಂಕಗಳನ್ನು ಪ್ರಕಟಿಸುತ್ತಲೇ ಇರುತ್ತವೆ.
ಇತ್ತೀಚೆಗೆ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಹೆಸರಿನ ಸಂಸ್ಥೆಯು ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಭಾರತವು ಈ ಪಟ್ಟಿಯಲ್ಲಿ ೧೫೦ ರಿಂದ ೧೬೧ನೇ ಸ್ಥಾನಕ್ಕೆ ಕುಸಿದಂತೆ ತೋರಿಸಲಾಗಿದೆ. ಈ ಪಟ್ಟಿಯ ಪ್ರಕಾರ ೨೦೨೨ ರಲ್ಲೂ ಭಾರತವು ೧೪೧ನೇ ಸ್ಥಾನದಿಂದ ೧೫೦ನೇ ಸ್ಥಾನಕ್ಕೆ ಕುಸಿದಿತ್ತು.
ಈ ಸಂಸ್ಥೆಯು ಹಿಂದೂ ರಾಷ್ಟ್ರೀಯವಾದಿ ಬಿಜೆಪಿ ಪಕ್ಷದ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ ಹೇರಲಾಗುತ್ತಿದೆ ಎಂದು ದೂರಿದೆ. ಆದರೆ ಈ ಸಂಸ್ಥೆಯ ಆರೋಪದಲ್ಲಿ ಹುರುಳಿಲ್ಲ. ಏಕೆಂದರೆ ೨೦೦೪ ರಲ್ಲಿ ಭಾರತವು ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಪಟ್ಟಿಯಲ್ಲಿ ೧೨೦ ನೇ ಸ್ಥಾನದಲ್ಲಿದ್ದು ೨೦೧೪ ಕ್ಕಾಗುವಾಗ ೧೪೦ ನೇ ಸ್ಥಾನಕ್ಕೆ ಕುಸಿದಿತ್ತು.
ಈ ಅವಧಿಯಲ್ಲಿ ಭಾರತದಲ್ಲಿ ಅಧಿಕಾರದಲ್ಲಿ ಇದ್ದುದು ಕಾಂಗ್ರೆಸ್ ಪಕ್ಷ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವ ಪಾಕಿಸ್ತಾನ, ಅಫಘಾನಿಸ್ತಾನ, ಸೂಡಾನ್, ಸೋಮಾಲಿಯಾಗಳಂತಹ ದೇಶಗಳು ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ ಎಂಬುದು ಈ ವರದಿಯ ವಿರೋಧಾಭಾಸತನವನ್ನು ಎತ್ತಿ ತೋರಿಸುತ್ತದೆ.
ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಕುರಿತಾದ ಇನ್ನೊಂದು ಕುತೂಹಲಕರ ವಿಷಯವೇನೆಂದರೆ ಈ ಸಂಸ್ಥೆಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಮುಖ ವ್ಯಕ್ತಿ ಭಾರತ ವಿರೋಧಿ ಬಿಲಿಯನೇರ್ ಜಾರ್ಜ್ ಸೊರೋಸ್. ಭಾರತದಲ್ಲಿ ಆಳ್ವಿಕೆ ನಡೆಸುತ್ತಿರುವ ರಾಷ್ಟ್ರೀಯವಾದಿ ನಾಯಕ ಮೋದಿಯವರ ಆಡಳಿತವನ್ನು ಕೊನೆಗೊಳಿಸುವ ಶಪಥವನ್ನು ದಾವೋಸ್ ಶೃಂಗಸಭೆಯಲ್ಲಿ ಮಾಡಿದ ವ್ಯಕ್ತಿ ಈ ಸೊರೋಸ್. ೨೦೧೮ ರಲ್ಲಿ ಹಂಗೇರಿ ದೇಶವು ಜಾರ್ಜ್ ಸೊರೋಸ್‌ನ ಅನುದಾನದಿಂದ ನಡೆಯುತ್ತಿದ್ದ ಎನ್‌ಜಿಒಗಳನ್ನು ನಿಷೇಧಿಸಿದುದನ್ನು ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಯು ಖಂಡಿಸಿತ್ತು.
ಇದು ಜಾರ್ಜ್ ಸೊರೋಸ್ ಹಾಗೂ ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್ ಸಂಸ್ಥೆಗಳ ನಡುವಿನ ಬಾಂಧವ್ಯವನ್ನು ಸೂಚಿಸುತ್ತದೆ.ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ವಿಚಾರವು ನಮ್ಮಲ್ಲೂ ಸಹ ಬಹಳ ಚರ್ಚೆಗೆ ಒಳಗಾಗುತ್ತಿದೆ. ಸೂಚ್ಯಂಕದ ವರದಿಯನ್ನು ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸಿದ್ದಾರೆ. ನ್ಯಾಯಾಧೀಶರು ಈ ವಿಚಾರವನ್ನು ಸುಪ್ರೀಂ ಕೋರ್ಟಿನಲ್ಲೂ ಪ್ರಸ್ತಾಪಿಸಿದ್ದಾರೆ.
ಸುಪ್ರೀಂ ಕೋರ್ಟಿನ ನ್ಯಾಯಾಽಶರ ಮಾತುಗಳಿಗೆ ನ್ಯಾಯಾಲಯದಲ್ಲೇ ಪ್ರತಿಕ್ರಿಯಿಸಿರುವ ದೇಶದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ‘ಈ ರೀತಿಯ ಅಂಕಗಳು, ಅಂಕ ಕೊಡುವ ವ್ಯಕ್ತಿಯನ್ನು ಅನುಸರಿಸಿರುತ್ತದೆ, ನಾನು ಅಂಕ ಕೊಡುವವನಾಗಿದ್ದರೆ ಭಾರತಕ್ಕೆ ಮೊದಲ ಅಂಕವನ್ನು ಕೊಡುತ್ತಿದ್ದೆ’ ಎಂದು ಉತ್ತರಿಸಿದ್ದಾರೆ. ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಕುರಿತಾಗಿ ಮಾತನಾಡಿ ರುವ ಭಾರತದ ವಿದೇಶಾಂಗ ಸಚಿವರಾದ ಡಾ.ಎಸ್. ಜೈಶಂಕರ್ ‘ಅಂಕಗಳನ್ನು ಕೊಡಲು ಅನುಸರಿಸುತ್ತಿರುವ ಮಾನದಂಡವು ಪ್ರಶ್ನಾರ್ಹವಾಗಿದೆ ಹಾಗೂ ಇದೊಂದು ಒತ್ತಡ ಹೇರುವ ತಂತ್ರವಾಗಿದೆ. ಭಾರತದ ಪತ್ರಿಕಾರಂಗವು ಯಾವ ನಿರ್ಬಂಧವೂ ಇಲ್ಲದೆ ಕಾರ್ಯ ನಿರ್ವಹಿಸುತ್ತಿದೆ’ ಎಂದು ಹೇಳಿದ್ದಾರೆ.
ಹಾಗೆ ನೋಡಿದರೆ ಭಾರತದಲ್ಲಿ ಪತ್ರಕರ್ತರ ಬಂಧನ ನಡೆಯುತ್ತಿರುವುದು ಬಿಜೆಪಿಯೇತರ ಪಕ್ಷಗಳು ಅಧಿಕಾರ ನಡೆಸುತ್ತಿರುವ ರಾಜ್ಯಗಳಲ್ಲೇ ಹೆಚ್ಚು. ೨೦೨೦ ರಲ್ಲಿ ರಿಪಬ್ಲಿಕ್ ಟಿವಿಯ ಅರ್ನಾಬ್ ಗೋಸ್ವಾಮಿಯನ್ನು ಸುಳ್ಳು ಆರೋಪದ ಮೇಲೆ ಬಂಧಿಸಿದ್ದುಅಂದು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಗಳ ಮಹಾ ಅಗಡಿ ಸರಕಾರ. ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಅಂದಿನ ಸರಕಾರವನ್ನುತಮ್ಮ ಟಿವಿ ಶೋಗಳಲ್ಲಿ ಸದಾ ಪ್ರಶ್ನಿಸುತ್ತಿದ್ದ ಅರ್ನಾಬ್ ಅನ್ನು ನಿಯಂತ್ರಿಸಲು ಉದ್ಧವ್ ಠಾಕ್ರೆ ಈ ಕ್ರಮವನ್ನು ಕೈಗೊಂಡಿದ್ದರು. ದೆಹಲಿಯ ಮುಖ್ಯ ಮಂತ್ರಿ ಅರವಿಂದ್ ಕೇಜ್ರಿವಾಲರ ನಿವಾಸ ಶೀಷ್ ಮಹಲ್‌ನ ಪುನರ್ನಿರ್ಮಾಣದಲ್ಲಿ ನಡೆದ ಅವ್ಯವಹಾರ ವನ್ನು ಬಯಲಿಗೆ ಎಳೆದಿದ್ದ ಟೈಮ್ಸ್ ನೌ ಚ್ಯಾನೆಲ್‌ನ ರಿಪೋರ್ಟರ್ ಭಾವನಾ ಕಿಶೋರ್ ಅವರನ್ನು ಆಮ್ ಆದ್ಮಿ ಸರಕಾರವುಅಽಕಾರದಲ್ಲಿರುವ ಪಂಜಾಬ್‌ನ ಪೊಲೀಸರು ಕೆಲವು ದಿವಸಗಳ ಹಿಂದೆ ಬಂಧಿಸಿದ್ದರು.
ಡಿಎಂಕೆ ಸರಕಾರವನ್ನು ಟೀಕಿಸುತ್ತಿದ್ದ ತಮಿಳುನಾಡಿನ ರಾಜಕೀಯ ವಿಶ್ಲೇಷಕ ಕಿಶೋರ್ ಕೆ. ಸ್ವಾಮಿಯನ್ನು ಸ್ಟಾಲಿನ್ ಸರಕಾರವು ಎರಡು ಬಾರಿ ಬಂಧಿಸಿದೆ. ಪಶ್ಚಿಮ ಬಂಗಾಳದ ಮೊಮಿನ್ಪುರ್ ಗಲಭೆಗಳ ಕುರಿತು ವರದಿ ಮಾಡಿದ್ದ ಮನಾಬ್ ಗುಹಾ ಹೆಸರಿನ ಪತ್ರಕರ್ತನನ್ನು ಮಮತಾ ಬ್ಯಾನರ್ಜಿ ಸರಕಾರವು ಬಂಧಿಸಿತ್ತು. ಪತ್ರಕರ್ತರ ಹಿತವನ್ನು ಕಾಯ್ದುಕೊಳ್ಳಬೇಕಾಗಿದ್ದ ಭಾರತದ ಎಡಿಟರ್ಸ್ ಗಿಲ್ಡ್ ಈ ಎಲ್ಲಾ ಸಂದರ್ಭಗಳಲ್ಲೂ ಬಾಯಿ ಮುಚ್ಚಿ ಕೂತಿತ್ತು.
ನಕಾರಾತ್ಮಕ ಅಂಕಿ ಅಂಶಗಳನ್ನು ಇಟ್ಟುಕೊಂಡು ಭಾರತದ ಪ್ರಭಾವವನ್ನು ತಗ್ಗಿಸುವ ಪ್ರಯತ್ನಗಳು ನಡೆಯುತ್ತಿರುವುದುಇದೇ ಮೊದಲೇನಲ್ಲ. ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಬಗ್ಗೆ ಪೂರ್ವಗ್ರಹ ಹೊಂದಿರುವ ಅನೇಕ ಸಂಸ್ಥೆಗಳು ವಿವಿಧ ರೀತಿಯ ಜಾಗತಿಕ ಸೂಚ್ಯಂಕಗಳನ್ನು ಪ್ರಕಟಿಸುತ್ತಲೇ ಇರುತ್ತವೆ. ಐರ್ಲೆಂಡಿನ ಕನ್ಸರ್ನ್ ವರ್ಲ್ಡ್ ವೈಡ್ ಹಾಗೂ ಜರ್ಮನಿಯ ವೆಲ್ಟ್ ಹಂಗರ್ ಹೈಲೈಫ್ ಹೆಸರಿನ ಸಂಸ್ಥೆಗಳು ಜಂಟಿಯಾಗಿ ಜಾಗತಿಕ ಹಸಿವಿನ ಸೂಚ್ಯಂಕ ಎನ್ನುವ ಪಟ್ಟಿಯನ್ನು ಪ್ರತೀ ವರ್ಷ ಬಿಡುಗಡೆ ಮಾಡುತ್ತವೆ.
೨೦೨೨ ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ೧೦೧ ರಿಂದ ೧೦೭ನೇ ಸ್ಥಾನಕ್ಕೆ ಕುಸಿದಂತೆ ತೋರಿಸಲಾಗಿತ್ತು. ಈ ಸೂಚ್ಯಂಕದ ಪ್ರಕಾರ ೨೦೧೪ ರಲ್ಲಿ ಭಾರತವು ೫೫ನೇ ಸ್ಥಾನದಲ್ಲಿತ್ತು. ಕಳೆದ ೮ ವರ್ಷಗಳಲ್ಲಿ ಹಸಿವಿನ ಸೂಚ್ಯಂಕದಲ್ಲಿ ಭಾರತವು ೫೨ ಸ್ಥಾನಗಳಷ್ಟು ನಾಟಕೀಯ ಕುಸಿತವನ್ನು ಕಂಡಿದೆ ಎಂದರೆ ಈ ವರದಿಯನ್ನು ಮೋದಿ ಸರಕಾರದ ಮೇಲಿನ ಪೂರ್ವಗ್ರಹಭಾವನೆಯಿಂದಲೇ ತಯಾರಿಸಲಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.
ಜೀವನಾವಶ್ಯಕ ವಸ್ತುಗಳಾದ ಅಕ್ಕಿ, ಗೋಧಿ, ಹಾಲು, ಸಕ್ಕರೆಗಳಿಲ್ಲದೆ ಪರದಾಡುತ್ತಿರುವ ಪಾಕಿಸ್ತಾನ, ಆಹಾರವಿಲ್ಲದೆ ಕಂಗೆಟ್ಟಿರುವ ಇಥಿಯೋಪಿಯಾ, ಆರ್ಥಿಕ ಕುಸಿತದಿಂದ ಬಳಲಿರುವ ಶ್ರೀಲಂಕಾ ಮೊದಲಾದ ದೇಶಗಳು ಹಸಿವಿನ ಸೂಚ್ಯಂಕದಲ್ಲಿ ಭಾರತದಿಂದ ಮೇಲಿವೆ ಎಂದರೆ ಈ ಸೂಚ್ಯಂಕದ ವಿಶ್ವಾಸಾರ್ಹತೆಯನ್ನು ಅರ್ಥ ಮಾಡಿಕೊಳ್ಳಬಹುದು. ಹಸಿವಿನ ಸೂಚ್ಯಂಕವನ್ನು ತೀರಾ ಅವೈಜ್ಞಾನಿಕ ರೀತಿಯಿಂದ ರೂಪಿಸಲಾಗುತ್ತಿದೆ ಎಂದು ಹೇಳಿರುವ ಭಾರತ ಸರಕಾರವು ಈ ವರದಿಯು, ವಾಸ್ತವಕ್ಕಿಂತ ದೂರಾಗಿದೆ ಎಂದಿದೆ.
ಫೋನಿನ ಮೂಲಕ ಆಯ್ದ ಜನರಿಗೆ ನಾಲ್ಕು ಪ್ರಶ್ನೆಗಳನ್ನು ಕೇಳಿ ಅವುಗಳನ್ನು ಆಧರಿಸಿ ತಯಾರಿಸಲಾದ ವರದಿಯು ಎಷ್ಟು ವೈಜ್ಞಾನಿಕವಾಗಿರಬಹುದು? ಇದೇ ರೀತಿ ಜಾಗತಿಕ ಶಾಂತಿಯುತ ದೇಶಗಳ ಸೂಚ್ಯಂಕ ಪಟ್ಟಿಯಲ್ಲಿ ಭಾರತಕ್ಕೆ ೧೩೫ನೇ ಸ್ಥಾನ ವನ್ನು ಕೊಡಲಾಗಿದೆ. ಶಾಂತಿಯುತ ದೇಶಗಳ ಸೂಚ್ಯಂಕದಲ್ಲಿ ಪ್ಯಾಲೆಸ್ತೀನ್, ಬಾಂಗ್ಲಾ ದೇಶಗಳಂತಹ ದೇಶಗಳು ಭಾರತದಿಂದ ಮುಂದಿವೆ. ಜಾಗತಿಕ ಸಂತೋಷಕರ ಸೂಚ್ಯಂಕದಲ್ಲಿ ಭಾರತವು ೧೨೬ನೇ ಸ್ಥಾನದಲ್ಲಿದೆ.
ಜಾಗತಿಕವಾಗಿ ಅತಿ ಹೆಚ್ಚು ಮರಣದಂಡನೆಯನ್ನು ವಿಧಿಸುತ್ತಿರುವ ಇರಾನ್, ಯುದ್ಧಗ್ರಸ್ತ ಇರಾಕ್, ಮತಾಂಧ ಪಾಕಿಸ್ತಾನಗಳು ಜಾಗತಿಕ ಸಂತೋಷಕರ ಸೂಚ್ಯಂಕದಲ್ಲಿ ಭಾರತಕ್ಕಿಂತ ಮುಂದಿವೆ ಎಂದರೆ ನಂಬುವುದಾದರೂ ಹೇಗೆ? ಕೋರೋನಾ ಸಂದರ್ಭದಲ್ಲೂ ಭಾರತದಲ್ಲಾದ ಕೋರೋನಾ ಸಾವುಗಳನ್ನು ವೈಭವೀಕರಿಸಿ ಸ್ಮಶಾನಗಳಲ್ಲಿ ಉರಿಯುತ್ತಿರುವ ಚಿತೆಗಳ ಫೋಟೋಗಳನ್ನು ಜಾಗತಿಕ ಪತ್ರಿಕೆಗಳ ಮುಖಪುಟಗಳಲ್ಲಿ ಪ್ರಕಟಿಸಿ ವರದಿಯನ್ನು ಮಾಡಲಾಗಿತ್ತು. ಭಾ ರತದಲ್ಲಿ ದಾಖಲಾಗಿ ರುವುದಕ್ಕಿಂತ ೧೦ ಪಟ್ಟು ಹೆಚ್ಚು ಕೋರೋನ ಸಾವುಗಳು ಸಂಭವಿಸಿದೆ ಎಂಬೆಲ್ಲ ರೀತಿಯ ಲೇಖನಗಳನ್ನು ಪ್ರಕಟಿಸ ಲಾಗುತ್ತಿದೆ.
ಇವುಗಳೆಲ್ಲ ಭಾರತವನ್ನು ಕೀಳಾಗಿ ಚಿತ್ರಿಸುವ ತಂತ್ರಗಾರಿಕೆಯ ಒಂದು ಭಾಗ ಅಷ್ಟೇ. ಯಾವುದೋ ಪೂರ್ವಗ್ರಹ ಪೀಡಿತ ಸಂಘಟನೆಗಳು ಅಥವಾ ಎನ್‌ಜಿಓಗಳು ಕೊಟ್ಟ ವರದಿಯನ್ನು ಓದಿ ನಾವು ನಮ್ಮ ದೇಶದ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವ ಅವಶ್ಯಕತೆಯಿಲ್ಲ. ನಮ್ಮ ದೇಶದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬಹುದಾದ ನೂರಾರು ಸಂಗತಿಗಳು ಇವೆ . ಭಾರತ ದೇಶದಲ್ಲಿ ಕಳೆದ ೧೫ ವರ್ಷಗಳಲ್ಲಿ ೪೧.೧ ಕೋಟಿ ಜನರನ್ನು ಬಡತನದ ರೇಖೆಯಿಂದ ಮೇಲೆತ್ತಲಾಗಿದೆ ಎಂದು ವಿಶ್ವ ಸಂಸ್ಥೆಯ ಪ್ರಚಲಿತ ವಿದ್ಯಮಾನಗಳ ವರದಿಯು ಹೇಳಿದೆ.
ಇದರಲ್ಲಿ ಸುಮಾರು ೨೭.೧ ಕೋಟಿ ಜನರು ಕಳೆದ ೧೦ ವರ್ಷಗಳಲ್ಲಿ ಬಡತನದ ರೇಖೆಯಿಂದ ಮೇಲೆ ಬಂದಿದ್ದಾರೆ. ಭಾರತದಸರಕಾರಗಳ ಸಾಧನೆಯ ಫಲವಾಗಿ ಇಂತಹ ಒಂದು ಬೃಹತ್ ಬದಲಾವಣೆಯು ಸಾಧ್ಯವಾಗಿದೆ ಎಂದರೆ ನಾವು ನಮ್ಮ ಆಡಳಿತ ವ್ಯವಸ್ಥೆಯನ್ನು ಶ್ಲಾಸಲೇಬೇಕು. ಎಲ್ಲಕ್ಕಿಂತಲೂ ಹೆಚ್ಚಾಗಿ ಯಾವುದೇ ಆಮಿಷ, ಬೆದರಿಕೆಗಳಿಗೆ ಬಗ್ಗದೆ ದೇಶವನ್ನು ಮುನ್ನಡೆಸ ಬಲ್ಲ ಪ್ರಾಮಾಣಿಕ ಮತ್ತು ಸ್ಥಿರ ಸರಕಾರವು ಭಾರತದಲ್ಲಿದೆ. ಹೀಗಿರುವಾಗ ನಾವು ನಕಾರಾತ್ಮಕ ಅಂಕಿ ಅಂಶಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ.