ರಾಜ್ಯದ ಬ್ಯಾಂಕುಗಳು ಗುಜರಾತ್ ಪಾಲಾಗಿರುವುದಾ ?
ವಿಶ್ಲೇಷಣೆ
ಪ್ರಕಾಶ್ ಶೇಷರಾಘವಾಚಾರ್‌
ಕರ್ನಾಟಕ ವಿಧಾನ ಸಭೆಯ ಚುನಾವಣೆಯ ಸಂದರ್ಭದಲ್ಲಿ ಕನ್ನಡದ ಜನರು ಕಟ್ಟಿ ಬೆಳಸಿದ ಬ್ಯಾಂಕ್‌ಗಳನ್ನು ಮೋದಿ ಸರ್ಕಾರವು ಗುಜರಾತಿನ ಬ್ಯಾಂಕ್‌ನೊಂದಿಗೆ ವಿಲೀನ ಮಾಡಿ ಕನ್ನಡಿಗರ ಸಂಪತ್ತು ಗುಜರಾತಿಗಳ ಪಾಲು ಮಾಡಿದ್ದಾರೆಎಂದು ಆರೋಪ ಮಾಡಲಾಗಿತ್ತು. ಮೋದಿಯವರ ಜನಪ್ರಿಯತೆಯನ್ನು ಕುಗ್ಗಿ ಸಲು ಭಾವನಾತ್ಮಕಅಸ್ತ್ರಪ್ರಯೋಗದ ಮೂಲಕ ಬಿಜೆಪಿ ವಿರೋಽಗಳು ಆಗಾಗ್ಗೆ ಬಳಸುವ ತಂತ್ರಗಾರಿಕೆಯ ಭಾಗವಿದು.
ವಿಶೇಷವಾಗಿ ವಿಜಯಾ ಬ್ಯಾಂಕ್ ಮತ್ತು ಕಾರ್ಪೊರೇಶನ್ ಬ್ಯಾಂಕ್ ಬಗ್ಗೆ ಪದೇ ಪದೇ ಉಲ್ಲೇಖವಾಗುತ್ತದೆ. ಹಾಸ್ಯಾಸ್ಪದ ವೆಂದರೆ ಈ ಆರೋಪಕ್ಕೆ ಕಾಂಗ್ರೆಸ್ ನಾಯಕರು ಕೂಡ ಧ್ವನಿಗೂಡಿಸುತ್ತಾರೆ. ಈ ಎರಡೂ ಬ್ಯಾಂಕ್‌ ಗಳನ್ನು ರಾಷ್ಟ್ರೀಕರಣ ಗೊಳಿಸಿ ಭಾರತ ಸರ್ಕಾರದ ಸ್ವತ್ತು ಮಾಡಿದ್ದು ಶ್ರೀಮತಿ ಇಂದಿರಾಗಾಂಽಯವರು ಎಂಬುದು ಮರೆತಿರುವ ಹಾಗೆ ನಟಿಸು ತ್ತಿದ್ದಾರೆ.
೨೦೧೮ ರಲ್ಲಿ ವಿಜಯಾ ಬ್ಯಾಂಕ್ ಅನ್ನು ಬ್ಯಾಂಕ್ ಆಫ್ ಬರೋಡಾ ದೊಂದಿಗೆ ವಿಲೀನ ಮಾಡಿದ್ದನ್ನು ಮುಂದಿಟ್ಟುಕೊಂಡು ಈ ಆರೋಪವನ್ನು ಮಾಡಲಾಗುತ್ತಿದೆ. ಇದರಲ್ಲಿ ಸತ್ಯವೆಷ್ಟು ಮಿಥ್ಯವೆಷ್ಟು ಎಂಬುದನ್ನು ಅಂಕಿಅಂಶಗಳ ಆಧಾರದ ಮೇಲೆ ಪರಿಶೀಲಿಸುವುದು ಅನಿವಾರ್ಯ. ಇದೊಂದು ರಾಜಕೀಯ ಕಾರಣಗಳ ಆರೋಪವಾ? ಅಥವಾ ಈ ಆರೋಪದಲ್ಲಿ ತಥ್ಯ ವಿರುವುದಾ ಎಂಬುದನ್ನು ಜನರು ತಿಳಿಯಬೇಕು.
೨೦೧೪ ರ ಮುಂಚೆ ಬ್ಯಾಂಕ್‌ಗಳ ಸ್ಥಿತಿಗತಿಗಳ ಬಗ್ಗೆ ಯಾರೂ ತಲೆಯೇ ಕೆಡಿಸಿಕೊಳ್ಳುತ್ತಿರಲಿಲ್ಲ. ೧೯೪೭ ರಿಂದ ೧೯೬೯ ರೊಳಗೆ ೭೩೬ ಖಾಸಗಿ ಬ್ಯಾಂಕ್‌ಗಳು ಬಾಗಿಲು ಹಾಕಿವೆ. ಈ ಬ್ಯಾಂಕ್ ಗಳಲ್ಲಿ ಹಣ ಹೂಡಿದ್ದ ಸಾವಿರಾರು ಜನರ ಹಣವು ದೇವರ ಹುಂಡಿಯ ಪಾಲಾಯಿತು. ೧೯೬೯ ರಿಂದ ೨೦೦೮ ರೊಳಗೆ ಮತ್ತೆ ೩೬ ಬ್ಯಾಂಕ್‌ಗಳು ದಿವಾಳಿಯಾಗಿವೆ. ಕೆಲವು ದಿವಾಳಿಯಾದ ಬ್ಯಾಂಕ್‌ಗಳನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ವಿಲೀನಗೊಳಿಸಲಾಯಿತು. ಅವುಗಳ ಸಾಲ ಮತ್ತು ನಷ್ಟವನ್ನು ಸರ್ಕಾರಿ ಬ್ಯಾಂಕ್‌ಗಳು ತಮ್ಮ ತಲೆಯ ಮೇಲೆ ಎಳೆದುಕೊಂಡವು.
ಉಳಿದ ಬ್ಯಾಂಕ್‌ಗಳಲ್ಲಿ ಹಣವಿಟ್ಟಿದ್ದ ಸಾವಿರಾರು ಠೇವಣಿದಾರರು ತಮ್ಮ ಜೀವಮಾನದ ಉಳಿತಾಯವನ್ನು ಕಳೆದುಕೊಂಡು ಬೀದಿಗೆ ಬರುವಂತಾದರು. ೧೯೬೯ ರಲ್ಲಿ ಶ್ರೀಮತಿ ಇಂದಿರಾಗಾಂಧಿಯವರು ತಮ್ಮ  ರಾಜಕೀಯ ಜೀವನಕ್ಕೆ ಎದುರಾಗಿದ್ದ ಸಂಕಷ್ಟ ನಿವಾರಣೆಗೆ ತಮ್ಮ ಎದುರಾಳಿಗಳನ್ನು ಕಟ್ಟಿಹಾಕಲು ದಿಢೀರನೇ ೧೪ ಖಾಸಗಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದರು. ಇದರಲ್ಲಿ ಕರ್ನಾಟಕದ ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೇರಿತ್ತು. ೧೯೮೦ ರಲ್ಲಿ ಮತ್ತೆ ೧೪ ಬ್ಯಾಂಕ್ ಗಳನ್ನು ರಾಷ್ಟ್ರೀಕರಣ ಮಾಡಲಾಯಿತು.
ಈ ಬಾರಿ ಕರ್ನಾಟಕದ ಕಾರ್ಪೊರೇಷನ್ ಬ್ಯಾಂಕ್ ಈ ಪಟ್ಟಿಗೆ ಸೇರಿತ್ತು. ರಾಷ್ಟ್ರೀಕರಣವಾದ ಬ್ಯಾಂಕ್‌ಗಳು ತಮ್ಮ ಪ್ರಾದೇಶಿ ಕತೆಯ ಸೊಗಡನ್ನು ಸಹಜವಾಗಿ ಕಳೆದುಕೊಂಡು ರಾಷ್ಟ್ರೀಯ ಜಾಲದಲ್ಲಿ ಸೇರ್ಪಡೆಯಾಗಿ ತಮ್ಮ ಮೂಲ ಸ್ವರೂಪ ವನ್ನು ಕಳೆದುಕೊಳ್ಳುತ್ತದೆ. ಖಾಸಗಿ ಸಂಸ್ಥೆಯಾಗಿದ್ದಾಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ದೊರೆಯುತ್ತಿತ್ತು. ಸೇವೆಯೂಕನ್ನಡದಲ್ಲಿಯೇ ಸುಲಭವಾಗಿ ದೊರೆಯುತ್ತಿತ್ತು. ಬಹುತೇಕ ಬ್ಯಾಂಕ್‌ಗಳು ದಕ್ಷಿಣ ಕನ್ನಡ ಜಿಲ್ಲೆಯ ಹಿನ್ನಲೆಯದಾಗಿದ್ದರಿಂದಅಲ್ಲಿನವರ ಛಾಪು ಕೂಡ ಬಲವಾಗಿಯೇ ಕಾಣಬಹುದಿತ್ತು.
ರಾಷ್ಟ್ರೀಕೃತ ಬ್ಯಾಂಕ್‌ಗಳ ನೇಮಕಾತಿಗೆ ಏಕ ಗವಾಕ್ಷಿ ಪದ್ಧತಿ ಬಂದು ಬ್ಯಾಂಕಿಂಗ್ ಸೇವಾ ನೇಮಕಾತಿ ಬೋರ್ಡ್ ರಚನೆ ಯಾಯಿತು.ನೇಮಕಾತಿಗಾಗಿ ದೇಶಾದ್ಯಂತ್ಯ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಬೇರೆ ಬೇರೆ ರಾಜ್ಯದವರು ಎಲ್ಲ ಕಡೆ ಕಾಣು ವಂತಾಗಿ ಕನ್ನಡದ ಜೊತೆಗೆ ಇತರ ಭಾಷೆಗಳ ಕಲರವದ ಧ್ವನಿಯು ಕೇಳ ತೊಡಗಿತು. ಐಟಿ ಬಿಟಿ ಬಂದ ತರುವಾಯ ಕನ್ನಡದ ಧ್ವನಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ಷೀಣಿಸ ತೊಡಗಿದವು. ಕನ್ನಡಿಗರ ಬ್ಯಾಂಕ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಹಕ್ಕು ೧೯೬೯ ರಲ್ಲೇ ಕಸಿಯಲಾಗಿತ್ತು.
ಬ್ಯಾಂಕ್‌ಗಳು ಸಾರ್ವಜನಿಕ ಉದ್ದಿಮೆಯಾದ ತರುವಾಯ ಅದನ್ನು ಕೇವಲ ಕರ್ನಾಟಕಕ್ಕೆ ಸಿಮಿತವಾದದ್ದು ಎಂದು ಹೇಳಲು ಸಾಧ್ಯವಾಗದು. ೧೯೯೧ರ ಆರ್ಥಿಕ ಉದಾರೀಕರಣ ನೀತಿಯು ಜಾರಿಗೆ ಬಂದ ತರುವಾಯ ಮತ್ತೆ ಖಾಸಗಿ ಬ್ಯಾಂಕ್‌ಗಳುತೆರೆಯಲು ಅವಕಾಶವಾಯಿತು. ೧೯೯೧ರ ನಂತರ ಬ್ಯಾಂಕ್ ಗಳ ರಾಷ್ಟ್ರೀಕರಣದ ಅಧ್ಯಾಯವು ಇತಿಹಾಸದ ಪುಟ ಸೇರಿತು.ನೂತನ ಅಧ್ಯಾಯದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ ನ್ಯೂ ಬ್ಯಾಂಕ್ ಆಫ್ ಇಂಡಿಯಾ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೊಂದಿಗೆ ಸ್ಟೇಟ್ ಬ್ಯಾಂಕ್ ಆಫ್ ಸೌರಾಷ್ಟ್ರ, ಸ್ಟೇಟ್ ಬ್ಯಾಂಕ್ ಇಂದೋರ್ ವಿಲೀನವಾಯಿತು. ಕರ್ನಾಟಕ ಮೂಲದ ವೈಶ್ಯ ಬ್ಯಾಂಕ್ ಮೊದಲು ಡಚ್ ಮೂಲದ ಇಂಗ್ ಹಣಕಾಸು ಸಂಸ್ಥೆಯೊಂದಿಗೆ ವಿಲೀನವಾಯಿತು. ೨೦೧೬ ರಲ್ಲಿ ಇಂಗ್ ವೈಶ್ಯ ಬ್ಯಾಂಕ್ ಮತ್ತೊಂದು ಖಾಸಗಿ ಬ್ಯಾಂಕ್ ಕೋಟಕ್ ಮಹೀಂದ್ರ ಬ್ಯಾಂಕ್ ತೆಕ್ಕೆಗೆ ಸೇರಿತು.
೨೦೧೭ ರಲ್ಲಿ ಯುಪಿಎ ಪ್ರಚಾರಕ್ಕಾಗಿ ಆರಂಭಿಸಿದ್ದ ಭಾರತೀಯ ಮಹಿಳಾ ಬ್ಯಾಂಕ್, ೨೦೧೭ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನವಾಯಿತು. ೨೦೧೮ ರಲ್ಲಿ ೧೪ ಬ್ಯಾಂಕ್‌ಗಳು ವಿಲೀನವಾದ ತರುವಾಯ ೨೭ ರಾಷ್ಟ್ರೀಕೃತ ಬ್ಯಾಂಕ್‌ ಗಳ ಸಂಖ್ಯೆಯು ೨೦೧೮ ರಲ್ಲಿ ಹನ್ನೆರಡಾಯಿತು. ಕರ್ನಾಟಕದ ಕೆನರಾ ಬ್ಯಾಂಕ್‌ನೊಂದಿಗೆ ನಮ್ಮದೇ ಸಿಂಡಿಕೇಟ್ಬ್ಯಾಂಕ್ ವಿಲೀನವಾಗಿದೆ. ಸ್ವಾತಂತ್ರ ಪೂರ್ವದಲ್ಲಿ ರಾಜಪ್ರಭುತ್ವದಲ್ಲಿ ಆರಂಭಿಸಿದ್ದ ಸೆವೆನ್ ಸಿಸ್ಟರ್ಸ್ ಎಂದು ಖ್ಯಾತಿ ಪಡೆದಿದ್ದ ಸ್ಟೇಟ್ ಬ್ಯಾಂಕ್ ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್ ೧೯೫೯ ಅಡಿಯಲ್ಲಿ ಈ ಎಲ್ಲಾ ಬ್ಯಾಂಕ್‌ಗಳನ್ನು ತನ್ನ ನಿಯಂತ್ರಣಕ್ಕೆ ಪಡೆದುಕೊಂಡಿತ್ತು.
೨೦೧೭ ರಲ್ಲಿ ವಿಧ್ಯುಕ್ತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ವಿಲೀನದೊಂದಿಗೆ ರಾಜಪ್ರಭುತ್ವದ ಬ್ಯಾಂಕ್‌ಗಳು ತಮ್ಮ ಅಂತ್ಯವನ್ನು ಕಂಡವು. ಲಾಭದಲ್ಲಿದ್ದ ವಿಜಯಾ ಬ್ಯಾಂಕ್ ಗುಜರಾತಿನ ಬ್ಯಾಂಕ್ ಆಫ್ ಬರೋಡದೊಂದಿಗೆ ಮೋದಿ ಸರ್ಕಾರವು ವಿಲೀನ ಮಾಡಿ ಕನ್ನಡಿಗರ ಅಸ್ಮಿತೆಗೆ ಧಕ್ಕೆ ತಂದಿದೆ ಎಂದು ಕೆಲವು ಕುಹಕಿಗಳು ಮತ್ತು ಎಡಪಂಥೀಯರು ಮೋದಿಯವರನ್ನುಗುರಿಯಾಗಿಸಿ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಅಂಕಿ ಅಂಶಗಳು ಹೇಳುತ್ತದೆ ಅಂದಿನ ವಿಜಯ ಬ್ಯಾಂಕ್ ಮೌಲ್ಯವು ೨.೭೯ ಲಕ್ಷ ಕೋಟಿಯಾಗಿದ್ದರೆ ಬ್ಯಾಂಕ್ ಆಫ್ ಬರೋಡ ಗಾತ್ರವು ೧೦.೨೯ಲಕ್ಷ ಕೋಟಿಯಾಗಿತ್ತು.
ವಿಜಯಾ ಬ್ಯಾಂಕ್‌ನ ಮೂರು ಪಟ್ಟು ಮೌಲ್ಯವು ಬ್ಯಾಂಕ್ ಆಫ್ ಬರೋಡದಾಗಿತ್ತು ಮತ್ತು ಒಟ್ಟು ಮೌಲ್ಯದಲ್ಲಿಯೂ ವಿಜಯಾ ಬ್ಯಾಂಕ್‌ಗಿಂತ ನಾಲ್ಕು ಪಟ್ಟು ದೊಡ್ಡದಾಗಿದ್ದ ಕಾರಣ ಬ್ಯಾಂಕ್ ಆಫ್ ಬರೋಡಾದೊಂದಿಗೆ ವಿಲೀನವಾಗಿದ್ದು. ಬ್ಯಾಂಕ್‌ಗಳವಿಲೀನಕ್ಕೆ ಹಲವಾರು ನಿಯತಾಂಕಗಳನ್ನು ಪರಿಗಣಿಸಲಾಗುತ್ತದೆ. ಇಲ್ಲಿ ಬ್ಯಾಂಕ್ ಭವಿಷ್ಯವು ಮಾತ್ರ ಅಂತಿಮವಾಗಿ ಪ್ರಮುಖ ಪಾತ್ರವಹಿಸುವುದು.
ಸುಖಾಸುಮ್ಮನೆ ಜನರಿಗೆ ದಾರಿ ತಪ್ಪಿಸುವ ದುರುದ್ದೇಶದಿಂದ ಮೋದಿಯವರು ಕನ್ನಡದವರ ಬ್ಯಾಂಕ್ ಗುಜರಾತಿನ ಬ್ಯಾಂಕ್‌ನೊಂದಿಗೆ ವಿಲೀನ ಮಾಡಿದ್ದಾರೆ ಎಂದು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಇವರ ಕುಬುದ್ಧಿಯಿಂದ ಕೈಗೊಂಡಿರುವ ಅಪಪ್ರಚಾರದ ಹಿನ್ನೆಲೆ ಮತ್ತು ಸತ್ಯ ಸಂಗತಿಯನ್ನು ಅರಿಯದವರು ಇದನ್ನು ನಂಬುವಂತೆ ಮಾಡುವುದರಲ್ಲಿ ಕೆಲ ಮಟ್ಟಿಗೆ ಯಶಸ್ವಿಯಾಗಿದ್ದಾರೆ.
೧೯೮೦ರಲ್ಲಿ ವಿಜಯಾ ಬ್ಯಾಂಕ್ ರಾಷ್ಟ್ರೀಕರಣ ಮಾಡಿದಾಗ ಕನ್ನಡದವರ ಬ್ಯಾಂಕ್ ಉಳಿಸಿ ಎಂದು ಯಾರು ಉಸಿರೆತ್ತಲಿಲ್ಲ.ಬದಲಿಗೆ ಆ ದಿನಗಳಲ್ಲಿ ರಾಷ್ಟ್ರೀಕರಣ ಮಾಡಿ ಎಂಬ ಕೂಗು ಮತ್ತಷ್ಟು ಜೋರಾಗಿ ಕೇಳಿಸುತ್ತಿತ್ತು. ವಾಟಾಳ್ ನಾಗರಾಜ್ಒಂದು ಹೆಜ್ಜೆ ಮುಂದೆ ಹೋಗಿ ಬೆಂಗಳೂರು ಚಿತ್ರಮಂದಿರಗಳನ್ನು ರಾಷ್ಟ್ರೀಕರಣ ಮಾಡಿ ಎಂದು ಕತ್ತೆಯನ್ನೋ ಅಥವಾ ಕುದುರೆಯನ್ನೋ ತಂದು ಪ್ರತಿಭಟನೆ ಮಾಡಿದ್ದ ನೆನಪು.
ಇಂದು ಕನ್ನಡ ಅಸ್ಮಿತೆಗೆ ಬ್ಯಾಂಕ್‌ಗಳನ್ನು ಸಮೀಕರಿಸುತ್ತಿರುವ ಬಹುತೇಕರು ಈ ಬ್ಯಾಂಕ್‌ಗಳು ಮೂಲ ಸ್ವರೂಪವನ್ನು ಕಳೆದುಕೊಂಡಾಗ ಹುಟ್ಟೆ ಇರಲಿಲ್ಲ. ರಾಷ್ಟ್ರೀಕರಣವಾಗಿ ೪೩ವರ್ಷ ಕಳೆದ ಮೇಲೆ ಕೇವಲ ಬಿಜೆಪಿ ಮತ್ತು ಮೋದಿಯವರ ವಿರುದ್ಧ ತಮ್ಮ ಟೀಕೆಯ ಬಾಣವನ್ನು ಹೂಡಲು ಇತಿಹಾಸದ ಗರ್ಭ ಸೇರಿರುವ ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ವಿಷಯ ಪ್ರಸ್ತಾಪಿಸಿ ಜನರ ದಾರಿ ತಪ್ಪಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕಸರತ್ತು ನಡೆಸಿದ್ದಾರೆ.
ಮುಂಬಯಿ ಮೂಲದ ಯೂನಿಯನ್ ಬ್ಯಾಂಕ್ ದೇಶದ ಅತಿ ದೊಡ್ಡ ಬ್ಯಾಂಕ್‌ಗಳಲ್ಲಿ ಒಂದು ಅದರಲ್ಲಿ ಕಾರ್ಪೊರೇಶನ್ಬ್ಯಾಂಕ್ ವಿಲೀನವಾಗಿರುವುದು. ದೊಡ್ಡ ಮೀನು ಚಿಕ್ಕ ಮೀನು ನುಂಗಲು ಮಾತ್ರ ಸಾಧ್ಯವೇ ವಿನಹ ಅದು ಎಂದೂ ತಿರುವು ಮುರುವು ಆಗಲು ಸಾಧ್ಯವಿಲ್ಲ.