ವೈದ್ಯ ಸಚಿವರ ವಿರುದ್ದ ಪರಿಶ್ರಮದ ಗೆಲುವು
ಅಭಿಮತ
ಡಾ.ಜಗದೀಶ ಮಾನೆ
ಸಾಧನೆ ಎನ್ನುವುದು ಕೇವಲ ಯಾರೊಬ್ಬರ ಆಸ್ತಿಯಲ್ಲ. ಅದು ಜೀವನದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸ ಇರುವವರಆಸ್ತಿ. ಸಾಧಿಸಿಯೇ ತೀರುತ್ತೇನೆ ಎನ್ನುವವರ ಸ್ವತ್ತು. ಯಾರ್ ಏನ್ ಬೇಕಾದ್ರೂ ಅಂದುಕೊಳ್ಳಲಿ, ಏನ್ ಬೇಕಾದ್ರೂ ಆಗಲಿ, ಅದೆಷ್ಟೇ ಕಷ್ಟ ನೋವುಗಳು ಬಂದು ಮೈಮೇಲೆ ಬೀಳಲಿ, ಅದಕ್ಕೆ ಡಿಚ್ಚಿಕೊಟ್ಟು ಚಿಂದಿ ಉಡಾಯಿಸಿದಂತೆ ಉಡಾಯಿಸಿ ಪಟ್ಟು ಬಿಡದೆ ಮುನ್ನುಗ್ಗುತ್ತೇನೆ ಎನ್ನುವ ಹಟ, ಛಲ, ಧಮ್ ಇರುವವರ ಸ್ವತ್ತಂತೂ ಖಂಡಿತವಾಗಿ ಹೌದು.
ಆ ಹಠ, ಛಲ ಆತ್ಮವಿಶ್ವಾಸ ಇರೋ ಸಾಧಕರೇ ನಮ್ಮ ಪ್ರದೀಪ್ ಈಶ್ವರ್. ಹೌದು, ಒಂದು ಹೊತ್ತು ಊಟಕ್ಕೂ ಪರದಾಡುತ್ತಿದ್ದಂತಹ ವ್ಯಕ್ತಿ, ಬಡತನದ ಬೇಗೆಯಲ್ಲಿ ಬೆಂದು ಸಾಕಷ್ಟು ಕಷ್ಟ ನೋವುಗಳನ್ನ ಅನುಭವಿಸಿ ಕೊನೆಗೆ ಯಶಸ್ಸು ಸಾಧಿಸಿ ಎಲ್ಲರಿಗೂ ಆದರ್ಶವಾದ ವ್ಯಕ್ತಿಯ ರೋಚಕ ಕಹಾನಿಯ ಕಥೆ ಇದು. ಆತ ಯಾವತ್ತಿಗೂ ಕೂಡ ಅದೃಷ್ಟದಲ್ಲಿ ನಂಬಿಕೆ ಇಟ್ಟವನಲ್ಲ, ಬದಲಿಗೆ ಪರಿಶ್ರಮದಲ್ಲಿ ನಂಬಿಕೆ ಇಟ್ಟಿದ್ದ. ಪರಿಶ್ರಮದಲ್ಲಿ ಪರಮಾತ್ಮನಿzನೆ ಎಂಬುದನ್ನು ಸತತ ಪ್ರಯತ್ನದ ಮೂಲಕ ತನ್ನದೇ ಅನುಭವದಲ್ಲಿ ಕಂಡು ಈಶ್ವರ ಆದ. ಪ್ರದೀಪ್ ಈಶ್ವರ ‘ಪರಿಶ್ರಮ’ ನೀಟ್ ಅಕಾಡೆಮಿಯನ್ನು ಆರಂಭಿಸಿ ತನ್ನ ಮೊದಲ ಪ್ರಯತ್ನದಲ್ಲಿಯೇ ಯಶಸ್ಸನ್ನು ಕಂಡು ಕೋಟ್ಯಂತರ ರೂಪಾಯಿ ಹಣ ಸಂಪಾದಿಸಿದ.
ಆತನನ್ನು ನೋಡಿ ಆಡಿ ನಗಾಡುವವರ ಮುಂದೆ ಪುಟಿದೆದ್ದು ನಿಂತ. ಆದರೆ, ವಿಧಿ ಆತನನ್ನು ಇಷ್ಟಕ್ಕೆ ಕೈಕಟ್ಟಿ ಕೂಡಿಸಲಿಲ್ಲ. ಸಾಧನೆಯ ರುಚಿ ಆತನಲ್ಲಿ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿ ಇನ್ನಷ್ಟು ಮೇಲಕ್ಕೆ ಬರಲು ಪ್ರೇರೇಪಿಸಿತು. ಆತನಿಗೆ ಮೊದಲ ಪ್ರಯತ್ನದ ಯಶಸ್ಸಿಗಿಂತ ಎರಡನೆಯ ಯಶಸ್ಸು ಬಹಳ ದೊಡ್ಡ ಚಾಲೆಂಜ್ ಆಗಿತ್ತು. ಮೊದಲ ಪ್ರಯತ್ನದಲ್ಲಿ ಗೆದ್ದವ ಎರಡನೆಯ ಪ್ರಯತ್ನದಲ್ಲಿ ಯಾವುದೇ ಕಾರಣಕ್ಕೂ ಸೋಲಬಾರದು. ಯಾಕಂದ್ರೆ ಮೊದಲ ಪ್ರಯತ್ನದಲ್ಲಿ ಗೆದ್ದು ಎರಡನೆಯ ಪ್ರಯತ್ನದಲ್ಲಿ ಸೋತರೆ, ಮೊದಲ ಗೆಲುವು ಕೇವಲ ಅದೃಷ್ಟ ಅಂತ ಸಾಕಷ್ಟು ವಿರೋಧಿಗಳು ಹೀಯಾಳಿಸಿ ನಗಾಡುತ್ತಾರೆ.
ಹಾಗಾಗಿ ಪ್ರದೀಪ್ ಈಶ್ವರನ ಎರಡನೆಯ ಗೆಲುವು ವಿರೋಧಿಗಳನ್ನು ನಿದ್ದೆಗೆಡುವಂತೆ ಮಾಡಿತ್ತು. ಆತನ ಗೆಲುವಿನ ಸಹಿಆಟೋಗ್ರಾ- ಆಗಿ ಬದಲಾಗಿದೆ. ಪ್ರದೀಪ್ ಈಶ್ವರ್ ಸರ್ ಕ್ಲಾಸ್ ಅಂದ್ರೆ ಎಲ್ಲ ವಿದ್ಯಾರ್ಥಿ ಗಳಿಗೆ ಬಹಳ ಅಚ್ಚು ಮೆಚ್ಚು. ಅವರ ಮೋಟಿವೇಶನ್ ಟಾಕ್ ಪ್ರತಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವನ್ನು ಬಡೆದಬ್ಬಿಸುತ್ತದೆ. ಪರಿಣಾಮ, ‘ಪರಿಶ್ರಮ’ ನೀಟ್ ಅಕಾಡೆಮಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳಲ್ಲಿ ಸಾವಿರಕ್ಕೂ ಹೆಚ್ಚು ಜನ ಡಾಕ್ಟರ್ ಇದ್ದಾರೆ.
ಬೇರೆ ವೃತ್ತಿಯಲ್ಲಿ ಅನೇಕರು ಸಕ್ಸಸ್ ಕಂಡಿದ್ದಾರೆ. ಪ್ರದೀಪ್ ಈಶ್ವರ್‌ ಅವರ ವಿಶೇಷ ಗುಣ ಅಂದ್ರೆ, ಕಷ್ಟದಲ್ಲಿರುವಂತಹ ಸಾಕಷ್ಟು ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮತ್ತು ಆರ್ಥಿಕ ಸಹಾಯವನ್ನು ಮಾಡುತ್ತ ಬಂದಿದ್ದಾರೆ. ಸುಮಾರು ೧೪ ಜನ ಬಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರಿಗೆ ಎಂ.ಬಿ.ಬಿ.ಎಸ್ ಓದಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಸರಕಾರಿ ಶಾಲೆಯೊಂದನ್ನು ದತ್ತು ಪಡೆದು ಅದರ ಅಭಿವೃದ್ಧಿ ಮಾಡುತ್ತಿದ್ದಾರೆ.
ಹಾಗೇ ನೋಡಿದರೆ, ಪ್ರದೀಪ್ ಈಶ್ವರ್, ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನೂ ಪಡೆಯದ ವ್ಯಕ್ತಿ. ಕಾಂಗ್ರೆಸ್ ಕಚೇರಿಯ ಹಿಂದೆ-ಮುಂದೆ ಅಪ್ಪಿ-ತಪ್ಪಿ ಒಮ್ಮೆಯೂ ಸುಳಿದವರಲ್ಲ. ಅವರೊಬ್ಬ ಉತ್ತಮ ಮಾತುಗಾರ, ಜನರನ್ನು ತನ್ನತ್ತ ಸೆಳೆದುಕೊಳ್ಳುವ ಸಾಮರ್ಥ್ಯ ಇರುವ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತಿತ್ತು. ಆ ಮೂಲಕವೇ ಆತ ಶಿಕ್ಷಣ ಕ್ಷೇತ್ರದಲ್ಲಿ ಕೂಡಾ ಸಾಕಷ್ಟು ಹೆಸರು ಮಾಡಿದ್ದ. ಆದರೆ ರಾಜಕೀಯಕ್ಕೆ ಬಂದಿದ್ದು ಕೇವಲ ಛಲಕ್ಕಾಗಿ.
ಜೀವನದಲ್ಲಿ ಅನುಭವಿಸಿದ ಸಂಕಷ್ಟ, ನೋವುಗಳನ್ನೇ ಮೆಟ್ಟಿಲಾಗಿಸಿಕೊಂಡು ‘ಪರಿಶ್ರಮ’ ಕಟ್ಟಿ, ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾದ ಪ್ರದೀಪ್, ರಾಜಕೀಯ ಪ್ರವೇಶಿಸಿ ಜನಸೇವೆ ಮಾಡುವ ಬಗ್ಗೆ ಯೋಚಿಸಿರಲಿಲ್ಲ. ಹಾಗೆ ನೋಡಿದರೆ ಚಿಕ್ಕಬಳ್ಳಾಪರದಲ್ಲಿ ಡಾ.ಕೆ ಸುಧಾಕರ್ ಬಹಳಷ್ಟು ಪವರ್ ಫುಲ್ ವ್ಯಕ್ತಿ. ಆಪರೇಷನ್ ಕಮಲದ ಮೂಲಕ ಚಿಕ್ಕಬಳ್ಳಾಪುರದಲ್ಲಿಮೊದಲ ಬಾರಿಗೆ ಕಮಲ ಅರಳಿಸಿ ವೈದ್ಯಕೀಯ ಶಿಕ್ಷಣ ಸಚಿವರಾಗಿದ್ದರು. ಹಣ ಬಲ, ಜನ ಬಲ ಹಾಗೂ ಪಕ್ಷದಲ್ಲಿಯೂ ಕೂಡ ತನ್ನ ಪ್ರಬಲತೆಯನ್ನು ಹೆಚ್ಚಿಸಿಕೊಂಡ ವ್ಯಕ್ತಿ.
ಇಂಥ ಡಾ. ಸುಧಾಕರ್ ಮೇಲಿನ ಭ್ರಷ್ಟಾಚಾರ ಆರೋಪಗಳ ವಿರುದ್ಧ ಪ್ರದೀಪ್ ಈಶ್ವರ್ ಬಹಳ ದೊಡ್ಡ ಮಟ್ಟದಲ್ಲಿ ಧ್ವನಿಯೆತ್ತಿದರು. ಆ ಪರಿಣಾಮ, ಪ್ರದೀಪ್ ಈಶ್ವರ ಮೇಲೆ ಇಪ್ಪತ್ತಕ್ಕೂ ಹೆಚ್ಚು ಕೇಸ್ ಹಾಕಲಾಯಿತು. ಪೊಲೀಸ್ ಠಾಣೆಯ ಮುಂದೆ ಏಕಾಂಗಿಯಾಗಿ ಹೋರಾಟ ಮಾಡಿದ್ದ ಪ್ರದೀಪ್ ಈಶ್ವರ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಒಂದು ಕಾಲದ ತಮ್ಮ ಶಿಷ್ಯ ಸುಧಾಕರ್ ಅವರ ಭ್ರಷ್ಟಾಚಾರದ ನಡೆ ಸಿದ್ದರಾಮಯ್ಯನವರಲ್ಲೂ ಆಕ್ರೋಶವನ್ನುಂಟು ಮಾಡಿತ್ತು.
ಹೇಗಾದರೂ ಮಾಡಿ ಡಾ. ಸುಧಾಕರನ್ನ ಸೋಲಿಸಿಯೇ ತೀರ ಬೇಕೆಂದು ಜಿದ್ದಿಗೆ ಬಿದ್ದ ಸಿದ್ದರಾಮಯ್ಯನವರು ಸೂಕ್ತ ಅಭ್ಯರ್ಥಿ ಗಾಗಿ ಹುಡುಕಾಟ ನಡೆಸಿದ್ದರು. ಆ ಸಂದರ್ಭದಲ್ಲಿ ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಶಿವಶಂಕರ್ ರೆಡ್ಡಿ ಹಾಗೂ ವೀರಪ್ಪ ಮೊಯ್ಲಿ ಅವರ ದೃಷ್ಟಿ ಪ್ರದೀಪ್ ಈಶ್ವರ್ ಮೇಲೆ ಬಿದ್ದಿತ್ತು. ಅದೂ ಚಿಕ್ಕಬಳ್ಳಾಪುರದಲ್ಲಿ ಅತಿ ಹೆಚ್ಚಿನ ಜನಸಂಖ್ಯೆಯಿರುವ ’ಬಲಜಿಗ’ ಸಮುದಾಯಕ್ಕೆ ಸೇರಿದ ವ್ಯಕ್ತಿ ಈ ಪ್ರದೀಪ್. ಎದುರಾಳಿ ಸಾಮಾನ್ಯವಾಗಿ ಒಬ್ಬ ಜನ ಪ್ರತಿನಿಧಿಯಾಗಲು ಬಯಸುವವನಲ್ಲಿ ಪ್ರಾಮಾಣಿಕತೆ, ಜನರ ಮೇಲೆ ಪ್ರೀತಿ, ಕಾಳಜಿ, ದೂರ ದೃಷ್ಟಿ ಇರಬೇಕಾಗುತ್ತದೆ. ಈ ಎಲ್ಲ ಗುಣಗಳು ಪ್ರದೀಪ್ ಈಶ್ವರ್ ಅವರಲ್ಲಿವೆ.
ಹಾಗಾಗಿ ಅವರು ಅಚ್ಚರಿಯಂತೆ ಕಾಂಗ್ರೆಸ್‌ನ ಸರಳ ಆಯ್ಕೆಯಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಚುನಾವಣೆಯಲ್ಲಿ ಡಾ. ಕೆ ಸುಧಾಕರ್ ಅವರ ವಿರುದ್ಧ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆರಂಭದಲ್ಲಿ ಚುನಾವಣಾ ಪ್ರಚಾರ ಅಷ್ಟೊಂದು ಕಾವುಪಡೆದುಕೊಂಡಿರಲಿಲ್ಲ. ಇವರ ಪ್ರತಿಸ್ಪರ್ಧಿ ಡಾ. ಕೆ ಸುಧಾಕರ್ ಅವರಂತೂ ತಮಗೆ ಯಾರೂ ಪ್ರತಿಸ್ಪರ್ಧಿಯೇ ಇಲ್ಲ ಎನ್ನುವ ಭ್ರಮೆಯಲ್ಲಿದ್ದರು. ಅಚ್ಚರಿ ಅಂದ್ರೆ ಮೇ ೧೩ನೇ ತಾರೀಕು ಮಧ್ಯಾಹ್ನದ ವೇಳೆ ಫಲಿತಾಂಶದಲ್ಲಿ ಮೆಡಿಕಲ್ ಮಿನಿಸ್ಟರ್ ವಿರುದ್ಧ ಗೆದ್ದು ಬಿಗಿದ್ದ ಮೆಡಿಕಲ್ ಮಾಸ್ಟರ್ ಪ್ರದೀಪ್ ಈಶ್ವರ್!
ಈಗ ಪ್ರದೀಪ್ ಈಶ್ವರ್ ಇಡೀ ರಾಜ್ಯಾದ್ಯಂತ ಸದ್ದು ಮಾಡುತ್ತಿದ್ದಾರೆ. ಅವರ ಪರಿಶ್ರಮದ ಸಾಧನೆಯನ್ನು ಕಂಡಅನೇಕರಿಗೆ ’ವಾರೆ ವ್ಹಾ! ಹಟ-ಛಲ, ಆತ್ಮವಿಶ್ವಾಸ ಅನ್ನೋದು ಇದ್ರೆ ಹೀಗಿರಬೇಕಪ್ಪಾ ಅನ್ನೋ ಹಾಗಾಗಿದೆ’. ಪ್ರದೀಪ್ ಈಶ್ವರ್ ಶಾಸಕರಾಗಿ ಆಯ್ಕೆಯಾದ ಕ್ಷಣದಿಂದಲೇ ಪ್ರತಿ ಹಳ್ಳಿಯ ಪ್ರತಿಯೊಂದು ಮನೆಗಳಿಗೂ ಭೇಟಿ ಕೊಟ್ಟು ಅವರ ಕಷ್ಟಗಳನ್ನು ಆಲಿಸುತ್ತ ನೊಂದ ಮನಸ್ಸುಗಳಲ್ಲಿ ಭರವಸೆಯ ಬೆಳಕನ್ನು ಮೂಡಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳು ಅದು ಯಾವುದೇ ಪಕ್ಷದಲ್ಲಿರಲಿ ಅವರನ್ನು ನಾನೊಬ್ಬ ಅಂಕಣಕಾರನಾಗಿ ಪಕ್ಷಾತೀತವಾಗಿ ಅತ್ಯಂತ ಪ್ರೀತಿಯಿಂದ ಪ್ರದೀಪ್ ಈಶ್ವರರನ್ನು ಗೌರವಿಸುತ್ತಿನೆ.
ಅವರು ಮತ್ತಷ್ಟು ಎತ್ತೆತ್ತರಕ್ಕೆ ಬೆಳೆಯಬೇಕು. ಇಂತಹ ನೈಜ ಸೇವೆಯ ದೃಷ್ಟಿ ಇರುವ ಶಾಸಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಮೂಲಕ ರಾಜ್ಯ ಅಭಿವೃದ್ಧಿಯಾಗಲೆಂದು ಆಶಿಸುತ್ತೇನೆ. ನಮ್ಮ ಪಾಡಿಗೆ ನಾವು ಬರೆಯುವ ಬರಹ, ಇನ್ಯಾರದೋ ಬದುಕಿಗೆ ಸೂರ್ತಿ ಆಗುತ್ತದೆ ಅಂದ್ರೆ ಅದು ನನಗೆ ಬಹಳ ಸಂತೋಷ uಛಿ mಟ್ಞ ಟ್ಞಜ್ಟZಠ್ಠ್ಝಿZಠಿಜಿಟ್ಞo mZbಛಿಛಿ oಜ್ಟಿ.