ರಾಜ್ಯವನ್ನು ವೆಲೆಜುವೆಲಾ ಮಾಡದಿರಲಿ ಇದ್ದು ಗ್ಯಾರಂಟಿ !
ಪ್ರಸ್ತುತ
ಮಹಾಂತೇಶ ವಕ್ಕುಂದ
ಕೆಲ ದಿನಗಳ ಹಿಂದೆ ವಾಟ್ಸಾಪ್ ಹಾಗೂ ಯುಟ್ಯೂಬ್‌ನಲ್ಲಿ ಒಂದು ಡಾಲರ್ ಎಕ್ಸ್‌ಚೇಂಜ್ ಮಾಡಿಕೊಂಡ ಒಬ್ಬಾತ ಒಂದು ಕೈಚೀಲದ ತುಂಬಾ ಬೇರೆ ದೇಶದ ನೋಟುಗಳನ್ನು ಪಡೆದದ್ದನ್ನು ತಾವೆಲ್ಲ ನೋಡಿರಬಹುದು. ಒಂದು ಡಾಲರ್ ಹಣಕ್ಕೆ ಆದೇಶದ ಜನ ಕೇಜಿಗಟ್ಟಲೇ ತಮ್ಮ ದೇಶದ ಹಣವನ್ನು ತುಂಬಿ ತುಂಬಿ ಕೊಡುತ್ತಾರೆ. ಆ ಒಂದೇ ಒಂದು ಡಾಲರ್ ಪಡೆದು ಕೊಳ್ಳಲು ಹೆಣಗಾಡುತ್ತಾರೆ.
ಆ ದೇಶ ಬೇರೆ ಯಾವುದು ಅಲ್ಲ ಲ್ಯಾಟಿನ್ ಅಮೆರಿಕದ ವೆನೆಜುವೆಲಾ ಹಾಗೂ ಅಲ್ಲಿನ ಕರೆನ್ಸಿ ಬೊಲಿವೆರ್‌ಗೆ ಆ ಬೆಲೆ ಇದೆ. ಬರಿ ಬೊಲಿವೆರ್ ಅಲ್ಲ   ಅಂದರೆ ಸರ್ವಶ್ರೇಷ್ಠ ಬೊಲಿವೆರ್. ಜಗತ್ತಿನಲ್ಲಿ ಯೇ ಅತಿ ಹೆಚ್ಚು ಕಚ್ಚಾ ತೈಲ ಉತ್ಪಾದಿಸುವ ರಾಷ್ಟ್ರ ಈ ವೆನೆಜುವೆಲಾ. ದಕ್ಷಿಣ ಅಮೆರಿಕದ ಉತ್ತರ ದಿಕ್ಕಿನಲ್ಲಿ ಕೊಲಂಬಿಯಾ, ಗಯಾನಾ ಹಾಗೂ ಬ್ರೆಜಿಲ್ ದೇಶಗಳ ನಡುವೆ ನೆಲೆಸಿರುವ ರಾಷ್ಟ್ರವಿದು. ೧೮೧೧ರಲ್ಲಿ ಸ್ಪ್ಯಾನಿಷ್ ಆಡಳಿತದಿಂದ ಮುಕ್ತಗೊಂಡು ಸ್ವತಂತ್ರವಾದ ರಾಷ್ಟ್ರ.
ಅಂತಹ ಶ್ರೀಮಂತ ರಾಷ್ಟ್ರವೇನಲ್ಲ. ಸ್ವಾತಂತ್ರ್ಯಾ ನಂತರ ಒಂದರ ಮೇಲೊಂದು ಅಧ್ವಾನಗಳನ್ನು ಮಾಡಿಕೊಳ್ಳುತ್ತ ಅಂಬೆಗಾಲಲ್ಲಿ ತೆವಳುತ್ತ ಸಾಗುತ್ತಿದೆ. ಈ ದೇಶದ ಆದಿವಾಸಿಗಳಿಗೆ ೮-೯ ನೇ ಶತಮಾನದ ಆದಿಯಲ್ಲಿ ಈ ದೇಶದಲ್ಲಿ ತೈಲ ನಿಕ್ಷೇಪಗಳು ಪತ್ತೆಯಾ ಗಿದ್ದವು. ಆದರೆ ಅದರ ಉಪಯೋಗ ಅರಿಯದ ಅವರು ಅಲ್ಪ ಸ್ವಲ್ಪ ತೈಲವನ್ನು ತಮ್ಮ ದೀಪಕ್ಕೆ, ಉರುವಲಿಗೆ ಬಳಸಿಕೊಳ್ಳುತ್ತ ಬದುಕಿದ್ದರು. ೧೯೨೨ರಲ್ಲಿ ದಿಡೀರನೇ ಸಿಕ್ಕ ಅತಿ ದೊಡ್ಡ ತೈಲ ಭಾವಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ವೆನೆಜು ವೆಲಾ ಕಡೆಗೆ ಸೆಳೆದು ತೈಲ ಹಾಗೂ ತೈಲೋತ್ಪನ್ನಗಳ ಬೆಲೆಯನ್ನು ಸ್ಥಳೀಯರಿಗೆ ಪರಿಚಯಿಸಿದ್ದೇ ತಡ ಬರೀ ೬ ವರ್ಷಗಳಲ್ಲಿ ಅಂದರೆ ೧೯೨೮ರ ವೇಳೆಗೆ ವೆನೆಜುವೆಲಾ ಜಗತ್ತಿನ ಅತಿ ದೊಡ್ಡ ತೈಲ ರಫ್ತು ಮಾಡುವ ರಾಷ್ಟ್ರವಾಗಿ ಹೊರಹೊಮ್ಮಿತು.
ಅದೃಷ್ಟವೆಂಬಂತೆ ಆ ತೈಲಕ್ಕೆ ಉತ್ತಮ ಬೆಲೆ ಸಿಕ್ಕು ತೈಲೋತ್ಪನ್ನಗಳ ಬೇಡಿಕೆಯೂ ಹೆಚ್ಚಾಯಿತು. ಇನ್ನೂ ಮುನ್ನಡೆದು ಅದೃಷ್ಟವೆಂಬಂತೆ ಎರಡನೇ ವಿಶ್ವ ಯುದ್ಧದ ತೈಲ ಬೇಡಿಕೆಯನ್ನು ನೀಗಿಸುವ ಜವಾಬ್ದಾರಿಯೂ ವೆನೆಜುವೆಲಾಗೆ ಸಿಕ್ಕಿತು.ದುಡ್ಡಿನ ಮೇಲೆ ದುಡ್ಡು, ಎಲ್ಲೂ ಹಣದ ಹೊಳೆ. ಆ ಹೊಳೆಯ ಅಲೆಗಳ ಮೇಲೆ ಉಯ್ಯಾಲೆ ಆಡುತ್ತಿದ್ದ ವೆನೆಜುವೆಲಾಗೆ ೧೯೫೦ರಲ್ಲಿ ಮದ್ಯ ಪ್ರಾಚ್ಯದ ದೇಶಗಳು ಪೈಪೋಟಿಗೆ ಬಂದವು. ಅಲ್ಲಿಯವರೆಗೆ ತೈಲ ಸಾಮ್ರಾಜ್ಯದ ಚಕ್ರವರ್ತಿಯಂತೆ ಮೆರೆಯುತ್ತಿದ್ದ ಅದಕ್ಕೆ ಜಗತ್ತಿನ ಇತರ ಭಾಗಗಳಿಂದ ಪರ್ಯಾಯರು ಕಾಣಿಸಿಕೊಂಡರು. ಆದರೂ ಅಲ್ಪ ಸ್ವಲ್ಪ ಏಳು ಬೀಳು, ಜಿದ್ದು ಹೊಂದಾಣಿಕೆ ಕಂಡು ವೆನೆಜುವೆಲಾ ತನ್ನ ತೈಲ ಸಂಪತ್ತಿನ ಸರದಾರನಾಗಿ ಬದುಕುತ್ತಿತ್ತು.
ಈ ನಾಗಾಲೋಟದ ಗುಂಗಿನಲ್ಲಿ ತಾನು, ತನ್ನ ಬಡತನ, ಸಿರಿತನ, ಉದ್ಯಮ, ಶಿಕ್ಷಣ, ಸ್ವಾವಲಂಬನೆ ಎಂದು ಬದುಕುತ್ತಿದ್ದ ವೆನೆಜುವೆಲಾಗೆ ೧೯೯೯ರಲ್ಲಿ ಮತ್ತೆ ಸುವರ್ಣ ಯುಗ ಆರಂಭವಾಯಿತು. ವೆನೆಜುವೆಲಾ ರಾಷ್ಟ್ರೀಯ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಹ್ಯೂಗೋ ಚಾವೆಜ್ ಒಬ್ಬ ಸಮಾಜವಾದಿಯಾಗಿ ಆಡಳಿತ ನಿರ್ವಹಿಸಲು ಆರಂಭಿಸಿದ. ಎಲ್ಲೂ ತೈಲ ತೈಲ ಹಾಗೂ ತೈಲ. ಆ ತೈಲದ ಹಣ ಚಾವೆಜ್‌ನನ್ನು ಒಬ್ಬ ಮುಠ್ಠಾಳತನದ ಪರಮಾವಧಿಯ ಸಮಾಜವಾದಿಯನ್ನಾಗಿ ಮಾರ್ಪಡಿಸಿತ್ತು.
ತೈಲದ ರಫ್ತಿನಲ್ಲಿ ಬಂದ ಹಣದಲ್ಲಿ ದೇಶದ ಜನರಿಗೆ ಎಲ್ಲ ಸೌಕರ್ಯಗಳನ್ನು ನೀಡಿದ ಚಾವೆಜ್ ಬಿಟ್ಟಿ ಮನೆ, ಮನೆಗೆ ಬಣ್ಣ, ಹೊಟ್ಟೆಗೆ ಹಿಟ್ಟು, ಔಷಧ, ಶಿಕ್ಷಣ, ವೈದ್ಯಕೀಯ ಸೌಲಭ್ಯ, ತಿರುಗಾಡಲು ಸಾರಿಗೆ ಇತ್ಯಾದಿಗಳನ್ನೆಲ್ಲ ಉಚಿತವಾಗಿ ನೀಡತೊಡಗಿದ. ತನ್ನ ದೇಶದ ಜನರಿಗೆ ಬೇಕಾದದ್ದಾನ್ನೆಲ್ಲ ಆಮದು ಮಾಡತೊಡಗಿದ. ಕಾರುಗಳಿಂದ ಹಿಡಿದು , ಕಾಯಿ ಪಲ್ಲ್ಯೆಯವರೆಗೆ ಎಲ್ಲವೂ ಆಮದು. ರಾಷ್ಟ್ರದ ಜನರ ಸಾಮಾನ್ಯ ಜೀವನ ಅತೀ ಐಷಾರಾಮಿಯಾಗಿ ನಡೆಯತೊಡಗಿತು. ಐಷಾರಾಮಿ ಜೀವನಕ್ಕೆ ತೊಡಕು ಬರಬಾರದು, ನನ್ನ ಜನರಿಗೆ ಇನ್ನೂ ಹೆಚ್ಚೆಚ್ಚು ಸೌಲಭ್ಯ ಕೊಡಬೇಕೆಂಬ ದೂರದೃಷ್ಟಿ ಹೀನ ಮಹತ್ವಾಕಾಂಕ್ಷೆಯಲ್ಲಿ ಸಾಲ ಮಾಡಿ ಸೌಲಭ್ಯ ನೀಡ ತೊಡಗಿದ.
ತೈಲ ಮಾರಿ ಸಾಲ ತೀರಿಸೋಣ, ಮೊದಲು ಬಿಟ್ಟಿಯಾಗಿ ದಾನ ಮಾಡೋಣ ಎಂದು ಅಕ್ಕಪಕ್ಕದ ದೇಶಗಳಿಂದೆಲ್ಲ ಸಾಲ ಮಾಡಿ ತನ್ನ ದೇಶದ ಜನರ ಹೊಟ್ಟೆ ತುಂಬಿಸಿದ, ಎಲ್ಲವನ್ನೂಕೊಟ್ಟ. ಇನ್ನೂ ಮುಂದುವರಿದು ಸಮಾಜವಾದದ ಅತಿರೇಕದಮತ್ತೇರಿಸಿಕೊಂಡ ಚಾವೆಜ್, ಎಲ್ಲವನ್ನು ಸರಕಾರದ ಅಧೀನದಲ್ಲಿ ತರಲು ಪ್ರಯತ್ನಿಸತೊಡಗಿದ. ಅಲ್ಲಿನ ಯಾವುದೇ ಖಾಸಗಿ ಕಂಪನಿ ಸ್ವಲ್ಪ ದೊಡ್ಡದಾದರೂ, ಸಾಧನೆ ಮಾಡಿದರೂ ಅದು ಸರಕಾರದ ಭಾಗವೆಂದು ಘೋಷಿಸಿ ತೊಡಗಿದ.
ಕೆಲಸ ಮಾಡುವವರೆಲ್ಲ ಸರಕಾರಿ ನೌಕರರಾಗಿಯೇ ಇರಬೇಕು, ಎಲ್ಲವೂ ಸರಕಾರದ ಸಾಮ್ಯತೆಯಲ್ಲಿಯೇ ನಡೆಯಬೇಕೆಂಬ ಹುಚ್ಚು ಆಲೋಚನೆಯಲ್ಲಿ ಮುನ್ನುಗ್ಗಿದ. ಊರಲ್ಲಿ ಸುತ್ತುವ ಬೀದಿ ಬಸವರೆಲ್ಲ ತಮ್ಮ ಅವಶ್ಯಕತೆಗೆ ಕೆಲಸ ಬೇಕು ಎಂದು ಕೇಳಿದಾಗ ಅವರನ್ನೆಲ್ಲ ಅಲ್ಲಿನ ಸರಕಾರಿ ತೈಲ ಉತ್ಪಾದನಾ ಕಂಪನಿ  ಸೇರಿಸಿಕೊಳ್ಳಬೇಕೆಂದು ಆದೇಶಿಸಿದ. ( ಎಂಬುದು ನಮ್ಮ ದೇಶದ  ಇದ್ದಂತೆ).  ಹಾಗೂ ಸರಕಾರದವರು ಇಷ್ಟೊಂದು ನೌಕರರ ಅವಶ್ಯಕತೆ ನಮಗಿಲ್ಲ ವೆಂದರೂ ಅವರಿಗೆಲ್ಲ ಬರಿ ಯುನಿಫಾರ್ಮ್ ತೊಡಿಸಿ ಸಂಬಳ ನೀಡತೊಡಗಿದ (ನಮ್ಮ ದೇಶದ  ಅಥವಾ ನಮ್ಮ ರಾಜ್ಯದ ಓPಖಇ ಈ ತರಹ ಮಾಡಿದರೆ, ಎಲ್ಲರೂ ಸರಕಾರಿ ನೌಕರರಾದರೆ ಏನೆಲ್ಲ ಅನಾಹುತ ಗಳಾಗಬಹು ದೆಂದು ಒಮ್ಮೆ ಊಹಿಸಿಕೊಳ್ಳಿ).
ತೈಲ ಸಾಮ್ರಾಜ್ಯದ ಪರ್ಯಾಯವಾಗಿ ಇನ್ನೊಂದು ಉದ್ಯಮ ಬೆಳೆಯದಾದಾಗ ಎಲ್ಲ ಹೊರೆ ಈ ತೈಲ ಉತ್ಪನ್ನ ಮಾಡುವ  ಮೇಲೆ ಬೀಳತೊಡಗಿತು. ಆದರೂ ತೈಲದ ಬಂಡಿ ಓಡುತ್ತಿತ್ತು. ಕೆಲಸ ಮಾಡದೆ ಬರಿ ಯುನಿಫಾರ್ಮ್ ತೊಡಲಿ ಕ್ಕಾಗಿ ಜನರ ಕೈಗೆ ಅವಶ್ಯಕತೆಗೂ ಹೆಚ್ಚಿನ ಸಂಬಳ ಬರುತ್ತಿತ್ತು. ಮತದಾರರ ಹಾಗೂ ಜನರ ಓಲೈಕೆಗಾಗಿ ಚಾವೆಜ್, ಎಲ್ಲವನ್ನೂ ಆಮದು ಮಾಡಿಕೊಳ್ಳುತ್ತಿದ್ದ, ರಾಷ್ಟ್ರಕ್ಕೆ ಬಂದ ಹಣ ಎಲ್ಲರಿಗೂ ಸಮಾನ ಎಂದೂ ಅದನ್ನು ಪ್ರತಿಯೊಬ್ಬ ಪ್ರಜೆಗೂ ಮುಟ್ಟಿಸಬೇಕೆಂದು ಎಲ್ಲವನ್ನೂ ಕೂತಲ್ಲಿಯೇ ಕೊಟ್ಟ.
ದುಡಿಯುವ, ಉತ್ಪಾದಿಸುವ, ಜ್ಞಾನಾರ್ಜಿಸುವ ಜನರ ಶಕ್ತಿಗೆ ಕೊಡಲಿ ಏಟು ಇಟ್ಟ. ಆದರೆ ಆತ ಮಾಡಿದ ಸಮಾಜವಾದವನ್ನು ಅಂದು ಫ್ರಾನ್ಸ್, ಅಮೆರಿಕ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳು ಮುಕ್ತ ಕಂಠದಿಂದ ಹಾಡಿ ಹೊಗಳಿದವು. ದೇಶವೊಂದಕ್ಕೆ ಅತಿ ದೊಡ್ಡ ಪ್ರಮಾಣದ ಹಣ ಹರಿದು ಬಂದರೆ ಅದನ್ನು ಚಾವೆಜ್‌ನಂತೆ ಸಮಾಜಕ್ಕಾಗಿ ಖರ್ಚು ಮಾಡಬೇಕೆಂದು ಹೊಗಳಿ ಹೊಗಳಿ ಹೊನ್ನ ಶೂಲಕ್ಕೇರಿಸಿದವು.
ಅಷ್ಟಾದರೂ ಎಲ್ಲವೂ ಸರಿಯಾಗಿ ನಡೆದಿತ್ತು. ೨೦೧೩ರಲ್ಲಿ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿ ಚಾವೆಜ್ ಸತ್ತು ಹೋದ. ಒಬ್ಬ ಮೃದು ಮನಸ್ಸಿನ, ಆರ್ಥಿಕವಾಗಿ ದುರ್ಬಲ ಯೋಜನೆಗಳನ್ನು ಕೊಟ್ಟ ಒಬ್ಬ ನಾಯಕನನ್ನು ವೆನೆಜುವೆಲಾ ಕಳೆದುಕೊಂಡಿತ್ತು. ಈ ಪರಿಸ್ಥಿತಿಯಲ್ಲಿ ವೆನೆಜುವೆಲಾಗೆ ಆರ್ಥಿಕ ಸದೃಢತೆ ನೀಡಿ, ಬೇರೆ ಬೇರೆ ಉತ್ಪಾದನಾ ಹಾಗೂ ಆದಾಯಗಳ ಮೂಲದಿಂದ ಸದೃಢಗೊಳಿಸಬಲ್ಲ ನಾಯ ಕನ ಅವಶ್ಯಕತೆ ಇತ್ತು ಹಾಗೂ ಅಂತಹ ನಾಯಕನೊಬ್ಬ ನನ್ನು ಪಡೆಯಲು ಚಾವೆಜ್‌ನ ಸಾವಿ ನಿಂದ ಒಂದು ಸದಾ ವಕಾಶ ಒದಗಿ ಬಂದಿತ್ತು, ಆದರೆ ಚಾವೆಜ್ ಮಾಡಿದ ಜನೋಪಕಾರದ ಪರಿಣಾಮ ಎಷ್ಟಿತ್ತೆಂದರೆ ಆ ಜನ ಚಾವೆಜ್‌ನ ಸಾವಿಗೆ ಹಗಲು ರಾತ್ರಿ ಕಣ್ಣೀರಿಟ್ಟರು, ಹಾದಿ ಬೀದಿಗಿಳಿದು ಪ್ರತಿಭಟಿಸಿದರು.
ಭಾವನಾತ್ಮಕವಾಗಿ ಚಾವೆಜ್‌ಗೆ ಅಂಟಿಕೊಡಿದ್ದ ಜನ ಆತನ ಮರಣದ ನಂತರ ಚಾವೆಜನೇ ಸೂಚಿಸಿದ್ದ ನಿಕೋಲಸ್ ಮದುರೋ ಎಂಬಾತನನ್ನ ವೆನೆಜುವೆಲಾದ ಅಧ್ಯಕ್ಷನನ್ನಾಗಿ ಆರಿಸಿದರು. ನಿಕೋಲಸ್, ಇದೆ ಚಾವೆಜ್‌ನ ಅಧಿಕಾರಾವಧಿಯಲ್ಲಿವಿದೇಶಾಂಗ ಮಂತ್ರಿಯಾಗಿದ್ದವ. ಒಬ್ಬ ಬಸ್ ಡ್ರೈವರ್ ಆಗಿದ್ದ ಈತ ಅಲ್ಲಿನ ಪಾರ್ಲಿಮೆಂಟ್ ಸದಸ್ಯನಾಗಿದ್ದ ಚಾವೆಜ್‌ನ ಸಾವಿನ ನಂತರ ಮದುರೋ ವೆನೆಜುವೆಲಾ ಅಧ್ಯಕ್ಷನಾದ. ಮದುರೋಗೆ ರಿಸ್ಕ್ ಬೇಕಾಗಿರಲಿಲ್ಲ. ಚಾವೆಜ್ ವೆನೆಜುವೆಲಾದ ಜನರನ್ನು ಬಿಟ್ಟಿ ಆಡಂಬರಗಳ ಸಮಾಜವಾದದ ಮುಳುಗುವ ಹಡಗನ್ನೇರಿಸಿದ್ದ, ಮದುರೋ ತನ್ನ ಜನರಿಗಾಗಿ ಆ ಹಡಗನ್ನು ರಿಪೇರಿ ಮಾಡುವ ಕೆಲಸ ಮಾಡಬೇಕಾಗಿತ್ತು. ಆದರೆ ಆತ ಹಾಗೆ ಮಾಡದೆ ಅದನ್ನು ಸಮುದ್ರದ ಮಧ್ಯಕ್ಕೆ ಕೊಂಡೊಯ್ದ.
ಚಾವೆಜ್ ಬಿಟ್ಟು ಹೋದ ಜನೋಪಕಾರಿ ಯೋಜನೆ ಗಳನ್ನು ತೆಗೆದು ಹಾಕುವುದರಿಂದ ಜನ ಎಲ್ಲಿ ನನ್ನನ್ನು ಅಧಿಕಾರದಿಂದ ಕೆಳಗಿಳಿಸಿ ಬಿಡುತ್ತಾರೋ ಎಂಬ ಅಧಿಕಾರದ ಲಾಲಸೆಯಲ್ಲಿ ತನ್ನ ದೇಶದ ಮೇಲಾಗುತ್ತಿರುವ ಭಾವನಾತ್ಮಕ ಅತ್ಯಾಚಾರವನ್ನು ಆತ ಮುಂದುವರಿಸಿದ. ಅದೃಷ್ಟದ ಮೇಲೆ ಅದೃಷ್ಟ ಕಂಡ ವೆನೆಜುವೆಲಾ ಕಾಲಚಕ್ರದ ಕೆಳಗೆ ಬಂದಿತ್ತು. ಆ ದೇಶದ ದುರದೃಷ್ಟಕ್ಕೆ ಪೆಟ್ರೋಲ್ ಉತ್ಪನ್ನಗಳ ಬೆಲೆ ಕುಸಿಯತೊಡಗಿತು. ೨೦೧೪ರಲ್ಲಿ ಆರಂಭವಾದ ಪತನ ಅ, ಆ, ಇ , ಈ ಯನ್ನೂ ಕಲಿಯದ ವೆನೆಜುವೆಲಾದ ಜನಗಳಿಗೆ ಜೀವನ ಪಾಠಗಳ ಪಿಎಚ್.ಡಿ ಹೇಳಿಕೊಡಲಾರಂಭಿಸಿತು.
ಎಲ್ಲವನ್ನೂ ಆಮದು ಮಾಡಿಕೊಂಡೇ ಬದುಕಿದ್ದ ದೇಶಕ್ಕೆ ಸ್ವ-ಉತ್ಪಾದನೆ ಮರೀಚಿಕೆ ಆಗಿತ್ತು. ಸಾಲದ ಹೊರೆ ಹೆಚ್ಚಾಗಿ ಆಮದು ಕಡಿತಗೊಂಡಿತು. ಸರಕಾರಿ ಸೇವೆಗಳಲ್ಲಿದ್ದವರ ಭತ್ಯೆ, ಪಿಎಫ್, ಪಿಂಚಣಿ, ಆರೋಗ್ಯ ವಿಮೆ ಇತ್ಯಾದಿ ಒಂದೊದಾಗಿ ಕಳಚತೊಡಗಿದವು. ಬರೀ ಯುನಿಫಾರ್ಮ್ ಹಾಕಿಕೊಂಡದ್ದಕ್ಕೆ ಸಂಬಳ ಪಡೆಯುತ್ತಿದ್ದವರ ಕೆಲಸ ಹೋಯಿತು. ದುಡಿಯಲಿಕ್ಕೆಪರ್ಯಾಯ ಏನೂ ಇಲ್ಲ. ಜನ ಬೀದಿಗಿಳಿದರು, ಪ್ರತಿಭಟಿಸಿದರು.
ವೆನೆಜುವೆಲಾ ರಾಜಧಾನಿ ಜಗತ್ತಿನ ಅತೀ ಪೀಡಿತ ಹಾಗೂ ರಕ್ಷಣೆರಹಿತ ಊರಾಯಿತು. ಜಗತ್ತಿನ ಅತೀ ಹೆಚ್ಚು ಕೊಲೆ, ದರೋಡೆ ಈ ನಗರದಲ್ಲಿ ಶುರುವಾದವು. ಹೆಣ್ಣು ಮಕ್ಕಳು ವ್ಯಭಿಚಾರವನ್ನೇ ಬದುಕುವ ದಾರಿಯಾಗಿಸಿಕೊಂಡರು. ಆಸ್ಪತ್ರೆ ಗಳಲ್ಲಿ ಔಷಧ ಇಲ್ಲ, ರಸ್ತೆಯಲ್ಲಿ ಬಸ್ಸುಗಳಿಲ್ಲ, ಶಾಲೆಯಲ್ಲಿ ಶಿಕ್ಷಕರಿಲ್ಲ. ಎಲ್ಲವೂ ಎಲ್ಲರೂ ರಸ್ತೆಗಿಳಿದು ಹೊಡೆದಾಡುತ್ತಿವೆ. ಒಂದನೊಂದು ಕಿತ್ತು ತಿನ್ನುತ್ತಿವೆ. ಯಾತಕ್ಕಾಗಿ ಗೊತ್ತೇ ? ತಮ್ಮದೇ ತಪ್ಪಿಗಾಗಿ.
೨೦೧೩ರಲ್ಲಿ ಒಂದು ಡಾಲರ್‌ಗೆ ೬.೫ ಬೊಲಿವರ್ ಕೊಡುತ್ತಿದ್ದ ವೆನೆಜುವೆಲಾ ಕೇವಲ ೬ ವರ್ಷಗಳಲ್ಲಿ ಒಂದೇ ಒಂದು ಡಾಲರ್‌ಗೆ ಎರಡೂವರೆ ಲಕ್ಷ ಬೊಲಿವರ್ ಕೊಡುವ ಮಟ್ಟಕ್ಕೆ ಬಂದು ನಿಂತಿತ್ತು. ಒಂದೇ ಒಂದು ಭಾರತದ ರುಪಾಯಿಯ ವಿರುದ್ಧ ಬೊಲಿವರ್ ೩,೪೦೦ಆಗಿ ಕುಸಿಯಿತು. ನಮಗೆಲ್ಲ ಅರ್ಥವಾಗುವ ಸಂಕ್ಷಿಪ್ತ ಭಾಷೆಯಲ್ಲಿ ಹೇಳುವುದಾದರೆ ೨೦೧೩ರಲ್ಲಿ ಒಂದು-ಟ್‌ಕೊಳ್ಳಲುಸಾಲುತ್ತಿದ್ದ ಬೊಲಿವರ್ ೨೦೧೮ರ ವೇಳೆಗೆ ಒಂದು ಕಪ್ ಕಾಫಿ ಕೂಡಕೊಳ್ಳದ ಪರಿಸ್ಥಿತಿಗೆ ಕುಸಿದು ಹೋಯಿತು. ಹೆಚ್ಚು ಕಡಿಮೆ ೮೦,೦೦೦ % ಹಣದುಬ್ಬರ ಏರಿ ಜನ ಕಂಗಾಲಾದರು.
ಒಂದು ಡಾಲರ್ ಕೊಳ್ಳಲು ಕೆಜಿಗಟ್ಟಲೆ ತೂಗಿ ತಮ್ಮ ನೋಟು ಕೊಟ್ಟರು. ಇದು ಇಂದಿನ ವೆನೆಜುವೆಲಾ ಪರಿಸ್ಥಿತಿ. ಇದಾದ ಮೇಲೆ ವೆನೆಜುವೆಲಾದ ಜನ ಗಂಟು ಮೂಟೆ ಕಟ್ಟಿಕೊಂಡು ದೇಶ ಬಿಟ್ಟರು. ಪಕ್ಕದ ದೇಶಗಳ ಗಡಿಯ ಮುಂದೆ ನಿಂತು ಒಳ ಬರಲು ಅಪ್ಪಣೆ ಕೊಡಿ ಎಂದು ಅಂಗಲಾಚುತ್ತಿದ್ದರೆ. ತುತ್ತು ಅನ್ನಕ್ಕಾಗಿ ತಿಪ್ಪೆಯನ್ನು ಕಿತ್ತಾಡಿ ಆರಿಸಿ ತಿಂದರು. ಬೇಯಿಸಲು ಕಾಸಿಲ್ಲದೆ ಹಸಿ ಮಾಂಸ ವನ್ನು ಹಾಗೆಯೇ ತಿಂದು ಮಕ್ಕಳಿಗೂ ತುರುಕಿದರು. ಆ ಮಾಂಸ ಕೊಳೆತು ನಾರುತ್ತಿತ್ತು, ಆದರೆ ಅದನ್ನು ಬಿಟ್ಟರೆ ಗತಿ ಏನು? ಬಿಟ್ಟಿ ಭಾಗ್ಯಗಳ ವೈಭೋಗದ ಪರಮಾವಧಿ ಕಂಡ ವೆನೆಜುವೆಲಾ ಕಂಗೆಟ್ಟು ಬಿಕ್ಕಿ ಹೋಯಿತು.
ಇಂತಹ ಪರಿಸ್ಥಿತಿಯಲ್ಲೂ ಅಲ್ಲಿನ ಪ್ರತಿಪಕ್ಷಗಳು ಮದುರೋ ಮಾಡಿದ ಅವಾಂತರದ ಲಾಭ ಪಡೆದು ‘ಅಧಿಕಾರದ ಗದ್ದುಗೆ’ ಏರಲು ಹರಸಾಹಸ ನಡೆಸಿದವು, ರಾಜಕೀಯ ಅಧಿಕಾರದ ಹಪಾಹಪಿಗೆ ದೇಶದ ಜನ ಬೀದೀಲಿ ಬಿದ್ದು ತಿಪ್ಪೆ ಸಾರಿಸಿ ತುತ್ತು ಅನ್ನ ಹುಡುಕುತ್ತಿರುವುದು ಮಾತ್ರ ರಾಜಕೀಯಕ್ಕೆ ಒಂದು ಲೆಕ್ಕಾಚಾರವಷ್ಟೇ ಆಗಿ ಹೋಯಿತು. ಇದು ವಾಸ್ತವ, ಕಟ್ಟು ಕಥೆ ಅಲ್ಲ. ವೆನೆಜುವೆಲಾ ನಮ್ಮ ಕಣ್ಣ ಮುಂದೆ ಇಂದು ಒಂದು ಪ್ರತ್ಯಕ್ಷ ಉದಾಹರಣೆ.
ಆದರೆ ನಾವು ಕನ್ನಡಿಗರು ಎಲ್ಲವನ್ನೂ ಅಳೆದು ನೋಡು ವವರು, ಜಾಣರು, ಚಾಣಾಕ್ಷರು, ಸಮಯ ಪ್ರಜ್ಞೆ ಉಳ್ಳವರು. ಹಾಗಾಗಿ ಇನ್ನೂ ಸಬಲರಾಗಿ ಬದುಕುತ್ತಿದ್ದೇವೆ. ಹಾಗೆಯೇ ಮುಂದುವರಿಯೋಣ. ಈ ಕಥೆ ಏನೇ ಇರಲಿ ಕೊನೆಯದಾಗಿ ಹೇಳುವು ದೆಂದರೆ ಪುಗಸಟ್ಟೆ ಸಿಗೋದು ನಮ್ಮನ್ನು ಹಾಗು ನಮ್ಮ ದೇಶವನ್ನೆಂದೂ ಉದ್ಧಾರ ಮಾಡಲಾರದು. ಮೂಲಭೂತ ಅವಶ್ಯಕತೆ ಗಳ ಕೊರತೆಯ ಬದುಕುತ್ತಿರುವ ಈ ನಾಡಿನ ಬಹುಪಾಲು ಜನರ ಜೀವನ ವನ್ನು ಶಿಕ್ಷಣ ಬೆಳಗಬಲ್ಲುದು. ಹೊಸ ಉದ್ಯೋಗ ಕ್ರಾಂತಿ, ಮಹಿಳಾ ಸಬಲೀಕರಣ ಈ ನಾಡಿಗೆ ಹೆಚ್ಚಿನ ಶಕ್ತಿ ತುಂಬಲು ಸಾಧ್ಯ.
ಇಂತಹ ಶಿಕ್ಷಣ, ಉದ್ಯೋಗ ಸೃಷ್ಟಿ, ಮಹಿಳಾ ಸಬಲೀಕರಣವನ್ನು ಕೈ ಬಿಟ್ಟು ಹ್ಯುಗೋ ಚಾವೆಜ್ ಸಿದ್ದರಾಮಯ್ಯನವರು, ನಿಕೊಲಸ್ ಮಧುರೋ ಡಿಕೆ ಶಿವಕುಮಾರರು ಕರ್ನಾಟಕವನ್ನು ವೆನೆಜುವೆಲಾ ಮಾಡಲು ಹೊರಟಿರುವುದು ದುರ್ದೈವವೇ ಸರಿ.