ಉಚಿತ ಯೋಜನೆಗಳು ದೇಶದ ಆರ್ಥಿಕತೆಗೆ ಔಚಿತ್ಯವೇ ?
ಅವಲೋಕನ
ಶಶಿಕುಮಾರ್‌ ಕೆ.
ಕಳೆದ ಜುಲೈನಲ್ಲಿ ಪ್ರಧಾನಿ ನರೇಂದ್ರ ಮೋದಿ, ಉತ್ತರಪ್ರದೇಶದ ಬುಂದೇಲಖಂಡ ಎಕ್ಸ್‌ಪ್ರೆಸ್ ವೇ ಉದ್ಘಾಟಿಸುವ ವೇಳೆ ಮಾತನಾಡುತ್ತ ‘ಮತ ಗಳಿಸುವ ಉದ್ದೇಶದಿಂದ ಪಕ್ಷಗಳು ಉಚಿತ ಕೊಡುಗೆ ಗಳನ್ನು ನೀಡುವ ಭರವಸೆಗಳು ದೇಶದಅಭಿವೃದ್ಧಿಗೆ ಮಾರಕ’ ಎಂದು ಹೇಳುವುದರೊಂದಿಗೆ ದೇಶದಲ್ಲಿ ರಾಜಕೀಯ ಪಕ್ಷಗಳು ಮತ್ತು ಕೆಲ ರಾಜ್ಯ ಸರಕಾರಗಳು ಘೋಷಿಸುವಂತಹ ಉಚಿತ ಕೊಡುಗೆಗಳ ಬಗ್ಗೆ ಚರ್ಚೆ ಹುಟ್ಟುಹಾಕಿದ್ದರು.
ಆದರೆ, ಇಂಥ ಉಚಿತ ಗ್ಯಾರಂಟಿಗಳನ್ನು ಘೋಷಿಸಿಯೇ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈಗಾಗಲೇ ರಾಜ್ಯದಲ್ಲಿ ೧-೧೦ನೇ ತರಗತಿ ಒಳಗಿನ ಶಾಲಾ ಮಕ್ಕಳಿಗೆ ಉಚಿತ ಊಟ, ಪಠ್ಯಪುಸ್ತಕ, ಸಮವಸ್ತ್ರ, ವಿದ್ಯಾರ್ಥಿವೇತನ, ಕ್ಷೀರಭಾಗ್ಯ, ಮೊಟ್ಟೆ ಹಾಗೂ ಬಾಳೆಹಣ್ಣು ವಿತರಣೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಲಾ ಗುತ್ತಿದೆ. ಇನ್ನೂ ಸಂಧ್ಯಾ ಸುರಕ್ಷಾ ಯೋಜನೆಯಡಿ ೬೫ ವರ್ಷ ದಾಟಿದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ೧೨೦೦ರೂ ವೃದ್ಧಾಪ್ಯ ವೇತನ, ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ೧೭೫ ಯೂನಿಟ್ ಉಚಿತ ವಿದ್ಯುತ್, ಬಡತನ ರೇಖೆಗಿಂತ ಕೆಳಗಿನ ಪರಿಶಿಷ್ಟ, ಹಿಂದುಳಿದ ವರ್ಗಗಳ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್‌ವೆಲ್, ವನಿತಾ ಯೋಜನೆಯಡಿ ಗಾರ್ಮೆಂಟ್ಸ್ ನೌಕರರಿಗೆ ಉಚಿತ ಬಸ್ ಪಾಸ್ ಮುಂತಾದವು ಇವೆ.
ಇವಲ್ಲದೇ, ಕೇಂದ್ರ ಸರಕಾರ ಉಜ್ವಲ ಯೋಜನೆಯಡಿ ೧೯ ಕೋಟಿ ಕುಟುಂಬಗಳಿಗೆ ಉಚಿತ ಅಡುಗೆ ಅನಿಲ ಸಿಲಿಂಡರ್, ಪಿಎಮ ಕಿಸಾನ್ ಯೋಜನೆಯಡಿ ಫಲಾನುಭವಿ ರೈತರ ಖಾತೆಗಳಿಗೆ ವಾರ್ಷಿಕ ೬೦೦೦ರು. ಜಮೆ, ದೇಶದ ಎಲ್ಲ ನಾಗರಿಕ ರಿಗೂ ಉಚಿತ ಕರೋನಾ ಲಸಿಕೆ, ಪಿಎಮ ಗರೀಬ್ ಕಲ್ಯಾಣ ಯೋಜನೆಯಡಿ ದೇಶದ ೮೦ ಕೋಟಿ ಜನರಿಗೆ ಉಚಿತ ಆಹಾರ ಧಾನ್ಯಗಳ ವಿತರಣೆಗಳು ನಡೆಯುತ್ತಿವೆ.
ಇಷ್ಟರವರೆಗೆ ಒಂದೆರಡು ರಾಜ್ಯಗಳಿಗೆ ಸೀಮಿತವಾಗಿದ್ದ ಉಚಿತ ಕೊಡುಗೆಗಳು ಈಗ ದೇಶದಾದ್ಯಂತ ಮತದಾರರನ್ನು ಸೆಳೆಯುವಅಸಗಳಂತೆ ಬಳಕೆಯಾಗುತ್ತಿವೆ. ಅಧಿಕಾರಕ್ಕೆ ಏರಬೇಕು ಎಂಬ ಉಮೇದಿನೊಂದಿಗೆ ರಾಜಕೀಯ ಪಕ್ಷಗಳು ಚುನಾವಣಾ ಪೂರ್ವದಲ್ಲಿ ಮಾಡುವ ಉಚಿತ ಘೋಷಣೆಗಳು ಜಾರಿಗೆ ಬಂದರೆ ಅದರ ಹೊರೆ ಬೀಳುವುದು ತೆರಿಗೆದಾರರ ಮೇಲೆಯೇ. ಉಚಿತ ಘೋಷಣೆಗಳ ಜಾರಿಯಿಂದಾಗಿ ರಾಜ್ಯಗಳ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ ಯಾದರೂ ರಾಜಕೀಯ ಪಕ್ಷಗಳಿಗೆ ಅದರ ಬಗ್ಗೆ ಆಸಕ್ತಿಯಿಲ್ಲ.
ಉಚಿತ ಯೋಜನೆಗಳಿಂದಾಗಿ ಹಲವು ರಾಜ್ಯಗಳಿಗೆ ಶ್ರೀಲಂಕಾದಂತಹ ಆರ್ಥಿಕ ದುಃಸ್ಥಿತಿ ಬರಲೂಬಹುದು ಎಂದು ಈಗಾಗಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಚ್ಚರಿಕೆ ನೀಡಿದೆ. ಸಾಲಮನ್ನಾ, ಉಚಿತ ವಿದ್ಯುತ್, ನೀರು, ಬಸ್ ಪ್ರಯಾಣ, ಕಲರ್ ಟಿವಿ, ಮಿಕ್ಸಿ, ಮಂಗಳಸೂತ್ರ, ಲ್ಯಾಪ್ ಟಾಪ್, ಕಂಪ್ಯೂಟರ್, ಬೈಸಿಕಲ್, ಸ್ಕೂಟರ್‌ಗಳಂತಹ ಸೌಲಭ್ಯಗಳ ಭರವಸೆ ಮಿತಿ ಮೀರಿದೆ.
ಉಚಿತ ಭರವಸೆಗಳ ಕುರಿತಂತೆ ಸುಪ್ರೀಂ ಕೋರ್ಟ್ ಸಹ ತನ್ನ ಅಭಿಪ್ರಾಯ ತಿಳಿಸಿದ್ದು, ರಾಜಕೀಯ ಭರವಸೆಗಳು ಆರ್ಥಿಕತೆ ಯ ದೃಷ್ಟಿಯಿಂದ ತುಂಬಾ ಗಂಭೀರ ವಿಚಾರ ಎಂದು ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ವೇಳೆ ತಿಳಿಸಿದೆ. ಇದೇ ವೇಳೆ ಜನರ ಕಲ್ಯಾಣ ಕಾರ್ಯಕ್ರಮಗಳೊಂದಿಗೆ ಸಮತೋಲನ ಕಾಪಾಡುವ ಅಗತ್ಯವಿದೆ ಎಂದೂ ತಿಳಿಸಿದೆ. ಹಾಗೆಯೇ ರಾಜಕೀಯ ಪಕ್ಷಗಳ ಉಚಿತ ಕೊಡುಗೆಗಳ ಘೋಷಣೆಗಳಿಗೆ ನಾವು ತಡೆಯಾಜ್ಞೆ ನೀಡಲು ಆಗುವುದಿಲ್ಲ. ಆದರೆ ಆರ್ಥಿಕತೆಯ ದೃಷ್ಟಿಯಿಂದ ಅತಿಯಾದ ಉಚಿತ ಕೊಡುಗೆಗಳು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜಕೀಯ ಪಕ್ಷಗಳು ನೀಡುವ ಉಚಿತ ಭರವಸೆಗಳು ದೇಶದ ಆರ್ಥಿಕತೆಯ ಮೇಲೆ ಗಾಢ ಪ್ರಭಾವ ಬೀರುತ್ತಿರುವುದೇನೋ ನಿಜವೇ,ಇದಕ್ಕೆಲ್ಲ ಕಡಿವಾಣ ಹಾಕಬೇಕಾಗಿರುವುದು ಚುನಾವಣಾ ಆಯೋಗ. ಸ್ವತಂತ್ರ ಸಂಸ್ಥೆಯಾಗಿರುವ ಯೋಗ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರಕ್ಕೆ ಬರಬೇಕಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸಾರ್ವತ್ರಿಕ ಆರೋಗ್ಯ ಸೇವೆ, ಕುಡಿಯುವ ನೀರು ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಕೊಡುವುದಾಗಿ ರಾಜಕೀಯ ಪಕ್ಷಗಳು ನೀಡುವ ಭರವಸೆಗಳನ್ನು ಉಚಿತಕೊಡುಗೆಗಳೆಂದು ಭಾವಿಸಬಹುದೇ? ಎಂಬ ಬಗ್ಗೆ ಪರಾಮರ್ಶೆ ಅಗತ್ಯ ಎಂದು ನ್ಯಾಯಪೀಠ ಹೇಳಿದೆ.
ಕೆಲವು ಯೋಜನೆಗಳಿಂದ ಜನರು ಗೌರವಯುತ ಜೀವನ ನಡೆಸಬಹುದಾಗಿದೆ. ಅಂತಹ ಯೋಜನೆಗಳ ಲಾಭ ಪಡೆಯುವುದು ಸಹ ಜನರ ಹಕ್ಕುಗಳಾಗುತ್ತವೆ ಎಂದು ಪೀಠ ಪ್ರತಿಪಾದಿಸಿತು. ಜತೆಗೆ ಉಚಿತ ಕೊಡುಗೆಗಳ  ಸಾಧಕ-ಬಾಧಕಗಳ ಕುರಿತು ಕೇಂದ್ರ ಸರಕಾರವು ಸುಪ್ರೀಂಕೋರ್ಟ್ ಗೆ ಪ್ರತಿಕ್ರಿಯೆ ನೀಡಿದ್ದು, ಚುನಾವಣೆಯಲ್ಲಿ ತೀವ್ರ ಸ್ಪರ್ಧೆಯೊಡ್ಡಲು ಉಚಿತ ಕೊಡುಗೆ ಗಳುಅಸಗಳಾಗಿವೆ. ಇಂತಹ ಸಂಸ್ಕೃತಿಯು ಆರ್ಥಿಕತೆಯನ್ನು ಬುಡಮೇಲು ಮಾಡಲಿದೆ ಎಂದು ಕಳವಳ ವ್ಯಕ್ತಪಡಿಸಿದೆ.
ಜಗತ್ತಿನ ವಿವಿಧ ದೇಶಗಳಲ್ಲಿ ಅಲ್ಲಿನ ಸರ್ಕಾರಗಳೂ ತಮ್ಮ ಜನರಿಗೆ ಹಲವಾರು ಉಚಿತ ಕೊಡುಗೆಗಳನ್ನು ನೀಡುತ್ತಿವೆ. ಅಮೆರಿಕದಲ್ಲಿ ಕಡಿಮೆ ಆದಾಯ ಮತ್ತು ಬಡಕುಟುಂಬಗಳಿಗೆ ಉಚಿತ ಕೊಡುಗೆಗಳನ್ನು ನೀಡಲಾಗುತ್ತದೆ. ಡಬ್ಲ್ಯೂ ಐ ಸಿ ( ವುಮೆನ್, ಇನ್-ಟ್ಸಅಂಡ್ ಚಿಲ್ರನ್ ಪ್ರೋಗ್ರಾಮ) ವೇದಿಕೆಯು ಗರ್ಭಿಣಿ, ತಾಯಂದಿರಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಹಾಗೂ ಮಗುವಿನ ಪೋಷಣೆಗೆ ಬೇಕಾದ ಪದಾರ್ಥಗಳು ಮತ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ನೀಡುತ್ತದೆ. ಅಷ್ಟೇಅಲ್ಲದೆ ಅಮೆರಿಕದಲ್ಲಿ ಸ್ನ್ಯಾಪ್ ( ಸಪ್ಲಿಮೆಂಟಲ್ ನುಟ್ರಿಷನ್ ಅಸಿಸ್ಟೆಂನ್ಸ್ ಪ್ರೋಗ್ರಾಮ್ ) ಎಂಬ ಸಂಸ್ಥೆ ಅತ್ಯಂತ ಕಡುಬಡವರಿಗೆ ಆಹಾರ ಖರೀದಿ ಮಾಡಲು ಹಣ ಸಹಾಯ ಅಥವಾ ಕೂಪನ್‌ಗಳನ್ನು ವಿತರಿಸುತ್ತಾರೆ.
ಕಾರು ಇರುವಂತಹ ಬಡವರಿಗೆ ಚೈಲ್ಡ ಸೇಫ್ಟಿ ಸೀಟ್ ಗಳನ್ನು ಖರೀದಿಸಲು ಸ್ಥಳೀಯ ಆರೋಗ್ಯ ಇಲಾಖೆ ಮತ್ತು ಸಾರ್ವಜನಿಕ ಸುರಕ್ಷತಾ ಇಲಾಖೆ ಧನಸಹಾಯ ಮಾಡುತ್ತವೆ. ಅಮೆರಿಕದಲ್ಲಿ ೧೮೫೩ರಿಂದ ನ್ಯಾಷನಲ್ ಸ್ಕೂಲ್ ಲಂಚ್ ಪ್ರೋಗ್ರಾಮ್ ಅಸ್ತಿತ್ವದಲ್ಲಿದೆ. ಇಲ್ಲಿನ ಬೇರೆ -ಬೇರೆ ರಾಜ್ಯಗಳಲ್ಲಿ ಮುಂಚೆ ಜಾರಿಗೊಳಿಸಲಾಗಿತ್ತು. ಅದೇ ರಾಷ್ಟ್ರಮಟ್ಟದಲ್ಲಿ ೧೯೪೬ರಲ್ಲಿ ಹ್ಯಾರಿ ಟ್ರೂಮನ್ ಅಧ್ಯಕ್ಷರಾಗಿzಗ ಅಸ್ತಿತ್ವಕ್ಕೆ ಬಂದಿತು. ಕಾರಣ ಆಹಾರದ ಉತ್ಪಾದನೆ ಹೆಚ್ಚಾಗಿದ್ದರಿಂದ ಅದನ್ನು ವಿನಿಯೋಗಿಸಬೇ ಕಾದ ಅನಿವಾರ್ಯ ಇತ್ತು.
ಅದೇ ಅಮೆರಿಕದಲ್ಲಿ ಸಮ್ಮರ್ ಫುಡ್ ಸರ್ವಿಸ್ ಪ್ರೋಗ್ರಾಮ್ ಕೂಡ ಇದೆ. ಅಂದರೆ ಬೇಸಿಗೆ ಸಂದರ್ಭದಲ್ಲಿ ಶಾಲೆಗಳಿಗೆ ರಜೆ ಇದ್ದ ಸಮಯ ದಲ್ಲಿ ಮಕ್ಕಳಿಗೆ ಆಹಾರ ನೀಡುವ ಯೋಜನೆಯಿದು. ಬಡವರ್ಗದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಲು ಡಿಪಾಟ್‌ಮೆಂಟ್ ಆಫ್ ಸೋಶಿಯಲ್ ಅಂಡ್ ಹೆಲ್ತ್ ಸರ್ವಿಸಸ್ ಕಡೆಯಿಂದ ವ್ಯವಸ್ಥೆ ಮಾಡಲಾಗಿದ್ದು, ಅರ್ಹ ಫಲಾನುಭವಿ ಗಳಿಗೆ ಕೆಲ ಷರತ್ತುಗಳನ್ವಯ ಉಚಿತ ಲ್ಯಾಪ್ ಟಾಪ್ ನೀಡಲಾಗುತ್ತದೆ. ಅಷ್ಟೇ ಅಲ್ಲದೆ ಅರ್ಹ ಫಲಾನುಭವಿಗಳಿಗೆ ಫೋನ್ ಬಿಲ್, ಇಂಟರ್ನೆಟ್‌ನ ಬಿಲ್ ಗಳಲ್ಲಿ ಸಬ್ಸಿಡಿ ನೀಡಲು ಅವಕಾಶವಿದೆ.
ತುಂಬಾ ಉಷ್ಣಾಂಶವಿರುವ ಅಮೆರಿಕದ ಕೆಲವು ಪ್ರದೇಶಗಳಲ್ಲಿ ಏರ್ ಕಂಡೀಷನರ್‌ಗಳ ಬಳಕೆಗೆ ವಿದ್ಯುತ್‌ಬಿಲ್ ನಿಂದ ಸಬ್ಸಿಡಿ ಯನ್ನು ನೀಡಲಾಗುತ್ತದೆ. ಅಲ್ಲಿನ ಎಲ್ಲ ಜನರಿಗೂ ಯೂನಿವರ್ಸಲ್ ಹೆಲ್ತ್ ಕೇರ್ ಅನ್ನು ಉಚಿತವಾಗಿ ನೀಡಲಾಗುತ್ತಿದೆ. ಯಾರಾದರೂ ಬಾಡಿಗೆ ಮನೆಗಳಲ್ಲಿ ವಾಸವಿದ್ದರೆ ಅವರಿಗೆ ಬಾಡಿಗೆ ಕಟ್ಟಲು ಕಷ್ಟವಾಗಿದ್ದರೆ ಅಂತಹ ಸಂದರ್ಭದಲ್ಲಿ ಡಿಪಾರ್ಟ್ಮೆಂಟ್ ಆಫ್ ಹೌಸಿಂಗ್ ಡೆವಲಪ್ಮೆಂಟ್ ಅರ್ಬನ್ ಅಂಡ್ ಯು.ಸ್ ಅರ್ಹರಿಗೆ ವೋಚರ್‌ಗಳನ್ನು ನೀಡುತ್ತದೆ.ಕಮ್ಯುನಿಸ್ಟ ರಾಷ್ಟ್ರಗಳಾದ ಕ್ಯೂಬ, ವೆನಿಜುವೆಲಾದಲ್ಲಿ ಶಿಕ್ಷಣ ಮತ್ತು ಆರೋಗ್ಯ, ನೀರು ಇಂತಹ ಅಗತ್ಯಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಗಲ್ಫ್ ರಾಷ್ಟ್ರಗಳಲ್ಲಿ ಬಡವರಿಗೆಮನೆ ಕಟ್ಟಿಕೊಳ್ಳಲು ಉಚಿತವಾಗಿ ಬ್ಯಾಂಕ್ ನಿಂದ ಸಾಲ ನೀಡಲಾಗುತ್ತದೆ. ಕಮ್ಯುನಿಸ್ಟ್ ಚೀನಾದಲ್ಲೂ ೧೯೮೦ರ ವರೆಗೆ ತೊಟ್ಟಿಲಿನಿಂದ ಸಮಾಽವರೆಗೆ ಎಲ್ಲವನ್ನೂ ಅಲ್ಲಿನ ನಾಗರಿಕರಿಗೆ ಸರ್ಕಾರಗಳು ಉಚಿತವಾಗಿ ನೀಡುತ್ತಿದ್ದವು. ಆದರೆ ೧೯೮೫ರ ನಂತರ ಕೆಲವು ಬದಲಾವಣೆಗಳನ್ನು ಮಾಡಿ ಹಳ್ಳಿಗಳಲ್ಲಿ ಜಮೀನು ಹೊಂದಿದವರಿಗೆ ಸಬ್ಸಿಡಿಗಳಿಂದ ಹೊರಗಿಟ್ಟು ಕೇವಲ ನಗರ ಪ್ರದೇಶಗಳಲ್ಲಿ ಕಾರ್ಖಾನೆ ಕೆಲಸ ಮಾಡುವವರಿಗೆ ಕೆಲವು ಸಬ್ಸಿಡಿಗಳನ್ನು  ನೀಡಲಾಗುತ್ತಿತ್ತು. ಆದರೆ ೨೦೧೪ರ ನಂತರ ಹಳ್ಳಿ ಭಾಗದ ಜನರಿಗೂ ಈ ಸೌಕರ್ಯಗಳನ್ನು ನೀಡಲಾಗುತ್ತಿದೆ. ಆದರೆಈ ಎಲ್ಲ ಸಂದರ್ಭದಲ್ಲಿ ಜನ ಕಲ್ಯಾಣ ಯೋಜನೆಯ ಭಾಗವಾಗಿ ಇವನ್ನು ಜಾರಿಗೊಳಿಸಲಾಘುತ್ತದೆಯೇ ವಿನಃ, ಇಲ್ಲಿನ ರಾಜಕೀಯ ಘೋಷಣೆಗಳಂತಲ್ಲ.
ಇನ್ನು ನಮ್ಮಲ್ಲಿ ಪಂಜಾಬ, ಬಿಹಾರ, ರಾಜಸ್ಥಾನ, ಆಂಧ್ರಪ್ರದೇಶ, ಉತ್ತರ ಪ್ರದೇಶ ರಾಜ್ಯಗಳ ಸಾಲ ಹೆಚ್ಚಾಗಿವೆ ಎಂದು ‘ದಿ ಪ್ರಿಂಟ್’ ವೆಬ್‌ಸೈಟ್ ವರದಿ ಮಾಡಿದೆ. ಆಂಧ್ರದ ಜಿಎಸ್‌ಡಿಪಿ ಯಲ್ಲಿ ಸಾಲದ ಪ್ರಮಾಣ ೩೨.೪%ಗೆ ಏರಿದೆ. ೧೫ನೇ ಹಣಕಾಸು ಆಯೋಗದ ಸಮಯ(೨೦೨೦-೨೫) ಮುಗಿದ ಕೂಡಲೇ ಖರ್ಚು ವಿಷಯದಲ್ಲಿ ಮತ್ತಷ್ಟು ತೊಂದರೆ ಉಂಟಾಗುತ್ತದೆ ಎಂದು ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ವೈಸ್ ಚಾನ್ಸಲರ್ ಎನ್.ಆರ್. ಬಾನುಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಪಂಜಾಬಿನ ರೆವಿನ್ಯೂ ಕಳೆದ ನಾಲ್ಕು ವರ್ಷಗಳಲ್ಲಿ ಶೇ.೯ ಅಧಿಕವಾಗಿದ್ದರೆ, ಬಡ್ಡಿ ಸಲ್ಲಿಸುವ ಸಾಮರ್ಥ್ಯ ಶೇ.೩ ಅಧಿಕವಾಗಿದೆ. ಜಿಎಸ್‌ಡಿಪಿಯಲ್ಲಿ ೫೩% ಸಾಲ ಮಾಡಿರುವ ಪಂಜಾಬ್ ಪರಿಸ್ಥಿತಿ ದೇಶದ ಇತರೆ ರಾಜ್ಯಗಳಿಗಿಂತ ದಾರುಣ ಸ್ಥಿತಿಯಲ್ಲಿದೆ. ಇನ್ನು ಕಳೆದ ಚುನಾವಣೆಯಲ್ಲಿ ರಾಜ್ಯದ ಎಲ್ಲ ಜನರಿಗೂ ಉಚಿತ ಗ್ಯಾಸ್ ವಿತರಣೆಯ ಭರವಸೆ ನೀಡಲಾಗಿದ್ದ ಉತ್ತರ ಪ್ರದೇಶದಲ್ಲಿ ಕಂದಾಯ ಬೆಳವಣಿಗೆಯಲ್ಲಿ ಐದು ವರ್ಷಗಳಲ್ಲಿ ಶೇ.೫ ಹೆಚ್ಚಾಗಿದ್ದು, ಬಡ್ಡಿ ಸಲ್ಲಿಕೆಯ ಮರುಪಾವತಿ ದರ ಶೇ.೬ಕ್ಕೆ ಏರಿದೆ.
ಆಂಧ್ರಪ್ರದೇಶ, ಬಿಹಾರ,ರಾಜಸ್ಥಾನ ರಾಜ್ಯಗಳ ಸಾಲದ ಪರಿಸ್ಥಿತಿ ಶೋಚನೀಯ. ಆಂಧ್ರದಲ್ಲಿ ೨೦೨೧-೨೨ರ ಆರ್ಥಿಕ ವರ್ಷದಲ್ಲಿ ಒಟ್ಟು ಸಾಲ ೩.೮೯ ಲಕ್ಷ ಕೋಟಿಗೆ ತಲುಪಿದೆ ಎಂದು ದಿ ಪ್ರಿಂಟ್ ವರದಿ ಮಾಡಿದೆ. ಆ ರಾಜ್ಯದ ಒಟ್ಟು ಸಾಲ ೭.೭೬ ಲಕ್ಷ-ಕೋಟಿ ಆಗಿದೆ. ಕೇಂದ್ರ ಸರ್ಕಾರದ ನಿವೃತ್ತ ಕಂದಾಯ ಕಾರ್ಯದರ್ಶಿ ಎನ್.ಕೆ. ಸಿಂಗ್ ನೇತೃತ್ವದ ಎಫ್ಆ ರ್‌ಬಿಎಮ್ ಕಮಿಟಿ ರಾಜ್ಯಗಳು ತಮ್ಮ ಜಿಎಸ್‌ಡಿಪಿಯಲ್ಲಿ ಸಾಲದ ಪ್ರಮಾಣವನ್ನು ೨೦% ನೊಳಗೆ ನಿಯಂತ್ರಿಸಬೇಕೆಂದುಶಿ-ರಸು ಮಾಡಿದೆ.೨೦೨೨-೨೩ರ ಆರ್ಥಿಕ ವರ್ಷದ ಕೊನೆಯ ವೇಳೆಗೆ ಈ ಗುರಿಯನ್ನು ಮುಟ್ಟಬೇಕೆಂಬುದು ಗಮನಾರ್ಹ.
ಯಾವುದೇ ದೇಶದ ಯಾವುದೇ ಸರ್ಕಾರಗಳಾಗಲಿ ಜನರಿಗೆ ದುಡಿದು ತಿನ್ನುವ ಅಥವಾ ಜನರ ಆದಾಯವನ್ನು ಹೆಚ್ಚಿಸುವ ಯೋಜನೆಗಳನ್ನು ಜಾರಿಗೆ ತರಬೇಕೆ ಹೊರತು ಉಚಿತವಾಗಿ ಕೊಡುಗೆಗಳನ್ನು ಕೊಡುವುದರ ಮೂಲಕ ಅವರನ್ನು ಸೋಮಾರಿ ಗಳನ್ನಾಗಿ ಮಾಡಿದರೆ ಮುಂದೊಂದು ದಿನ ನಮ್ಮ ದೇಶಕ್ಕೂ ಸಹ ವೆನಿಜುವೆಲಾ ದೇಶಕ್ಕೆ ಬಂದಿರುವ ಪರಿಸ್ಥಿತಿ ಒದಗಿದರೆ ಆಶ್ಚರ್ಯವಿಲ್ಲ.