ಕೃತಕ ಬುದ್ದಿಮತ್ತೆ: ಇರಲಿ ಒಂದಷ್ಟು ಸಾವಧಾನ !
ಪ್ರಸ್ತುತ
ಮಹಾದೇವ ಬಸರಕೋಡ
ಮನುಷ್ಯರ ಚಿಂತನೆಗೆ ಸರಿಸಮಾನವಾಗಿ ಆಲೋಚಿಸಲು ಕೃತಕ ಬುದ್ಧಿಮತ್ತೆಗೆ ಎಂದೂ ಸಾಧ್ಯವಿಲ್ಲ. ಮನುಷ್ಯರಿಗೆ ಮನುಷ್ಯರೇ ಸಾಟಿ ಎಂದು ನಮ್ಮಷ್ಟಕ್ಕೆ ನಾವು ಅದೆಷ್ಟೇ ಹೇಳಿಕೊಂಡರೂ, ಅದು ತಾತ್ಕಾಲಿಕವಷ್ಟೇ. ಮಾನವೀಯ ಸಂಬಂಧಗಳನ್ನೇ ಸಡಿಲಗೊಳಿಸಬಲ್ಲ ಹಲವು ಅನಪೇಕ್ಷಿತ ಸಂಗತಿಗಳು ಭವಿಷ್ಯತ್ತಿನಲ್ಲಿ ಜರುಗಬಲ್ಲವು ಎಂಬುದಕ್ಕೆ ಇಂದಿನ ಬೆಳವಣಿಗೆಗಳು ಸಾಕ್ಷಿಯಾಗುತ್ತಿವೆ.
ಕೃತಕ ಬುದ್ಧಿಮತ್ತೆ ಎಂಬ ಪರಿಕಲ್ಪನೆ ನಮಗೆ ಹೊಸದೇನಲ್ಲ. ಭಾರತೀಯ ಪುರಾಣ- ಪುಣ್ಯಕಥೆಗಳಲ್ಲಿ ಇದಕ್ಕೆ ಸಂಬಂಧಿಸಿದ ಸಾಕಷ್ಟು ಉಪಕಥೆಗಳನ್ನು ನಾವು ಕೇಳಿದ್ದೇವೆ. ರಾಮಾಯಣ ಮತ್ತು ಮಹಾಭಾರತದಲ್ಲಿ ಕಾಣಬರುವ, ಒಬ್ಬ ವ್ಯಕ್ತಿಯ ಹಲವು ರೂಪಗಳನ್ನು ಸೃಜಿಸಿ, ಅವನಂತೆ ಯುದ್ಧಮಾಡುವ ತಂತ್ರಗಳು ನಮಗೆ ತುಂಬಾ ಪರಿಚಿತವೇ. ಬುದ್ಧಿವಂತಿಕೆಯನ್ನು ಹೊಂದಿರುವ ನಿರ್ಜೀವ ವಸ್ತುಗಳ ಕಲ್ಪನೆ ಇತರ ದೇಶಗಳಲ್ಲಿಯೂ ಪ್ರಾಚೀನವೇ. ಗ್ರೀಕ್ ದೇವರುಹೆ-ಸ್ಟಸ್ಅನ್ನು ಅಲ್ಲಿನ ಪುರಾಣಗಳಲ್ಲಿ ರೋಬೋ ಥರದ ಸೇವಕರು ಚಿನ್ನದಿಂದ ಚಿತ್ರಿಸಿದರು ಎನ್ನುವ ಉಲ್ಲೇಖವಿದೆ.
ಇವು ಕೃತಕ ಬುದ್ಧಿಮತ್ತೆಯು ಬಹುಕಾಲದಿಂದಲೂ ನಮಗೆ ಪರಿಚಿತವಾಗಿದ್ದವು ಎಂಬುದನ್ನು ತೋರುವ ಕೆಲವು ಸಾಂಕೇತಿಕ ಸನ್ನಿವೇಶಗಳಾಗಿವೆ. ಹಾಗೆ ನೋಡಿದರೆ, ಕೃತಕ ಬುದ್ಧಿಮತ್ತೆ ಎಂಬ ಪರಿಕಲ್ಪನೆಯ ಪದ ರಚಿತ ವಾಗಿದ್ದು ೧೯೫೬ರಲ್ಲಿ. ಅಲ್ಲಿಂದ ಇಲ್ಲಿಯವರೆಗೂ ಈ ನಿಟ್ಟಿನಲ್ಲಿ ಹತ್ತು ಹಲವು ಸಂಶೋಧನೆ ಗಳು ನಡೆದು ಆಶಾದಾಯಕ ಫಲಶ್ರುತಿಗಳೂ ದೊರಕಿವೆ. ಕೃತಕ ಬುದ್ಧಿಮತ್ತೆಯು ಮನುಷ್ಯರಂತೆ ನಿರ್ದಿಷ್ಟ ಗುರಿಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನುಸಾಽಸಲುಯಂತ್ರಗಳಿಗೆ ಒಪ್ಪಿಗೆ ಸೂಚಿಸುವುದು, ಮನುಷ್ಯರ ಒಂದಿನಿತೂ ಸಹಾಯ ವಿಲ್ಲದೇ ಈಗಾಗಲೇ ಅಂತರ್ಜಾಲದಲ್ಲಿ ಲಭ್ಯವಿರುವ ಡೇಟಾಗಳಿಂದ ತನ್ನಿಂದ ತಾನೆ/ಸ್ವಯಂಚಾಲಿತವಾಗಿ ಕಲಿಯುವ ಯಂತ್ರಗಳನ್ನು ಅದು ಸೂಚಿಸುವುದು, ಆಳವಾದ ಕಲಿಕೆಯ ತಂತ್ರವು ಪಠ್ಯ, ಚಿತ್ರ ಮತ್ತು ಆಡಿಯೋದಂಥ ಬೃಹತ್ ಪ್ರಮಾಣದ ರಚನೆಯಿಲ್ಲದ ಡೇಟಾವನ್ನು ಹೀರಿಕೊಳ್ಳಲು ಅನುಮತಿಸುವುದನ್ನು ನಾವು ನೋಡಿದ್ದೇವೆ.
ಬೃಹತ್ ಕಂಪನಿಗಳು ತಮ್ಮ ದೈನದಿಂದ ಕಾರ್ಯಚಟುವಟಿಕೆಗಳಲ್ಲಿ ಇದರ ಸಹಾಯದಿಂದ ಲಾಭಗಳಿಸುವ, ತಮ್ಮ ಘನತೆಯನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿ ನಿರಂತರವಾಗಿ ತೊಡಗಿ ಪೈಪೋಟಿಯನ್ನೂ ಮಾಡುತ್ತಿವೆ. ಕೆಲವು ಬಾರಿ ಇಂಥ ಪೈಪೋಟಿ ಅನಪೇಕ್ಷಿತ ರೀತಿಯಲ್ಲಿ ಆಗುತ್ತಿರುವುದು ಕೂಡ ಸುಳ್ಳಲ್ಲ. ವೀಕ್ಷಣೆ,ವಿಶ್ಲೇಷಣಾತ್ಮಕ ಸಾಮರ್ಥ್ಯ, ಸಮಸ್ಯೆ ಪರಿಹಾರ ಕಲಿಕೆಯಂಥ ಗುಣಲಕ್ಷಣ ಹೊಂದಿದ್ದು, ಆನ್‌ಲೈನ್‌ನಲ್ಲಿ ವಿಷಯವನ್ನು-ಗ್ಮಾಡುವುದು, ಚಿತ್ರಗಳಲ್ಲಿಮುಖಗಳನ್ನು ಪತ್ತೆ ಹಚ್ಚುವುದು, ಸುಲಭ ಗ್ರಾಹಕರ ಆರೈಕೆ, ವಿಚಾರಣೆಗಳನ್ನು ಮಾಡುತ್ತ ತನ್ನದೇ ಆದ ಪಾತ್ರವನ್ನು ನಿಭಾಯಿಸುತ್ತಿದ್ದರೂ ವಿಷಯ ಅಷ್ಟಾಗಿಗಂಭೀರವಾಗಿರಲಿಲ್ಲ.
ಆದರೆ ಇದೀಗ ಉದ್ಯೋಗ, ರಕ್ಷಣೆ, ಆರೋಗ್ಯ, ಸಾಮಾಜಿಕ ಕ್ಷೇತ್ರ ಮಾತ್ರವಲ್ಲದೆ ಮಾನವನ ಖಾಸಗಿ ಬದುಕಿನಲ್ಲಿ ಸೃಜನಶೀಲತೆಯ ವಿಷಯದಲ್ಲೂ ಅದು ಮೂಗುತೂರಿಸುವಂಥ ಬೆಳವಣಿಗೆಗಳು ಕಂಡು ಬಂದ ಹಿನ್ನೆಲೆಯಲ್ಲಿ ಕೃತಕ ಬುದ್ದಿಮತ್ತೆ ಮತ್ತೆ ಮುಂಚೂಣಿಗೆ ಬಂದು, ಬಹುವಾಗಿ ಚರ್ಚಿತವಾಗುವ ವಿಷಯವಾಗಿ ನಮ್ಮೆದುರು ಗೋಚರವಾಗಿ ನಿಂತಿದೆ. ಮನುಷ್ಯರ ಚಿಂತನೆಗೆ ಸರಿಸಮಾನವಾಗಿ ಆಲೋಚಿಸಲು ಕೃತಕ ಬುದ್ಧಿಮತ್ತೆಗೆ ಎಂದೂ ಸಾಧ್ಯವಿಲ್ಲ. ಮನುಷ್ಯರಿಗೆ ಮನುಷ್ಯರೇ ಸಾಟಿ ಎಂದು ನಮ್ಮಷ್ಟಕ್ಕೆ ನಾವು ಅದೆಷ್ಟೇ ಹೇಳಿಕೊಂಡರೂ, ಸಮಾಧಾನ ಪಟ್ಟುಕೊಂಡರೂ ಅದು ತಾತ್ಕಾಲಿಕವಾದದ್ದೇ ವಿನಾ ಸಂಪೂರ್ಣ ಸತ್ಯವಲ್ಲ.
ಮಾನವೀಯಸಂಬಂಧಗಳನ್ನೇ ಸಡಿಲಗೊಳಿಸುವ, ಸಾಮಾಜಿಕ ಸ್ವಾಸ್ಥ್ಯವನ್ನು ಹದಗೆಡಿಸಬಲ್ಲ ಹತ್ತು ಹಲವು ಅಪೇಕ್ಷಿತವಲ್ಲದ ಸಂಗತಿಗಳು ಭವಿಷ್ಯತ್ತಿನಲ್ಲಿ ಜರುಗಬಲ್ಲವು ಎಂಬುದಕ್ಕೆ ಇಂದಿನ ಬೆಳವಣಿಗೆಗಳು ಸಾಕ್ಷಿಯಾಗುತ್ತಿವೆ. ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಬಹುಮುಖ್ಯವಾಗಿ ಕೆಳಹಂತದ ಬಹಳಷ್ಟುಉದ್ಯೋಗಗಳನ್ನು ಸರಾಗವಾಗಿ ಮಾಡಬಲ್ಲದು. ಇದರಿಂದ ಬಹುತೇಕ ಮಧ್ಯಮ ವರ್ಗದ ಮತ್ತು ಕೆಳವರ್ಗದ ಜನರು ಖಂಡಿತವಾಗಿಯೂ ನಿರುದ್ಯೋಗಿಗಳಾಗ ಬಲ್ಲರು. ಚಾಟ್‌ಜಿಪಿಟಿ ರೀತಿಯ ವೇದಿಕೆಗಳು ಪರಿಚಯಗೊಂಡ ನಂತರ ಟೈಪಿಸ್ಟ್, ವ್ಯಾಕರಣ ಶಿಕ್ಷಕರು, ಅನುವಾದಕರು, ಪ್ರಬಂಧಕಾರರು, ಲೇಖಕರು ಇವರ ಪಾತ್ರ ಸಾಕಷ್ಟು ನೇಪಥ್ಯಕ್ಕೆ ಸರಿದಿರುವುದು ನಮಗೂ ಗೊತ್ತಿರುವ ಸಂಗತಿಯಾಗಿದೆ.
ಇತ್ತೀಚಿಗೆ ಮೆಟಾ ಆಧಾರಿತ ಕೃತಕ ಬುದ್ಧಿಮತ್ತೆಯಾದ ಸುದ್ದಿವಾಚನ ಮಾಡುವ ರೋಬೊ ಪ್ರವೇಶವಾಗಿವೆ. ಅರ್ಧ ಗಂಟೆ ರೆಕಾರ್ಡ್ ಇರುವ ಯಾವುದೇ ನಟ, ನಟಿಯರ ಮುಖಭಾವವನ್ನು ಗಮನಿಸಿ, ಭವಿಷ್ಯದಲ್ಲಿ ಅವರಿಲ್ಲದಿದ್ದರೂ ಅವರನ್ನೇ ನಾಯಕ ನಾಯಕಿಯರ ನ್ನಾಗಿ ಮಾಡಿಕೊಂಡು ಏನೆಲ್ಲ ಮಾಡಲು ಸಾಧ್ಯವಾಗುವುದನ್ನು ಅಲ್ಲಗಳೆಯಲಾಗುವುದಿಲ್ಲ. ಇದರ ಹಿನ್ನೆಲೆಯ ಲ್ಲಿಯೇ ಜುಲೈ ೧೩ರ ಮಧ್ಯರಾತ್ರಿಯಿಂದ ಹಾಲಿವುಡ್ ನಲ್ಲಿ ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಕೆಳಗೆ ಬರುವ ಬಹುತೇಕ ನಟ ನಟಿಯರೆಲ್ಲ ಮುಷ್ಕರದಲ್ಲಿ ತೊಡಗಿದ್ದಾರೆ. ಹತ್ತು ಹಲವು ಚಿತ್ರಗಳ ಚಿತ್ರೀಕರಣ ಸಂಪೂರ್ಣ ನಿಂತುಹೋಗಿದೆ.
ಇದರಿಂದಾಗಿ ಹಾಲಿವುಡ್ ಸಂಪೂರ್ಣ ಕಾರ್ಯ ಚಟುವಟಿಕೆ ಸ್ಥಗಿತಗೊಂಡಿದೆ. ರಿಯಾಲಿಟಿ ಷೋಗಳು ಕೂಡ ನಡೆಯುತ್ತಿಲ್ಲ. ಮನರಂಜನಾ ವಾಹಿನಿಗಳುಹಳೆಯ ಕಾರ್ಯಕ್ರಮಗಳನ್ನು ಅನಿವಾರ್ಯವಾಗಿ ಮರುಪ್ರಸಾರ ಮಾಡಬೇಕಾಗಿ ಬಂದಿದೆ. ಸುಮಾರು ೬೦ ವರ್ಷಗಳ ಅವಧಿಯಲ್ಲಿ ಅಲ್ಲಿ ಇಂಥ ಬಹುದೊಡ್ಡ ಮುಷ್ಕರ ನಡೆದಿರಲಿಲ್ಲ. ಇನ್ನೊಂದೆಡೆ ಸ್ಕ್ರಿಪ್ಟ್ ಬರಹಗಾರರ ಸಂಘಟನೆಯಾದ ರೈಟರ್ಸ್ ಗಿಲ್ಡ್ ಆ- ಅಮೆರಿಕ ಕೂಡ ಮುಷ್ಕರದಲ್ಲಿ ನಿರತವಾಗಿದೆ. ಬರಹಗಾರ ರೊಂದಿಗೆ ನಟ ನಟಿಯರೂ ಕೈಜೋಡಿಸಿ ಮುಷ್ಕರದಲ್ಲಿ ತೊಡಗಿಕೊಂಡಿರುವುದು ಬಹುಶಃ ಇತಿಹಾಸದಲ್ಲಿಯೇ ಇದು ಪ್ರಥಮ ವೆಂದರೆ ಅತಿಶಯೋಕ್ತಿಯೇನಲ್ಲ. ಹತ್ತು ಸಾವಿರಕ್ಕಿಂತಲೂ ಹೆಚ್ಚು ಬರಹಗಾರರು ಮತ್ತು ೧.೬ ಲಕ್ಷದಷ್ಟು ನಟ ನಟಿಯರು ಇದರಲ್ಲಿ ಭಾಗಿಯಾಗಿರುವುದರಿಂದ ಕೋಟಿಗಟ್ಟಲೆ ಡಾಲರ್ ನಷ್ಟವುಂಟಾಗಿದೆ. ಇಂಥ ಬೆಳವಣಿಗೆಯಿಂದ ಹಾಲಿವುಡ್ ತತ್ತರಿಸಿಹೋಗಿದೆ.
ರಕ್ಷಣಾ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಸಾಧನಗಳ ಬಳಕೆಯು, ಉಪಯುಕ್ತತೆಯ ಜತೆಗೆ ಬಹುದೊಡ್ಡ ಅಪಾಯವನ್ನು ಕೂಡ ಹುಟ್ಟುಹಾಕಬಲ್ಲದು. ಸಾಮಾಜಿಕವ್ಯವಸ್ಥೆಯಲ್ಲಿ ತರತಮಗಳು ಇನ್ನಷ್ಟು ಉಲ್ಬಣ ಗೊಳ್ಳಬಲ್ಲವು. ಇದಕ್ಕಿಂತ ಮಿಗಿಲಾಗಿ ಮಾನವ ಸಂಬಂಧ ಗಳಲ್ಲಿ ಅವು ಪ್ರವೇಶ ಮಾಡಿ ಖಾಸಗಿ ಬದುಕನ್ನುಏರುಪೇರು ಮಾಡುವ ಸಾಧ್ಯತೆಗಳು ಕೂಡ ನಿಚ್ಚಳ ವಾಗಿವೆ. ಮಾನವ ಹಸ್ತಕೇಪವಿರುವ ಎಲ್ಲ ಕ್ಷೇತ್ರಗಳಲ್ಲಿ ಇದು ಪ್ರವೇಶಿಸಬಲ್ಲದು. ಕೃತಕ ಬುದ್ಧಿಮತ್ತೆಯು ತನ್ನಿಂದ ತಾನೆ ಕಲಿಯುವ ಸಾಮರ್ಥ್ಯ ಹೊಂದಿರುವ ಕಾರಣ ಭವಿಷ್ಯದಲ್ಲಿ ಮನುಷ್ಯರ ಮೇಲೆ ತನ್ನ ಬಿಗಿಹಿಡಿತ ಸಾಧಿಸುವ ಸಾಧ್ಯತೆಗಳು ಕೂಡ ಸಾವಿರಾರು. ಅವು ಎಲ್ಲವನ್ನೂ ಎಲ್ಲರಿಂದ ಕಸಿದುಕೊಳ್ಳಬಲ್ಲವು ಎನ್ನುವ ಆತಂಕ ಇದೀಗ ಎಲ್ಲರಲ್ಲೂ ಶುರುವಾಗಿರುವುದು ಕೂಡ ಸತ್ಯವೇ ಆಗಿದೆ. ಕೃತಕ ಬುದ್ಧಿಮತ್ತೆ ಬೆಳವಣಿಗೆಯಲ್ಲಿ ಬೃಹತ್ ಕಂಪನಿಗಳು ಮತ್ತು ವಿಜ್ಞಾನಿಗಳು ತೀವ್ರತರವಾಗಿ ತೊಡಗಿಸಿಕೊಂಡಿದ್ದಾರೆ.
ಸದ್ಯಕ್ಕೆ ಅವರಲ್ಲಿ, ಏನೆಲ್ಲ ಸಾಧ್ಯವಿದೆಯೋ ಅದೆಲ್ಲವನ್ನೂ ಸಾಽಸಿಬಿಡಬೇಕು ಎನ್ನುವ ಅದಮ್ಯ ಹಂಬಲ ಗರಿಗೆದರಿದೆ. ಇದು ಒಪ್ಪತಕ್ಕ ವಿಚಾರವಾದರೂ ಯಾವುದೇ ಆವಿಷ್ಕಾರಗಳು, ಸಂಶೋಧನೆಗಳು ಜೀವಜಗತ್ತಿನ ಹಿತಕ್ಕಾಗಿಯೇ ಇರಬೇಕೇ ವಿನಾ, ಅವನತಿಗೆ ಕಾರಣವಾಗಬಾರದು ಎಂಬುದನ್ನು ನಾವು ಮರೆಯುವಂತಿಲ್ಲ. ಸಾಮಾಜಿಕ ಪ್ರeಯನ್ನೂ, ವೈಚಾರಿಕತೆಯನ್ನೂ, ಸೇವಾಮನೋಭಾವವನ್ನೂ ಎಚ್ಚರಿಸಿ ಮನುಷ್ಯನನ್ನು ಹೃದಯವಂತನನ್ನಾಗಿ ಮಾಡಲಾರದ ವ್ಯವಸ್ಥೆಯಾಗಲೀ, ಅವಿಷ್ಕಾರಗಳಾಗಲೀ ಎಂದಿಗೂ ನಿಷ್ಪ್ರಯೋಜಕವೇ ಸರಿ. ಈ ಗ್ರಹಿಕೆ ನಮ್ಮೆಲ್ಲರ ಮನದಾಳದಲ್ಲಿ ನೆಲೆಗೊಳ್ಳಬೇಕಿದೆ. ಮನುಷ್ಯ ಪ್ರೀತಿ ನಮ್ಮೆಲ್ಲರ ಎದೆಯಲ್ಲಿ ಮತ್ತೆ ಮತ್ತೆ ರಿಂಗಣಿಸುತ್ತಲೇ ಇರಬೇಕು. ಅದುವೇ ಎಲ್ಲದಕ್ಕಿಂತಲೂ ದೊಡ್ಡದು ಎಂಬ ಅರಿವು ಕೂಡ ನಮ್ಮದಾಗಬೇಕು. ಎಲ್ಲ ಸಂಶೋಧನೆಗಳು, ಅವಿಷ್ಕಾರ ಗಳು ಮಾನವೀಯ ನೆಲೆಗಟ್ಟಿನ ಮೇಲೆಯೇ ರೂಪುಗೊಳ್ಳಬೇಕು.
ಇದು ಮಾತ್ರವೇ ನಮ್ಮೆಲ್ಲರ ಬದುಕನ್ನು ಈಗಿರುವುದಕ್ಕಿಂತ ಇನ್ನಷ್ಟು ಸುಂದರಗೊಳಿಸಬಲ್ಲದು ಎಂಬ ಸತ್ಯವನ್ನು ಮರೆಯದಿರೋಣ.