ಭಾಷಾ ಶಿಕ್ಷಣದ ಒಂದಷ್ಟು ಒಳನೋಟಗಳು
ವಿಶ್ಲೇಷಣೆ
ವಿನೀತ್ ನಾಯರ್‌
ವ್ಯಾಪಾರ ಸಂವಹನಗಳಲ್ಲಿ ನಮ್ಮ ಆದ್ಯತೆಗಳನ್ನು ಆಧರಿಸಿ ನಮಗೆಂದೇ ರೂಪಿಸಿದ ಸೇವೆಗಳನ್ನು ಅನುಭವಿಸುತ್ತೇವೆ. ಆದರೆ ಸಾಮಾಜಿಕ ವೇದಿಕೆಗಳು ಬಹುಭಾಷಾ ಆಯ್ಕೆಗಳನ್ನು ನೀಡುತ್ತವೆ. ನಮಗೆ ಸಾಮರ್ಥ್ಯ ನೀಡುವ ಈ ಡಿಜಿಟಲ್ ವಲಯ ಹಿಂದೆಂದಿಗಿಂತ ಉತ್ತಮ ಅನುಭವ ನೀಡುತ್ತದೆ.
ಕೊರಿಯನ್ ಧಾರಾವಾಹಿಗಳು ಮತ್ತು ‘ಮನಿಹೈಸ್ಟ್’ನಂಥ ಸ್ಪ್ಯಾನಿಷ್ ಟಿವಿ ಸರಣಿಗಳು ವಿಶ್ವಾದ್ಯಂತ ಜನಪ್ರಿಯತೆಯನ್ನು ಗಳಿಸಿವೆ. ಸ್ಥಳೀಯ ಭಾಷೆಯ ವಿಷಯವು ಸಬ್‌ ಟೈಟಲ್ ನೊಂದಿಗೆ ಭಾಷೆಯ ಅಡೆತಡೆಗಳನ್ನು ನಿವಾರಿಸುತ್ತದೆ ಎಂಬುದನ್ನು ಸಾಬೀತು ಪಡಿಸುತ್ತದೆ. ಅದೇ ರೀತಿ, ಭಾರತದ ಇಂಗ್ಲಿಷ್ ಮಾತನಾಡುವ ಐಟಿ ಸೇವೆಗಳ ಉದ್ಯಮವು ಅಭಿವೃದ್ಧಿ ಹೊಂದುತ್ತಿರುವ ಹೊರತಾಗಿಯೂ, ಇಂಗ್ಲಿಷ್ ಮಾತನಾಡ ದಿರುವ ಕೆಲವು ದೇಶಗಳು ಉತ್ಪಾದಿಸುವಂತೆ ಜಾಗತಿಕವಾಗಿ ಅಳವಡಿಸಿಕೊಂಡ ತಂತ್ರಜ್ಞಾನ ಉತ್ಪನ್ನ ಗಳನ್ನು ಉತ್ಪಾದಿಸಲು ನಮ್ಮ ದೇಶವು ಹೆಣಗಾಡುತ್ತಿದೆ.
ಈ ವಿರೋಧಾಭಾಸವನ್ನು ಅರ್ಥಮಾಡಿಕೊಳ್ಳಲು, ಭಾಷೆ ಮತ್ತು ಕಲಿಕೆಯು ಆಲೋಚ ನೆಯು, ನಾವೀನ್ಯ ಮತ್ತು ಸಂವಹನದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದನ್ನು ನಾವು ಪರಿಶೀಲಿಸಬೇಕು. ಭಾರತದ ಶಿಕ್ಷಣ ವ್ಯವಸ್ಥೆಯು ಇಂಗ್ಲಿಷ್ ಸಂವಹನ ಕೌಶಲ ಗಳಲ್ಲಿನ ಹೂಡಿಕೆಗೆ ಹೆಚ್ಚು ಒತ್ತು ನೀಡಿದೆ. ಇದರಿಂದಾಗಿ ಪ್ರತಿಭೆಯು ವಿದೇಶಗಳಿಗೆ ಹೋಗುತ್ತಿದ್ದು, ಭಾರತವನ್ನು ಬೃಹತ್ ಪ್ರಮಾಣದ ಐಟಿ ಸೇವೆಗಳನ್ನೊ ದಗಿಸುವ ದೇಶವನ್ನಾಗಿಸಿದೆ.
ಹೇರಳವಾದ ಪ್ರಧಾನ ಸಾಹಿತ್ಯದ ಕಾರಣದಿಂದಾಗಿ ಇಂಗ್ಲಿಷ್ ಭಾಷೆಯಲ್ಲಿ ಜ್ಞಾನವನ್ನು ಪಡೆದುಕೊಳ್ಳಲು ಪ್ರಾಮುಖ್ಯವನ್ನು ಹೊಂದಿದ್ದರೂ, ಹೆಚ್ಚಿನ ಮಕ್ಕಳು ಇನ್ನೂ ತಮ್ಮ ಸ್ಥಳೀಯ ಭಾಷೆಯಲ್ಲಿಯೇ ಯೋಚಿಸುತ್ತಾರೆ ಎಂದು ಸಂಶೋಧನೆ ತಿಳಿಸುತ್ತದೆ. ಈಗ ಉದ್ಭವಿಸುವ ಪ್ರಶ್ನೆ ಏನೆಂದರೆ, ಆರಂಭಿಕ ಶಿಕ್ಷಣವು ಈಗ ಹೊಸ ಭಾಷೆಯನ್ನು ಕಲಿಯಲು ಆದ್ಯತೆ ನೀಡಬೇಕೇ ಅಥವಾ ಚಿಂತನೆ, ಸೃಜನಶೀಲತೆ, ಪರಿಶೋಧನೆ ಮತ್ತು ಪ್ರಯೋಗ ಗಳನ್ನು ಮಾಡುವಂತೆ ಬೆಳೆಸಬೇಕೆ? ಎಂಬುದು. ಇದಕ್ಕೆ ಉತ್ತರವು, ಇವೆರಡರ ನಡುವೆ ಸಮತೋಲನವನ್ನು ಸಾಧಿಸುವುದರಲ್ಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ (ಎಇಪಿ-೨೦೨೦) ಸ್ಥಳೀಯ ಭಾಷೆಗಳ ಪ್ರಾಮುಖ್ಯವನ್ನು ಬೋಧನೆಯ ಆದ್ಯತೆಯ ಮಾಧ್ಯಮವಾಗಿ ಗುರುತಿಸುತ್ತದೆ, ಸರಿಯಾದ ದಿಕ್ಕಿನಲ್ಲಿ ಇದೊಂದು ದೈತ್ಯ ಹೆಜ್ಜೆಯಾಗಿದೆ.
ಇದಲ್ಲದೇ, ವೇಗವಾಗಿ ಬದಲಾಗುತ್ತಿರುವ ಇಂದಿನ ಜಗತ್ತಿನಲ್ಲಿ, ಮಷಿನ್ ಲನಿಂಗ್ ಮತ್ತು ಚಾಟ್ ಜಿಪಿಟಿಯಂಥ ಸುಧಾರಿತ ಸ್ವಯಂ-ಕಲಿಕೆಯ ಎಂಜಿನ್‌ಗಳ ಆಗಮನ ದಿಂದಾಗಿ ಭಾಷಾ ಪ್ರಾವೀಣ್ಯದ ಅವಶ್ಯಕತೆ ಕಡಿಮೆಯಾಗಿದೆ ಎಂದು ಅರ್ಥಮಾಡಿ ಕೊಳ್ಳುವುದು ಬಹಳ ಮುಖ್ಯ. ಈಗ, ಜ್ಞಾನದ ಬಳಸುವಿಕೆಯು ಕೇವಲ ಭಾಷಾ ನಿರರ್ಗಳತೆಯನ್ನು ಮೀರಿ ಆದ್ಯತೆಯನ್ನು ಪಡೆಯುತ್ತದೆ. ಆದ್ದರಿಂದ, ಹೇಗೆ ಯೋಚಿಸುವುದು, ಆವಿಷ್ಕರಿಸುವುದು ಮತ್ತು ಹೇಗೆ ಅನ್ವೇಷಿಸುವುದು ಎಂಬುದನ್ನು ಕಲಿಯು ವುದನ್ನು ಉತ್ತಮ ಗೊಳಿಸಲು, ವ್ಯಕ್ತಿಯೊಬ್ಬರು ತಾವು ಹೆಚ್ಚು ಪರಿಣಾಮಕಾರಿಯಾಗಿ ಯೋಚಿಸುವ ಭಾಷೆಯನ್ನು ಬಳಸಬೇಕು. ಅದೇ ಅವರ ಸ್ಥಳೀಯ ಭಾಷೆ.
ಯುನೆಸ್ಕೋ ಮಾತೃಭಾಷೆ-ಆಧಾರಿತ ಬಹುಭಾಷಾ ಶಿಕ್ಷಣವು (ಎಂಟಿಬಿ-ಎಂಎಲ್‌ಇ) ಈ ವಿಧಾನವನ್ನು ಉತ್ತೇಜಿಸುತ್ತದೆ. ಇದು ಆರಂಭಿಕ-ದರ್ಜೆಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸ್ಥಳೀಯ ಭಾಷೆಗಳನ್ನು ಬೋಧನಾ ಮಾಧ್ಯಮವಾಗಿ ಬಳಸುವುದನ್ನು ಪ್ರತಿ ಪಾದಿಸುತ್ತದೆ. ಎಂಟಿಬಿ-ಎಂಎಲ್‌ಇ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸುತ್ತದೆ. ಜತೆಗೆ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆ ಗಳನ್ನು ಪರಿಹರಿಸುವ ಸಾಮರ್ಥ್ಯಗಳನ್ನು ಹೆಚ್ಚಿಸುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
ಇದು ಸಾಂಸ್ಕೃತಿಕ ಅಸ್ಮಿತೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ ಹೆಚ್ಚು ಸಕ್ರಿಯವಾಗಿತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಾಮರ್ಥ್ಯವನ್ನು ನೀಡುತ್ತದೆ. ಹಳೆಯ ಕೈಗಾರಿಕಾ ಯುಗದಲ್ಲಿ, ವಿದ್ಯಾರ್ಥಿಗಳ ವೈವಿಧ್ಯ ಮಯ ಕಲಿಕೆಯ ಶೈಲಿಗಳು ಮತ್ತು ಭಾಷಾ ಹಿನ್ನೆಲೆಗಳನ್ನು ಕಡೆಗಣಿಸಿ ಪ್ರಮಾಣೀಕರಣ ಮತ್ತು ಏಕರೂಪತೆಯ ಮೇಲಿನ ಗಮನವು ಅವರನ್ನು ಏಕರೂಪದ ಗುಂಪಿನಂತೆ ಪರಿಗಣಿಸುತ್ತದೆ.
ಹಾಗಿದ್ದರೂ, ಡಿಜಿಟಲ್ ಯುಗವು ಅತಿಸಣ್ಣ ರೀತಿಯಲ್ಲಿಯೂ ಬೇಡಿಕೆಗೆ ಅನುಸಾರ ವಾಗಿ ಮಾಡಿಕೊಡುವ ರೀತಿಗೆ (ಮೈಕ್ರೋ-ಕಸ್ಟಮೈಸೇಷನ್) ನಾಂದಿ ಹಾಡಿದ್ದು ಪ್ರತಿಯೊಬ್ಬ ವ್ಯಕಿಯನ್ನೂ ಅನನ್ಯ ಪ್ರತ್ಯೇಕ ಘಟಕದಂತೆ ಗುರುತಿಸುತ್ತದೆ. ವ್ಯಾಪಾರ ಸಂವಹನಗಳಲ್ಲಿ ನಮ್ಮ ನಡವಳಿಕೆ ಮತ್ತು ಆದ್ಯತೆಗಳ ಆಧಾರದ ಮೇಲೆ ನಾವು ನಮಗೆಂದೇ ರೂಪಿಸಿದ ಸೇವೆಗಳನ್ನು ಅನು ಭವಿಸುತ್ತೇವೆ. ಆದರೆ ಸಾಮಾಜಿಕ ವೇದಿಕೆಗಳು ಬಹುಭಾಷಾ ಆಯ್ಕೆಗಳನ್ನು ನೀಡುತ್ತವೆ. ಈ ಡಿಜಿಟಲ್ ವಲಯ ಮೈಕ್ರೋ- ಕಸ್ಟಮೈ ಸೇಷನ್‌ನೊಂದಿಗೆ ನಮಗೆ ಸಾಮರ್ಥ್ಯ ನೀಡುತ್ತದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸಂವಹನ ಮತ್ತು ಅನುಭವ ಗಳನ್ನು ನೀಡುತ್ತದೆ.
ಆದರೆ ಶಿಕ್ಷಣವು ಪ್ರಮಾಣೀಕರಣದಿಂದ ಪ್ರತ್ಯೇಕತೆಗೆ ಪರಿವರ್ತನೆಯಾಗಿದೆಯೇ?  ದುರದೃಷ್ಟವಶಾತ್, ಹಳೆಯ ಕೈಗಾರಿಕಾ ಯುಗದ ಮನಸ್ಥಿತಿಯು ನಮ್ಮ ಶಾಲೆಗಳಲ್ಲಿ ಮುಂದುವರಿಯುತ್ತಿದೆ. ಒಂದೇ ರೀತಿಯ ಸಾಮರ್ಥ್ಯ ಗಳೊಂದಿಗೆ ವಿದ್ಯಾರ್ಥಿಗಳನ್ನು ಏಕರೂಪವಾಗಿ ಪರಿಗಣಿಸುತ್ತಿದೆ. ಎನ್‌ಇಪಿ ೨೦೨೦ರಲ್ಲಿ ವಿವರಿಸಿದಂತೆ ಈ ಸಮಸ್ಯೆಯನ್ನು ಪರಿಹರಿಸುವುದು ಆಲೋಚನಾಶೀಲರಾಷ್ಟ್ರವನ್ನು ನಿರ್ಮಿಸುವಲ್ಲಿ ನಿರ್ಣಾಯಕವಾಗಿದೆ.
ಉದಾಹರಣೆಗೆ, ಭಾರತದ ಸದೃಢವಾದ ಸೇವಾ ಉದ್ಯಮವು ತಾಂತ್ರಿಕ ಮತ್ತು ಇಂಗ್ಲಿಷ್ ಸಂವಹನ ಕೌಶಲಗಳ ಮೇಲೆ ಅವಲಂಬಿ ತವಾಗಿದೆ. ಆದರೆ ನಿಜವಾದ ಆವಿಷ್ಕಾರವನ್ನು ಉತ್ತೇಜಿಸುವ, ಹೊಸ ಉತ್ಪನ್ನಗಳನ್ನು ರಚಿಸಲು ಸೃಜನಶೀಲತೆ ಮತ್ತು ಚಿಂತನೆಯನ್ನು ಬಳಸಿಕೊಳ್ಳುವ ಅಗತ್ಯವಿದೆ. ಇದನ್ನು ಸಾಽಸುವುದು, ಮಕ್ಕಳಿಗೆ ಅವರ ಸ್ಥಳೀಯ ಭಾಷೆಯಲ್ಲಿ ಕಲಿಸುವುದು, ಪ್ರಾಯೋಗಿಕ ಚಿಂತನೆಯನ್ನು ಸಕ್ರಿಯಗೊಳಿಸುವುದು ಮತ್ತು ನವೀನ ಸಾಮರ್ಥ್ಯ ವನ್ನು ಹೊರತರುವ ಕಾರ್ಯವನ್ನು ಒಳಗೊಂಡಿರುತ್ತದೆ.
ಭಾರತದಲ್ಲಿ ಮಕ್ಕಳನ್ನು ಎರಡು ಲೋಕದವರನ್ನಾಗಿ ವಿಂಗಡಿಸಲಾಗಿದೆ. ಒಂದು ಗುಂಪು ಖಾಸಗಿ ಶಾಲೆಗಳಿಗೆ ಹಾಜರಾಗುತ್ತದೆ, ಜಾಗತಿಕ ಮಹತ್ವಾ ಕಾಂಕ್ಷೆ ಗಳೊಂದಿಗೆ ಇಂಗ್ಲಿಷ್‌ನಲ್ಲಿ ಆತ್ಮ ವಿಶ್ವಾಸದಿಂದ ಸಂಭಾಷಣೆ ನಡೆಸುತ್ತದೆ. ಆದರೆ ಅನ್ವೇಷಿಸಲು,ಪ್ರಯೋಗಿಸಲು ಮತ್ತು ಸಹಯೋಗಿಸಲು ಹಿಂಜರಿಯು ತ್ತದೆ. ಇನ್ನೊಂದೆಡೆ, ಗ್ರಾಮೀಣ ಭಾರತದ ಮಕ್ಕಳು ಇಂಗ್ಲಿಷ್ ಕಲಿಯಲು ಬಯಸುತ್ತಾರೆ, ಆದರೆ ಭಾಷೆಯ ಅಡೆತಡೆಗಳು ಮತ್ತು ಅಗಾಧ ಪಾಠ ಕ್ರಮದ ಕಾರಣ ದಿಂದಾಗಿ ಆರಂಭಿಕ – ತರಗತಿಗಳಲ್ಲಿ ಕಲಿಯುವುದಕ್ಕಾಗಿ ಕಷ್ಟ ಪಡುತ್ತಾರೆ.
ಸಂಶೋಧನೆಯು ಸ್ಥಳೀಯ ಭಾಷೆಗಳಲ್ಲಿ ಆರಂಭಿಕ-ತರಗತಿಗಳ ಶಿಕ್ಷಣವನ್ನು ಬೆಂಬಲಿಸುತ್ತದೆ, ಮಕ್ಕಳ ಮೇಲಿನ ಹೊರೆಯನ್ನುಕಡಿಮೆ ಮಾಡುತ್ತದೆ ಮತ್ತು ಜೀವನ ಕೌಶಲಗಳನ್ನು ಅನಾವರಣಗೊಳಿಸುತ್ತದೆ. ಇದು ಮಹತ್ವಾ ಕಾಂಕ್ಷೆಯ ಯಶಸ್ಸಿಗೆ ಕಾರಣವಾಗುತ್ತದೆ. ಎಇಪಿ ೨೦೨೦ರಲ್ಲಿ ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗಳನ್ನು ಉತ್ತೇಜಿಸುವ ದೃಷ್ಟಿಕೋನಗಳನ್ನು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟಿನಲ್ಲಿ ಭಾಷಾಂತರಿಸಲಾಗಿದೆ ಮತ್ತು ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟುಗಳುನಮ್ಮ ಶಾಲೆಗಳಿಗೆ ಆಶಾದಾಯಕವಾಗಿ ವಿಮರ್ಶಾತ್ಮಕ ಚಿಂತನೆ ಮತ್ತು ಸೃಜನಶೀಲತೆಯನ್ನು ನಿರ್ಲಕ್ಷಿಸುವ ಇಂಗ್ಲಿಷ್ ಸಂವಹನಕ್ಕೆ ಒತ್ತು ನೀಡುವ ಹಿಂದಿನ ಕೈಗಾರಿಕಾ ಯುಗದ ಮನಸ್ಥಿತಿಯಿಂದ ಹೊರಬರಲು ಸಹಾಯ ಮಾಡುತ್ತದೆ. ಈಅಸಮತೋಲನವನ್ನು ಸರಿಪಡಿಸುವುದು ಭಾರತದ ಭವಿಷ್ಯ ಮತ್ತು ಮಕ್ಕಳಿಗೆ ನಿರ್ಣಾಯಕವಾಗಿದೆ.
ಭಾಷೆ ಮತ್ತು ಚಿಂತನೆಯ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ ಭಾರತವು ನಾವೀನ್ಯ ಮತ್ತು ತಂತ್ರಜ್ಞಾನದಲ್ಲಿಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಭದ್ರಪಡಿಸಿ ಕೊಳ್ಳಬಹುದು. ಡಾ.ಹೆಡಗೆವಾರ್‌ರವರು ೧೯೨೫ರ ದಸರಾ ಸಂದರ್ಭದಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿನ ಮೋಹಿತೆವಾಡದಲ್ಲಿ ಕೆಲ ಯುವಕರು ಮತ್ತು ಸ್ನೇಹಿತರನ್ನು ಸೇರಿಸಿ ಒಂದು ಸಂಘವನ್ನು ಕಟ್ಟುತ್ತಾರೆ. ಹಾಗೇ ಕೆಲ ವರ್ಷದಲ್ಲಿ ಬೆಳೆಯುತ್ತಾ ಬೆಳೆಯುತ್ತಾ ಆ ಸಂಘಟನೆ ನಾಗಪುರದ ಹೊರಗೂ ವಿಸ್ತರಿಸಿ ಯುವಕರನ್ನು, ದೇಶಭಕ್ತರನ್ನು ಸೆಳೆಯಲು ಶುರುಮಾಡುತ್ತದೆ.
ದಿನಗಳು ಕಳೆದಂತೆಲ್ಲ ಸಂಘ ಬೆಳೆಯುತ್ತಾ ದೇಶಾದ್ಯಂತ ತನ್ನ ಶಾಖೆಗಳನ್ನು ಪ್ರಚುರ ಪಡಿಸುತ್ತದೆ. ಕೆಲ ವರ್ಷಗಳ ನಂತರ,‘ಮಹಾತ್ಮ ಗಾಂಧಿ ಅವರ ಹತ್ಯೆಯ ಸಂಚುಗಾರ’ ಎಂದು ಬಿಂಬಿಸಿ ಸಂಘವನ್ನು ದೇಶಾದ್ಯಂತ ನಿಷೇಧಿಸಲಾಗುತ್ತದೆ. ಮತ್ತೆ ಕೆಲ ವರ್ಷಗಳ ನಂತರ ನಿಷೇಧವನ್ನು ಹಿಂಪಡೆಯಲಾಗುತ್ತದೆ. ಆಮೇಲೆ ಆ ಸಂಘಟನೆಯ ಕೆಲ ಸದಸ್ಯರನ್ನು ಜನಸಂಘದ ಮೂಲಕ ರಾಜಕೀಯಕ್ಕೂ ಸೇರಿಸುತ್ತಾರೆ. ಕೆಲವೇ ರಾಜಕಾರಣಿಗಳಿಂದ ಜನಸಂಘ ಮುನ್ನೆಲೆಗೆ ಬರುತ್ತದೆ. ಜನಸಂಘದಿಂದ ಕೆಲವರು ಭಾರತೀಯ ಜನತಾ ಪಕ್ಷವನ್ನು ಕಟ್ಟುತ್ತಾರೆ. ಆ ಪಕ್ಷ ಆಗಿನ ಕಾಲದ ಅತ್ಯಂತ ಮಡಿವಂತ ಪಕ್ಷವಾಗಿ, ಬರೀ ಸಿದ್ಧಾಂತವನ್ನೇ ತನ್ನ ರಾಜಕೀಯ ಅಜೆಂಡಾ ಮಾಡಿಕೊಂಡು ಆಡಳಿತಕ್ಕೂ ಬರುತ್ತದೆ.
ಆಗಿನ ಕಾಲದಲ್ಲಿ ನಿಸ್ವಾರ್ಥ ರಾಜಕಾರಣ, ಸೇವಾ ಮನೋಭಾವ, ಸೈದ್ಧಾಂತಿಕ ನೆಲೆಗಟ್ಟು, ಹಿಂದುತ್ವ, ರಾಷ್ಟ್ರಪ್ರೇಮ, ಹೋರಾಟ, ದೇಶ ಮೊದಲು ಎಂಬ ಧ್ಯೇಯ ಇವೆಲ್ಲ ಬಿಜೆಪಿಯ ಆಸ್ತಿ ಆಗಿದ್ದವು. ಕೆಲ ವರ್ಷಗಳ ಹಿಂದಿನ ಎಲ್ಲ ಬಿಜೆಪಿ ನಾಯಕರೂ ಧ್ಯೇಯನಿಷ್ಠರಾಗಿದ್ದುಕೊಂಡೇ ಕೆಲಸಮಾಡಿದ್ದರು. ಆಗಿನ ಕಾಲದ ಬಿಜೆಪಿಯಲ್ಲಿ ದುಡ್ಡು, ಅಧಿಕಾರ ಕಡಿಮೆ ಯಿದ್ದರೂಸಂಘಟಕರ, ಧ್ಯೇಯನಿಷ್ಠರ ಕೊರತೆಯಿರಲಿಲ್ಲ!
ಆಗ ಯಡಿಯೂರಪ್ಪ, ಅನಂತ ಕುಮಾರ್‌ರಂಥ ನಾಯಕರು ಸೈಕಲ್ ತುಳಿದು ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಿದ್ದರು. ಜಗನ್ನಾಥ ರಾವ್ ಜೋಷಿಯವರ ಕಾಲಲ್ಲಿ ಚಪ್ಪಲಿಯೇ ಇರಲಿಲ್ಲ ಅಂತ ಬೇರೆ ಪಕ್ಷದವರೂ ಹೇಳುತ್ತಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಒಂದು ಹೊತ್ತಿಗೆ ೨ ಚಪಾತಿ ತಿಂದು, ಯಾವುದೋ ಹಳೇ ಕಾಲದ, ಮುರುಕಲು ಅಂಬಾಸಿಡರ್ ಕಾರಲ್ಲಿ, ಯಾರೋ ಕಾರ್ಯಕರ್ತರು ಹಾಕಿಸಿದ ಡೀಸಲ್ ನಲ್ಲಿ ಊರೂರು ಸುತ್ತಾಡಿಕೊಂಡು, ಯಾವುದೋಕಾರ್ಯಕರ್ತರ ಮನೆಯಲ್ಲಿ ಊಟ ಮಾಡಿ, ಇನ್ನೊಂದು ಹೊತ್ತಿಗೆ ಅವರ ಮನೆಯಲ್ಲೇ ಒಂದೆರಡು ಚಪಾತಿಯನ್ನು ತೆಗೆದುಕೊಂಡು ಬುತ್ತಿ ಮಾಡಿ, ಕೆಲವೊಮ್ಮೆ ಯಾವುದೋ ದೇವಸ್ಥಾನದ ಜಗುಲಿಯ ಮೇಲೆ ಮಲಗಿ ಪಕ್ಷ ಸಂಘಟನೆ ಮಾಡಿದ್ದರು.
ಬಿಜೆಪಿ ನಡೆದು ಬಂದ ಹಾದಿಯೇ ಬರೀ ಮುಳ್ಳು, ಕಲ್ಲುಗಳಿಂದ ತುಂಬಿತ್ತು. ಆದರೆ, ಈಗ? ಪ್ರತಿವರ್ಷ ನೂರಾರು ಕೋಟಿ ರು. ದೇಣಿಗೆ ಪಡೆದು, ವಿಶ್ವದ ಅತಿದೊಡ್ಡ ರಾಜಕೀಯ ಸಂಘಟನೆಯಾಗಿ ಬೆಳೆದು ನಿಂತಿದೆ. ವಿಶ್ವದ ಯಾವುದೇ ಕಾರ್ಪೊರೇಟ್ ಕಂಪನಿಗೂ ಕಡಿಮೆಯಿಲ್ಲದೆ, ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತ ಮತ್ತು ಬೇರೆ ಬೇರೆ ಕೆಲಸಗಳಿಗೆ ದುಡಿಯುವ ನೌಕರರಿಗೂಕಡಿಮೆಯಿಲ್ಲದೆ ಭಾರತೀಯ ಜನತಾ ಪಕ್ಷ ಇಂದು ಭಾರಿ ಲಾಭ ಮತ್ತು ಶಕ್ತಿ ಹೊಂದಿದೆ. ಕೇಂದ್ರದಿಂದ ಹಿಡಿದು ಹತ್ತಕ್ಕೂ ಹೆಚ್ಚು ರಾಜ್ಯಗಳಲ್ಲಿ ಸ್ವಂತ ಅಧಿಕಾರ, ೫ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮೈತ್ರಿ ಸರಕಾರ, ನೂರಾರು ಎಂಎಲ್‌ಎ, ಎಂಪಿಗಳು ಇದ್ದೂ  ಬಿಜೆಪಿಯ ಧ್ಯೆಯ, ರಾಷ್ಟ್ರನಿಷ್ಠೆ ಎಷ್ಟು ಪಕ್ವವಾಗಿದೆ? ದೇಶಾದ್ಯಂತದ ಬಿಜೆಪಿ ಸರಕಾರಗಳನ್ನು ನೋಡಿದರೆ, ಎಷ್ಟು ಜನ ಮಂತ್ರಿ, ಎಂಎಲ್‌ಎ, ಎಂಪಿಗಳು ಬಿಜೆಪಿಯವರೆನ್ನಿಸಿಕೊಳ್ಳುತ್ತಾರೆ? ಎಷ್ಟು ಜನಕ್ಕೆ ಹಿಂದುತ್ವದ ಬಗ್ಗೆ ಗೊತ್ತಿದೆ? ಎನಿಸುತ್ತದೆ.
ಕೆಲವರಿಗಂತೂ ಹಿಂದುತ್ವವೆಂದರೆ, ಮುಸಲ್ಮಾನರನ್ನು ಬೈಯುವಿಕೆ, ಅಷ್ಟೇ! ಎಷ್ಟು ಜನಕ್ಕೆ ಆರೆಸ್ಸೆಸ್ ಬಗ್ಗೆ ಗೊತ್ತಿದೆ? ಕೆಲವ ರಂತೂ ಆರೆಸ್ಸೆಸ್ ಅನ್ನು ‘ಚಡ್ಡಿ’ ಕಾಲದಲ್ಲೇ ನೋಡಿದವರು. ಈಗ ಆ ಚಡ್ಡಿ ಹೋಗಿ ಪ್ಯಾಂಟ್ ಬಂದಿದ್ದೂ ಆಗಿದೆ. ಆದರೆಎಷ್ಟು ಜನರಿಗೆ ತ್ಯಾಗ, ಧ್ಯೇಯ, ದೇಶಭಕ್ತಿಗಳ ಬಗ್ಗೆ ಗೊತ್ತಿದೆ? (ಏಕೆಂದರೆ, ಬಿಜೆಪಿ ಚುನಾವಣೆ ನಡೆಯುವುದು ತ್ಯಾಗ, ದೇಶಭಕ್ತಿಯ ಹೆಸರಲ್ಲಿಯೇ ತಾನೆ?), ಎಷ್ಟು ಜನರಿಗೆ ಕಾರ್ಯಕರ್ತರ ಪರಿಚಯ ಇದೆ ಅಥವಾ ಇತ್ತು? ಇಂದಿನ ಎಷ್ಟು ಜನ ‘ನಾಯಕರಿಗೆ’ ಬಿಜೆಪಿಯನ್ನು ಕಟ್ಟಿದ ನಾಯಕರ ಬಗ್ಗೆ ಗೊತ್ತು? ಕಳೆದ ಬಾರಿಯ ರಾಜ್ಯ ಬಿಜೆಪಿ ಸರಕಾರದ ಹಣೆಬರಹವನ್ನೇ ನೋಡಿ, ಎಲ್ಲಿಂದಲೋ ಬಂದವರು ಎಮ್ಮೆಲ್ಲೆ, ಮಿನಿಷ್ಟ್ರು; ಅವರು ಬಿಜೆಪಿ ಒಳಹೊಕ್ಕು ೪ ವರ್ಷಕ್ಕೂ ಮೇಲಾದರೂ, ಎಷ್ಟು ಜನ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡರು? ಹೋಗಲಿ ಆಗಿನ ಮುಖ್ಯಮಂತ್ರಿ ಆದರೂ ಬಿಜೆಪಿ ಸಿದ್ಧಾಂತವನ್ನು ಒಪ್ಪಿಕೊಂಡಿದ್ದರೇ? ಇನ್ನು ಪಕ್ಷದ ನಾಯಕರ ಹೆಸರನ್ನು ತೊದಲಿಸಿ ನುಡಿಯುವವರ ಯಾವ ಗುಣ-ಸಾಮರ್ಥ್ಯ ನೋಡಿ ಸರಕಾರದಲ್ಲಿ ಸ್ಥಾನಮಾನ ಕೊಡಲಾಯಿತು? ಇವರ ಇಬ್ಬಂದಿ ತನಕ್ಕೆ, ಪ್ರಪಂಚದ ಅತಿದೊಡ್ಡ ರಾಜಕೀಯ ಪಕ್ಷದಲ್ಲಿ ಒಬ್ಬನೇ ಒಬ್ಬ ವಿರೋಧ ಪಕ್ಷದ ನಾಯಕನನ್ನು ಹುಡುಕಲು ತಿಂಗಳುಗಳು ಕಳೆದರೂ ಆಗುತ್ತಿಲ್ಲ!
ಸರಿ, ಈ ಸ್ಥಿತಿ ಬರೀ ಕರ್ನಾಟಕದ್ದಷ್ಟೇ ಎಂದಾಗಿದ್ದರೆ ಇಲ್ಲಿನ ನಾಯಕರ ಸಮಸ್ಯೆ ಆಗುತ್ತಿತ್ತು. ಆದರೆ, ದೇಶದ ಬಹುತೇಕ ರಾಜ್ಯ ಗಳಲ್ಲಿ ಬಿಜೆಪಿಯವರ ಕೆಲಸ ಇದೇ ಆಗಿದೆ ಅಲ್ಲವೇ! ಬೇರೆ ಪಕ್ಷದ ನಾಯಕರನ್ನು, ಎಂಎಲ್‌ಎಗಳನ್ನು ಹೆದರಿಸಿ,  ಬೆದರಿಸಿ, ಅಧಿಕಾರದಾಸೆಗೆ ಅವರನ್ನು ಕೊಂಡು, ಪಕ್ಷಕ್ಕೆ ಸೇರಿಸಿಕೊಂಡು, ಒಂದು ಕಂತಿನ ಅಧಿಕಾರವನ್ನಂತೂ ಅನುಭವಿಸುತ್ತಿದ್ದಾರೆ. ಅದರ ಮುಂದಿನ ಚುನಾವಣೆಯ ಗೆಲುವೂ ಖಾತ್ರಿಯಿಲ್ಲ. ಇಷ್ಟಿದ್ದರೂ, ‘ಮೇಲೆ’ ಕುಳಿತವರ ಅಧಿಕಾರದ ದಾಹ ಇನ್ನೂ ಕಡಿಮೆ ಯಾಗಿಲ್ಲ.
ಅದೆಷ್ಟು ಜನರನ್ನು ಇನ್ನೂ‘ಅಬ್ಬೇಸ್’ ಮಾಡಿ ಅಽಕಾರಕ್ಕೇರುವ ಹಪಾಹಪಿ ಇದೇಯೋ, ಆ ಶ್ರೀರಾಮನೇ ಬಲ್ಲ! ರಾಜಸ್ಥಾನದಿಂದ ಕಾಂಗ್ರೆಸ್‌ನ ಭವಿಷ್ಯದ ನಾಯಕ ಎಂದೇ ಗುರುತಿಸಿಕೊಂಡಿದ್ದ ಜ್ಯೋತಿರಾಧಿತ್ಯ ಸಿಂಧಿಯಾ, ಆಸ್ಸಾಂನಲ್ಲಿ ಕಾಂಗ್ರೆಸ್ ನಿಂದ ಉಪಮುಖ್ಯಮಂತ್ರಿ ಆಗಿದ್ದ ಹಿಮಂತ್ ಬಿಸ್ವಾ ಶರ್ಮಾ, ರಾವ್ ಇಂದ್ರಜಿತ್ ಸಿಂಗ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿನಾರಾಯಣ್ ರಾಣೆ, ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ ಸಿಂಘ್ ವಘೇಲಾ, ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ, ಮಣಿಪುರ ಮುಖ್ಯಮಂತ್ರಿ ಎನ್. ಬೀರೇನ್ ಸಿಂಗ್.. ಪಟ್ಟಿ ಮಾಡುತ್ತ ಹೋದರೆ, ಬೆಳೆಯುತ್ತಲೇ ಹೋಗುತ್ತೆ. ಇವರ‍್ಯಾರೂ ಸಣ್ಣ ಮಟ್ಟದ ನಾಯಕ, ಕಾರ್ಯಕರ್ತರಲ್ಲ.
ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಸ್ಥಾನದಲ್ಲಿದ್ದವರು. ಇನ್ನು ಶಾಸಕ, ಶಾಸಕ ಸ್ಥಾನದ ಆಕಾಂಕ್ಷಿಗಳನ್ನು ಎತ್ತಂಗಡಿ ಮಾಡಿದ್ದರ ಪಟ್ಟಿಯಂತೂ ಇದಕ್ಕಿಂತ ದೊಡ್ಡದಿದೆ. ೨೦೨೧ರ ವರದಿಗಳ ಪ್ರಕಾರ, ಇಂದಿನ ಬಿಜೆಪಿಯಲ್ಲಿರುವ ಶೇ.೪೪ ಶಾಸಕರು ಅಧಿಕಾರದಾಹಕ್ಕೋಸ್ಕರ ಬೇರೆ ಪಕ್ಷದಿಂದ ಬಿಜೆಪಿಗೆ ವಲಸೆ ಬಂದವರು. ಅದೂ ೨೦೧೪ರಿಂದಷ್ಟೇ!
ಇನ್ನು, ಕರ್ನಾಟಕದಲ್ಲಿಯೂ ೨೦೧೯ರ ಸಮಯದಲ್ಲಿ ಬಿಜೆಪಿಗೆ ಸೇರಿದ ‘ಬಾಂಬೆ ಬಾಯ್ಸ್’ ಬಗ್ಗೆ ಹೇಳುವುದಕ್ಕೆ ಬೇರೆ ಮಾತಂತೂ ಇಲ್ಲ. ಆ ದಿನಗಳಲ್ಲಿ ರಾಜ್ಯಾದ್ಯಂತ ಆದ ನಾಟಕ, ರಾಜಕೀಯ ಬೆಳವಣಿಗೆ, ನಾಯಕರ ಕಿತ್ತಾಟ, ಹೊಡೆದಾಟ, ಡಿ.ಕೆ. ಶಿವಕುಮಾರ್ ಅವರು ಮುಂಬೈನ ರೋಡಲ್ಲಿ ಕೂತು ಇಡ್ಲಿ ತಿಂದ ಬಗೆ ಇತ್ಯಾದಿಗಳು ಕರ್ನಾಟಕವನ್ನು ಕರ್‘ನಾಟಕ’ ಮಾಡಿ ದ್ದವು. ಈಗ ಮತ್ತೆ ಆಪರೇಷನ್ ಬಗ್ಗೆ, ಅದರಲ್ಲೂ ಸಿದ್ದರಾಮಯ್ಯನವರ ಸುಭದ್ರ ಸರಕಾರವನ್ನು ಬೀಳಿಸುವ ಬಗೆಗಿನ ಮಾತು ಗಳು, ಸಿಂಗಾಪುರದಲ್ಲಿ ಕೂತ ನಾಟಕದ ಸೂತ್ರಧಾರನ ಬಗೆಗಿನ ಮಾತುಗಳು, ಕರ್ನಾಟಕದಲ್ಲೂ ಅಜಿತ್ ಪವಾರ್‌ರನ್ನು ಹುಟ್ಟಿಸುವ ಗುಸುಗುಸುಗಳು ಜೋರಾಗಿಯೇ ಬೀಸುತ್ತಿವೆ.
ಈ ಸರಕಾರ ಬಂದು ೨ ತಿಂಗಳೂ ಆಗಿಲ್ಲ, ಆಗಲೇ ಬಿಜೆಪಿಯವರು ಸರಕಾರ ಪತನ ಮಾಡಲು ಕೈ ಹಾಕುತ್ತಿದ್ದಾರೆ. ಬಿಜೆಪಿಯೇತರ ಸರಕಾರ ಕಂಡರೆ, ಕೇಂದ್ರ ಬಿಜೆಪಿಗರಿಗೆ ಕಣ್ಣು ಕೆಂಪಾಗುವುದೇಕೆ? ಜನರ ವಿಶ್ವಾಸವನ್ನು ಗಳಿಸಿ, ಮ್ಯಾಜಿಕ್ ನಂಬರ್‌ಗಿಂತಲೂ ಹೆಚ್ಚು ಸೀಟನ್ನು ಪಡೆದ ಪಕ್ಷಗಳ ಮೇಲೂ ಇವರ ಜಂಬೂಸವಾರಿ ಏಕೆ? ಸರಿ ಒಪ್ಪೋಣ, ಬೇರೆ ಪಕ್ಷದವರು ಭ್ರಷ್ಟಾಚಾರ ಮಾಡು ತ್ತಾರೆಂಬ ಮಾತಿದೆ. ಆದರೆ, ಬಿಜೆಪಿಯವರೇನು ಸಾಚಾಗಳೇ? ಕರ್ನಾಟಕದಲ್ಲಿ ಕಾಂಗ್ರೆಸ್‌ನವರು, ಬಿಜೆಪಿ ಮೇಲೆ ಒಂದು ಲಕ್ಷ ಐವತ್ತು ಸಾವಿರ ಕೋಟಿಗೂ ಅದಿಕ ಮೊತ್ತದ ಭ್ರಷ್ಟಾಚಾರದ ಆರೋಪದ ಸುರಿಮಳೆಗೈದಿದ್ದರು, ಬಿಜೆಪಿಯ ಯಾರೂ ಅದರ ವಿರುದ್ಧ ಮಾತನಾಡಲಿಲ್ಲ!
ಆ ಸಮಯದಲ್ಲಿ ಅದರ ವಿರುದ್ಧ ಮಾತನಾಡುವ ನೈತಿಕತೆ ಯಾರಲ್ಲಿತ್ತು? ೪೦% ಭ್ರಷ್ಟಾಚಾರ, ಲಂಚದ ವಿಷಯವಾಗಿಯೂಕಾಂಗ್ರೆಸ್‌ನವರು ರಾಜ್ಯಾದ್ಯಂತ ಹೋರಾಟ ಮಾಡಿದರು, ಅದಕ್ಕೂ ಬಿಜೆಪಿಯವರಲ್ಲಿ ವಿರೋಧ ಮೂಡಿತಾ? ಊಹೂಂ. ಎಲ್ಲರೂ ಗಣಪತಿ ಪ್ರಸಾದದಂತೆ ತಿಂದು ತೇಗಿದವರೇ! ಹೆಚ್ಚೂಕಡಿಮೆ ಬಿಜೆಪಿಯಲ್ಲಿರುವ ಅರ್ಧಕ್ಕೂ ಹೆಚ್ಚು ಮಂದಿ ಬೇರೆ ಪಕ್ಷದವರೇ! ಹಿರಿಯರು, ನಾಯಕರು ಎಂಬ ಹಣೆಪಟ್ಟಿಯಲ್ಲಿರುವವರು ಅಧಿಕಾರಕ್ಕಾಗಿ ತಮ್ಮ ಸಿದ್ಧಾಂತವನ್ನು ಬಿಟ್ಟು, ಬೇರೆಸಿದ್ಧಾಂತಿಗರ ಜತೆ ರಾಜಿ ಮಾಡಿಕೊಂಡು, ಸ್ನೇಹ ಬೆಳಸಿ, ಅದರಲ್ಲೇ ತಮ್ಮ ಬೇಳೆ ಬೇಯಿಸಿಕೊಂಡು, ಅಧಿಕಾರವನ್ನು ಅನುಭವಿಸಿ, ತೇಗಿ, ಸಿದ್ಧಾಂತಕ್ಕಾಗಿ, ಪಕ್ಷಕ್ಕಾಗಿ, ರಾಷ್ಟ್ರಹಿತಕ್ಕಾಗಿ ದುಡಿಯುವುದರ ಬಗ್ಗೆ ಕಾರ್ಯಕರ್ತರಿಗೆ ಭಾಷಣಗಳನ್ನು ಕೊಡುತ್ತಿದ್ದಾರೆ.ಹಾಗೆಯೇ, ಬೇರೆ ಪಕ್ಷದಿಂದ ನಾಯಕರನ್ನು ಹೆದರಿಸಿ, ಬೆದರಿಸಿ ಕರೆತಂದವರಿಗೆ ‘ಚಾಣಕ್ಯ’ ಎಂಬ ಬಿರುದೂ ಬೀಳುತ್ತಿದೆ.
ಆದರೆ, ಆ ಚಾಣಕ್ಯನಿಗೆ ಸರಿಯಾದ ದಾರಿಯಲ್ಲಿ ನಡೆದು, ಪಕ್ಷವನ್ನು ಬೆಳೆಸುವ, ಅಧಿಕಾರಕ್ಕೆ ತರುವ ಮಾರ್ಗಗಳು ಗೊತ್ತಿಲ್ಲವೇ? ಹಾಗೆಯೇ ಇಂದು ಬಿಜೆಪಿ ಅನುಸರಿಸುತ್ತಿರುವ ಹಾದಿಯನ್ನು ನಾಳೆ ಬೇರೆ ಪಕ್ಷದವರು ಮಾಡಿದರೆ, ಇವರು ಸುಮ್ಮನಿರುತ್ತಾರೆಯೇ? ಹಾಗೇ, ಬೇರೆ ಪಕ್ಷದಿಂದ ಜನರನ್ನು ಕರೆತಂದಿದ್ದಕ್ಕೆ ಚಾಣಕ್ಯ ಎನ್ನುವ ಹಾಗಿದ್ದರೆ, ಕಳ್ಳತನ ಮಾಡಿಕೊಂಡವನ್ನು ಶ್ರೀಮಂತ ನೆಂದೋ, ಧಣಿಎಂದೋ ಹೇಳಿದಂತಾಗುವುದಿಲ್ಲವೇ? ಏನೇ ಹೇಳಿ, ಭಾರತದ ಬೇರೆ ಎಲ್ಲ ಪಕ್ಷಗಳಿಗಿಂತ ಬಿಜೆಪಿ ತನ್ನನ್ನು ಯಾವತ್ತೂ ಬೇರೆಯಾಗಿಯೇ ರೂಪಿಸಿಕೊಂಡಿದೆ. ಅದಕ್ಕೆಂದೇ ಬಿಜೆಪಿಯನ್ನು ಶಿಸ್ತಿನ ಪಕ್ಷ, PZಠಿ ಡಿಜಿಠಿ  bಜ್ಛ್ಛಿಛ್ಟಿಛ್ಞ್ಚಿಛಿಎಂದೂ ಕರೆಯುತ್ತಾರೆ.
ಭಾರತದ ಹೆಚ್ಚೂ ಕಡಿಮೆ ಎಲ್ಲ ಪಕ್ಷಗಳೂ ತಮ್ಮನ್ನು ತಾವು, ಡೆಮಾಕ್ರಟಿಕ್, ಸೆಕ್ಯುಲರ್ ಎಂದೇ ಬಿಂಬಿಸಿಕೊಳ್ಳುತ್ತವೆ. ಆದರೆ,ಬಿಜೆಪಿ ಯಾವಾಗಲೂ ಹಿಂದುತ್ವ, ರಾಷ್ಟ್ರೀಯವಾದಿ ಎಂಬ ಸಿದ್ಧಾಂತಗಳನ್ನು ತಲೆಮೇಲೆ ಹೊತ್ತು ಕೂತಿದೆ. ಅಂಥ ಬೇರೆ ಸಿದ್ಧಾಂತಗಳ ಜನರನ್ನು ಪಕ್ಷಕ್ಕೆ ಸೇರಿಸಿಕೊಂಡು, ತಮ್ಮದೇ ಪಕ್ಷವನ್ನು ಮಲಿನ ಮಾಡುವ ದರ್ದು ಬಿಜೆಪಿಗೆ ಏಕಿದೆ? ಹೀಗೆಲ್ಲಮಾಡುತ್ತಾ ಹೋದರೆ, ತಮ್ಮ ಪಕ್ಷಕ್ಕೆ ತಾವೇ ಗೋರಿ ತೋಡಿದಂತೆ ಆಗುವುದಿಲ್ಲವೇ?