ಸಮಾಜ ಸೇವೆಗೆ ಹೊಸ ಭಾಷ್ಯ ಬರೆದ ಸಂಜೀವ್ ಮೆಹ್ತಾ
ಸಂಗತ
ವಿಜಯ್ ದರಡಾ
ಸಾಮಾನ್ಯವಾಗಿ ನಾನು ಈ ಅಂಕಣದಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ಬರೆಯಲು ಹೋಗುವುದಿಲ್ಲ. ಕೆಲ ವ್ಯಕ್ತಿಗಳು ಇರುತ್ತಾರೆ; ಅವರ ಬಗ್ಗೆ ಬರೆಯದೇ ಇರಲು ಆಗುವುದಿಲ್ಲ. ಅವರು ಔಟ್ ಆಫ್ ದಿ ಬಾಕ್ಸ್ ಯೋಚಿಸಿ, ಯಶಸ್ಸಿನ ಹೊಸ ಅಧ್ಯಾಯಗಳನ್ನೇ ಬರೆಯುತ್ತಾರೆ. ಅಂತಹ ಒಬ್ಬ ಸಾಧಕ ಸಂಜೀವ್ ಮೆಹ್ತಾ. ಸೂರ್ತಿದಾಯಕ ನಾಯಕತ್ವಕ್ಕೆ ಅವರೊಂದು ಅದ್ಭುತ ಉದಾಹರಣೆ.
ಕಾರ್ಪೋರೇಟ್ ಜಗತ್ತಿನಲ್ಲಿ ಸಂಜೀವ್ ಮೆಹ್ತಾ ಚಿರಪರಿಚಿತ ಹೆಸರು. ಸೃಜನಶೀಲ ಚಿಂತನೆಗಳು ಹಾಗೂ ಯಾರೂ ಯೋಚಿಸಿರದ ರೀತಿಯಲ್ಲಿ ಯೋಚಿಸುವ ವಿಶಿಷ್ಟ ಐಡಿಯಾಗಳ ಗಣಿಯಾಗಿ ಪ್ರಸಿದ್ಧರು. ದೇಶದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ಹಿಂದುಸ್ತಾನ್ ಯುನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್) ಚೇರ್ಮನ್/ಸಿಇಒ ಆಗಿ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅವರು ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಹಿಂದುಸ್ತಾನ್ ಯುನಿಲಿವರ್‌ನ ದಕ್ಷಿಣ ಏಷ್ಯಾ ಚೇರ್ಮನ್ ಆಗಿಯೂ ಕೆಲಸ ಮಾಡಿದ್ದಾರೆ.
ದೇಶದ ಕಾರ್ಪೋರೇಟ್ ಲೋಕದಲ್ಲಿ ಟಾಪ್ ಬಾಸ್‌ಗಳ ದೊಡ್ಡ ಸೈನ್ಯವೇ ಇದ್ದರೂ, ಜನಸಾಮಾನ್ಯರನ್ನು ತಮ್ಮ ಹೃದಯದಲ್ಲಿಟ್ಟುಕೊಂಡು ತಮ್ಮ ಕಂಪನಿಯನ್ನು ಕಟ್ಟಿ ಬೆಳೆಸಿದ ಅಪರೂಪದ ತಳಿಯ ಉದ್ಯಮಿಗಳಲ್ಲಿ ಸಂಜೀವ್ ಮೆಹ್ತಾ ಒಬ್ಬರು. ಕಾನ್ಪುರದ ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದಿದ್ದರಿಂದ ಅವರಿಗೆ ಜನಸಾಮಾನ್ಯರ ಅಗತ್ಯಗಳು ಹಾಗೂ ಕಷ್ಟಗಳ ಬಗ್ಗೆ ಗೊತ್ತಿದೆ. ತಮ್ಮಲ್ಲಿರುವ ಅಸಾಧಾರಣ ನಾಯಕತ್ವದ ಗುಣಗಳು, ದೂರದೃಷ್ಟಿ ಹಾಗೂ ಬದ್ಧತೆ ಯಿಂದಾಗಿ ಯಶಸ್ಸಿನ ತುತ್ತತುದಿಗೆ ಏರಿದ್ದಾರೆ. ೧೯೮೩ರಲ್ಲಿ ಈ ವ್ಯಕ್ತಿ ಯೂನಿಯನ್ ಕಾರ್ಬೈಡ್ ಕಂಪನಿ ಸೇಲ್ಸ್ ಮ್ಯಾನೇಜರ್ ಆಗಿ ವೃತ್ತಿ ಜೀವನ ಆರಂಭಿಸಿದಾಗ ಯಾರು ತಾನೇ ಮುಂದೊಂದು ದಿನ ಈತ ಜಗತ್ಪ್ರಸಿದ್ಧ ಉದ್ಯಮಿಯಾಗಿ ಬೆಳೆಯುತ್ತಾರೆಂದು ಊಹಿಸಿದ್ದರು? ೧೯೯೨ರಲ್ಲಿ ಸಂಜೀವ್ ಮೆಹ್ತಾ ಹಿಂದುಸ್ತಾನ್ ಯೂನಿಲಿವರ್ ಕಂಪನಿ ಸೇರಿದರು. ಬಹಳ ಬೇಗ ತಮ್ಮ ದಕ್ಷತೆಯಿಂದ ಕಂಪನಿಯ ಭಾರತೀಯ ವ್ಯವಹಾರಗಳ ಮುಖ್ಯಸ್ಥರಾದರು.
ನಂತರ ಈ ಬಹುರಾಷ್ಟ್ರೀಯ ಕಂಪನಿಯ ಅನೇಕ ಅಂತಾರಾಷ್ಟ್ರೀಯ ವಿಭಾಗಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಯುಎಇ, ಬಾಂಗ್ಲಾದೇಶ, ಈಜಿಪ್ಟ್, ಫಿಲಿಪ್ಪೀನ್ಸ್ ಹೀಗೆ ಬೇರೆ ದೇಶಗಳಲ್ಲೂ ಹೋಗಿ ಕೆಲಸ ಮಾಡಿದರು. ಎಚ್ ಯುಎಲ್‌ನ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥರಾಗಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮುಂತಾದ ದೇಶಗಳಲ್ಲಿ ತಮ್ಮ ಕಂಪನಿಯ ವ್ಯವಹಾರಗಳ ಸಂಪೂರ್ಣ ಜವಾಬ್ದಾರಿ ನೋಡಿಕೊಂಡರು. ಆ ಅವಧಿಯಲ್ಲಿ ಎಚ್‌ಯುಎಲ್‌ನ ಪ್ರಯಾಣವನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ದರು.
ಎಚ್‌ಯುಎಲ್‌ನ ಉತ್ಪನ್ನಗಳು ಸದಾ ಮಾರುಕಟ್ಟೆಯಲ್ಲಿ ಲಭ್ಯವಿರುವಂತೆ ಅವರು ವಿಶೇಷ ಗಮನ ಹರಿಸಿದರು. ಕಂಪನಿಗೆ ‘ಶಿಕಾರ್’ ಆನ್‌ಲೈನ್ ಮಾರುಕಟ್ಟೆ ಆರಂಭಿಸಿ, ಚಿಲ್ಲರೆ ವ್ಯಾಪಾರಿಗಳು ತಮ್ಮ ಅಂಗಡಿಯಲ್ಲಿ ಕುಳಿತೇ ಎಚ್ ಯುಎಲ್ ಉತ್ಪನ್ನಗಳನ್ನು ಸಲೀಸಾಗಿ ಅತ್ಯುತ್ತಮ ಬೆಲೆಗೆ ಖರೀದಿಸುವಂತೆ ಮಾಡಿದರು. ಇಂದು ಈ ಆಪ್ ಅನ್ನು ೧೨ ಲಕ್ಷ ಅಂಗಡಿಗಳು ಬಳಸುತ್ತಿವೆ. ಗ್ರಾಹಕರು ಯಾವಾಗಲೂ ಅಚ್ಚುಕಟ್ಟು ಪ್ರದೇಶ ಘೆಐ : ಓಅಓಅಘೆ/೨೦೧೬/೬೭೯೧೪ಹೊಂದಿರುವ ಚಾರ್ಟರ್ಡ್ ಅಕೌಂಟೆಂಟ್ ಕೂಡ ಹೌದು.
ಪ್ರಸಿದ್ಧ ಮಾರುಕಟ್ಟೆಯಲ್ಲಿರುವ ‘ಹೊಸ ಉತ್ಪನ್ನ’ಗಳತ್ತ ಆಕರ್ಷಿತರಾಗುತ್ತಾರೆ ಎಂಬುದು ಅವರಿಗೆ ಗೊತ್ತಿತ್ತು. ಹೀಗಾಗಿ ಮಾರುಕಟ್ಟೆಯಲ್ಲಿ ಸದಾ ಒಂದಲ್ಲ ಒಂದು ಹೊಸ ಉತ್ಪನ್ನ ಬಿಡುಗಡೆ ಮಾಡುತ್ತಲೇ ಇದ್ದರು. ಅದಕ್ಕಾಗಿ ಗ್ರಾಹಕರ ಜತೆ ನೇರವಾಗಿ ಮಾತನಾಡಲು ಇಂಟರಾಕ್ಟಿವ್ ಆಪ್ ಬಿಡುಗಡೆ ಮಾಡಿದರು. ಎಚ್‌ಯುಎಲ್‌ನ ಉತ್ಪನ್ನಗಳ ಪಟ್ಟಿ ಎಷ್ಟು ದೊಡ್ಡದು ಅಂದರೆ, ಒಮ್ಮೆ ಲಾಗಿನ್ ಮಾಡಿದ ಗ್ರಾಹಕರು ಏನಾದರೊಂದು ಉತ್ಪನ್ನ ಖರೀದಿಸದೇ ಆಪ್‌ನಿಂದಹೊರಗೆ ಹೋಗುತ್ತಿರಲಿಲ್ಲ. ಸಂಜೀವ್ ಮೆಹ್ತಾ ಅವರ ಮಾರುಕಟ್ಟೆ ತಂತ್ರಗಳು ಯಾವಾಗಲೂ ಹೊಚ್ಚ ಹೊಸತಾಗಿ ರುತ್ತಿದ್ದವು. ಅವರ ಪ್ರತಿಸ್ಪಽಗಳು ಹೀಗೆ ಮಾಡುತ್ತಿರಲಿಲ್ಲ.
ಹಾಗಾಗಿ ಎಚ್‌ಯುಎಲ್ ಗೆದ್ದಿತು. ಸಂಜೀವ್ ಮೆಹ್ತಾ ತಮ್ಮ ಅವಧಿಯಲ್ಲಿ ‘ಕಾನ್ ಖಜೂರಾ ಟೇಸನ್’ ಎಂಬ ಭಾರತದ ಮೊಟ್ಟಮೊದಲ ಉಚಿತ ಮತ್ತು ಆನ್ ಡಿಮ್ಯಾಂಡ್ ಮನರಂಜನಾ ಮೊಬೈಲ್ ರೇಡಿಯೋ ಚಾನೆಲ್ ಆರಂಭಿಸಿ ದರು. ಅದು ಕೂಡ ದೊಡ್ಡ ಯಶಸ್ಸು ಗಳಿಸಿತು. ಮೆಹ್ತಾ ಹೇಗೆ ಕೆಲಸ ಮಾಡುತ್ತಿದ್ದರು ಎಂಬುದಕ್ಕೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಎಚ್‌ಯುಎಲ್ ತನ್ನ ಹೇರ್ ಆಯಿಲ್ ಮಾರುಕಟ್ಟೆ ವಿಸ್ತರಿಸಲು ಸ್ವತಃ ಚೆನ್ನೈನ ಕೊಳೆಗೇರಿಗಳಿಗೆ ಹೋಗಿ ಮಹಿಳೆಯರ ಸಂದರ್ಶನ ಮಾಡಿದರು. ಅವರ ಬಳಿ ನೀವು ತಲೆಗೆ ಯಾವ ಎಣ್ಣೆ ಬಳಸುತ್ತೀರಿ ಎಂದು ಕೇಳಿದರು.
ಅವರು ‘ಇಂದುಲೇಖಾ’ ಅಂದರು. ಯಾಕೆ ಅದನ್ನೇ ಬಳಸುತ್ತೀರಿ ಎಂದು ಇವರು ಕೇಳಿದರು. ಆ ಎಣ್ಣೆ ಬಳಸಿದರೆ ಕೂದಲು ದಪ್ಪಗಾಗಿ, ಕಪ್ಪಾಗಿ, ಗಟ್ಟಿಯಾಗಿರುತ್ತದೆ ಎಂದು ಹೆಂಗಸರು ಹೇಳಿದರು. ನಂತರ ಬೋರ್ಡ್ ಮೀಟಿಂಗ್‌ನಲ್ಲಿ ಸಂಜೀವ್ ಮೆಹ್ತಾ,‘ಇನ್ನು ಯಾವುದೇ ಸರ್ವೇ ಬೇಕಾಗಿಲ್ಲ. ಇಂದುಲೇಖಾ ಆಯಿಲ್ ಬ್ರ್ಯಾಂಡ್ ಖರೀದಿಸೋಣ’ ಎಂದು ಸಂಜೀವ್ ಮೆಹ್ತಾ ಚರ್ಚೆಗೆ ತೆರೆ ಎಳೆದರು. ಅದರಂತೆ ಎಚ್‌ಯುಎಲ್ ಕಂಪನಿ ಇಂದು ಲೇಖಾ ಆಯಿಲ್ ಖರೀದಿಸಿತು. ನಂತರ ಅವರು ಗ್ಲಾಕ್ಸೋಸ್ಮಿತ್‌ಕ್ಲೈನ್ ಕನ್ಸ್ಯೂಮರ್ ಹೆಲ್ತ್‌ಕೇರ್ (ಜಿಎಸ್‌ಕೆ) ಕಂಪನಿಯನ್ನೂ ಎಚ್‌ಯುಎಲ್‌ನ ತೆಕ್ಕೆಗೆ ಎಳೆದುಕೊಳ್ಳುವ ಮೂಲಕ ದೊಡ್ಡ ವಾಣಿಜ್ಯ ಕ್ರಾಂತಿ ಮಾಡಿದರು.
ಸಾಮಾಜಿಕ ಕ್ಷೇತ್ರದಲ್ಲೂ ಸಾಕಷ್ಟು ಬದಲಾವಣೆಗೆ ಕಾರಣರಾದವರು. ಬೇರೆ ಕಾರ್ಪೋರೇಟ್ ದೈತ್ಯರಿಗಿಂತ ಅವರನ್ನು ವಿಭಿನ್ನವಾಗಿ ನಿಲ್ಲಿಸುವುದು ಎಚ್‌ಯುಎಲ್ಮೂಲಕ ಅವರು ಮಾಡಿದ ವಿಶಿಷ್ಟವಾದ ಸಮಾಜ ಕಲ್ಯಾಣ ಕೆಲಸಗಳು. ದೇಶದಲ್ಲಿ ವಿದೇಶಿ ವಿನಿಮಯ ಸಮಸ್ಯೆ ಉಂಟಾದಾಗ ಅವರು ದೇಶದಲ್ಲೇ ಸ್ಥಳೀಯ ವಾಗಿ ಏನು ಸಿಗುತ್ತ ದೆಯೋ ಅದರ ಮೇಲೆ ಗಮನ ಕೇಂದ್ರೀಕರಿಸಿದರು. ತಮ್ಮ ಉತ್ಪಾದನಾ ಘಟಕಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ನೀರಿನ ಬಳಕೆಯನ್ನು ಅರ್ಧದಷ್ಟು ಕಡಿಮೆ ಮಾಡಿದರು. ಲೋಕಮತ್ ಜೊತೆ ಸೇರಿ ಎಚ್‌ಯುಎಲ್ ದೊಡ್ಡ ಪ್ರಮಾಣದಲ್ಲಿ ಮಹಾರಾಷ್ಟ್ರದಾ ದ್ಯಂತ ಜಲ ಸಂರಕ್ಷಣೆ ಆಂದೋಲನ ನಡೆಸಿತು.
ಅದಕ್ಕೆ ‘ರಿನ್ ಬ್ರ್ಯಾಂಡ್’ ಮಧ್ಯವರ್ತಿಯಾಗಿ ಕೆಲಸ ಮಾಡಿತ್ತು. ಆ ಆಂದೋಲನದ ಮೂಲಕ ಹೆಚ್ಚುಕಮ್ಮಿ ೧.೩ ಲಕ್ಷ ಕೋಟಿ ಲೀಟರ್ ನೀರು ಉಳಿಸಲಾಯಿತು. ನಂತರ ಆ ಆಂದೋಲ ನವನ್ನು ಇಡೀ ದೇಶಕ್ಕೆ ವಿಸ್ತರಿಸಲಾಯಿತು. ಅದು ೨ ವರ್ಷ ದಲ್ಲಿ ಇಡೀ ಭಾರತ ಕುಡಿಯುವಷ್ಟು ನೀರನ್ನು ಉಳಿಸಿತು! ನೀರಿನ ಸಂರಕ್ಷಣೆಯ ಬಗ್ಗೆ ಸಂಜೀವ್ ಮೆಹ್ತಾ ತಮ್ಮದೇ ಆದ ಸಂಶೋಧನೆ ನಡೆಸಿದ್ದರು. ಆಗ ಅತಿಹೆಚ್ಚು ನೀರು ಬಳಕೆಯಾಗುವುದು ಟಾಯ್ಲೆಟ್‌ನಲ್ಲಿ, ಕೈ ತೊಳೆಯುವು ದಕ್ಕೆ, ಸ್ನಾನ ಮಾಡುವುದಕ್ಕೆ ಹಾಗೂ ಬಟ್ಟೆ ತೊಳೆಯುವುದಕ್ಕೆ ಎಂಬುದು ತಿಳಿಯಿತು. ನಂತರ ಅವರು ಸರ್ಕಾರ ಹಾಗೂ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ)ಯಿಂದ ಅನುಮತಿ ಪಡೆದು ಪಬ್ಲಿಕ್ ಕನ್ವೀನಿಯನ್ಸ್ ಸೆಂಟರ್ ಒಂದನ್ನು ನಿರ್ಮಿಸಿದರು. ಅದು ಸ್ಪಷ್ಟ ರೂಪ ಪಡೆಯಲು ಒಂದು ವರ್ಷಕ್ಕೂ ಹೆಚ್ಚು ಸಮಯ ಬೇಕಾಯಿತು. ಕೊನೆಗೂ ಘಾಟ್ಕೋಪರ್‌ನಲ್ಲಿ ನಿರ್ಮಿಸಿದ ಮೊದಲ ಕೇಂದ್ರ ಕಾರ್ಯಾರಂಭ ಮಾಡಿತು. ಅಲ್ಲಿಂದ ಈವರೆಗೆ ೧೨ ಕನ್ವೀನಿಯನ್ಸ್ಸೆಂಟರ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಅವುಗಳನ್ನು ೪೦ ಸಾವಿರ ಜನರು ಪ್ರತಿದಿನ ಬಳಕೆ ಮಾಡುತ್ತಿದ್ದಾರೆ!
ಇಷ್ಟಕ್ಕೂ ಏನಿದು ಕನ್ವೀನಿಯನ್ಸ್ ಸೆಂಟರ್? ಅದು ಸಾರ್ವಜನಿಕ ನೈರ್ಮಲ್ಯ ಕೇಂದ್ರ. ಅಲ್ಲಿ ಬಳಕೆ ಮಾಡಿದ ಪ್ರತಿಯೊಂದು ಹನಿ ನೀರನ್ನೂ ಸಂಸ್ಕರಣೆ ಮಾಡಿ,ಶುದ್ಧೀಕರಣಗೊಳಿಸಿ, ಮರುಬಳಕೆ ಮಾಡಲಾಗುತ್ತದೆ. ಈಗ ಸರಕಾರವೇ ಎಚ್‌ಯುಎಲ್ ಬಳಿ ಇನ್ನಷ್ಟು ಅಂತಹ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಳುತ್ತಿದೆ.ಹಿಂದೆಂದೂ ಕಂಡರಿಯದ ದೇಶವನ್ನು ಕೋವಿಡ್ ಸಮಸ್ಯೆ ಬಾಧಿಸಿದಾಗ ಧಾರಾವಿಯ ಸ್ಲಮ್‌ಗಳಲ್ಲಿ ಸಂಜೀವ್ ಮೆಹ್ತಾ ಸೋಪುಗಳನ್ನು ವಿತರಿಸಲು ಆರಂಭಿಸಿದರು. ಜನರು ಪದೇಪದೇ ಸೋಪಿನಲ್ಲಿ ಕೈತೊಳೆದುಕೊಂಡು ವೈರಸ್ ಹರಡುವುದನ್ನು ತಡೆಯಲಿ ಎಂಬುದು ಅವರ ಆಶಯವಾಗಿತ್ತು. ಏನೇ ಮಾಡಿದರೂ ಕೋವಿಡ್ ಶರವೇಗ ದಲ್ಲಿ ಹರಡುತ್ತದೆ ಎಂಬುದು ಕೂಡ ಅವರಿಗೆ ಗೊತ್ತಿತ್ತು.
ಹೀಗಾಗಿ ಮೊದಲೇ ಎಚ್ಚೆತ್ತುಕೊಂಡು ೭೦ ಸಾವಿರ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ಖರೀದಿಸಿ ಮಹಾರಾಷ್ಟ್ರ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ಉಚಿತವಾಗಿ ವಿತರಿಸಿದರು. ಸರಕಾರಕ್ಕೇ ಕೇವಲ ೧ ಲಕ್ಷ ಕೋವಿಡ್ ಟೆಸ್ಟ್ ಕಿಟ್‌ಗಳನ್ನು ಖರೀದಿಸಲು ಸಾಧ್ಯವಾಗಿದ್ದ ಹೊತ್ತಿನಲ್ಲಿ ಸಂಜೀವ್ ಮೆಹ್ತಾ ೭೦ ಸಾವಿರ ಕಿಟ್‌ಗಳನ್ನು ಖಾಸಗಿಯಾಗಿ ಖರೀದಿಸಿ ವಿತರಿಸಿದ್ದರು! ತನ್ನ ಮಾತೃ ಕಂಪನಿಯ ಸಿಇಒ ಅವರ ಪ್ರಭಾವ ಬಳಸಿ ಎಚ್‌ಯುಎಲ್ ಕಂಪನಿಯು ೫ ಸಾವಿರಕ್ಕೂ ಹೆಚ್ಚು ಆಕ್ಸಿಜನ್ ಕಾನ್ಸಂಟ್ರೇಟರ್‌ಗಳನ್ನು ಅಮೆರಿಕ, ಚೀನಾ, ಬ್ರಿಟನ್ ಹಾಗೂ -ನ್ಸ್‌ನಿಂದ ತರಿಸಿ ಭಾರತದಲ್ಲಿ ಜನರ ಜೀವ ಉಳಿಸಲು ನೆರವಾಗಿತ್ತು.
ಸಂಜೀವ್ ಮೆಹ್ತಾ ನಾಗ್ಪುರದ ಜತೆ ಸಂಪರ್ಕ ವಕೀಲ ಹರೀಶ್ ಸಾಳ್ವೆಯವರ ತಂದೆಯಾದ ಕೇಂದ್ರದ ಮಾಜಿ ಸಚಿವ ಎನ್.ಪಿ.ಕೆ.ಸಾಳ್ವೆ ಅವರು ನಾಗ್ಪುರದಲ್ಲಿ ಸಿ.ಎ. ಸಂಸ್ಥೆಯೊಂದನ್ನು ನಡೆಸುತ್ತಿದ್ದರು. ಅದರಲ್ಲಿ ಸಂಜೀವ್ ಮೆಹ್ತಾ ಆರ್ಟಿಕಲ್‌ಶಿಪ್ ಮಾಡಿದ್ದರು. ಇನ್ನು, ಎಚ್‌ಯುಎಲ್ ಮತ್ತು ಲೋಕಮತ್ ನಡುವೆಯೂಸುದೀರ್ಘ ಸಂಬಂಧಗಳಿವೆ. ಮುಂಬೈನಲ್ಲಿ ಡಾ.ದತ್ತ ಸಾಮಂತ್ ಅವರು ದೊಡ್ಡ ಪ್ರಮಾಣದ ಮುಷ್ಕರ ನಡೆಸಿದಾಗ ಎಚ್‌ಯುಎಲ್‌ನ ಮುಂಬೈ ಕಾರ್ಖಾನೆ ಒಂದು ವರ್ಷಕ್ಕೂ ಹೆಚ್ಚು ಕಾಲ ಬಾಗಿಲು ಮುಚ್ಚಿತ್ತು. ಡಾ.ಅಶೋಕ್ ಗಂಗೂಲಿಯವರು ಆಗ ಕಂಪನಿಯ ಮುಖ್ಯಸ್ಥರಾಗಿದ್ದರು.
ಅವರು ನನ್ನ ತಂದೆಯವರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಮಹಾರಾಷ್ಟ್ರದ ಆಗಿನ ಔದ್ಯೋಗಿಕ ಸಚಿವರಾಗಿದ್ದ ಜವಾಹರಲಾಲ್ ದರಡಾ ಅಲಿಯಾಸ್ ಬಾಬೂಜಿಯವರ ನೆರವು ಕೋರಿದ್ದರು. ಬಾಬೂಜಿಯವರು ಗಂಗೂಲಿಗೆ ನಿಮ್ಮ ಉತ್ಪಾದನಾ ಕೇಂದ್ರಗಳನ್ನು ವಿಕೇಂದ್ರೀಕರಣಗೊಳಿಸಿ, ಇಂಗ್ಲಿಷ್ ಬದಲು ಸ್ಥಳೀಯ ಭಾಷೆಯಲ್ಲಿ ಜನರು ಹಾಗೂ ಕಾರ್ಮಿಕರೊಂದಿಗೆ ವ್ಯವಹರಿಸಿ ಎಂದು ಸಲಹೆ ನೀಡಿದರು. ಎಚ್‌ಯುಎಲ್ ಹಾಗೇ ಮಾಡಿತು. ಬಾಬೂಜಿ ಯವತ್ಮಾಲ್‌ನಲ್ಲಿ ಎಚ್‌ಯುಎಲ್‌ಗೆ ರೆಡಿಮೇಡ್ ಶೆಡ್ ಒದಗಿಸಿದರು. ಅಲ್ಲಿ ಕಂಪನಿಯ ಹೊಸ ಸ್ಥಳೀಯ ಘಟಕದ ನಿರ್ಮಾಣ ಶುರುವಾಯಿತು. ನಂತರ ಅವರುಎಚ್‌ಯುಎಲ್‌ಗೆ ಖಮಗಾಂವ್‌ನಲ್ಲಿ ಭೂಮಿ ನೀಡಿದರು.
ಅಲ್ಲಿ ಇಂದು ‘ಪಿಯರ್ಸ್ ಸೋಪ್’ ತಯಾರಾಗಿ ಜಗತ್ತಿನಾ ದ್ಯಂತ ಮಾರಾಟವಾಗುತ್ತಿದೆ. ಅದೇ ರೀತಿ ಬಾಬೂಜಿಯವರ ಸಲಹೆಯ ಮೇಲೆ ಚಿಂದ್ವಾಡಾದಲ್ಲೂ ಎಚ್‌ಯುಎಲ್‌ನ ಉತ್ಪಾದನಾ ಘಟಕ ಆರಂಭಿಸಲಾಯಿತು. ಡಾ.ಗಂಗೂಲಿ ಯವರು ನಂತರದ ವರ್ಷಗಳಲ್ಲಿ ರಾಜ್ಯಸಭೆಯಲ್ಲಿ ನನ್ನ ಜೊತೆ ಸದಸ್ಯರಾಗಿದ್ದರು. ಆಗ ಬಾಬೂಜಿ ತಮಗೆ ಮಾಡಿದ್ದ ಸಹಾಯವನ್ನು ನೆನಪಿಸಿಕೊಂಡಿದ್ದರು. ನಂತರ ಸಂಜೀವ್ ಮೆಹ್ತಾ ಅವರ ಪ್ರತಿಭೆ ಹಾಗೂ ಅಸಾಧಾರಣ ಬುದ್ಧಿವಂತಿಕೆಯು ಎಚ್‌ಯುಎಲ್ ಕಂಪನಿ ಅಗಾಧ ಪ್ರಮಾಣದಲ್ಲಿ ಬೆಳೆದು ತನ್ನ ವ್ಯವಹಾರವನ್ನು ಅಂದಾಜು ೬೦,೦೦೦ ಕೋಟಿ ರು.ಗಳಿಗೆ ಏರಿಕೆ ಮಾಡಿಕೊಳ್ಳುವಲ್ಲಿ ಸಾಕಷ್ಟು ಸಹಾಯ ಮಾಡಿದೆ. ದೇಶದಲ್ಲಿ ಈಗ ಸಂಸತ್ತಿನಲ್ಲಿ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ಇರಬೇಕು ಎಂಬ ಕೂಗು ಕೇಳಿಬರುತ್ತಿದ್ದರೆ ಎಚ್‌ಯುಎಲ್ ಆ ಕೆಲಸವನ್ನು ಸಂಜೀವ್ ಮೆಹ್ತಾ ಅವರ ನಾಯಕತ್ವದಲ್ಲಿ ಬಹಳ ಹಿಂದೆಯೇ ಮಾಡಿದೆ. ಎಚ್‌ಯುಎಲ್‌ನಲ್ಲಿ ಮಹಿಳಾ ‘ಬಾಸ್’ಗಳ ಸಂಖ್ಯೆ ಶೇ.೫೦ಕ್ಕಿಂತ ಹೆಚ್ಚಿದೆ. ಅವರಿಗೆ ಅತ್ಯುತ್ತಮ ತರಬೇತಿ ನೀಡಲಾಗುತ್ತದೆ. ಹೀಗಾಗಿ ಅದು ದೇಶದಲ್ಲಿ ಮಹಿಳಾ ಕಾರ್ಪೊರೇಟ್ ನಾಯಕಿಯರನ್ನು ತಯಾರು ಮಾಡುವ ವಿಶ್ವವಿದ್ಯಾಲಯವಿದ್ದಂತೆ. ಅಲ್ಲಿ ಪದವಿ ಪಡೆದು ಹೊರಗೆ ಬರುವವರು ಜಗತ್ತಿನಾದ್ಯಂತ ಕಾರ್ಪೋರೇಟ್ ಕಂಪನಿಗಳಲ್ಲಿ ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ.
ನಿವೃತ್ತಿ ಬಳಿಕ ಸಂಜೀವ್ ಮೆಹ್ತಾ ದನೋನ್ ಹಾಗೂ ಏರ್ ಇಂಡಿಯಾದ ನಾನ್ ಎಕ್ಸಿಕ್ಯೂಟಿವ್ ಬೋರ್ಡ್ ಮೆಂಬರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರುನಿಜಕ್ಕೂ ಈ ದೇಶದ ಅಮೂಲ್ಯ ಸಂಪತ್ತು!
(ಲೇಖಕರು ಹಿರಿಯ ಪತ್ರಕರ್ತರುಹಾಗೂ ರಾಜ್ಯಸಭಾ ಸದಸ್ಯರು)