ನಿಮಗೆ ಗೊತ್ತೇ, ಸೋಲು ಕೂಡ ಮಾನಸಿಕ ಶಕ್ತಿಯೇ !
ಶ್ವೇತ ಪತ್ರ
@.
ಸ್ಥಿರ ಮನಸ್ಥಿತಿಯವರು ಸೋಲನ್ನು ತಮ್ಮ ಮೇಲ್ಮಿತಿಯಾಗಿ ಪರಿಗಣಿಸುತ್ತಾ ಅದರಿಂದ ಕುಗ್ಗಿದರೆ, ಬೆಳವಣಿಗೆಯ ಮನಸ್ಥಿತಿಯವರು ಸೋಲಿ ನಿಂದ ಎಂದಿಗೂ ನಿರುತ್ಸಾಹಗೊಳ್ಳುವುದಿಲ್ಲ. ಬದಲಾಗಿ ಏನೋ ಕಲಿಯುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಹಾಗಾಗಿ ಸೋಲಿಗೆ ಅವರೆಂದೂ ಹೆದರುವುದಿಲ್ಲ. ಮನಸ್ಥಿತಿಗಳು ಬದಲಾಗುತ್ತವೆ, ನಾವು ಕಾಯಬೇಕಷ್ಟೆ.
ಯಾರಿಗೆ ಸೋಲಿಲ್ಲ? ನಾವು ಬೆಳೆದಂತೆ ಬದುಕಿನ ಯಾವುದೋ ಒಂದು ಹಂತದಲ್ಲಿ ಸೋಲು ವುದು ಸಹಜ. ಬದುಕು ಎಂದಿಗೂ ಸುಂದರ, ಸುಲಭ ಪಯಣದ ಹಾದಿಯಲ್ಲ. ಕಲ್ಲು-ಮುಳ್ಳುಗಳ ಹಾದಿಯೂ ಹೌದು! ಆದರೆ ಈ ಹಾದಿ ಕೆಲವರಿಗೆ ಸುಲಭವಾಗಿಯೂ ಇನ್ನೂ ಕೆಲವರಿಗೆ ಏಕೆ ಕಷ್ಟಕರವೂ ಆಗಿರುತ್ತದೆ ಎಂಬುದೇ ಇಲ್ಲಿನ ಮೂಲಪ್ರಶ್ನೆ. ಸೋಲಿನ ಹಾದಿ ಎಲ್ಲರಿಗೂ ಸಮಾನಾಂತರವಾಗೇ ಇದ್ದರೂ, ಕೆಲವರು ಸೋಲಿಗೆ ಕಡಿಮೆ ಹೆದರುತ್ತಾರೆ, ಜತೆಗೆ ಸೋಲಿನಿಂದ ಕಂಗೆಟ್ಟು ಹಳಿ ತಪ್ಪುವುದಿಲ್ಲ. ಆದರೆ ಕೆಲವರಂತೂ ಕುಸಿದು ಕುಳಿತುಬಿಡುತ್ತಾರೆ.
ಪ್ರಸಿದ್ಧ ವಿಕಾಸ ಮನೋವಿಜ್ಞಾನಿ ಜೇರೋಕ್ಗಾಗನ್ ಸರಿಯಾಗಿ ಪ್ರತಿಪಾದಿಸಿದಂತೆ ಒತ್ತಡಕಾರಿ ಸನ್ನಿವೇಶ ಗಳನ್ನು ಖಾಸಗಿಯಾಗಿ ವಿಶ್ಲೇಷಿಸುತ್ತ ಹಾಗೂಜತೆಯಲ್ಲೇ ಸಂವೇದನೆಗಳನ್ನು ಒಡಮೂಡಿಸಿಕೊಳ್ಳುವುದು ಮಾನಸಿಕ ಅಸ್ವಸ್ಥತೆಗೆ ಬಹಳ ಮುಖ್ಯ ಕಾರಣವಾಗುತ್ತದೆ. ಅಂತೆಯೇ ಪಾಸಿಟಿವ್ ಮನೋವಿಜ್ಞಾನದ ಪ್ರತಿಪಾದಕ ಸೆಲಿಗ್‌ಮನ್ ಸರಿಯಾಗಿ ಹೇಳುವಂತೆ, ಸೋಲಿಗಿಂತ ಸೋಲಿನ ಕುರಿತಾದ ನಮ್ಮ ವ್ಯಾಖ್ಯಾನಗಳೇ ನಮ್ಮ ಮಾನಸಿಕ ಆರೋಗ್ಯದಲ್ಲಿ ವ್ಯತ್ಯಾಸಗಳನ್ನು ಮೂಡಿಸುವುದು. ನಿರಾಶಾವಾದಿಯೊಬ್ಬ ತನ್ನ ಭವಿಷ್ಯವನ್ನು ಕತ್ತಲೆಯ ಹಾದಿಯಲ್ಲಿ ನೋಡಿದರೆ, ಆಶಾವಾದಿಯೊಬ್ಬ ಕತ್ತಲು ಕವಿದ ಮೋಡಗಳ ನಡುವಿನಲ್ಲೂ ಮಿನುಗುವ ಬೆಳಕನ್ನು ಕಾಣುತ್ತಾನೆ. ನಿರಾಶಾವಾದಿಗಳು ಹಿಂಜರಿತಗಳನ್ನು ಬದುಕಿನ ಗಾಯಗಳನ್ನಾಗಿಸಿಕೊಳ್ಳುತ್ತಾರೆ, ಆದರೆ ಆಶಾವಾದಿಗಳಿಗೆ ಜರ್ಜರಿತ ಗಳೆಂದಿಗೂ ಕೇವಲ ತಾತ್ಕಾಲಿಕವಾಗಿರುತ್ತವೆ.
ಬದುಕಿನ ಕೆಲ ಭಾಗಗಳ ಮೇಲ್ಮೈ ಅಷ್ಟೇ ಪ್ರಭಾವ ಬೀರುತ್ತವೆ ಎಂದೆನಿಸುವುದು ಸಹಜ. ಸೆಲಿಗ್‌ಮನ್ ಹೇಳುವಂತೆ, ನಮ್ಮೆಲ್ಲರಿಗೂ ಒಂದು ವಿವರಣೆಯ ಶೈಲಿಯಿದೆ. ಆ ಶೈಲಿಯೂ ಆಗಿ ಹೋದ ಸೋಲಿನ ಘಟನೆಯ ಬಗ್ಗೆ ನಮ್ಮಷ್ಟಕ್ಕೆ ನಮಗೆ ಸದಾ ವಿವರಿಸುತ್ತಿರುತ್ತದೆ -ಯಾಕೆ ಹೀಗಾಯಿತು ಎಂದು. ಉದಾಹರಣೆಗೆ ಆಫೀಸಿಗೆ ಹೋಗುವಾಗ ಗಾಡಿಯೊಂದು ನಮ್ಮ ಬೈಕ್‌ಗೆ ಗುದ್ದಿ ಬಿಡುತ್ತದೆ. ಆಗ ನಮಗೆ ನಾವೇ ಹೇಳಿಕೊಳ್ಳುವ ವಿವರಣೆ ಇಂತಿರುತ್ತದೆ- ‘ಟ್ರಾಫಿಕ್ ಅತಿ ಹೆಚ್ಚಾಗಿರುವು ದರಿಂದ ನನ್ನಂಥ ಅನುಭವಿ ಚಾಲಕನಿಗೂ ಹೀಗಾಗುವುದು ಸಹಜ’.
ಅದರ ಹಿಂದೆಯೇ ಮನಸ್ಸಿನೊಳಗೆ ಮತ್ತೊಂದು ಭಾವನೆ ಧುತ್ತೆಂದು ಮೂಡಿಬಿಡುತ್ತದೆ- ‘ಛೇ! ನನ್ನ ಹೊಸ ಬೈಕಿಗೆ ಹೀಗೆ ಗೀರುಗಳಾಗಿ ಬಿಟ್ಟಿತ್ತಲ್ಲ’ ಎಂದು. ಇಲ್ಲಿ ಮೊದಲ ವಿವರಣೆಯು ಆಶಾವಾದದಿಂದ ಕೂಡಿದ್ದರೆ, ಎರಡನೆಯ ಹೇಳಿಕೆಯು ನಿರಾಶೆಯಿಂದ ಕೂಡಿದೆ. ಇಲ್ಲಿ ಗಮನಿಸಬೇಕಾಗಿರುವ ಮುಖ್ಯಸಂಗತಿ ಎಂದರೆ, ಎರಡನೆಯ ವಿವರಣೆಯು ನಮ್ಮನ್ನು ಖಿನ್ನತೆಗೆ ತಳ್ಳುವಂಥದ್ದಾಗಿರುತ್ತದೆ. ‘ಖಿನ್ನತೆ ಎಂಬುದು ನಿರಾಶಾವಾದದ ಕೊನೆಯ ಅಭಿವ್ಯಕ್ತಿ’ ಎಂದು ಬರೆಯುತ್ತಾನೆ ಸೆಲ್ಫಿಗ್‌ಮನ್. ನಿಜ ಅಲ್ಲವೇ? ಇಷ್ಟಾಗಿಯೂ ನಿರಾಶಾವಾದಿಗಳಿಗೊಂದು ಖುಷಿಯ ವಿಚಾರವಿದೆ. ಅದೇನೆಂದರೆ, ನೀವು ನಿಮ್ಮ ವಿವರಣೆಯ ಶೈಲಿಯನ್ನು ಬದಲಾಯಿಸಿಕೊಂಡರೆ, ಸೋತಾಗಲೆಲ್ಲ ಮನಸ್ಸಿನ ಸಿಕ್ಕುಗಳಿಂದ ಸುಲಭವಾಗಿ ಬಿಡಿಸಿಕೊಳ್ಳಬಹುದು.
ಸೋಲಿಗೆ ಮಾನಸಿಕ ಶಕ್ತಿಯನ್ನು ಬೆಳೆಸಿಕೊಳ್ಳುವುದು ಸುಲಭ. ಖಿನ್ನತೆಯ ಶೈಲಿಯ ಆಲೋಚನೆಯನ್ನು ಗೆಲ್ಲುವುದಕ್ಕೆ ಕೆಲವೊಂದು ಮಾನಸಿಕ ತಂತ್ರಗಾರಿಕೆಯನ್ನು ರೂಢಿಸಿ ಕೊಳ್ಳಬೇಕಿರುತ್ತದೆ. ಸ್ವಯಂ ಸುಧಾರಣೆ ಬದಲಾವಣೆಯ ಮೊದಲ ಹೆಜ್ಜೆ. ಸ್ವಯಂ ಸುಧಾರಣೆಯಲ್ಲಿ ಬಹುಮುಖ್ಯ ಪಾತ್ರ ವಹಿಸುವುದು ಮನಸ್ಥಿತಿ. ಕೆಳಗೆ ನಾನು ಕೆಲವೊಂದು ಹೇಳಿಕೆಗಳ ಪಟ್ಟಿಯನ್ನು ನೀಡುತ್ತಿದ್ದೇನೆ.
ಅವುಗಳನ್ನು ವಿವರವಾಗಿ ಗಮನಿಸಿ: ‘ಅ’ಪಟ್ಟಿ೧) ನನ್ನ ತಂಗಿ ಹುಟ್ಟಿದಾರಭ್ಯ ಒಬ್ಬ ನೃತ್ಯಗಾರ್ತಿ.
೨) ನಾನು ಎಷ್ಟೇ ಕಷ್ಟಪಟ್ಟು ಓದಿದರೂ ಗಣಿತವನ್ನು ಕಲಿಯುವುದು ಕಷ್ಟ.೩) ನನ್ನ ಗಂಡ ಯಾವಾಗಲೂ ತಡ ಮಾಡುತ್ತಾರೆ; ತಡಮಾಡುವಿಕೆ ಅವರಿಗೆ ರಕ್ತದಲ್ಲೇ ಬಂದಿದೆ.
‘ಬ’ಪಟ್ಟಿ೧) ನನ್ನ ತಂಗಿ ಸುಲಲಿತವಾಗಿ ನೃತ್ಯ ಮಾಡುತ್ತಾಳೆ. ಏಕೆಂದರೆ ಆಕೆ ಬಹಳ ವರ್ಷಗಳಿಂದ ನೃತ್ಯವನ್ನು ಅಭ್ಯಾಸ ಮಾಡುತ್ತಿದ್ದಾಳೆ.೨) ಈ ವರ್ಷ ಗಣಿತದಲ್ಲಿ ನಾನು ಕಡಿಮೆ ಅಂಕ ಗಳಿಸಿದ್ದೇನೆ. ಬಹುಶಃ ನಾನು ಟ್ಯೂಷನ್‌ಗೆ ಸೇರಿದರೆ ಗಣಿತವನ್ನು ಇನ್ನೂ ಚೆನ್ನಾಗಿ ಕಲಿಯಬಹುದು.೩) ನನ್ನ ಗಂಡ ಯಾವಾಗಲೂ ತಡ ಮಾಡು ತ್ತಾರೆ; ಹಾಗಾಗಿ ನಾನು ಅವರಿಗೆ ಮೊಬೈಲ್ ಆಲಾರಂ ಬಳಸಲು ಹೇಳುತ್ತೇನೆ.
ನಾನು ಉದಾಹರಣೆಯಾಗಿ ನೀಡಿರುವ ಮೇಲಿನ ಹೇಳಿಕೆಗಳಲ್ಲಿ ನಿಮ್ಮ ಯೋಚನೆಗೆ ಅನ್ವಯವಾಗುವ ಹೇಳಿಕೆಗಳು ಯಾವುವು? ನೀವು ‘ಅ’ ಪಟ್ಟಿಯ ರೀತಿಯೋಚಿಸುವವರಾಗಿದ್ದರೆ ನಿಮ್ಮದು ಸ್ಥಿರ ಮನಸ್ಥಿತಿ. ಅದೇ ನೀವು ‘ಬ’ ಪಟ್ಟಿಯ ರೀತಿ ಯೋಚಿಸುವವರಾಗಿದ್ದರೆ ನಿಮ್ಮದು ಬೆಳವಣಿಗೆಯ ಮನಸ್ಥಿತಿ.ಸ್ಥಿರ ಮನಸ್ಥಿತಿಯವರು ತಾವು ಬುದ್ಧಿವಂತರು, ಕುಶಲರು, ಪ್ರತಿಭಾವಂತರು ಮತ್ತು ತಮ್ಮ ವ್ಯಕ್ತಿತ್ವವು ಗುಣಾಣುಗಳಿಂದ ಬಂದ ಜೈವಿಕ ಬಳುವಳಿ ಯಾಗಿದೆ ಎಂದು ನಂಬಿರುತ್ತಾರೆ. ಆದರೆ ‘ನಾವು ಕಲಿಯುವ ಮತ್ತು ಅಭ್ಯಾಸ ಮಾಡುವುದರ ಮೂಲಕ ಬದಲಾವಣೆಗೊಳ್ಳಬಹುದು, ಉನ್ನತಿ ಹೊಂದಬಹುದು’ ಎಂಬುದು ಬೆಳವಣಿಗೆಯ ಮನಸ್ಥಿತಿಯವರು ಯೋಚಿಸುವ ರೀತಿಯಾಗಿರುತ್ತದೆ. ಇದರ ಅರ್ಥ ನಮ್ಮ ಮನಸ್ಥಿತಿಯು, ಸವಾಲುಗಳಿಗೆ ನಾವು ಹೇಗೆ ಸ್ಪಂದಿಸುತ್ತೇವೆ ಎಂಬುದನ್ನು ಸೂಚಿಸುತ್ತಿರುತ್ತದೆ.
ಸ್ಥಿರ ಮನಸ್ಥಿತಿಯವರು ಸೋಲನ್ನು ತಮ್ಮ ಮೇಲ್ಮಿತಿ ಯಾಗಿ ಪರಿಗಣಿಸುತ್ತಾ ಅದರಿಂದ ಕುಗ್ಗಿದರೆ, ಬೆಳವಣಿಗೆಯ ಮನಸ್ಥಿತಿಯವರು ಸೋಲಿನಿಂದಎಂದಿಗೂ ನಿರುತ್ಸಾಹಗೊಳ್ಳುವುದಿಲ್ಲ. ಯಾವುದಾದರೂ ಒಂದು ಸವಾಲು ಎದುರಾದರೆ ತಾವು ಸೋಲುತ್ತಿದ್ದೇವೆ ಎಂದು ಅವರು ಅಂದುಕೊಳ್ಳುವು ದಿಲ್ಲ, ಬದಲಾಗಿ ಏನೋ ಕಲಿಯುತ್ತಿದ್ದೇವೆ ಎಂದುಕೊಳ್ಳುತ್ತಾರೆ. ಹಾಗಾಗಿ ಸೋಲಿಗೆ ಅವರೆಂದೂ ಹೆದರುವುದಿಲ್ಲ. ಮನಸ್ಥಿತಿಗಳು ಬದಲಾಗುತ್ತವೆ, ನಾವು ಕಾಯಬೇಕಷ್ಟೆ.
ನಮ್ಮ ಸಾಮರ್ಥ್ಯ, ಬುದ್ಧಿಶಕ್ತಿ, ವ್ಯಕ್ತಿತ್ವವು ಬದಲಾಗುತ್ತದೆ ಎಂದಾದರೆ ಮನಸ್ಥಿತಿಯು ಬದಲಾಗುತ್ತದೆ ನೆನಪಿರಲಿ. ಯಾವೊಬ್ಬ ವ್ಯಕ್ತಿಗೇ ಆದರೂ ಒಂದೇಮನಸ್ಥಿತಿ ಎಂಬುದು ಇರುವುದಿಲ್ಲ, ಸಂದರ್ಭ ಗಳಿಗನು ಸಾರವಾಗಿ ಅದು ಬದಲಾಗುತ್ತದೆ. ಮನಸ್ಥಿತಿ ಬದಲಾದರೆ ಬೆಳವಣಿಗೆಯ ಮನಸ್ಥಿತಿ ನಮ್ಮದಾ ಗುತ್ತದೆ. ಉದಾಹರಣೆಗೆ ನೀವೇನೋ ತಪ್ಪು ಮಾಡುತ್ತೀರೆಂದು ಇಟ್ಟುಕೊಳ್ಳೋಣ. ಕೀಗಳನ್ನು ಎಲ್ಲೆಂದರಲ್ಲಿ ಇಟ್ಟು ಮರೆತುಬಿಡುವುದು, ದುಡ್ಡು ಎಲ್ಲೆಂದರಲ್ಲಿ ಇಟ್ಟು ಮರೆತುಬಿಡುವುದು ಹೀಗೆ ಇಂಥ ಸಂದರ್ಭದಲ್ಲಿ ನಿಮ್ಮನ್ನು ನೀವು ಮರೆಗುಳಿ ಎಂದುಕೊಳ್ಳುವುದಕ್ಕಿಂತ ಮುಂದಿನ ಬಾರಿ ಹೀಗೆಮರೆಯದಿರಲು ತೆಗೆದುಕೊಳ್ಳಬಹುದಾದ ಎಚ್ಚರಿಕೆ ಗಳೇನು ಎಂಬುದನ್ನು ರೂಢಿಸಿಕೊಳ್ಳುವುದು ಬಹು ಮುಖ್ಯ.
ಪರೀಕ್ಷೆಯಲ್ಲಿ ನಪಾಸಾದರೆ ‘ಸೋತು ಹೋದೆ’ ಎಂದುಕೊಳ್ಳುವುದಕ್ಕಿಂತ ಮುಂಬರುವ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸುವುದು ಹೇಗೆ? ಎಂಬುದರ ಬಗ್ಗೆ ಗಮನವನ್ನು ನೀಡಬೇಕು. ಮುರಿದ ಮನಸ್ಸುಗಳನ್ನು ಮಾಗಿಸಬಹುದು ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಮಾನಸಿಕ ಶಕ್ತಿ ಎಂದಾಗ ಬಹಳ ಮುಖ್ಯವಾಗುವುದು ಘರ್ಷಣೆ ಅಥವಾ ದ್ವಂದ್ವಗಳೊಂದಿಗೆ ನಾವು ಹೇಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂಬ ಅಂಶದಲ್ಲಿ. ಘರ್ಷಣೆ ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಪರಿಹರಿಸ ಬಹುದಾದದ್ದು, ಎರಡನೆಯದು ಪ್ರತ್ಯಕ್ಷ ಅನುಭವಿಸುವಂಥದ್ದು. ಮೊದಲನೆಯದು ತಾತ್ಕಾಲಿಕ ವಿಷಯಗಳಿಗೆ, ಸಂದರ್ಭಗಳಿಗೆ ಅನುಗುಣವಾಗಿದ್ದು ಅದು ತಾತ್ಕಾಲಿಕವಾಗಿರುತ್ತದೆ. ಎರಡನೆಯದು ನಮ್ಮ ವ್ಯಕ್ತಿತ್ವ ಹಾಗೂ ಮೌಲ್ಯಗಳಿಗೆ ಸಂಬಂಧಿತವಾಗಿರುತ್ತದೆ. ಸುಲಭವಾಗಿ ಪರಿಹಾರವನ್ನು ದಕ್ಕಿಸಿಕೊಳ್ಳುವುದು ಸವಾಲಾಗಿರುತ್ತದೆ!
ಕವಿ ಏಲಿಯಟ್ ಹೇಳುವಂತೆ, ಪ್ರೀತಿ, ಪ್ರೇಮ, ದ್ವಂದ್ವ, ಸೋಲು, ಘರ್ಷಣೆ, ದುಃಖ, ಕೋಪ ಎಲ್ಲವೂ ನಮ್ಮವೇ ಸಂವೇದನೆಗಳಾಗಿವೆ. ಅವು ನಮ್ಮದೇ ಹೃದಯದಿಂದ ಬೆಳೆದ ಪೈರು ಗಳಾಗಿರುತ್ತವೆ. ಋಣಾತ್ಮಕ ವಿಚಾರಗಳು ನಮ್ಮ ಶಕ್ತಿಯ ಸಂಕೇತಗಳಾಗಿರುತ್ತವೆಯೇ ಹೊರತು ನಮ್ಮ ದೌರ್ಬಲ್ಯಗಳಲ್ಲ. ಹಾಗಾಗಿ ಸೋಲು ದುರ್ಬಲವಲ್ಲ ಎಂಬ ಪ್ರe ಒಡಮೂಡಲಿ.ಅದಕ್ಕಿಂತಲೂ ಮಿಗಿಲಾದ ಮಾನಸಿಕ ಶಕ್ತಿ ಮತ್ತೊಂದಿಲ್ಲ.