ಅಂತರಜಾತಿ ವಿವಾಹವನ್ನೇ ಇನ್ನೂ ಒಪ್ಪದ ಕಾಲದಲ್ಲಿ…
ಬುಲೆಟ್ ಪ್ರೂಫ್
ವಿನಯ್ ಖಾನ್
vinaykhan078@.
ಕೆಲ ಸಿನಿಮಾ ನೋಡಿ ಅಥವಾ ಪುಸ್ತಕಗಳನ್ನು ಓದಿ ಸ್ಪೂರ್ತಿ ಹೊಂದಿರುವವರು, ತಮ್ಮ ಮುಂದಿನ ಜೀವನದ ಬಗ್ಗೆಯೂ ನೋಡಿಕೊಳ್ಳ ಬೇಕು ತಾನೇ? ಎಷ್ಟೋ ಮನೋವೈದ್ಯರ ಪಕಾರ, ‘ಗೇ’ ಅಥವಾ ‘ಲೆಸ್ಬಿಯನ್’ ಪರಿಕಲ್ಪನೆ ಅನ್ನು ವಂಥದ್ದು ಅಸ್ವಾಭಾವಿಕ. ಹೀಗಿರುವಾಗ ಸಲಿಂಗಿಗಳು ಸಮಾಜದಲ್ಲಿ ತೋರುತ್ತಿರುವುದು ವಿಲಕ್ಷಣ ವರ್ತನೆ ಯಲ್ಲವೇ?
ನಮ್ಮ ದೇಶದಲ್ಲಿ ವಿವಾಹ ಎಂಬುದು ಸಂಭ್ರಮ- ಸಡಗರಗಳ ಸಂದರ್ಭವಾಗಿದ್ದರೂ, ಅದು ನೆರವೇರುವುದು ಅಂದುಕೊಂಡಷ್ಟು ಸುಲಭವಲ್ಲ.ಏಕೆಂದರೆ, ಇಲ್ಲಿ ಹುಡುಗ-ಹುಡುಗಿ ಇಷ್ಟಪಟ್ಟುಬಿಟ್ಟರೆ ಸಾಲದು, ಅದಕ್ಕೆ ಒಂದಿಡೀ ಕುಟುಂಬದ, ಸಮಾಜದ ಒಪ್ಪಿಗೆ ಬೇಕು. ಕಾನೂನಿನ ಸಮ್ಮತಿ ಇರಬೇಕು. ಮದುವೆಗೂ ಮುನ್ನ ವಧು ಮತ್ತು ವರನ ಕಡೆಯವರು ಸಾಧಕ-ಬಾಧಕಗಳ ಕುರಿತು ಕೂಲಂಕಷವಾಗಿ ಚರ್ಚಿಸುವುದಿದೆ. ಏಕೆಂದರೆ,ಮದುವೆ ಎಂಬುದು ೨-೩ ದಿನ ನಡೆಯುವ ಕಾರ್ಯಕ್ರಮ ವಾದರೂ ಅದರ ಪರಿಣಾಮವನ್ನು (ಅದು ಹಿತವಾಗಿರಲಿ, ಅಹಿತಕರವಾಗಿರಲಿ) ಅವರಿಬ್ಬರೂ ಎಷ್ಟೋ ವರ್ಷಗಳ ಕಾಲ ಅನುಭವಿಸಬೇಕಾಗುತ್ತದಲ್ಲಾ, ಅದಕ್ಕೆ. ಹುಡುಗ-ಹುಡುಗಿ ಪರಸ್ಪರರನ್ನು ಪ್ರೀತಿಸಿ, ಮನೆಯ/ಸಮಾಜದ ಒಪ್ಪಿಗೆಯನ್ನೂ ಪಡೆದು ಆದ ಮದುವೆಗಳೇ ಕೆಲ ತಿಂಗಳಲ್ಲೇ ಮುರಿದುಬೀಳುತ್ತಿರುವ ಉದಾಹರಣೆಗಳು ಸಾಕಷ್ಟಿವೆ.
ಹೀಗಾಗಿ ಮದುವೆಯ ತರಹವೇ ವಿಚ್ಛೇದನವೂ ಜೀವನ ದುದ್ದಕ್ಕೂ ಅನೇಕರನ್ನು ಕಾಡುವುದುಂಟು. ಹೀಗಿದ್ದರೂ ಭಾರತದಲ್ಲಿ ವಿವಾಹ ವಿಚ್ಛೇದನಗಳ ಪ್ರಮಾಣ ತುಲನಾತ್ಮಕ ವಾಗಿ ಕಮ್ಮಿ ಎನ್ನಬೇಕು. ಪ್ರೇಮವಿವಾಹ ಮತ್ತು ಅಂತರ್ಜಾತಿ ವಿವಾಹಗಳೂ ನಮ್ಮ ದೇಶದಲ್ಲಿ ಸಾಕಷ್ಟು ವರ್ಷಗಳಿಂದ ನಡೆಯುತ್ತಿದ್ದರೂ ಅವಕ್ಕೆ ಕಾಲಾನುಕಾಲಕ್ಕೆ ವಿರೋಧಗಳು ಒದಗಿದ್ದಿದೆ. ದೇಶದಲ್ಲಿನ ಜಾತೀಯತೆಯನ್ನು ಹೋಗಲಾಡಿಸಲು ಅಂತರ್ಜಾತಿ ವಿವಾಹ ಮಾಡಬೇಕೆಂದು ಸಾಕಷ್ಟು ಸಮಾಜ ಪರಿವರ್ತಕರು ಹರಸಾಹಸ ಪಟ್ಟಿದ್ದಿದೆ. ಮಹಾತ್ಮ ಗಾಂಧೀಜಿ ಕರ್ನಾಟಕದ ಬೆಳಗಾವಿಯ ಹತ್ತಿರದ ಹಳ್ಳಿಯೊಂದ ರಲ್ಲಿ ಅಂತರ್ಜಾತಿ ವಿವಾಹವೊಂದನ್ನು ಮಾಡಿಸಿದ್ದರು, ಅದೂ ನೂರಾರು ಬ್ರಿಟಿಷ್ ಸೈನಿಕರ ಬಂದೋಬಸ್ತ್‌ನಲ್ಲಿ. ೧೨ನೇ ಶತಮಾನದಲ್ಲಿ ಬಸವಣ್ಣ ನವರು ಮಾಡಿಸಿದ ಅಂತರ್ಜಾತಿ ವಿವಾಹ ದೊಡ್ಡ ವಿವಾದಕ್ಕೆ ಮತ್ತು ಕ್ರಾಂತಿಗೂ ಕಾರಣವಾಗಿತ್ತು.
ನಮ್ಮಲ್ಲಿ ಒಂದೇ ಜಾತಿಯ ಒಳಪಂಗಡಗಳಲ್ಲೇ ಮದುವೆಗಳು ಸರಿಯಾಗಿ ಆಗುತ್ತಿಲ್ಲ, ಹೀಗಾಗಿ ಅಂತರ್ಜಾತಿ ವಿವಾಹ ಸುಸೂತ್ರವಾಗಿ ನಡೆಯುವುದು ದೂರದ ಮಾತು. ಇದು ಪ್ರೇಮ ವಿವಾಹಕ್ಕೂ ಅನ್ವಯಿಸುವ ಮಾತು. ನಮ್ಮ ದೇಶದ ಜನ ಪ್ರೇಮವಿವಾಹವನ್ನು ಅಷ್ಟು ಸುಲಭವಾಗಿ ಒಪ್ಪುವುದಾಗಿದ್ದಿದ್ದರೆ ಮರ್ಯಾದಾ ಹತ್ಯೆಗಳು ನಡೆಯುತ್ತಿದ್ದವಾ? ನವ ಜೋಡಿಗಳನ್ನು ಮನೆಯಿಂದ, ಸಮಾಜದಿಂದ, ಕೆಲವೊಮ್ಮೆ ಊರಿನಿಂದಲೂ ಬಹಿಷ್ಕರಿಸುವ ಪ್ರಕರಣಗಳಾಗುತ್ತಿದ್ದವಾ? ಪ್ರೇಮವಿವಾಹಗಳು ಸುಖಾಂತ್ಯ ಕಂಡ ನಿದರ್ಶನಗಳು ಸಾಕಷ್ಟಿರಬಹುದು. ಆದರೆ ದಿಕ್ಕು ಸಿಗದೆ ಸತ್ತವರು? ಮನೆಯವರ ಒಪ್ಪಿಗೆಯಿಲ್ಲದೆ ಮದುವೆಯಾಗಿ ಈಗಲೂ ಹರ ಸಾಹಸ ಪಡುತ್ತಿರುವ ಸಾಕಷ್ಟು ಮಂದಿಯನ್ನು ಕಾಣಬಹುದು.
ಇದು ರೊಮಿಯೋ ಜುಲಿಯಟ್ ಕಾಲ ಅಲ್ಲ, ಆದರೂ ಆ ರೀತಿಯ ಮಾಣಸಿಕತೆ ಇನ್ನೂ ಜನರಲ್ಲಿ ಜೀವಂತವಿದೆ. ಇಂಥ ವಿಷಯವನ್ನಿಟ್ಟುಕೊಂಡು ಸಾಕಷ್ಟು ಸಿನಿಮಾಗಳೂ ಬಂದಿವೆ. ಇಂಥ ಸಮಾಜದಲ್ಲಿ ಸಲಿಂಗ ವಿವಾಹವನ್ನು ಒಪ್ಪುತ್ತಾರಾ? ಹಾಗೆ ನೋಡಿದರೆ ಗ್ರಾಮೀಣ ಭಾಗಗಳಲ್ಲಿ, ಕೆಲವೊಂದು ಪಟ್ಟಣ ಪ್ರದೇಶಗಳಲ್ಲಿ ಸಲಿಂಗಕಾಮ/ಸಲಿಂಗ ವಿವಾಹದ ಪರಿಕಲ್ಪನೆಯೇ ಗೊತ್ತಿಲ್ಲ. ಇನ್ನು ಸಲಿಂಗಕಾಮದ ಪರಿಕಲ್ಪನೆ ಅಥವಾ ‘’ (, , ,   ) ಸಮುದಾಯವನ್ನು ನಮ್ಮಲ್ಲಿ ಎಲ್ಲರೂ ಸಂಪೂರ್ಣ ಒಪ್ಪಿಕೊಂಡಿಲ್ಲ. ಎಷ್ಟೋ ಕಡೆ ‘ಲೆಸ್ಬಿಯನ್’ ಅಥವಾ ‘ಗೇ’ಎಂದು ಗೊತ್ತಾಗುತ್ತಿದ್ದಂತೆ ಅವರನ್ನು ಹತ್ತಿರಕ್ಕೂ ಸೇರಿಸುವುದಿಲ್ಲ. ಅಂಥದ್ದರಲ್ಲಿ ಸಲಿಂಗ ವಿವಾಹವನ್ನು ನಮ್ಮಲ್ಲಿ ಅಷ್ಟು ಸುಲಭವಾಗಿ ಒಪ್ಪುತ್ತಾ ರೆಯೇ? ಇವತ್ತು ಸಲಿಂಗ ವಿವಾಹವನ್ನು ಸಮರ್ಥಿಸಿ ಮಾತನಾಡುತ್ತಿರುವವರು ಮದುವೆ ಎಂಬ ವ್ಯವಸ್ಥೆಯ ಬಗ್ಗೆಯೂ ಸ್ವಲ್ಪ ತಿಳಿದುಕೊಂಡಿರ ಬೇಕಾಗಿತ್ತು.
‘ವೈವಾಹಿಕ ಆಯ್ಕೆಯೂ ಮುಕ್ತವಾಗಿಲ್ಲ, ಸಂತತಿಯ ಮುಂದುವರಿಕೆಯ ಸಲುವಾಗಿಯೇ ಮದುವೆಯನ್ನು ಆಚರಿಸಿಕೊಂಡು ಬರಲಾಗಿದೆ’ ಎಂಬ ನ್ಯಾಯಾಧೀಶ ರವೀಂದ್ರ ಭಟ್ ಅವರ ಮಾತಿಲ್ಲಿ ಉಲ್ಲೇಖನೀಯ. ಏಕೆಂದರೆ, ಈ ಸಲಿಂಗಿಗಳ ಸಂಸಾರದ ರೀತಿ ಹೇಗೆ? ಅವರಲ್ಲಿ ಮಕ್ಕಳಾಗುವುದು ಹೇಗೆ? ಇಬ್ಬರು ಗಂಡಸರು ಮದುವೆಯಾದರೆ ಅದರಲ್ಲಿ ಗಂಡ ಯಾರು, ಹೆಂಡತಿ ಯಾರು? ಎಂಬ ಪ್ರಶ್ನೆಗಳಿಲ್ಲಿ ಉದ್ಭವಿಸುತ್ತವೆ. ಇಬ್ಬರು ಪುರುಷರು ಅಥವಾ ಇಬ್ಬರು ಮಹಿಳೆ ಸೇರಿದರೆ ಮಕ್ಕಳಾಗುವುದಿಲ್ಲ ಬಿಡಿ. ಅವರು ಹೇಳಿಕೊಳ್ಳುವಂತೆ ಮಕ್ಕಳನ್ನು ಒಂದೊಮ್ಮೆ ದತ್ತು ತೆಗೆದುಕೊಂಡರೂ, ಅವರಿಗೆ ತಾಯಿ ಯಾರು ಮತ್ತು ತಂದೆ ಯಾರು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆ, ಮಗುವೊಂದರ ಸರ್ವತೋಮುಖ ಅಭಿವೃದ್ಧಿಯಲ್ಲಿ ತಂದೆ-ತಾಯಿಯ ಪಾತ್ರ ಮಹತ್ವದ್ದಾಗಿರುತ್ತದೆ.
ಆದರಿಲ್ಲಿ ಒಂದೇ ಲಿಂಗದಲ್ಲಿರುವವರು ಅದು ಹೇಗೆ ತಾನೇ ಜೀವನಪೂರ್ತಿ ಜತೆಯಾಗಿರುತ್ತಾರೆ? ಮುಂದಕ್ಕೆ ಇದು ಬರೀ ಒಂದು ಕುಟುಂಬಕ್ಕಷ್ಟೆ ಅಲ್ಲ, ಇಡೀ ಸಮಾಜಕ್ಕೇ ಹೊಸ ತೊಡಕನ್ನು ತಂದೊಡ್ಡಬಹುದು. ಇನ್ನು ಸಲಿಂಗಿಗಳು ಸಮರ್ಥಿಸಿಕೊಳ್ಳುವಂಥ ಕಾಮವಂತೂ ಅಸ್ವಾಭಾವಿಕ. ಇದು ಬರೀ ಹಿಂದೂಧರ್ಮದಲ್ಲಷ್ಟೇ ಅಲ್ಲ ಇಡೀ ಪ್ರಪಂಚದ ಎಲ್ಲಾ ಧರ್ಮಗಳಲ್ಲೂ! ಅದಕ್ಕೇ ತಾನೇ, ಲಾರ್ಡ್ ಮೆಕಾಲೆ ೧೮೬೦ರಲ್ಲಿ ಭಾರತದಲ್ಲಿ ಸಲಿಂಗ ಕಾಮವನ್ನು ಅಪರಾಽಕರಣದ ವ್ಯಾಪ್ತಿಯಲ್ಲಿ ತಂದಿದ್ದು? ಇದಕ್ಕೆ ಸಂಬಂಽಸಿದ ಸೆಕ್ಷನ್ ಎಷ್ಟೋ ವರ್ಷಗಳವರೆಗೆ ಇತ್ತು.
ಆದರೆ ೫ ವರ್ಷಗಳ ಹಿಂದೆ ಭಾರತದ ಸುಪ್ರೀಂ ಕೋರ್ಟ್ ಸೆಕ್ಷನ್ ೩೭೭ನ್ನು ರದ್ದುಪಡಿಸಿ, ಸಲಿಂಗಕಾಮ ಅಥವಾ ‘ಗೇ ಸೆಕ್ಸ್’ ಅನ್ನು ಕಾನೂನುಬದ್ಧ ಗೊಳಿಸಿತ್ತು. ಆದರೆ ಇದು ಹೇಗೆ ತಾನೇ ಮದುವೆಗೂ ಅನ್ವಯಿಸುತ್ತದೆ? ಎಲ್ಲ ಧರ್ಮಗಳಲ್ಲೂ ಮದುವೆಗೆ ಅತ್ಯಂತ ಪವಿತ್ರ ಸ್ಥಾನ ಕೊಟ್ಟಿದ್ದಾರೆ. ಅದನ್ನುಹೇಗೆ ಇಂಥ ‘ಅಮುಖ್ಯ ಅಂಶಗಳಿಗೋಸ್ಕರ’ ಬಿಟ್ಟು ಕೊಟ್ಟಾರು? ಕೊನೆಗೆ ಯಾರಿಗೆ ಯಾರು ತಾಳಿ ಕಟ್ಟಿಯಾರು? ಕೆಲ ಸಿನಿಮಾ ನೋಡಿ ಅಥವಾ ಪುಸ್ತಕ ಗಳನ್ನು ಓದಿ ಸ್ಪೂರ್ತಿ ಹೊಂದಿರುವವರು, ತಮ್ಮ ಮುಂದಿನ ಜೀವನದ ಬಗ್ಗೆಯೂ ನೋಡಿಕೊಳ್ಳಬೇಕು ತಾನೇ? ಎಷ್ಟೋ ಮನೋವೈದ್ಯರ ಪ್ರಕಾರ, ‘ಗೇ’ ಅಥವಾ ‘ಲೆಸ್ಬಿಯನ್’ ಪರಿಕಲ್ಪನೆ ಅನ್ನು ವಂಥದ್ದು ಅಸ್ವಾಭಾವಿಕ. ಹೀಗಿರುವಾಗ ಸಲಿಂಗಿಗಳು ಸಮಾಜದಲ್ಲಿ ತೋರುತ್ತಿರುವುದು ವಿಲಕ್ಷಣ ವರ್ತನೆ ಯಲ್ಲವೇ? ಇವೆಲ್ಲ ದೇಶದಲ್ಲಿ ಆಗಾಗ ನಡೆಯುವ ಒಂದು ಫ್ಯಾಷನ್ ಆಗಿಬಿಟ್ಟಿದೆ, ಇದಕ್ಕೆ ಎಡಪಂಥೀಯರು ಅಥವಾ ಪ್ರಗತಿಪರರ ಬೆಂಬಲ ಬೇರೆ.
ಇದೆಲ್ಲ ಸಾರ್ವಜನಿಕವಾಗಿ ಇಷ್ಟೊಂದು ಚರ್ಚೆಗೆ ಒಳಪಡಲು ಕಾರಣಗಳಿವೆ. ಈ ಪೈಕಿ ಎದ್ದುಕಾಣುವಂಥದ್ದು ಸಾಮಾಜಿಕ ಜಾಲತಾಣ ಮತ್ತು ಎಲ್ಲವನ್ನೂ ತನ್ನದೇ ಹೋರಾಟ ಎಂದು ಬೀಗುವ ಎಡಪಂಥೀಯ ಉದಾರವಾದಿಗಳು. ಈ ಪ್ರಗತಿಪರರು ಅಥವಾ ಅತಾರ್ಕಿಕ ಎಡಪಂಥೀಯ ಉದಾರವಾದಿಗಳು ಹಲವಾರು ಕ್ಷಣಿಕ ಚಟ () ಗಳಿಗೆ ಅಥವಾ ವಿಲಕ್ಷಣ ವರ್ತನೆಗಳಿಗೆ ದುಂಬಾಲು ಬೀಳುವುದನ್ನು ಆಗಾಗ ನೋಡುತ್ತಿರುತ್ತೇವೆ. ಅಂಥದ್ದೇ ಒಂದು ಹೊಸ ಪ್ರಯೋಗ ಜೆಎನ್‌ಯುನಲ್ಲಿ ಆಗುತ್ತಿತ್ತು, ಕೆಲವು ಗಂಡಸರು (?!) ಸೀರೆಯುಟ್ಟು ಸಮಾನತೆಯನ್ನು ಬಯಸುತ್ತಿದ್ದರು.
ಕೆಲ ವರ್ಷಗಳವರೆಗೂ ವೀಗನ್ ಜೀವನಶೈಲಿ (ಅಂದರೆ ಪ್ರಕೃತಿಯನ್ನು ಗೌರವಿಸಿ, ಯಾವುದೇ ಪ್ರಾಣಿ ಅಥವಾ ಪ್ರಾಣಿಜನ್ಯ ಪದಾರ್ಥಗಳನ್ನು ಮುಟ್ಟದೆ, ಬರೀ ಬೇಯಿಸದ ಆಹಾರವನ್ನು ತಿಂದು ಜೀವನ ನಡೆಸುವುದು) ಎಲ್ಲೆಡೆಯೂ ನಡೆಯುತ್ತಿತ್ತು. ಈ ವಿಲಕ್ಷಣ ವರ್ತನೆಯೂ ಪ್ರಪಂಚದಾದ್ಯಂತ ಕೆಲ ದಿನಗಳವರೆಗೆ ನಡೆಯುತು. ಇಂಥದೇ ವೀಗನ್ ಆಹಾರ ಶೈಲಿಯನ್ನು ಹೊಂದಿದ್ದ ಕೆಲವರು ಅಪೌಷ್ಟಿಕತೆಯಿಂದ ಮರಣಿಸಿದ ನಂತರ ಇದನ್ನೆಲ್ಲ ಅಲ್ಲಿಗೇಬಿಟ್ಟರು. ಇದಷ್ಟೇ ಅಲ್ಲ, ಪ್ರಕೃತಿ ಸಂರಕ್ಷಣೆ ಹೆಸರಲ್ಲಿ ಹಲವಾರು ಉದ್ದಿಮೆಗಳಿಗೆ ಉಪಟಳ ಕೊಡುವುದು, ಪ್ರಾಣಿ ಸಂರಕ್ಷಣೆ ಹೆಸರಲ್ಲಿ ಹೋರಾಟಗಳನ್ನು ಮಾಡುವುದು ಇಂಥ ಹೊಸ ವಿಲಕ್ಷಣ ವರ್ತನೆಗಳ ಮೂಲಕ ನವಪ್ರತಿಭೆಗಳು ಉದ್ಭವಿಸುತ್ತಿರುತ್ತವೆ. ಹೀಗೆ ಪಟ್ಟಿಮಾಡುತ್ತ ಹೋದರೆ ಅವು ನಿಲ್ಲುವುದೂ ಇಲ್ಲ.
ಇದೆಲ್ಲ ತುಂಬಾ ದೊಡ್ಡದಾಗಿ ಗಲಾಟೆಯಾಗುವಾಗಲೂ ಅದರ ಹಿಂದೆ ನಿಂತವರನ್ನು ನೋಡಲೇಬೇಕು. ಅವರೆಲ್ಲ ಯಾರು? ಸಿನಿಮಾ-ನಾಟಕ ರಂಗದವರು, ಕೆಲ ಕಾಲೇಜುಗಳ ಪ್ರೊಫೆಸರ್‌ಗಳು, ದೊಡ್ಡ ಹುದ್ದೆಯಲ್ಲಿರುವವರು, ಕೆಲಸವಿಲ್ಲದ ಕೆಲವು ಪತ್ರಕರ್ತರು, ಸಾಹಿತಿಗಳು ಇತ್ಯಾದಿ. ಹೀಗೆ ಆಯಕಟ್ಟಿನ ಹುದ್ದೆಗಳಲ್ಲಿದ್ದು, ಒಂದಿಷ್ಟು ಹೆಸರನ್ನು ಮಾಡಿ, ‘ಸಾರ್ವಜನಿಕ ಸಂಪರ್ಕ’ ಕಲೆ ಹಾಗೂ ಜನರ ಮಾನಸಿಕತೆಯ ಬಗ್ಗೆ ಚೆನ್ನಾಗಿ ಗೊತ್ತಿದ್ದು, ಚೆನ್ನಾಗಿ ಪ್ರಚಾರಾಂದೋಲನಗಳನ್ನು ಮಾಡಿ, ಹೊಸಹೊಸ ಉಪಟಳ ಗಳನ್ನು ಜನರ ಮುಂದಿಡುತ್ತಾರೆ. ಇದೆಲ್ಲ ಕೆಲ ವರ್ಷ ಗಳವರೆಗಿನ ಹವಾ ಬಿಡಿ; ಜನರೆಲ್ಲ ಅವರನ್ನು ಕೈಬಿಟ್ಟ ತಕ್ಷಣ ಮತ್ತೊಂದು ಹೊಸ ಮುಖವಾಡ ಹಾಕಿಕೊಂಡು ಬರುತ್ತಾರೆ. ಅಷ್ಟೇ ಅಲ್ಲವೇ?!
(ಲೇಖಕರು ಪತ್ರಕರ್ತರು)