ಮಹಾಭಾರತದ ಏಕಲವ್ಯನ ಪ್ರಕರಣದ ನೈಜ ಹಿನ್ನೆಲೆ ಮತ್ತು ಮುನ್ನೆಲೆ
ಧರ್ಮಸೂಕ್ಷ್ಮ
ಡಾ.ಸಿ.ಜಿ.ರಾಘವೇಂದ್ರ ವೈಲಾಯ
ಜಗತ್ತನ್ನೇ ನಾಶಮಾಡಬಲ್ಲ ಭೀಕರ ಶಸಗಳ ಪ್ರಯೋಗಕ್ಕೆ ಯೋಧನಿಗೆ ಅದರ ಅನುಸಂಧಾನಕ್ಕಿಂತಲೂ ಮುಖ್ಯವಾಗಿ ಅವುಗಳ ನಿಯಂತ್ರಣ ಮತ್ತು ಉಪಸಂಹಾರದ ಅರಿವು, ಯಾರ ಮೇಲೆ ಯಾವಾಗ ಅದನ್ನು ಪ್ರಯೋಗಿಸಬೇಕೆಂಬ ವಿವೇಚನೆ ಇರಬೇಕಾಗುತ್ತದೆ. ಇಲ್ಲವಾದರೆ ಅವು ‘ಮಂಗನ ಕೈಲಿ ಮಾಣಿಕ್ಯ’ದಂತೆ ದುರುಪಯೋಗವಾದೀತು. ಇಂಥ ಎಚ್ಚರವಿದ್ದ ದ್ರೋಣರಂಥ ಪ್ರಬುದ್ಧರು, ಇದೇ ಭಯದಿಂದ ತಮ್ಮ ಪುತ್ರ ಅಶ್ವತ್ಥಾಮನಿಗೂ ಧನುರ್ವಿದ್ಯೆಯ ಹಲವು ರಹಸ್ಯಗಳನ್ನು ಹೇಳಿಕೊಟ್ಟಿರಲಿಲ್ಲ.
ಸನಾತನ ಧರ್ಮದ ವಿರುದ್ಧ ನಿರಂತರ ಅಪಪ್ರಚಾರ ಕೈಗೊಳ್ಳುವ ಎಡಚ ಬುದ್ಧಿಜೀವಿಗಳಿಂದ ತಪ್ಪಾಗಿ ಬಿಂಬಿಸಲ್ಪಡುವ ಹಲವು ಪೌರಾಣಿಕ ಪ್ರಕರಣ ಗಳ ಪೈಕಿ, ದ್ರೋಣರಿಂದ ವಿದ್ಯಾದಾನ ನಿರಾಕರಿಸಲ್ಪಟ್ಟರೂ ಧನುರ್ವಿದ್ಯೆಯನ್ನು, ಅದರಲ್ಲೂ ಶಬ್ದವೇಽಯಂಥ ಅತಿಗುಹ್ಯ ವಿದ್ಯೆಯನ್ನು ಪರೋಕ್ಷ ವಾಗಿ ಸಂಪಾದಿಸಿದ ಏಕಲವ್ಯನ ಕಥೆ ಪ್ರಮುಖವಾಗಿದೆ.
ಇದನ್ನು ದಲಿತರ ಮತ್ತು ಶೋಷಿತರ ಮೇಲೆ ಸಮಾಜದ ತಥಾಕಥಿಕ ಮೇಲ್ವರ್ಗವೆನಿಸಿಕೊಂಡ ಬ್ರಾಹ್ಮಣರು ನಡೆಸಿದ ಅತ್ಯಾಚಾರವೆಂದೇ ಪೂರ್ವ ಗ್ರಹಪೀಡಿತ ಸ್ವಘೋಷಿತ ಬುದ್ಧಿಜೀವಿಗಳು ಬಿಂಬಿಸಿಕೊಂಡು ಬಂದಿದ್ದಾರೆ. ಈ ಅಪದ್ಧ ನಿರೂಪಣೆಯ ಅಸಲಿಯತ್ತನ್ನು ಬಯಲುಮಾಡುವುದೇ ಈಲೇಖನದ ಮೂಲಾಶಯ. ತನ್ನ ವೇದಾನುವಾದದ ಕಾಲದಲ್ಲಿ ಭಾರತಕ್ಕೆಂದೂ ಕಾಲಿಡದ ಮ್ಯಾಕ್ಸ್ ಮುಲ್ಲರ್, ವೇದಗಳ ಕುರಿತು ತನಗೆ ತೋಚಿದ ತಿರುಚಿದ ವ್ಯಾಖ್ಯಾನಗಳನ್ನು ಬರೆದ. ಈ ’ ’ ವಿಧದ ನಿರೂಪಣೆಯೂ ಅಂಥದೇ ಅಪಸವ್ಯಗಳಲ್ಲೊಂದು.
ಪೌರಾಣಿಕ ಪ್ರಕರಣಗಳನ್ನು ಆಧುನಿಕ ಕಾಲದ ನ್ಯಾಯಶಾಸನಕ್ಕೆ ಅನ್ವಯಿಸಿ ವಿಶ್ಲೇಷಿಸುವುದು, ಓರ್ವನು ವಿದ್ಯಾರ್ಥಿ ದೆಸೆಯಲ್ಲಿ ಮಾಡಿದ ತಪ್ಪಿಗೆ ವೃದ್ಧಾಪ್ಯದಲ್ಲಿ ಆತನಿಗೆ ಶಿಕ್ಷಿಸಿದಂತೆ. ಸತ್ಯಕ್ಕೆ ಹಲವು ಪದರಗಳಿರುತ್ತವೆ; ಅದು ’’   ’ ಅಲ್ಲ. ಬುಡಕಟ್ಟು ಜನಾಂಗದ ನಿಷಾದ ರಾಜ ಹಿರಣ್ಯಧನುವಿನ ಪುತ್ರ ಏಕಲವ್ಯ. ನಿಷಾದರೆಂದರೆ ಬ್ರಾಹ್ಮಣ ಮತ್ತು ಶೂದ್ರ ಮಾತಾಪಿತರ ವರ್ಣಸಂಕರದಿಂದ ಹುಟ್ಟಿದ ಮಿಶ್ರಸಂತಾನದ ಕುಲ. ಅಂದಿನ ಮುಖ್ಯವಾಹಿನಿ ಸಮಾಜದಿಂದ ಬಹಿಷ್ಕೃತರಾಗಿದ್ದ ಇವರಿಗೆ ಅಡವಿಯೇ ವಾಸಸ್ಥಾನವಾಗಿತ್ತು. ಆದರೂ ಹಿರಣ್ಯಧನುವು ಮಗಧರಾಜ ಜರಾಸಂಧನ ಪ್ರಮುಖ ಸೇನಾನಿಗಳಲ್ಲಿ ಒಬ್ಬನಾಗಿದ್ದ.
ಜರಾಸಂಧನು ಹಸ್ತಿನಾಪುರಕ್ಕೆ ಮಾತ್ರವಲ್ಲದೆ ಸಮಸ್ತ ಕ್ಷತ್ರಿಯರಿಗೂ ಕಂಟಕನಾಗಿದ್ದವನು. ಅನುದಿನವೂ ಮಾನವ ಹಕ್ಕುಗಳ ಕಗ್ಗೊಲೆ ಮಾಡುತ್ತಿದ್ದ ಈತ ಅಂದಿನ ಉಗ್ರರಲ್ಲಿ ಒಬ್ಬನಾಗಿದ್ದ. ರಾಜಸೂಯ ಯಾಗದ ಪೂರ್ವದಲ್ಲೇ ಈತ ಪಾಂಡವರಿಂದ ಕೊಲ್ಲಲ್ಪಟ್ಟ ಎಂಬಲ್ಲಿಗೆ ಕೃಷ್ಣನು ಆತನಿಂದ ಒದಗಬಹು ದಾಗಿದ್ದ ಅಪಾಯವನ್ನು ಸಕಾಲದಲ್ಲಿ ಗುರುತಿಸಿದ್ದ ಎಂದೇ ಅರ್ಥ. ಅಂಥ ದುರುಳನ ಪಾಳಯದಲ್ಲಿ ಮುಂದೆ ಸೇರ್ಪಡೆಯಾಗಲಿದ್ದ ಏಕಲವ್ಯನಂಥ ನುರಿತ ಬಿಲ್ಲಾಳುವನ್ನು ದ್ರೋಣರು ಆರಂಭದಲ್ಲೇ ಗುರುತಿಸಿ, ಗುರುದಕ್ಷಿಣೆಯಾಗಿ ಆತನ ಬಲಗೈ ಹೆಬ್ಬೆರಳನ್ನು ಬೇಡಿ, ಆತನಿಂದ ಬರಬಹುದಾದ ಆತಂಕವನ್ನು ನಿವಾರಿಸಿದರು
ಎಂದೇ ಅರ್ಥೈಸಿಕೊಳ್ಳತಕ್ಕದ್ದು. ಇದು ದ್ರೋಣರ ರಾಜನಿಷ್ಠೆಗೂ ದ್ಯೋತಕ. ಆತನ ಹಿಂಬಾಲಕರು ತರುವಾಯದ ಮಹಾಭಾರತ ಯುದ್ಧದಲ್ಲಿ ಕೌರವರ ಪರವಾಗಿ ಕಾದಿದ್ದರು, ಆದರೆ ಏಕಲವ್ಯ ಆಗ ಬದುಕಿರಲಿಲ್ಲ. ಇದಕ್ಕೂ ಸಾಕಷ್ಟು ಮುನ್ನ ಜರಾಸಂಧನು ಮಥುರೆಗೆ ಮುತ್ತಿಗೆ ಹಾಕಲು ಯೋಜಿಸಿದಾಗ ಆತನಿಗೆ ನೆರವಾಗಿದ್ದ ಏಕಲವ್ಯ, ರುಕ್ಮಿಣಿಯು ಕೃಷ್ಣನೊಂದಿಗೆ ಓಡಿಹೋಗುವಾಗ ಜರಾಸಂಧ ಮತ್ತು ಶಿಶುಪಾಲರಿಗೂ ಬೆಂಗಾವಲಾಗಿದ್ದ. ಜರಾಸಂಧನಮರಣಾನಂತರ ಯಾದವ-ದ್ವೇಷವು ಏಕಲವ್ಯನಲ್ಲಿ ಮಡುಗಟ್ಟಿದ್ದರಿಂದ, ಕುಂತಿಭೋಜ ಹಾಗೂ ದ್ವಾರಕೆಯ ಪ್ರತಿಯೊಬ್ಬ ಯಾದವನನ್ನು ನಾಶಮಾಡಿ ಆ ಸೇಡನ್ನು ತೀರಿಸಿಕೊಳ್ಳಲು ಏಕ ಲವ್ಯ ಯತ್ನಿಸಿದ್ದ. ಈ ದಾಳಿಯ ಸಮಯದಲ್ಲೇ ಆತ ಕೃಷ್ಣನಿಂದ ಕೊಲ್ಲಲ್ಪಟ್ಟ.
ಇದೇ ನಿಷಾದ ವಂಶದ ‘ಜರಾ’ ಎಂಬ ಬೇಡನ ವಿಷಬಾಣವೇ ಶ್ರೀಕೃಷ್ಣನ ದೇಹಾಂತ್ಯಕ್ಕೆ ಕಾರಣವಾಯಿತೆಂಬುದು ಗಮನಾರ್ಹ. ಕೃಷ್ಣನು ಒಪ್ಪಿದ್ದ ಶುಕ್ರನೀತಿಯಂತೆ, ಅಧರ್ಮಿಗಳ ಪಕ್ಷದಲ್ಲಿದ್ದ ಏಕಲವ್ಯನ ಕಡೆಯವರನ್ನು ನಾಶಮಾಡುವುದು ಧರ್ಮಸಮ್ಮತವೇ ಆಗಿತ್ತು. ಹಾಗಾಗಿ ಆತನ ಪರವಾಗಿ ಮೊಸಳೆ ಕಣ್ಣೀರು ಸುರಿಸುವುದೂ, ಐಸಿಸ್ ಉಗ್ರರ ಪರ ವಕಾಲತ್ತು ಮಾಡುವುದೂ ಎರಡೂ ಒಂದೇ.
ಪಾಶ್ಚಾತ್ಯರ ತಂತ್ರಜ್ಞಾನದ ಕಳವು ಮತ್ತು ವಿಶ್ವಾದ್ಯಂತದ ವಸ್ತುಗಳ ನಕಲಿನ ಮೂಲಕ ಚೀನಿಯರು ಇಂದು ಅಭಿವೃದ್ಧಿಯಾಗುತ್ತಿರುವಂತೆ, ಏಕಲ ವ್ಯನೂ ಅಂದು ದ್ರೋಣರು ತಮ್ಮ ರಾಜಕುಮಾರ ಶಿಷ್ಯರಿಗೆ ನೀಡುತ್ತಿದ್ದ ಧನುರ್ವಿದ್ಯೆಯ ತರಬೇತಿಯನ್ನು ಮರೆಯಲ್ಲಿ ನಿಂತು ಕದ್ದುಮುಚ್ಚಿ ನೋಡಿ ಕಲಿತದ್ದು ಮೋಸವೇ ಸರಿ. ಈ ತರಬೇತಿಯನ್ನು ಗೋಪ್ಯವಾಗಿ ನಡೆಸುವಲ್ಲಿನ ದ್ರೋಣರ ಕರ್ತವ್ಯಲೋಪವೂ ಇಲ್ಲಿ ಸುಸ್ಪಷ್ಟ. ಹೀಗೆ ಏಕಲವ್ಯನು ಕಲಿತ ರೀತಿಯು ‘ಆಚಾರಸಮ್ಮತವಲ್ಲದ್ದೂ, ಅನಧಿಕೃತವೂ’ ಆಗಿದ್ದು ಅದನ್ನು ಅಂದಿನ ಸಮಾಜ ಮತ್ತು ಧರ್ಮಶಾಸಗಳು ಒಪ್ಪುತ್ತಿರಲಿಲ್ಲ.
ಏಕೆಂದರೆ, ಸುಳ್ಳುಹೇಳಿ ಮತ್ತು ಕಳ್ಳತನದಿಂದ ವಿದ್ಯಾರ್ಜನೆ ಮಾಡುವುದು ಅಂದು ಲೋಕಧರ್ಮಕ್ಕೆ ವಿರುದ್ಧವಾಗಿತ್ತು. ಇದನ್ನು ನಾವು ಕರ್ಣ ಮತ್ತು ಪರಶುರಾಮರ ಪ್ರಕರಣದಲ್ಲೂ ಕಂಡಿದ್ದೇವೆ (ಪರಶುರಾಮರು ದ್ರೋಣರ ವಿದ್ಯಾಗುರುಗಳು ಎಂಬುದಿಲ್ಲಿ ಗಮನಾರ್ಹ!). ಈ ಅಪರಾಧಕ್ಕೆ ಕರ್ಣನು ಪರಶುರಾಮರ ಶಾಪಕ್ಕೆ ತುತ್ತಾಗಬೇಕಾಗುತ್ತದೆ. ಜಗತ್ತನ್ನೇ ನಾಶಮಾಡಬಲ್ಲ ಭೀಕರ ಶಸಗಳ ಪ್ರಯೋಗಕ್ಕೆ ಯೋಧನಿಗೆ ಅದರ ಅನುಸಂಧಾನಕ್ಕಿಂತಲೂ ಮುಖ್ಯವಾಗಿ ಅವುಗಳ ನಿಯಂತ್ರಣ ಮತ್ತು ಉಪಸಂಹಾರದ ಅರಿವು, ಯಾರ ಮೇಲೆ ಯಾವಾಗ ಅದನ್ನು ಪ್ರಯೋಗಿಸಬೇಕೆಂಬ ವಿವೇಚನೆಇರಬೇಕಾಗು ತ್ತದೆ.
ಇಲ್ಲವಾದರೆ ಅವು ‘ಮಂಗನ ಕೈಲಿ ಮಾಣಿಕ್ಯ’ದಂತೆ ದುರುಪಯೋಗವಾದೀತು. ಇಂಥ ಎಚ್ಚರವಿದ್ದ ದ್ರೋಣರಂಥ ಪ್ರಬುದ್ಧರು, ಇದೇ ಭಯದಿಂದ ತಮ್ಮ ಪುತ್ರ ಅಶ್ವತ್ಥಾಮನಿಗೂ ಧನುರ್ವಿದ್ಯೆಯ ಹಲವು ರಹಸ್ಯಗಳನ್ನು ಹೇಳಿಕೊಟ್ಟಿರಲಿಲ್ಲ (ಉಪಸಂಹಾರದ ಅರಿವಿರದಿದ್ದ ಅಶ್ವತ್ಥಾಮಬ್ರಹ್ಮಾಸವನ್ನುಪ್ರಯೋಗಿಸಿದ್ದಕ್ಕೆ ಆದ ದುಷ್ಪರಿಣಾಮದ ಪ್ರಸಂಗ ಗೊತ್ತಿರು ವಂಥದ್ದೇ!). ತಮ್ಮ ಶಿಷ್ಯರ ಶಕ್ತಿ, ಧಾರಣಾ ಸಾಮರ್ಥ್ಯ, ಯೋಗ್ಯತೆ ಮತ್ತು ಆಸಕ್ತಿಗಳಿಗೆ ತಕ್ಕಂತೆ ಅವರಿಗೆ ವಿದ್ಯೆಯನ್ನು ಧಾರೆಯೆರೆಯುತ್ತಿದ್ದ ದ್ರೋಣರು ಯುಧಿಷ್ಠಿರ ಮತ್ತು ಭೀಮನಿಗೆ ಕಲಿಸಿದ್ದೇ ಬೇರೆ, ಅರ್ಜುನನಿಗೆ ಹೇಳಿಕೊಟ್ಟಿದ್ದೇ ಬೇರೆ; ಹಾಗಾಗಿ ಶಿಷ್ಯರು ತಂತಮ್ಮ ಐಚ್ಛಿಕಶಸ-ಶಾಸವಿಭಾಗಗಳಲ್ಲಿ ಪಾರಂಗತ ರಾಗುವಂತೆ ನೋಡಿಕೊಂಡಿದ್ದರು.
ಏಕಲವ್ಯನೂ ತಾಳ್ಮೆಯಿಂದಮರಳಿ ಯತ್ನಿಸಿದ್ದರೆ ಗುರುಕಾರುಣ್ಯಕ್ಕೆ ಪಾತ್ರನಾಗುವ ಸಾಧ್ಯತೆಯಿತ್ತು; ಆದರೆ ಆತ ತುಳಿದ ಹಾದಿ ಕಳ್ಳತನದ್ದು.  ಗುರು ವಂಚನೆಯು ಮಹಾಪಾಪಗಳಲ್ಲೊಂದು ಎಂದು ನಂಬಿದ್ದ ಕಾಲಘಟ್ಟವದು. ಹೀಗಿರುವಾಗ ಅದನ್ನು ಯಾರು ತಾನೇ ಕ್ಷಮಿಸಿಯಾರು? ಧನುರ್ವಿದ್ಯೆಯ ಉಪದೇಶಕ್ಕೆ ಪೂರ್ವದಲ್ಲಿ ಸೂಕ್ತ ಸಂಸ್ಕಾರ, ಶಿಸ್ತು, ಇಂದ್ರಿಯ ನಿಗ್ರಹ, ಶಾಸಜ್ಞಾನ, ಧರ್ಮಸೂಕ್ಷ್ಮಗಳ ತಿಳಿವಳಿಕೆ, ಕಠಿಣವಾದ ದೇಹದಂಡನೆ, ಅವಿರತ ತಾಲೀಮು, ಗುರುವಿನ ನಿರಂತರ ಮೇಲುಸ್ತುವಾರಿ ಹಾಗೂ ಯೋಗಾಭ್ಯಾಸಗಳ ಅಗತ್ಯವಿದೆ. ಅಶ್ವತ್ಥಾಮನಿಗಾಗಲೀ ಏಕಲವ್ಯನಿಗಾಗಲೀ ಈ ಪೈಕಿ ಯಾವ ಯೋಗ್ಯತೆಯೂ ಇರಲಿಲ್ಲ.
ಏಕಲವ್ಯನು ದ್ರೋಣರ ಪ್ರತಿಮೆಯ ಮುಂದೆ ಮಾಡುತ್ತಿದ್ದುದು ಕದ್ದು ಸಂಪಾದಿಸಿದ ವಿದ್ಯೆಯ ತಾಲೀಮನ್ನಷ್ಟೇ, ಪ್ರತಿಮೆಯ ಮುಂದೆ ಕಲಿತಿದ್ದುಎಂಬುದು ಉಪಮೆಯಷ್ಟೇ. ಹೀಗಾಗಿ, ಅಪಾತ್ರ ವಿದ್ಯಾದಾನವು ಎಷ್ಟು ಅಪಾಯಕಾರಿ ಎಂಬುದನ್ನು ಲೋಕಕ್ಕೆ ತಿಳಿಸುವ ಹೊಣೆಗಾರಿಕೆಯೂ ದ್ರೋಣ ರಿಗಿತ್ತು ಎಂಬುದನ್ನು ಮರೆಯಬಾರದು. ಈ ಪ್ರಕರಣವನ್ನು ಅಂದಿನ ಕಾಲಘಟ್ಟದ ಸಾಮಾಜಿಕ-ರಾಜಕೀಯ ಸ್ಥಿತಿಗತಿಗೆ ಅನುಗುಣವಾಗಿ ನೋಡಿ ನ್ಯಾಯನಿರ್ಣಯಿಬೇಕೇ ವಿನಾ, ಇಂದಿನ ಪರಿಸ್ಥಿತಿಗೆ ಅನ್ವಯಿಸಿ ನಮ್ಮ ನಮ್ಮ ಮೂಗಿನ ನೇರಕ್ಕೆ ವಿಶ್ಲೇಷಿಸಬಾರದು. ಹಾಗೆ ಮಾಡಿದರೆ, ನಮ್ಮ ಬುದ್ಧಿ ಜೀವಿಗಳು ಕಲಿಯುಗಕ್ಕೆ ಅನ್ವಯವಾಗದ ಮನುಸ್ಮೃತಿಯ ಯಾವುದೋ ಒಂದು ಶ್ಲೋಕವನ್ನಷ್ಟೇ ಆಧಾರವಾಗಿಟ್ಟುಕೊಂಡು ಸಕಲ ಸನಾತನ ಸಂಸ್ಕೃತಿಯ ಮೇಲೆ ದಾಳಿಮಾಡಿದಂತೆ ಇಲ್ಲೂ ಆದೀತು!
ಜರಾಸಂಧನ ರೀತಿಯಲ್ಲೇ ಏಕಲವ್ಯನೂ ಭವಿಷ್ಯದಲ್ಲಿ ರಾಜದ್ರೋಹಿ ಮತ್ತು ದೇಶವಿರೋಽಯಾಗುವ ಲಕ್ಷಣಗಳಿದ್ದವು. ರಾಜ್ಯದ ಹಿತಾಸಕ್ತಿಯ ರಕ್ಷಣೆಗೆ ಚತುರೋಪಾಯಗಳ ಬಳಕೆಯನ್ನು ಅಂದಿನ ಸಮಾಜವೂ ಒಪ್ಪಿತ್ತು. ತಮ್ಮ ಬದ್ಧವೈರಿಯ ಮಗ ದೃಷ್ಟದ್ಯುಮ್ನತಮ್ಮನ್ನು ಕೊಲ್ಲಲೆಂದೇ ಜನಿಸಿದ್ದಾ ನೆಂದು ತಿಳಿದೂ ಅವನಿಗೆ ನಿಸ್ವಾರ್ಥವಾಗಿ ವಿದ್ಯಾದಾನ ಮಾಡಿದ್ದು ದ್ರೋಣರ ದೊಡ್ಡತನ. ‘ಕ್ಷತ್ರಿಯರ ಹೊರತು ಅನ್ಯರಿಗೆ ವಿದ್ಯಾದಾನ ಮಾಡುವುದಿಲ್ಲ’ ಎಂಬುದಾಗಿ ಅನ್ನದಾತ ಹಸ್ತಿನೆಯ ಪ್ರಭುತ್ವಕ್ಕೆ ತಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಅನಿವಾರ್ಯವೂ ಅಂದು ದ್ರೋಣರಿಗಿತ್ತು.
ಇಂದು ಸಂಸ್ಥೆ/ಕಂಪನಿ ಯೊಂದಿಗೆ ಕಾರ್ಯನಿಮಿತ್ತವಾಗಿಯೋ ಜಾಹೀರಾತಿಗಾಗಿಯೋ ಕಾನೂನಾತ್ಮಕ ಒಪ್ಪಂದಕ್ಕೆ ಸಹಿಹಾಕಿದವರು ಅದಕ್ಕನುಗುಣ ವಾಗಿ ನಡೆದುಕೊಳ್ಳಬೇಕಾಗುವುದಿಲ್ಲವೇ? ಇದೂ ಹಾಗೆಯೇ. ಇನ್ನು ದ್ರೋಣರ ಹಿನ್ನೆಲೆಯ ಕುರಿತು ಒಂದೆರಡು ಮಾತು. ಪರಶುರಾಮರು ಭೂದಾನ ಮಾಡುತ್ತಿದ್ದ ಕಾಲವದು. ಕಡುಬಡತನದಲ್ಲಿದ್ದ ದ್ರೋಣರು ದಾನಾರ್ಥಿಯಾಗಿ ಹೋಗುತ್ತಾರೆ (ಬ್ರಾಹ್ಮಣರು ನಿಜಾರ್ಥದಲ್ಲಿ ಅಂದೂ ಇಂದೂ ಆರ್ಥಿಕ ವಾಗಿ ಹಿಂದುಳಿದವರೇ!). ಆದರೆ ಕ್ಷತ್ರಿಯರ ಹುಟ್ಟಡಗಿಸಿ ತಾವು ಗೆದ್ದಿದ್ದ ಸಮಸ್ತ ಭೂಮಿಯನ್ನೂ ಯೋಗ್ಯದ್ವಿಜರಿಗೆ ದಾನಗೈದು ಪರಶುರಾಮರು ಆಗಷ್ಟೇ ಬರಿಗೈಲಿ ನಿಂತಿರುತ್ತಾರೆ.
ಹೀಗಾಗಿ ತಮ್ಮಲ್ಲಿದ್ದಶಸ-ಶಾಸವಿದ್ಯೆಯ ಸಂಪತ್ತನ್ನು ದ್ರೋಣರಿಗೆ ಅವರು ನಿರ್ವಂಚನೆಯಿಂದ ಧಾರೆಯೆರೆಯುತ್ತಾರೆ. ಮನೆಯಲ್ಲಿನ ಬಡತನ,ಹಸುಗೂಸು ಅಶ್ವತ್ಥಾಮನ ಹಸಿದ ಕಂಗಳನ್ನು ನೋಡಲಾಗದ ದ್ರೋಣರು ಉದ್ಯೋಗಾರ್ಥಿಯಾಗಿ ಹಸ್ತಿನೆಗೆ ಬಂದು, ತಮ್ಮ ಸಾಮರ್ಥ್ಯದಿಂದ ಭೀಷ್ಮರ ಮನಗೆದ್ದು ರಾಜಗುರುವಿನ ಸ್ಥಾನಕ್ಕೇ ರುತ್ತಾರೆ. ಇಷ್ಟಾಗಿಯೂ ತಮ್ಮ ಪುತ್ರನ ದುರಾಸೆ-ದುಷ್ಟತನದ ಅರಿವಿದ್ದ ದ್ರೋಣರು, ಪ್ರಿಯಶಿಷ್ಯ ಅರ್ಜುನನಿಗೆ ಹೇಳಿಕೊಟ್ಟ ಧನುರ್ವಿದ್ಯೆಯ ಅನೇಕ ರಹಸ್ಯಗಳನ್ನು ಅಶ್ವತ್ಥಾಮನಿಗೆ ಬೋಧಿಸಲಿಲ್ಲ.
ಇಂಥ ದೂರಗಾಮಿ ಚಿಂತಕ, ಮುತ್ಸದ್ದಿ, ನಿಸ್ವಾರ್ಥಜೀವಿ ದ್ರೋಣರು ಏಕಲವ್ಯನಿಗೆ ಮೋಸಮಾಡಿದರು ಎಂದು ನಂಬಲಾಗದು. ಸ್ವತಃ ಕಡುಬಡತನ ಕಂಡ ದ್ರೋಣರು ಮತ್ತೊಬ್ಬ ಹಿಂದುಳಿದವನಿಗೆ ಅನ್ಯಾಯ ಮಾಡುವ ಸಾಧ್ಯತೆಯೂ ಕಮ್ಮಿ. ಅದರ ಹಿಂದೆ ಏನಾದರೂ ಪ್ರಬಲ ಔಚಿತ್ಯ ಇರಲೇಬೇಕು. ಸ್ವತಃ ಏಕಲವ್ಯನೇ ಯಾವುದೇ ಅಂಜಿಕೆ, ಹಿಂಜರಿಕೆ, ದುಃಖ, ವಿರೋಧ ವಿಲ್ಲದೆ ತಕ್ಷಣ ಗುರುದಕ್ಷಿಣೆ ನೀಡಿದನೆಂದರೆ, ಆತನಿಗೂ ತಾನು ಮಾಡಿದ ವಂಚನೆಯ ಅರಿವಿತ್ತು ಮತ್ತು ತನ್ಮೂಲಕ ಪಶ್ಚಾತ್ತಾಪದ ಪ್ರಾಯಶ್ಚಿತ್ತಕ್ಕೆ ಆತ ಸಿದ್ಧನಿದ್ದ ಎಂದೇ ಅರ್ಥ.
ಇಲ್ಲಿ ಎಲ್ಲಿಯೂ ಅಸಮ್ಮತಿ, ಬಲಪ್ರಯೋಗಗಳ ಪ್ರಸ್ತಾಪವೇ ಇಲ್ಲ ಎಂದರೆ ಅನ್ಯಾಯದ ಮಾತೆಲ್ಲಿ? ದ್ರೋಣರ ಬೇಡಿಕೆ ಆತನಿಗೂ ಸಮ್ಮತವೇ ಆಗಿತ್ತು; ಹೀಗಾಗಿ ಮುಂದೆಂದೂ ಈ ಕುರಿತು ಆತನಿಂದ ಅಸಮಾಧಾನ ಹೊಮ್ಮುವುದಿಲ್ಲ. ಏಕಲವ್ಯನ ಪ್ರಕರಣವನ್ನು ಅಂದಿನ ರಾಜಕೀಯದ ದೃಷ್ಟಿಕೋನದಲ್ಲಿ ನೋಡಿದರೂ ಅರ್ಥಪೂರ್ಣವೆನಿಸುತ್ತದೆ. ದ್ರೋಣರು ಓರ್ವ ನೀತಿವಾದಿಯಾಗಿದ್ದರೇ ವಿನಾ ಜಾತಿವಾದಿಯಲ್ಲ. ತಮ್ಮಿಂದ ಅನೈತಿಕವಾಗಿ ಧನುರ್ವಿದ್ಯೆ ಸಂಪಾದಿಸಿದ ಏಕಲವ್ಯನ ಬಲಗೈ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಪಡೆದು, ಹಸ್ತಿನಾವತಿಗಿದ್ದ ಸಂಭಾವ್ಯ ಬೆದರಿಕೆಯ ಮೂಲ ವೊಂದನ್ನು ನಿವಾರಿಸಿದ ದ್ರೋಣರ ಸಮಯಪ್ರಜ್ಞೆ, ದೇಶಪ್ರೇಮವನ್ನು ಮೆಚ್ಚಬೇಕು.
ಜತೆಗೆ ಅಂಥ ಅಪಾಯಕಾರಿ ಮತ್ತು ಗೌಪ್ಯವಿದ್ಯೆಯನ್ನು ಪಡೆಯಲು ಆತ ಅನರ್ಹನಾಗಿದ್ದನೆಂಬುದನ್ನೂ ಗಮನಿಸಬೇಕು. ಅಪಾತ್ರನ ಕೈಯಲ್ಲಿನ ವಿದ್ಯೆಯು ‘ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ’ ದಂಥ ಅಪಸವ್ಯಗಳಿಗೆ ನಾಂದಿಯಾಗಬಹುದೆಂಬ ದೂರದೃಷ್ಟಿ ದ್ರೋಣರಿಗಿತ್ತು. ಒಂದು ರಾಷ್ಟ್ರದ ಮತ್ತು ಸಮಷ್ಟಿಯ ಹಿತಕಾಯಲು ವ್ಯಕ್ತಿಯೋರ್ವನ ಹಿತಾಸಕ್ತಿಯ ಬಲಿಗೆ ಅಂದಿನ ಧರ್ಮಶಾಸ್ತ್ರಗಳೂ ಸಮ್ಮತಿಸುತ್ತಿದ್ದವು (ತ್ಯಜೇದೇಕಂ ಕುಲಸ್ಯಾರ್ಥೇಗ್ರಾಮಸ್ಯಾರ್ಥೇ ಕುಲಂ ತ್ಯಜೇತ್| ಗ್ರಾಮಂ ಜನಪದಸ್ಯಾರ್ಥೇ ಆತ್ಮಾರ್ಥೇ ಪೃಥಿವೀಂ ತ್ಯಜೇತ್- ವಿದುರೋಪಾಖ್ಯಾನ). ಶ್ರೀರಾಮ ಕೂಡ ಶಂಭೂಕ ವಧೆಯ ಸಂದರ್ಭದಲ್ಲಿ ಇಂಥದೇ ನ್ಯಾಯ ನಿರ್ಣಯ ಮಾಡಿದ್ದ; ಇದನ್ನೂ ನಮ್ಮ ತಥಾಕಥಿತ ಬುದ್ಧಿಜೀವಿಗಳು ಆಗಾಗ ಆಕ್ಷೇಪಿಸುತ್ತಾರೆ. ಇಲ್ಲಿ ಕ್ರಿಯೆಯ ಮೂಲೋ ದ್ದೇಶವನ್ನು ಗಮನಿಸಬೇಕೇ ವಿನಾ ಪ್ರತಿಕ್ರಿಯೆಯನ್ನಲ್ಲ.
ಉಗ್ರವಾದಿಗಳ ಮಾನವ ಹಕ್ಕುಗಳ ಕುರಿತು ಗ್ಯಾಲನ್‌ಗಟ್ಟಲೆ ಕಣ್ಣೀರುಗರೆಯುವ ನಮ್ಮ ನಗರ ನಕ್ಸಲರಿಗೆ, ದೇಶದ ಅಸಂಖ್ಯಾತ ಅಮಾಯಕ ನಾಗರಿಕರ ಮತ್ತು ಅವರ ಹಕ್ಕುಗಳ ಜವಾಬ್ದಾರಿ ಹೊತ್ತ ಸೈನಿಕರ ಮಾನವ ಹಕ್ಕುಗಳು ಗೌಣವಾಗಿ ಕಾಣುತ್ತವೆ. ಇಂಥ ಅಪಲಾಪಗಳನ್ನು ಹಾಗೂ ತಮ್ಮ ಹಿಂದೂ-ವಿರೋಧಿ, ಬ್ರಾಹ್ಮಣ-ವಿರೋಧಿ ಅಜೆಂಡಾಗಳನ್ನು ಸಮರ್ಥಿಸಿಕೊಳ್ಳುವಾಗ ಅವರು ಈ ಏಕಲವ್ಯನ ಪ್ರಕರಣವನ್ನು ಜನರ ಮುಂದೆ ತಪ್ಪು ತಪ್ಪಾಗಿ ಪ್ರಸ್ತುತಪಡಿಸುತ್ತಾರೆ. ಈ ದೇಶದ ಬ್ರಾಹ್ಮಣರನ್ನು ಸಬಲರೆಂದೂ ದಲಿತ-ವಿರೋಧಿಗಳೆಂದೂ ಬಿಂಬಿಸುತ್ತಾ, ಇದನ್ನು ವಿರೋಧಿಸುವ ನೆಪದಲ್ಲಿ ತಮ್ಮ ಪೂರ್ವಯೋಜಿತ ದೇಶವಿಭಜಕ ಕಾರ್ಯಸೂಚಿಗಳನ್ನು ಮುನ್ನೆಲೆಗೆ ತಂದು ಸಮಾಜದ ಮತ್ತು ಯುವಪೀಳಿಗೆಯ ದಾರಿತಪ್ಪಿಸುವ ಕೆಲಸ ಮಾಡುತ್ತಾರೆ.
ಕಂಸ, ರಾವಣ, ಮಹಿಷ, ಟಿಪ್ಪು, ಔರಂಗಜೇಬ್, ಒಸಾಮ ಬಿನ್ ಲಾಡೆನ್, ಅಫ್ಜಲ್ ಗುರು, ಸೇಂಟ್ ಕ್ಸೇವಿಯರ್, ಜನರಲ್ ಡಯರ್ ಮುಂತಾದ ಸಮಾಜ ಘಾತುಕರನ್ನೇ ಮಹಾಸಾಧಕರು ಮತ್ತು ದಮನಿತರ ಹಕ್ಕುಗಳಿಗಾಗಿ ಹೋರಾಡಿದ ವೀರರೆಂದು ಬಿಂಬಿಸಿ, ಆ ನೆಪದಲ್ಲಿ ಕೃಷ್ಣ, ರಾಮ, ಚಾಮುಂಡಿ, ಮದಕರಿ ನಾಯಕ, ಶಿವಾಜಿ, ಸಾವರ್ಕರ್, ಜನರಲ್ ಕಾರ್ಯಪ್ಪ ಮುಂತಾದ ಆದರ್ಶ ವ್ಯಕ್ತಿಗಳ ಹೆಸರಿಗೆ ಕಳಂಕ ತರುವ ನಿರಂತರ ಅಪಪ್ರಚಾರವನ್ನು ಕೆಲ ಸಮಾಜಘಾತುಕ ಶಕ್ತಿಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ನೆಪದಲ್ಲಿ ಮಾಡುತ್ತಿದ್ದಾರೆ.
ಈ ಹುನ್ನಾರವನ್ನು ದೇಶಪ್ರೇಮಿಗಳು ಮನಗಂಡು ಜನರಿಗೆ ಸತ್ಯದರ್ಶನ ಮಾಡಿಸಬೇಕಿದೆ. ಇಲ್ಲವಾದಲ್ಲಿ, ಹತ್ತು ಬಾರಿ ಹೇಳಿದ ಸುಳ್ಳೂ ಜನರಿಗೆ ಸತ್ಯವೆ ನಿಸುತ್ತದೆ. ಹಾಗಾಗಿ ಏಕಲವ್ಯನ ಪ್ರಕರಣದ ಸತ್ಯವನ್ನು ತಿಳಿಸುವುದು ನಮ್ಮ ಆದ್ಯ ಕರ್ತವ್ಯ. ‘ಪಾತ್ರೆಯನ್ನು ಮುಚ್ಚಳದಿಂದ ಮುಚ್ಚುವಂತೆ, ನಿನ್ನಚಿನ್ಮಯವಾದ ಆವರಣವು ಸತ್ಯದ ಬಾಗಿಲನ್ನು ಮುಚ್ಚಿದೆ; ಓ ಕರುಣಾಳು ಸೂರ್ಯನೇ, ಆ ಬಾಗಿಲನ್ನು ಸರಿಸಿ ನಿನ್ನ ದಿವ್ಯಜ್ಞಾನದ ದರ್ಶನವನ್ನು ತೋರು’ ಎಂಬರ್ಥದ ವೈದಿಕ ಋಷಿಗಳ ಆಶಯವೂ ಅದೇ ಆಗಿದೆ. ಈಗ ಹೇಳಿ: ದ್ರೋಣರು ಮಾಡಿದ್ದು ಸರಿಯೋ ತಪ್ಪೋ…?
(ಲೇಖಕರು ನವಜಾತ ಶಿಶು ಹಾಗೂ ಮಕ್ಕಳ ತಜ್ಞರು)