ವಾದ-ವಿವಾದಗಳ ನಡುವೆ…
ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳ ನಡುವಿನ ಮುಸುಕಿನ ಗುದ್ದಾಟದ ಕಥೆ ಒಂದು ಕಡೆಯಾದರೆ, ಮತ್ತೊಂದೆಡೆ ವಿಪಕ್ಷ ಬಿಜೆಪಿಯಲ್ಲಿ ಗುದ್ದುಗಳ ಮಿಸುಕಾಟ!
ಬಿಜೆಪಿ ವರಿಷ್ಠರು ಅಳೆದೂ ಸುರಿದೂ ವಿಪಕ್ಷ ನಾಯಕರನ್ನೂ, ಪಕ್ಷಾಧ್ಯಕ್ಷರನ್ನೂ ನೇಮಿಸಿದ್ದಾರೆ. ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ, ಆಡಳಿತಯಂತ್ರಕ್ಕೆ ಚುರುಕು ಮುಟ್ಟಿಸುವ ಹಲವು ಅವಕಾಶಗಳು ಬಿಜೆಪಿ-ಜೆಡಿಎಸ್ ಪಾಳಯಕ್ಕಿದ್ದವು. ಆದರೆ ಬಿಜೆಪಿ ಶಾಸಕಾಂಗ ಪಕ್ಷದ ನೂತನ ನಾಯಕರು ಅತ್ತ ಇಣುಕಿ ನೋಡಿದ್ದು ಬಿಟ್ಟರೆ, ತಿಣುಕಿ ಗುದ್ದಾಡಿದ್ದು ಕಾಣಿಸಲೇ ಇಲ್ಲ! ಆ ಮಟ್ಟಿಗೆ ಕರ್ನಾಟಕ ಸರಕಾರವು ವಿಪಕ್ಷ ನಾಯಕರಿಲ್ಲದೆ ಒಂದು ಅಽವೇಶನ ಮತ್ತು ಅವರು ಇದ್ದೂ ಇಲ್ಲದಂತಿದ್ದ ಇನ್ನೊಂದು ಅಽವೇಶನವನ್ನು ಮುಗಿಸಿಕೊಂಡಿದೆ. ಕುಟುಂಬ ರಾಜಕಾರಣದ ವಿರುದ್ಧ ತೊಡೆತಟ್ಟಿ ನಿಂತಿದ್ದ ಬಿಜೆಪಿ ವರಿಷ್ಠರು, ಕರ್ನಾಟಕದ ಮಟ್ಟಿಗೆ ಕುಟುಂಬಗಳನ್ನೇ ನೆಚ್ಚಿ ಎದ್ದು ನಿಲ್ಲುವ ಪ್ರಯತ್ನದಲ್ಲಿರುವುದೂ ವಿಪರ್ಯಾಸ!
ಕೆಲ ಬಿಜೆಪಿಗರ ಸಮರ್ಥನೆಯಂತೆ, ಪೂರ್ತಿ ಪಕ್ಷ ಒಂದೇ ಕುಟುಂಬದವರ ಹಿಡಿತದಲ್ಲಿರಬಾರದು ಅಷ್ಟೇ! ಹಾಗಾಗಿ, ಒಂದೊಂದು ಕುಟುಂಬಗಳ ಹಿಡಿತ ದಲ್ಲಿದ್ದ ಎರಡು ಪಕ್ಷಗಳನ್ನು ಜತೆಗೂಡಿಸಿ, ಕುಟುಂಬಗಳ ಸಮ್ಮಿಲನದ ತಾಳ-ಮೇಳಗಳ ಒಡ್ಡೋಲಗ ಇಲ್ಲಿ ನಡೆದಿದೆ! ಇದೊಂದು ವಿಭಿನ್ನ ಪ್ರಯೋಗ ಎನ್ನೋಣವೇ? ಶಿಸ್ತು, ಅಶಿಸ್ತು ಎಲ್ಲುಂಟು? ಎಲ್ಲಿಲ್ಲ? ಎನ್ನುವುದನ್ನು ಹುಡುಕುವುದರಲ್ಲೇ ಬಹುತೇಕರು ಸುಸ್ತಾಗಿರುವುದು ಕರ್ನಾಟಕ ರಾಜಕೀಯದ ಸದ್ಯದ ವಾಸ್ತವ.
ಜಾತಿಗಣತಿಯ ಕೂಗು, ‘ಗ್ಯಾರಂಟಿ’ ಯೋಜನೆಗಳ ಜಾರಿಗೆ ಆರ್ಥಿಕ ಸಂಪನ್ಮೂಲಗಳ ಕೊರತೆಯ ಜತೆಜತೆಗೆ ಅಪ್ಪಳಿಸಿರುವ ಬರಗಾಲದ ನಡುವೆ ಜನಸಾಮಾನ್ಯರು ಸೊರಗಿದ್ದಾರೆ. ಆದರೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಮೊಸಳೆ ಕಣ್ಣೀರು ಸುರಿಸುತ್ತಾ ಗಮನ ನೆಟ್ಟಿರುವುದು ಲೋಕಸಭಾ ಚುನಾವಣೆಯತ್ತ. ಜನಜೀವನ ಹೇಗಿದ್ದರೇನಂತೆ, ಅವರಿಗೆ ಅವರದೇ ಚಿಂತೆ! ಇವೆಲ್ಲ ಒಂದೆಡೆ ಯಾದರೆ, ಇತ್ತೀಚೆಗೆ ಕರ್ನಾಟಕದ ರಾಜಕೀಯ  ಪಂಚದಲ್ಲಿಕಳವಳಕಾರಿಯಾಗಿ ಕಾಣಿಸುತ್ತಿರುವುದು ಜನನಾಯಕರ ಬೇಜವಾಬ್ದಾರಿಯುತ ಮಾತುಗಳು.
ಎಲ್ಲ ಪಕ್ಷಗಳ ನಾಯಕರು ತಮ್ಮ ಅಸ್ತಿತ್ವ ಪ್ರದರ್ಶಿಸುವ ಇಲ್ಲವೇ ತಂತಮ್ಮ ವರಿಷ್ಠರನ್ನು ಮೆಚ್ಚಿಸುವ ರೋಗಕ್ಕೆ ತುತ್ತಾಗಿ, ತೂಕವಿಲ್ಲದ ಮಾತುಗಳಿಂದ ಮನೆಮಾತಾಗಲು ಸ್ಪರ್ಧೆಗೆ ನಿಲ್ಲುತ್ತಿರುವುದು ವಿಷಾದನೀಯ. ಬಹುತೇಕ ಎಲ್ಲವೂ ವಿವಾದಾತ್ಮಕ ಮಾತುಗಳೇ. ಯಾವ ಜಾತಿ, ಕೋಮಿನವರಿಗೆ ಯಾರು ಎಷ್ಟು ಮರ್ಯಾದೆ ಕೊಟ್ಟಿದ್ದಾರೆಂಬ ಅಭಿನಯಪೂರ್ವಕ ವಿವರಣೆಗಳ ಪ್ರಹಸನ ಕೆಲವರದ್ದು. ಹಿಂದಿನ ಅವಽಯ ಸರಕಾರ ಮಾಡಿದ ಕಾರ್ಯಕ್ರಮ ಗಳನ್ನು ಮುಂದುವರಿಸುವುದು ಬಿಡಿ, ಅವರು ಹಾಕಿದ್ದ-ಟೋಗಳನ್ನುಕಿತ್ತೆಸೆದು ಕಿಸಿಯುವುದೇ ಸಾಧನೆ ಎಂಬುದು ಕೆಲವರ ಅಂಬೋಣ.
ಮೋದಿ ಮತ್ತು ಬಿಜೆಪಿಗರನ್ನು ಆಡಳಿತ ಪಕ್ಷದವರೂ, ನೆಹರು-ಇಂದಿರಾ-ಸೋನಿಯಾ-ರಾಹುಲ್ ರನ್ನು ಕಾಂಗ್ರೆಸ್ ವಿರೋಽಗಳೂ ಬೈಯುವುದುವಾಡಿಕೆಯಾಗಿಬಿಟ್ಟಿದೆ. ಹೀಗೆ ಬೈಯುವುದೇ ತಮ್ಮ ಸಾಧನೆ ಎಂದು ಕೆಲವರು ಭಾವಿಸಿದಂತಿದೆ. ಹೀಗೆ ಬೈಯುವುದನ್ನೇ ಬಂಡವಾಳ ಮಾಡಿಕೊಂಡ ಬಹುತೇಕರ ನೈಜಸಾಧನೆ ನಗಣ್ಯ. ಇವೆಲ್ಲದರ ನಡುವೆ ಸದನದಲ್ಲಿ ಶಿಸ್ತಿನ ಪಾಠ ಮಾಡುತ್ತಾ, ಪ್ರದರ್ಶಕರ ಪಟಾಲಂ ಅನ್ನು ಸರಿದೂಗಿಸಿಕೊಂಡು ಹೋಗಲು ವಿಧಾನಸಭಾ ಸ್ಪೀಕರ್ ಪಡುತ್ತಿರುವ ಪ್ರಾಮಾಣಿಕ ಶ್ರಮ ಅಭಿನಂದನಾರ್ಹ. ಕರ್ನಾಟಕದ ಉತ್ಸಾಹಿ ಮಂತ್ರಿಯೊಬ್ಬರು ಇತ್ತೀಚೆಗೆ, ‘ವೀರಸಾವರ್ಕರ್ ಏನು ಸಾಧನೆ ಮಾಡಿದ್ದಾರೆ? ಅವರು, ಅವರ ಮನೆಯ ಕಡೆಯವರು ಸರಕಾರಕ್ಕೆ ಕ್ಷಮಾಪಣೆ ಬರೆದುಕೊಟ್ಟಿರಲಿಲ್ಲವೇ? ಸರಕಾರದಿಂದ ಪಿಂಚಣಿ ಪಡೆದಿರಲಿಲ್ಲವೇ? ಅವರೇಕೆ ವೀರ?’ ಎಂದು ಪುಂಖಾನುಪುಂಖವಾಗಿ ಅಬ್ಬರಿಸಿದ್ದರು.
ಪಿತ್ರಾರ್ಜಿತ ಅಽ ಕಾರದ -ಲಾನುಭವಿಗಳಾದ ಶ್ರೀಯುತರು ತಾವು ಹೊತ್ತಿರುವುದು ಯಾವ ಖಾತೆಯ ಹೊಣೆಯನ್ನು ಎಂಬುದನ್ನೇ ಮರೆತಂತಿದೆ! ಎಲ್ಲವಿಷಯ/ಸನ್ನಿವೇಶಕ್ಕೂ ಮೂಗುತೂರಿಸಿ ಮಾತನಾಡುವುದೇ ಸಾಧನೆ ಎಂದುಕೊಂಡಂತಿದೆ. ಸಾವರ್ಕರ್ ಅವರನ್ನು ಪ್ರಶ್ನಿಸುವ ಶ್ರೀಯುತರು  ಕೋಟಿ ಗಟ್ಟಲೆ ಆಸ್ತಿಯ ಒಡೆಯರಾದರೂ ಮಂತ್ರಿಗಿರಿಯ ಸವಲತ್ತು ಪಡೆದುಕೊಳ್ಳುತ್ತಿಲ್ಲವೇ? ಅಽಕಾರದಲ್ಲಿದ್ದಾಗ ಬಿಡಿ, ಸೋತ ಅವಽಯಲ್ಲಿ ಸರಕಾರದಿಂದ ಪಿಂಚಣಿ ಪಡೆದುಕೊಂಡಿರಲಿಲ್ಲವೇ? ಇವರಿಬ್ಬರಿಗೂ ಹೋಲಿಕೆಯೇ ಸಮರ್ಪಕವಾದುದಲ್ಲ, ಆದರೆ ಬೇರೆಯವರನ್ನು ಸಾರ್ವಜನಿಕವಾಗಿ ದೂಷಿಸು ವಾಗಲಾದರೂ ತಮ್ಮದೇ ನಡೆಯನ್ನು ಗಮನಿಸಿಕೊಳ್ಳದಿದ್ದರೆ ಹೇಗೆ? ಕಾಲಾಪಾನಿಯಂಥ ಶಿಕ್ಷೆ ಬಿಡಿ, ಚುನಾವಣೆಯಲ್ಲೊಮ್ಮೆ ಸೋತ ಮಾತ್ರಕ್ಕೆ ಖಿನ್ನರಾಗಿ, ಹಳಹಳಿಸಿ ತಮ್ಮ ವಿರೋಽಗಳೊಂದಿಗೆಲ್ಲ ಕೈಕಾಲು ಹಿಡಿದು ಹೊಂದಾಣಿಕೆ ಮಾಡಿಕೊಳ್ಳುವ ರಾಜಕಾರಣಿಗಳು ಸ್ವಾತಂತ್ರ್ಯ ಸೇನಾನಿಗಳ ನಿಷ್ಠೆ ಪ್ರಶ್ನಿಸುವ ಪರಿ ಅಸಹ್ಯವೆನಿಸುತ್ತದೆ.
ಇವರನ್ನೆಲ್ಲ ನೋಡುತ್ತಿದ್ದರೆ, ‘ಎದ್ದೆದ್ದು ಬೀಳುತಿಹೆ ಗುದ್ದಾಡಿ ಸೋಲುತಿಹೆ, ಗದ್ದಲವ ತುಂಬಿ ಪ್ರಸಿದ್ಧನಾಗುತಿಹೆ, ಉದ್ಧರಿಸುವೆನು ಜಗವನೆನ್ನುತಿಹ ಸಖನೆ, ನಿನ್ನುದ್ಧಾರವೆಷ್ಟಾಯ್ತೊ- ಮಂಕುತಿಮ್ಮ’ ಎಂಬ ಡಿವಿಜಿಯವರ ಕಗ್ಗದ ಸಾಲುಗಳು ನೆನಪಾಗುತ್ತವೆ. ಪ್ರಜಾಪ್ರಭುತ್ವದಲ್ಲಿ ವಿರೋಧಗಳು, ಅಭಿಪ್ರಾಯಭೇದಗಳು ಸಹಜ. ಆದರೆ ವಿರೋಽಸುವುದು, ಒಬ್ಬರನ್ನೊಬ್ಬರು ನಿಂದಿಸುವುದೇ ಪ್ರಭುತ್ವದ ಧ್ಯೇಯವಾಗಬಾರದು. ಅವರು ಮಾಡಿದ್ದನ್ನು ಬದಲಾಯಿಸುವುದೇ ಇವರ ಕಾಯಕವಾಗುತ್ತಿರುವುದು ಶೋಚನೀಯ. ಹೀಗಾದರೆ, ಬದಲಾದ ಸರಕಾರಗಳ ಸ್ಥಿತಿಯು, ಬಾವಿಗಿಳಿಯ ಹೊರಟು ಮೂರು ಮೆಟ್ಟಿಲಿಳಿದು ನಾಲ್ಕು ಮೆಟ್ಟಿಲು ಹತ್ತುವಂಥ ಕಪ್ಪೆಗಳಂತಾದೀತು!
ಮೊದಲೆಲ್ಲ ಚುನಾವಣೆಯ ತನಕ ಕೆಸರೆರಚಾಟ, ತದನಂತರವಾದರೂ  ತಕ್ಕಮಟ್ಟಿನ ಅಭಿವೃದ್ಧಿ, ಸಾಮಾಜಿಕ ಸ್ವಾಸ್ಥ್ಯದ ಹೊಣೆಗಾರಿಕೆಯನ್ನು ಆಡಳಿತ-ವಿಪಕ್ಷಗಳೆರಡೂ ಹೊರುತ್ತಿದ್ದವು. ಈಗ ಕೆಸರೆರಚಾಟವೇ ಎರಡರ ಚಾಳಿಯೂ ಆಗಿರುವುದು ದುರ್ದೈವ. ವಿರೋಽಸುವ ಮಾರ್ಗ ನಿಂದನೆಯೇ ಆಗಬಾರದು. ಅಪರೂಪವೆನಿಸಿದ್ದ ವೈಯಕ್ತಿಕ ನಿಂದನೆಗಳು ಕರ್ನಾಟಕದ ರಾಜಕಾರಣದಲ್ಲೂ ಹೆಚ್ಚಾಗುತ್ತಿರುವುದು ಆಘಾತಕಾರಿ. ನಮ್ಮೆಲ್ಲರ ಜಗತ್ತು/ಅರಿವು, ನಮ್ಮ ನಮ್ಮ ಬೊಗಸೆಗೆ ನಿಲುಕುವಷ್ಟೇ. ಉನ್ನತ ಸ್ಥಾನಗಳಿಗೇರಿದಂತೆ ತಮ್ಮ ಅರಿವಿನ ವಿಸ್ತಾರ ಹಿಗ್ಗಿಸಿಕೊಂಡು ಸಣ್ಣತನವನ್ನು ಬದಿಗೊತ್ತುವ ಪ್ರಬುದ್ಧತೆ ನಾಯಕರಿಗಿರಬೇಕು. ಅದನ್ನೇ ನಾಯಕತ್ವದ ಲಕ್ಷಣ ಎನ್ನುವುದು. ನಾಯಕರೆನಿಸಿಕೊಂಡವರು ಒಬ್ಬರಿಗಿಂತ ಒಬ್ಬರು ಸಣ್ಣವರಾಗುವ ಬದಲು, ಸಾಮಾಜಿಕ ಬದ್ಧತೆ ಹಾಗೂ ಉದಾತ್ತ ಮನೋಭಾವವನ್ನು ಹೊಮ್ಮಿಸಬೇಕು.
ಇದನ್ನೇ ಡಿವಿಜಿಯವರು, ‘ನಿನ್ನ ಕಣ್ ಕಿವಿ ಮನಗಳರಿವಷ್ಟು ನಿನ್ನ ಜಗ, ನಿನ್ನನಳಿಸುವ ನಗಿಸುವೆಲ್ಲ ನಿನ್ನಂಶ, ಉನ್ನತಿಗೆ ನೀನೇರಿದಂತೆ ಜಗ ವಿಸ್ತರಿಸಿ, ಸಣ್ಣತನ ಸವೆಯುವುದು- ಮಂಕುತಿಮ್ಮ’ ಎಂದಿದ್ದಾರೆ. ತಮ್ಮನ್ನು ಸಮರ್ಥಿಸಿಕೊಳ್ಳುವ ಅವಕಾಶವಿರುವವರನ್ನು ಹಳಿಯುವುದು ಅಸಭ್ಯತೆ. ತಮಗಾಗ ದವರೆಂದೋ ಅಥವಾ  ಅವರನ್ನು ದೂರಿದರೆ ಇನ್ಯಾರನ್ನೋ ಒಲಿಸಿಕೊಳ್ಳಬಹುದು/ಓಲೈಸಬಹುದು ಎಂಬ ಕಾರಣಕ್ಕೋ ಅವರ ಇತಿಹಾಸ ಕೆದಕಿ ಕೆಸರೆರಚುವುದು ಸಹ್ಯವಲ್ಲ. ಖ್ಯಾತ ಅಮೆರಿಕನ್ ಇತಿಹಾಸಕಾರರಾದ ವಿಲ್ ಡ್ಯುರಂಟ್ ಮತ್ತು ಏರಿಯಲ್ ಡ್ಯುರಂಟ್ ದಂಪತಿ ತಮ್ಮ ‘ದಿ ಲೆಸೆನ್ಸ್ ಆ- ಹಿಸ್ಟರಿ’ ಪುಸ್ತಕದಲ್ಲಿ ಹಂಚಿಕೊಂಡ ’’       ,    ’ ’’ ಎಂಬ ಅಂಶ ಇಲ್ಲಿ ತುಂಬಾ ಪ್ರಸ್ತುತವೆನಿಸುತ್ತದೆ.
ಹೌದು, ನಾವೆಲ್ಲರೂ ಇತಿಹಾಸವನ್ನು ಅರಿತುಕೊಂಡಿರುವುದು, ಅರಗಿಸಿಕೊಳ್ಳುವ ಪ್ರಯತ್ನ ಮಾಡುವುದು ನಮ್ಮ ನಮ್ಮ ಕನ್ನಡಕಗಳ ನೆರವಿನಿಂದಲೇ! ನಾವೆಷ್ಟೇ ತಟಸ್ಥ ನಿಲುವಿನವರು ಎಂದುಕೊಂಡರೂ, ನಮ್ಮ ದೃಷ್ಟಿಯ ಮೇಲೆ ನಮ್ಮ ಬಾಲ್ಯ, ಪರಿಸರ, ನಾವು ನೆಚ್ಚಿಕೊಂಡಿರುವ ಸಮಾಜಗಳ ನೆರಳಿರುವುದು ಸಹಜ. ವಾಸ್ತವ ತಿಳಿಯುವಲ್ಲಿ, ತಾಳ್ಮೆಯ ಜತೆಗೆ ಭಿನ್ನಾಭಿಪ್ರಾಯಗಳನ್ನು ಗೌರವಿಸುವ ಪಾಠವನ್ನು ನಾವು ಇತಿಹಾಸದಿಂದ ಕಲಿಯದಿದ್ದರೆ ಹೇಗೆ?
(ಲೇಖಕರು ಹವ್ಯಾಸಿ ಬರಹಗಾರರು)