ಸಂವಿಧಾನ ಕುರಿತ ಸಂವಾದದಲ್ಲಿ ಪಾಲ್ಗೊಳ್ಳಿ
ಜಾಗೃತಿ ಜಾಥಾ
ಶಾಲಿನಿ ರಜನೀಶ್
ಸಂವಿಧಾನ ಕುರಿತಾದ ದೊಡ್ಡ ಮಟ್ಟದ ಜಾಗೃತಿ ಜಾಥಾವನ್ನು ರಾಜ್ಯದ ೩೧ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗಿದೆ. ಸಂವಿಧಾನದ ಮಹತ್ವ ಏನು? ಅದು ರೂಪುಗೊಂಡು ಜಾರಿಯಾದ ಬಗೆ ಹೇಗೆ? ಎಂಬಿತ್ಯಾದಿ ಸಂಗತಿಗಳನ್ನು ಜನರಿಗೆ ವಿವರಿಸುವುದು ಇದರ ಉದ್ದೇಶ. ಇದರಲ್ಲಿ ಸರಕಾರ, ಖಾಸಗಿ ವಲಯ ಮತ್ತು ಸಾರ್ವಜನಿಕರ ವ್ಯಾಪಕ ಭಾಗವಹಿಸುವಿಕೆ ಇರುತ್ತದೆ.
ಸಂವಿಧಾನ ಜಾಗೃತಿ ಜಾಥಾವನ್ನು ೨೦೨೪ರ ಜನವರಿ ೨೬ರಿಂದ ಫೆಬ್ರವರಿ ೨೩ರವರೆಗೆ ರಾಜ್ಯಾದ್ಯಂತ ಆಚರಿಸಲಾಗುತ್ತಿದ್ದು, ಇದು ಲೋಕತಂತ್ರದ ಅತಿದೊಡ್ಡ ಹಬ್ಬವಾಗಿ ಮೂಡಿಬಂದಿದೆ. ಸಂವಿಧಾನ ಕುರಿತ ಸಂವಾದವನ್ನು ಫೆ.೨೪ ಮತ್ತು ೨೫ರಂದು ನಡೆಸಲಾಗುವುದು.
ಏತಕ್ಕಾಗಿ ಈ ಕಾರ್ಯಕ್ರಮ?
ಭಾರತ ಸಂವಿಧಾನವು ದೇಶದ ಎಲ್ಲಾ ವಿದ್ಯಮಾನ ಗಳಿಗೆ ಮೂಲಾಧಾರವಾಗಿದೆ. ಸಂವಿಧಾನ ರಚನಾ ಸಭೆಯ ಚರ್ಚೆಗಳ ಮೂಲಕ, ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅವಿರತ ಶ್ರಮದಿಂದಾಗಿ ನಮ್ಮ ಸಂವಿಧಾನವು ೧೯೪೯ರ ಜನವರಿ ೨೬ರಂದು ಅನುಷ್ಠಾನಕ್ಕೆ ಬಂದಿದೆ.
ಭಾರತದ ವೈವಿಧ್ಯಮಯ ಸಂಸ್ಕೃತಿ, ಸಾಮಾಜಿಕ ವ್ಯವಸ್ಥೆ ಮತ್ತು ನೀತಿ- ನಿಯಮಗಳ ಮೇಲೆ ವಿಸ್ತೃತವಾದ ಚರ್ಚೆ ನಡೆದು ಸಂವಿಧಾನ ರಚನಾ ಸಭೆಯಲ್ಲಿ ಇದರ ಕರಡು ಪ್ರತಿಯನ್ನು ಸಿದ್ಧಪಡಿಸಲಾಯಿತು. ಸಂವಿಧಾನದ ಮಹೋನ್ನತ ಆಸ್ತಿಯೆಂದರೆ ಅದರ ಪ್ರಸ್ತಾವನೆ. ಇದು ಭಾರತದ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಹಾಗೂ ಪ್ರಜಾಸತ್ತಾತ್ಮಕ ಗಣರಾಜ್ಯದ ಮೌಲ್ಯಗಳಿಗೆ ಅನುಸಾರವಾಗಿ ರೂಪುಗೊಂಡಿದ್ದು, ಜನರ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ನ್ಯಾಯವನ್ನು ಇದು ಖಚಿತಪಡಿಸುತ್ತದೆ ಹಾಗೂ ಅವರ ಅಭಿವ್ಯಕ್ತಿ ಸ್ವಾತಂತ್ರ್ಯ, ನಂಬಿಕೆ, ಆಚರಣೆ, ಸಂಪ್ರದಾಯಗಳನ್ನು ಗೌರವಿಸುತ್ತದೆ. ಸಂವಿಧಾನದ ಹಾದಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ, ಸ್ವಾತಂತ್ರ್ಯ, ಘನತೆ, ಏಕತಾ ಪ್ರಜ್ಞೆ, ಸಮಗ್ರತೆ, ಧರ್ಮ ನಿರಪೇಕ್ಷತೆ ಮತ್ತು ಸಮಾನತೆಯ ವಾತಾವರಣವನ್ನು ಕಲ್ಪಿಸುವುದು ಸರಕಾರದ (ಕೇಂದ್ರ, ರಾಜ್ಯ ಮತ್ತು ಪ್ರಾಂತ್ಯ) ಕರ್ತವ್ಯವಾಗಿದೆ.
ಸಂವಿಧಾನವು ಜಾರಿಯಾಗಿ ೭೫ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನವು ಇಷ್ಟು ವರ್ಷಗಳ ಕಾಲ ಯಾವ ರೀತಿಯಲ್ಲಿ ಪ್ರಭಾವಬೀರಿದೆ ಮತ್ತು ಸಂವಿಧಾನದ ಜಾರಿಯ ಹಾದಿಯಲ್ಲಿ ಮುಂದೆ ಇರುವಂಥ ಸವಾಲುಗಳು ಎಂಥವು ಎಂಬುದರ ಮಹತ್ವವನ್ನು ಅದು ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ಸಂವಿಧಾನ ಕುರಿತಂತೆ ಅಗತ್ಯವಾದ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ‘ಸಂವಿಧಾನ ಮತ್ತುಭಾರತದ ಏಕತೆ’ ಎಂಬ ಶೀರ್ಷಿಕೆಯಡಿಯಲ್ಲಿ ಸಂವಿಧಾನ ಕುರಿತ ಜಾಗೃತಿ ಸಮಾವೇಶ, ವಿಚಾರ ಸಂಕಿರಣ ಹಾಗೂ ವಿಜ್ಞಾನ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಸಂವಿಧಾನ ಜಾರಿಗೆ ಬಂದು ೭೫ ವರ್ಷ ಪೂರ್ಣಗೊಂಡಿದೆ. ಈ ನಡುವಿನ ಆಗುಹೋಗುಗಳನ್ನು ಪರಿಶೀಲಿಸಿ ನಮ್ಮ ಸಾಮರ್ಥ್ಯ,ದೌರ್ಬಲ್ಯ, ಅಡೆತಡೆಗಳು ಹಾಗೂ ಅವಕಾಶಗಳನ್ನು ವಿಶ್ಲೇಷಿಸಿ ಮುಂದಿನ ೧೦೦ ವರ್ಷದ ಅವಧಿವರೆಗಿನ ಯೋಜನೆಯನ್ನು ಹಮ್ಮಿಕೊಳ್ಳುವ ಅಗತ್ಯ ವಿದೆ.
ಕಾರ್ಯಕ್ರಮದ ಸ್ವರೂಪವೇನು?ಈ ಕಾರ್ಯಕ್ರಮವು ೩ ಅಂಶಗಳನ್ನು ಒಳಗೊಂಡಿರುತ್ತದೆ. ಅವೆಂದರೆ:ಅ) ಸಂವಿಧಾನದ ಜಾಗೃತಿ ಜಾಥಾ (೨೦೨೪ರ ಜನವರಿ ೨೬ರಿಂದ ಫೆಬ್ರವರಿ ೨೩ರವರೆಗೆ, ರಾಜ್ಯಾದ್ಯಂತ)ಆ) ಸಂವಿಧಾನ ಕುರಿತ ಸಂವಾದ (ಫೆಬ್ರವರಿ ೨೪ ಮತ್ತು ೨೫ರಂದು)ಇ) ಸಂವಿಧಾನದ ಜಾಗೃತಿ ಸಮಾವೇಶ (ಫೆಬ್ರವರಿ ೨೪ ಮತ್ತು ೨೫ರಂದು)
ಸಂವಿಧಾನ ಕುರಿತಾದ ದೊಡ್ಡ ಮಟ್ಟದ ಜಾಗೃತಿ ಜಾಥಾವನ್ನು ರಾಜ್ಯದ ೩೧ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲಾಗಿದೆ. ವಾಹನವೊಂದರ ಮೇಲೆ ಸ್ತಬ್ಧಚಿತ್ರ ದೊಂದಿಗಿನ ಎಲ್‌ಇಡಿ ಪರದೆಗಳನ್ನು ಜೋಡಿಸುವ ಮೂಲಕ, ಸಂವಿಧಾನದ ಮಹತ್ವ ಏನು? ಅದು ರೂಪುಗೊಂಡು ಜಾರಿಯಾದ ಬಗೆ ಹೇಗೆ? ಎಂಬಿತ್ಯಾದಿ ವಿವರಗಳನ್ನು ಜನರಿಗೆ ತೋರಿಸಲಾಗುತ್ತದೆ.
ಸಂವಿಧಾನಕ್ಕೆ ಸಂಬಂಧಿಸಿದ ವಿಷಯಗಳು ಹಾಗೂ ಸದರಿ ಜಿಲ್ಲೆಗಳಿಗೆ ಸಂಬಂಧಿಸಿದ ಇತರ ಪ್ರಮುಖ ವಿಷಯಗಳನ್ನು ಚಿತ್ರಿಸುವ ೪-೫ ಟ್ಯಾಬ್ಲೋಗಳುಎಲ್‌ಇಡಿ ವಾಹನವನ್ನು ಅನುಸರಿಸುತ್ತವೆ. ಸರಕಾರ, ಖಾಸಗಿ ವಲಯ ಮತ್ತು ಸಾರ್ವಜನಿಕರಿಂದ ವ್ಯಾಪಕ ಭಾಗವಹಿಸುವಿಕೆ ಇರುತ್ತದೆ. ಅವು ಸೈಕಲ್ ಜಾಥಾ ಗಳು ಸಹ ಆಗಿರಬಹುದು. ಅದನ್ನು ರೂಪಿಸಿ ನಡೆಸುವ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ.
ಈ ಜಾಗೃತಿ ಜಾಥಾವು ಸ್ಥಳೀಯ ಜನಪ್ರತಿನಿಧಿಗಳ ಉಪಸ್ಥಿತಿಯೊಂದಿಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಪ್ರದೇಶಗಳಿಗೆ ಸಂಚರಿಸುತ್ತದೆ ಹಾಗೂ೨೭ ದಿನಗಳಲ್ಲಿ ಇಡೀ ಜಿಲ್ಲೆಯನ್ನು ತಲುಪುತ್ತದೆ. ಒಂದು ವೇಳೆ ದೊಡ್ಡ ಜಿಲ್ಲೆಗಳಾಗಿದ್ದರೆ, ಅಲ್ಲಿ ಎರಡು ಸ್ತಬ್ಧ ಚಿತ್ರ ಮತ್ತು ವಾಹನದ ವ್ಯವಸ್ಥೆ ಮಾಡುವ ಬಗ್ಗೆ ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಈ ಜಾಥಾ ಸಾಗುವ ಸಂದರ್ಭದಲ್ಲಿ ಆಯಾ ಕ್ಷೇತ್ರಗಳ ವ್ಯಾಪ್ತಿಯ ಶಾಸಕರು/ಸಂಸದರು ಪಾಲ್ಗೊಳ್ಳಲಿದ್ದು, ಸರಕಾರದ ಗ್ಯಾರಂಟಿ/ಇತರೆ ಸೌಲಭ್ಯಗಳು ದೊರಕದ ಜನರ ಸಂಕಷ್ಟಗಳನ್ನು ಅವರು ಆಲಿಸಿ ಪರಿಹಾರ ಒದಗಿಸುವ ಕೆಲಸ ಮಾಡ ಲಿದ್ದಾರೆ. ಸಂವಿಧಾನ ಜಾಗೃತಿ ಜಾಥಾವು ಆಯಾ ದಿನ ಸಂಜೆ ಗ್ರಾಮೀಣ ಪ್ರದೇಶದ ಒಂದೆಡೆ ಉಳಿದುಕೊಳ್ಳುತ್ತದೆ ಮತ್ತು ಆ ಸಂದರ್ಭದಲ್ಲಿ ಸ್ಥಳೀಯ ಕಲಾಪ್ರಕಾರಗಳ ಸಹಾಯದಿಂದ ಸಂವಿಧಾನ ಕುರಿತಂತೆ ಇನ್ನಷ್ಟು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತದೆ.
ಇದೇ ವೇಳೆ ಸಂವಿಧಾನಕ್ಕೆ ಸಂಬಂಧಿಸಿದ ಸ್ಪರ್ಧೆಗಳೂ ಇರುತ್ತವೆ. ಈ ಜಾಗೃತಿ ಜಾಥಾಕ್ಕೆ ಜನವರಿ ೨೬ರಂದು ಧ್ವಜಾ ರೋಹಣದ ಬಳಿಕ ಆಯಾ ಜಿಲ್ಲೆಗಳ ವ್ಯಾಪ್ತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿರುತ್ತಾರೆ. ಜಾಗೃತಿ ಜಾಥಾ ಚಲಿಸುವ ಮಾರ್ಗದ ಕುರಿತ ವಿವರಗಳನ್ನು ಇದಕ್ಕಾಗಿ ರಚಿಸಲಾಗಿರುವ ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ. ಈ ಕಾರ್ಯ ಕ್ರಮದ ಎರಡನೆಯ ಭಾಗವಾಗಿ ಫೆ.೨೪ ಮತ್ತು ೨೫ರಂದು ಅರಮನೆ ಮೈದಾನದಲ್ಲಿ ಶಿಕ್ಷಣ ತಜ್ಞರು ಹಾಗೂ ವಿಷಯ ತಜ್ಞರಿಂದ ೨ ದಿನಗಳ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದ್ದು, ಸಮಾನತೆ, ಸಮಾಜವಾದ, ಸ್ವಾತಂತ್ರ್ಯ, ಭ್ರಾತೃತ್ವ, ಸಾಮಾಜಿಕ ನ್ಯಾಯ ಹಾಗೂ ಇತರೆ ವಿಷಯಗಳಿಗೆ ಸಂಬಂಧಿಸಿ ಈ ವೇಳೆ ವಿಚಾರ ವಿನಿಮಯ ನಡೆಯಲಿದೆ.
ನಮ್ಮ ರಾಜ್ಯ, ಹೊರರಾಜ್ಯ ಮತ್ತು ಹೊರದೇಶಗಳ ವಿಷಯ ತಜ್ಞರು ಭಾಗವಹಿಸಲಿರುವ ಈ ವಿಚಾರ ಸಂಕಿರಣದ ನಿರ್ಣಯಗಳು ಮತ್ತು ತಿಳಿವಳಿಕೆಯನ್ನು ಸಮಾರೋಪದ ವೇಳೆ ತಿಳಿಯಪಡಿಸಲಾಗುವುದು. ಇದೇ ಸಂದರ್ಭದಲ್ಲಿ ನಮ್ಮ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯ ಮಕ್ಕಳಿಗಾಗಿ ವಿಜ್ಞಾನ ಮೇಳ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವಿದ್ದು, ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಇದು ಜರುಗುತ್ತದೆ. ಈ ಬೃಹತ್ ವಿಚಾರ ಸಂಕಿರಣವು ನ್ಯಾಷನಲ್ ಲಾ ಸ್ಕೂಲ್ ಆ- ಇಂಡಿಯಾ ಯೂನಿವರ್ಸಿಟಿ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆ (ಐಸೆಕ್) ಹಾಗೂ ಕರ್ನಾಟಕ ಕಾನೂನು ವಿಶ್ವ ವಿದ್ಯಾಲಯ ಇವರ ಸಹಯೋಗದಲ್ಲಿ ಜರುಗಲಿದೆ. ಈ ಸಂಸ್ಥೆಗಳು ಸರಕಾರೇತರ ಅಥವಾ ಇತರೆ ಸಂಸ್ಥೆ ಗಳ ನೆರವನ್ನು ಪಡೆದುಕೊಳ್ಳಲಿದ್ದು, ಈ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಮೂರನೆಯ ಭಾಗವಾಗಿ, ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಸಂವಿಧಾನ ಜಾಗೃತಿ ಸಮಾವೇಶ ಜರುಗಲಿದ್ದು, ಇದರಲ್ಲಿ ಲಕ್ಷಕ್ಕೂ ಅಧಿಕ ಜನರುಪಾಲ್ಗೊಳ್ಳುವ ನಿರೀಕ್ಷೆಯಿದೆ. ಈ ಸಮಾರೋಪ ಕಾರ್ಯಕ್ರಮದಲ್ಲಿ ದೇಶದ ವಿವಿಧೆಡೆಯ ಶಿಕ್ಷಣ ತಜ್ಞರು, ವಿಷಯ ತಜ್ಞರು, ಚಿಂತಕರು ಭಾಗವಹಿಸಲಿದ್ದಾರೆ.
ಇದನ್ನು ಹೇಗೆ ಆಯೋಜಿಸಲಾಗಿದೆ?ಬಾಬಾ ಸಾಹೇಬರ ಚಿಂತನೆಗಳಿಗೆ ಹತ್ತಿರ ಎನಿಸುವ ಕಾರ್ಯಾಶಯಗಳನ್ನು ಹೊಂದಿರುವ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಈ ಮೂರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದು, ರಾಜ್ಯದೊಳಗೆ ಸಾಮಾಜಿಕ ನ್ಯಾಯದ ತಿಳಿವಳಿಕೆ ಯನ್ನು ಪಸರಿಸುವ ಮಹತ್ವದ ಗುರಿ ಇವಕ್ಕಿದೆ. ಈಜಾಗೃತಿ ಕಾರ್ಯಕ್ರಮವನ್ನು ನಡೆಸಲು ಸಮಾಜ ಕಲ್ಯಾಣ ಇಲಾಖೆಯು, ಬುಡಕಟ್ಟು ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ, ಗ್ರಾಮೀಣಾಭಿವೃದ್ಧಿಮತ್ತು ಪಂಚಾಯತ್‌ರಾಜ್, ನಗರಾಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ, ಕಂದಾಯ ಮುಂತಾದ ಇಲಾಖೆಗಳು,ರಾಜ್ಯದ ಸಾರ್ವಜನಿಕ ವಲಯದ ಉದ್ಯಮಗಳು, ಸರಕಾರೇತರ ಸಂಸ್ಥೆಗಳ ಸಹಯೋಗವನ್ನು ಪಡೆದಿದೆ.
ಈ ಕಾರ್ಯಕ್ರಮಕ್ಕೆ ತಗಲುವ ವೆಚ್ಚವನ್ನು ಈ ಎಲ್ಲಾ ಇಲಾಖೆಗಳು ಭರಿಸಲಿವೆ. ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ೧೮ ಕೋಟಿ ರು.ಗಳಿಗೆಅನುಮೋ ದನೆ ದೊರೆತಿದ್ದು, ಪ್ರತಿ ಜಿಲ್ಲೆಗೆ ೨೫ ಲಕ್ಷ ರುಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. ಈ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿ ಸಲು ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಇಲಾಖೆಯ ಉನ್ನತಾಧಿಕಾರಿಗಳು ಮತ್ತು ಇಲಾಖಾಮುಖ್ಯಸ್ಥರ ೨೫ ತಂಡಗಳನ್ನು ರಚಿಸಲಾಗಿದ್ದು, ಇದರ ವಿವರಗಳನ್ನು ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ.
೨೦೨೩ರ ಸೆಪ್ಟೆಂಬರ್ ೧೫ರ ವಿಶ್ವ ಪ್ರಜಾಪ್ರಭುತ್ವ ದಿನದಂದು ಜರುಗಿದ ‘ಜಾಗತಿಕ ಸಂವಿಧಾನ ಪೀಠಿಕೆಯನ್ನು ಓದುವ ಕಾರ್ಯಕ್ರಮ’ದ ಮುಂದುವರಿದ ಭಾಗವಾಗಿ ಈ ಕಾರ್ಯಕ್ರಮವು ಜರುಗು ತ್ತಿದ್ದು, ಸಂವಿಧಾನದ ಮಹತ್ವದ ಕುರಿತಂತೆ ತಳಮಟ್ಟದಲ್ಲಿ ಅರಿವು ಮೂಡಿಸುವ ಮಹತ್ತರ ಉದ್ದೇಶವನ್ನು ಇದು ಒಳಗೊಂಡಿದೆ.
ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ವಿವರಗಳು eಠಿಠಿ://ಟ್ಞoಠಿಜಿಠ್ಠಿಠಿಜಿಟ್ಞಟ್ಛಜ್ಞಿbಜಿhZZಠಿ.ಜ್ಞಿ/ ಜಾಲತಾಣದಲ್ಲಿ ಲಭ್ಯವಿರುತ್ತವೆ. ಇದರ ಜತೆಗೆ ೨೪ ಗಂಟೆಗಳ ಕಾಲ ೮೯೫೧೩೦೫೪೧೪ ಹಾಗೂ ೯೪೮೨೩೦೦೪೦೦ ಸಂಖ್ಯೆಯ ಸಹಾಯವಾಣಿ ಯಲ್ಲಿ ಕರೆ/ವಾಟ್ಸ್ಯಾಪ್/ಟೆಲಿಗ್ರಾಮ್ ಮೂಲಕ ಮಾಹಿತಿ ಪಡೆಯಬಹುದಾಗಿದೆ. ಟ್ವಿಟರ್ ಖಾತೆ ಃಇಟ್ಞoಠಿಜಿಠ್ಠಿಠಿಜಿಟ್ಞಎಟಓ ಇಲ್ಲಿ ಕೂಡಾ ಮಾಹಿತಿಯನ್ನು ಪಡೆಯ ಬಹುದಾಗಿದೆ.
(ಲೇಖಕಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ)