ಪಾಕಿಸ್ತಾನದ ಹುಟ್ಟಿನಲ್ಲೇ ಇದೆ ಮೂಲಭೂತ ಸಮಸ್ಯೆಗಳು
ಅಕ್ಬರಾಯಣ
ಎಂ.ಜೆ.ಅಕ್ಬರ್‌
(ಭಾಗ-೧)
ಪಾಕಿಸ್ತಾನದಲ್ಲಿ ಅಧಿಕಾರದ ಸಮತೋಲನ ಯಾವಾಗಲೂ ಬಹಳ ಸೂಕ್ಷ್ಮ ಹಾಗೂ ದುರ್ಬಲವಾಗಿದೆ. ಷರೀಫ್, ಜರ್ದಾರಿ ಮತ್ತು ಖಾನ್ ಅಸಮತೋಲಿತ ತ್ರಿಕೋನವಿದ್ದಂತೆ. ಕೊನೆಯೇ ಇಲ್ಲದ ರಾಜಕೀಯ ಕ್ಯಾಸಿನೋದಲ್ಲಿ ಈ ಮೂವರೂ ಬಹಳ ದೊಡ್ಡ ಜೂಜುಗಾರರು. ಇವರೆಲ್ಲರಿಗೂ ಮಾಲೀಕ ಅಲ್ಲಿನ ಸೇನಾಪಡೆ! ಮೂವರಿಗೂ ಈಗಿನದು ತಮ್ಮ ಕಟ್ಟಕಡೆಯ ದಾಳವೆಂಬುದು ಗೊತ್ತಿದೆ. ಈ ಚುನಾವಣೆ ಯಲ್ಲೂ ಇಮ್ರಾನ್ ಖಾನ್‌ಗೆ ತಮ್ಮ ವ್ಯಕ್ತಿತ್ವಕ್ಕಿರುವ ಮಿತಿಯನ್ನು ಮೀರಿ ಬೆಳೆಯಲು ಸಾಧ್ಯವಾಗಿಲ್ಲ.
ಮೊದಲಿಗೆ ನಮ್ಮಲ್ಲಿ ಮೊಳೆಯುವ ಸಾಮಾನ್ಯ ಯೋಚನೆಯೊಂದು ಕ್ರಮೇಣ ಬಲಿತು ಒಳ್ಳೆಯ ಐಡಿಯಾ ಆಗಿ ಪರಿವರ್ತನೆಯಾಗುತ್ತದೆ. ಆ ಐಡಿಯಾಕ್ಕೆ ಒಂದಷ್ಟು ಜನರು ಆಕರ್ಷಿತರಾಗುತ್ತಾರೆ. ಆ ಆಕರ್ಷಣೆಯೇ ರಾಜಕಾರಣಿಗಳಿಗೆ ಚುನಾವಣೆಯ ಮೂಲ ಬಂಡವಾಳವಾಗುತ್ತದೆ. ಆ ಚುನಾವಣೆ ಯಲ್ಲಿ ಅತಂತ್ರ ಫಲಿತಾಂಶ ಬರುತ್ತದೆ. ಸಂಸತ್ತು ವಿಭಜನೆ ಯಾಗುತ್ತದೆ. ಬೇರೆ ಬೇರೆ ವರ್ಗದ ಜನರ ಆಶೋತ್ತರ ಗಳು ಪರಸ್ಪರ ಸ್ಪರ್ಧೆಗೆ ಬೀಳುತ್ತವೆ. ರಾಜಕೀಯ ವ್ಯವಸ್ಥೆ ಅಸ್ಥಿರಗೊಳ್ಳುತ್ತದೆ. ಸ್ಥಿರವಾದ ಸರಕಾರ ವೊಂದು ರಚನೆಯಾಗುವುದೇ ಅಸಾಧ್ಯವಾಗುತ್ತದೆ.
ಬೇರೆ ಬೇರೆ ಪ್ರಾದೇಶಿಕ ಜನಾಂಗಗಳು ತಮ್ಮದೇ ಆದ ಪ್ರತ್ಯೇಕ ಹಾಗೂ ಸ್ವಾಯತ್ತ ಆಡಳಿತ ವ್ಯವಸ್ಥೆಯೊಂದನ್ನು ರೂಪಿಸಿಕೊಳ್ಳಲು ಅನುಮತಿ ಕೇಳುತ್ತವೆ.ಆರ್ಥಿಕ ಕುಸಿತವು ದೇಶವನ್ನು ಇಕೋ-ಪೊಲಿಟಿಕಲ್ ಬಿಕ್ಕಟ್ಟಿನಲ್ಲಿ ಸಿಲುಕಿಸುತ್ತದೆ. ಇಂಥ ಬಿಕ್ಕಟ್ಟುಗಳು ದೇಶವನ್ನು ವಿಭಜನೆ ಮಾಡಬಲ್ಲವೇ?೧೯೭೧ ರಲ್ಲಿ ಹೀಗೇ ಆಯಿತು. ಪಾಕಿಸ್ತಾನವು ಎರಡು ದೇಶಗಳಾಗಿ ಒಡೆದು ಬಾಂಗ್ಲಾದೇಶದ ಸ್ಥಾಪನೆಯಾಯಿತು. ಐವತ್ತು ವರ್ಷಗಳ ನಂತರ ಅಂಥದೇ ಭಯಾನಕ ಜ್ವರ ಪಾಕಿಸ್ತಾನವನ್ನು ಸುಡುತ್ತಿದೆ.
ಆದರೆ, ೧೯೪೭ರ ನಂತರ ಪಾಕಿಸ್ತಾನವೀಗ ಮೂರನೇ ಬಾರಿ ವಿಭಜನೆಯಾಗುವ ಅಪಾಯದಲ್ಲಿ ಇಲ್ಲ ಎಂದಾದರೆ ಅದಕ್ಕೆ ಏಕೈಕ ಕಾರಣ ಅಲ್ಲಿನ ಸಶಸ್ತ್ರಪಡೆಗಳು ೧೯೭೦ ಹಾಗೂ ೧೯೭೧ರಲ್ಲಿ ಮಾಡಿದ ಅಮಾನುಷ ತಪ್ಪನ್ನು ಈಗ ಮಾಡದೆ ಸಂಯಮ ಕಾಪಾಡಿಕೊಂಡಿರುವುದು. ಆ ತಪ್ಪನ್ನು ಸೇನಾಪಡೆಗಳು ಮತ್ತೆ ಮಾಡುವ ಸಾಧ್ಯತೆಯಿಲ್ಲ. ೧೯೭೦ರಲ್ಲಿ ಪಾಕಿಸ್ತಾನದ ಬಂಗಾಳಿಗಳು ತಮ್ಮನ್ನೂ ಪಾಕಿಸ್ತಾನದ ಮುಸ್ಲಿಮರಿಗೆ ಸಮಾನವಾಗಿ ನಡೆಸಿಕೊಳ್ಳಿ ಎಂದಷ್ಟೇ ಕೇಳಿದ್ದರು. ಅವರಿಗೆ ತಮ್ಮ ಭಾಷೆ ಹಾಗೂ ಸಂಸ್ಕೃತಿಯ ಹಕ್ಕನ್ನು ಉಳಿಸಿಕೊಳ್ಳುವ ಬಯಕೆಯಷ್ಟೇ ಇತ್ತು. ಆದರೆ ಪಾಕಿಸ್ತಾನದ ಸೇನೆಯು ಆಚುನಾವಣೆಯಲ್ಲಿ ಬಂದ ಜನಾದೇಶವನ್ನು ಧಿಕ್ಕರಿಸಿ ಬಂಗಾಳಿಗಳ ನರಮೇಧ ನಡೆಸಿತ್ತು. ಅಂಥ ತಪ್ಪು ಈಗ ಮತ್ತೆ ನಡೆಯುವ ಸಾಧ್ಯತೆಗಳು ಕಾಣಿಸುವು ದಿಲ್ಲ.
೨೦೨೪ರ ರಾಷ್ಟ್ರೀಯ ಸಂಸತ್ ಚುನಾವಣೆಯು ಪಾಕಿಸ್ತಾನದಲ್ಲಿ ಬರೀ ಅತಂತ್ರ ಫಲಿತಾಂಶವನ್ನಷ್ಟೇ ನೀಡಿಲ್ಲ. ಇದು ಎಲ್ಲಾ ಲೆಕ್ಕಾಚಾರಗಳನ್ನೂ ತಲೆಕೆಳಗಾಗಿಸಿ ಅತ್ಯಂತ ಅಸ್ಥಿರ ಫಲಿತಾಂಶವನ್ನು ನೀಡಿದೆ. ನಿಮಗಿದು ವಿರೋಧಾಭಾಸ ಅನ್ನಿಸಬಹುದು. ಆದರೆ ಪಾಕಿಸ್ತಾನದ ಏಕತೆಗೆ ಅಪಾಯ ವಿರುವುದೇ ಅಲ್ಲಿನ ಪ್ರಾದೇಶಿಕ ನಿಷ್ಠಾವಂತರಿಗೆ ಇರುವ ಸಾಮರ್ಥ್ಯದಲ್ಲಿ. ಪಾಕಿಸ್ತಾನವು ನಿಧಾನವಾಗಿ ಒಂದೇ ಧ್ವಜದಡಿಯಲ್ಲಿ ಮೂರು ಅಥವಾ ಬಹುಶಃ ನಾಲ್ಕು ರಾಜಕೀಯ ಸಾಮ್ರಾಜ್ಯವಾಗಿ ಒಡೆಯುತ್ತಿದೆ.
ಅಫ್ಘಾನಿಸ್ತಾನದ ಗಡಿಯಲ್ಲಿರುವ ಪಷ್ತೂನ್ ಖೈಬರ್ ಪಖ್ತೂನ್‌ಖ್ವಾ ಹಾಗೂ ಪಕ್ಕದ ಪಂಜಾಬ್ ನಡುವಿನ ಸಂಘರ್ಷವೀಗ ತಕ್ಕಮಟ್ಟಿಗೆ ತಣ್ಣಗಾಗಿದೆ.ಆದರೆ ಪೂರ್ತಿ ಆರಿಲ್ಲ. ಉತ್ತರದಲ್ಲಿ ಜಕೋಬಾಬಾದ್ ನಿಂದ ಹಿಡಿದು ಪೂರ್ವದಲ್ಲಿ ಉಮರ್‌ಕೋಟ್‌ವರೆಗೆ ಹಾಗೂ ದಕ್ಷಿಣದಲ್ಲಿ ಕರಾಚಿಯವರೆಗೆ ಪಂಜಾಬ್ ಮತ್ತು ಸಿಂಧ್ ನಡುವಿನ ಸಂಘರ್ಷ ಹೆಚ್ಚು ಗಂಭೀರ ವಾಗಿದೆ. ಅಭಿವೃದ್ಧಿಯಲ್ಲಿ ಹಿಂದುಳಿದಿರುವ ಅಫ್ಘಾನಿಸ್ತಾನದ ಬೆಟ್ಟದ ಸಾಲು ಗಳಲ್ಲಿರುವ ಕ್ವೆಟ್ಟಾದಿಂದ ಹಿಡಿದು ಹಿಂದೂ ಮಹಾಸಾಗರದಲ್ಲಿನ ಗ್ವದರ್‌ವರೆಗೆ ಹರಡಿಕೊಂಡಿರುವ ಬಲೂಚಿಸ್ತಾನಿಗಳು ೧೯೬೦ರ ದಶಕದಿಂದಲೂ ಪಾಕಿಸ್ತಾನದಲ್ಲಿರುವ ಸರಕಾರದ ವಿರುದ್ಧ ವಿಷ ಕಾರುತ್ತಲೇ ಇದ್ದಾರೆ. ಸಾಕಷ್ಟು ಸಲ ಅವರು ದಂಗೆ ಕೂಡ ಎದ್ದಿದ್ದಾರೆ.
ಸಿಂಧ್ ಪ್ರಾಂತದ ರಾಜಧಾನಿಯಾಗಿರುವ ಕರಾಚಿಯು ಅಷ್ಟೇನೂ ಸಿಂಧಿಯಲ್ಲ. ಅದೊಂದು ಬಹುಜನಾಂಗೀಯ, ಬಹುಭಾಷಿಕ ನಗರ. ಅಲ್ಲಿಎಲ್ ಡೊರಾಡೋ (ಚಿನ್ನದ ನಗರ) ಹುಡುಕಿಕೊಂಡು ಉತ್ತರ ಪ್ರದೇಶ, ಬಿಹಾರ ಮತ್ತು ಹೈದರಾಬಾದ್ ನಿಂದ ವಲಸೆ ಬಂದ ಉರ್ದು ಭಾಷಿಕ ಮುಹಾಜಿರ್ ನಿರಾಶ್ರಿತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಕರಾಚಿಯ ಜನರು ಮುತ್ತಹಿದಾ ಕ್ವಾಮಿ ಮೂಮೆಂಟ್ (ಪಾಕಿಸ್ತಾನ್) ಅಥವಾ ಎಂಕ್ಯುಎಂ-ಪಿ ಪಕ್ಷಕ್ಕೆ ಮತ ಹಾಕಿದ್ದಾರೆ. ಈ ಪಕ್ಷ ೧೭ ರಾಷ್ಟ್ರೀಯ ಸಂಸತ್ ಸ್ಥಾನಗಳನ್ನು ವಲಸಿಗರ ಒಗ್ಗಟ್ಟಿನ ಮತಗಳಿಂದಲೇ ಗಳಿಸಿದೆ. ಭಾರತ ಬಿಟ್ಟು ಬಂದವರು ೭೫ ವರ್ಷಗಳ ಬಳಿಕವೂ ಪಾಕಿಸ್ತಾನಿ ಮೂಲದ ರಾಜಕೀಯ ಪಕ್ಷಗಳನ್ನು ನಂಬುವುದಿಲ್ಲ.
ಅವರು ಸಿಂಧಿಗಳಿಂದ ಎಷ್ಟು ಅಂತರ ಕಾಪಾಡಿಕೊಳ್ಳುತ್ತಾರೋ ಅಷ್ಟೇ ಅಂತರವನ್ನು ಪಂಜಾಬಿಗಳಿಂದಲೂ ಕಾಪಾಡಿಕೊಳ್ಳುತ್ತಾರೆ. ಇದರಲ್ಲೇ ಸೂಕ್ಷ್ಮ ಅಡಗಿದೆ. ತಾರ್ಕಿಕವಾಗಿ ನೋಡಿದರೆ ಎಂಕ್ಯುಎಂ ಗೆದ್ದ ಸೀಟು ಗಳು ಇಷ್ಟು ಮಾತ್ರ. ಒಂದು ಸ್ಪಷ್ಟನೆ: ಪಾಕಿಸ್ತಾನದಲ್ಲಿರುವ ಅನೇಕ ರಾಜಕೀಯ ಪಕ್ಷಗಳು (ಪಿಎಂಎಲ್-ಎನ್, ಪಿಎಂಎಲ್ -ಕ್ಯು ಇತ್ಯಾದಿ) ಒಂಥರಾ ಅಮೀಬಾ ಇದ್ದಂತೆ. ಅವು ತಮ್ಮೊಳಗೇ ಆಗಾಗ ವಿಭಜನೆಯಾಗು ತ್ತಿರುತ್ತವೆ ಮತ್ತು ಹೇಗೆ ಬೇಕಾದರೂ ತಮ್ಮ ಸ್ವರೂಪ ಬದಲಿಸಿಕೊಳ್ಳುತ್ತವೆ.
ಸಿಂಧಿಗಳು ಅವರ ಪಾಕಿಸ್ತಾನ್ ಪೀಪಲ್ಸ್  ಪಕ್ಷದ (ಪಿಪಿಪಿ) ಜತೆ ಗುರುತಿಸಿಕೊಂಡಿದ್ದಾರೆ. ಅದನ್ನು ಲರ್ಕಾನಾ (ಈಗ ಶಹೀದ್ ಬೆನಜಿರಾಬಾದ್ ಎಂದು ಹೆಸರು ಬದಲಾಗಿದೆ) ಮೂಲದ ಭುಟ್ಟೋ ವಂಶಸ್ಥರು ನಡೆಸುತ್ತಿದ್ದಾರೆ. ಬೆನಜೀರ್ ಭುಟ್ಟೋ ಅವರ ತಂದೆ ಜುಲಿಕರ್ ಅಲಿ ಭುಟ್ಟೋ ಅವರು ಈಪಕ್ಷವನ್ನು ರಾಷ್ಟ್ರೀಯ ಪಕ್ಷವಾಗಿ ಸ್ಥಾಪನೆ ಮಾಡಿದ್ದರು. ೧೯೭೯ರ ಏಪ್ರಿಲ್ ೪ರಂದು ಅವರನ್ನು ಪಾಕಿಸ್ತಾನದ ಸೇನೆ ಗಲ್ಲಿಗೇರಿಸಿತು. ಆಗ ಅವರಿಗೆಕೇವಲ ೫೧ ವರ್ಷ ವಯಸ್ಸು. ಅದೊಂದು ನ್ಯಾಯಾಂಗ ಹತ್ಯೆ. ನಂತರ ೨೦೦೭ರ ಡಿಸೆಂಬರ್ ೨೭ರಂದು ಬೆನಜೀರ್ ಭುಟ್ಟೋ ಅವರನ್ನು ಕೂಡಹತ್ಯೆ ಮಾಡಲಾಯಿತು. ರಾವಲ್ಪಿಂಡಿಯಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿ ದ್ದಾಗ ಅವರು ಹತ್ಯೆಗೀಡಾದರು. ಆಗ ಅವರಿಗೆ ಕೇವಲ ೫೪ ವರ್ಷವಯಸ್ಸು. ಪಾಕಿಸ್ತಾನದಲ್ಲಿ ರಾಜಕೀಯ ಹಂತಕರು ಯಾರೂ ಪತ್ತೆಯಾಗು ವುದಿಲ್ಲ.
ತಂದೆ ಹಾಗೂ ಮಗಳಿಬ್ಬರೂ ಸಶಸ ಪಡೆ ಗಳನ್ನು ಎದುರು ಹಾಕಿಕೊಳ್ಳುವ ತಪ್ಪು ಮಾಡಿದ್ದರು. ಬೆನಜೀರ್ ನಂತರ ಪಿಪಿಪಿ ಕೇವಲ ಸಿಂಧಿಗಳ ಪಕ್ಷ ವಾಯಿತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಇದೂ ಕೂಡ ಪಿಪಿಪಿಗೆ ದೊಡ್ಡ ಶಕ್ತಿಯೇ ಆಗಿದೆ. ಈ ವರ್ಷ ಸಿಂಧ್‌ನಲ್ಲಿ ಪಿಪಿಪಿ ೪೪ ಲೋಕಸಭೆ ಸೀಟುಗಳನ್ನು ಗೆದ್ದಿದೆ. ಎಂಕ್ಯುಎಂ ಇನ್ನುಳಿದ ೧೭ ಸೀಟುಗಳನ್ನು ಗೆದ್ದಿದೆ. ಇನ್ನಾವ ಪಕ್ಷದವರೂ ಅಲ್ಲಿಗೆ ಕಾಲಿಡಲು ಸಾಧ್ಯವಾಗಿಲ್ಲ. ಹಾಗಂತ ಈ ರಾಜಕೀಯ ಬಿಂದುಗಳು ಪಾಕಿಸ್ತಾನ ದಾದ್ಯಂತ ಒಂದಕ್ಕೊಂದು ಕನೆಕ್ಟ್ ಆಗುವುದಿಲ್ಲ. ಬಹುಶಃ ಪಾಕಿಸ್ತಾನದ ಚುನಾವಣಾ ಆಯೋಗವು ಜಗತ್ತಿನಲ್ಲೇ ಅತ್ಯಂತ ಸೌಮ್ಯ ಚುನಾವಣಾ ಆಯೋಗವೇ ಇರಬೇಕು.
ಫಲಿತಾಂಶದ ಸ್ಕೋರ್ ಬೋರ್ಡ್‌ನಲ್ಲಿ ಅದು ಯಾವತ್ತೂ ಶೂನ್ಯ ಎಂದು ಬರೆಯುವುದಿಲ್ಲ. ಬದಲಿಗೆ ಅದನ್ನು ತುಂಬಾ ವಿನಯಪೂರ್ವಕವಾಗಿ ‘ತೋರಿಸುವುದಕ್ಕೆ ಯಾವುದೇ ದತ್ತಾಂಶವಿಲ್ಲ’ ಎಂದು ಬರೆಯುತ್ತದೆ. ಸಿಂಧ್‌ನಲ್ಲಿ ಇಮ್ರಾನ್ ಖಾನ್‌ರ ತೆಹ್ರೀಕ್ ಎ ಇನ್ಸಾಫ್ ಪಕ್ಷದ ಹೆಸರಿನ ಮುಂದೆ ತೋರಿಸಲು ಯಾವುದೇ ಅಂಕಿಅಂಶ ಇರಲಿಲ್ಲ. ಪಠಾಣ್‌ಗಳು ಹಾಗೂ ಪಂಜಾಬಿಗಳ ಪ್ರದೇಶದಲ್ಲಿ ಜೋರಾಗಿದ್ದ ಇಮ್ರಾನ್ ಖಾನ್ ಅಲೆ ದಕ್ಷಿಣ ಪಂಜಾಬಿನಲ್ಲಿ ಕ್ಷೀಣಿಸಿತ್ತು. ಕರಾಚಿಯ ನಗರ ಪ್ರದೇಶದಲ್ಲೂ ಇಮ್ರಾನ್ ಮುಗ್ಗರಿಸಿದರು. ಲಾಹೋರ್‌ನಲ್ಲಿ ಬಿಲಾವಲ್ ಭುಟ್ಟೋ ಸಾರಾಸಗಟಾಗಿ ಸೋತಿದ್ದು ಹಾಗೂ ಸಿಂಧ್‌ನ ಎರಡು ಕ್ಷೇತ್ರಗಳಲ್ಲಿ ಸಲೀಸಾಗಿ ಗೆದ್ದಿದ್ದು- ಇವೆರಡೂ ಸಂಗತಿಗಳು ಒಂದೇ ಅಂಶವನ್ನು ಹೇಳುತ್ತವೆ.
ಪಠಾಣ್ ಇಮ್ರಾನ್ ಖಾನ್ ಮತ್ತು ಪಂಜಾಬಿ ನವಾಜ್ ಷರೀ- ಅವರು ಪಂಜಾಬ್‌ನ ೧೪೧ ರಾಷ್ಟ್ರೀಯ ಸಂಸತ್ ಸ್ಥಾನಗಳನ್ನು ಹಂಚಿಕೊಂಡಿದ್ದಾರೆ. ಇಮ್ರಾನ್ ೬೭ ಸೀಟು ಗೆದ್ದರೆ, ನವಾಜ್ ೫೫ ಸೀಟು ಗೆದ್ದಿದ್ದಾರೆ. ಇನ್ನುಳಿದ ಕ್ಷೇತ್ರಗಳು ಅಲಂಕಾರಕ್ಕಾಗಿ ಸ್ಪರ್ಧಿಸಿದ ಸಣ್ಣಪುಟ್ಟ ಪಕ್ಷಗಳಿಗೆ ಹೋಗಿವೆ.ಇದೇ ಮಾದರಿಯ ಫಲಿತಾಂಶ ಪ್ರಾಂತೀಯ ಚುನಾವಣೆಯಲ್ಲೂ ಬಂದಿದೆ. ಸಿಂಧ್ ಶಾಸನಸಭೆಗೆ ನಡೆದ ಚುನಾವಣೆಯಲ್ಲಿ ಪಿಪಿಪಿ ೮೪ ಸೀಟುಗಳನ್ನು,ಎಂಕ್ಯುಎಂ ೨೮ ಸೀಟುಗಳನ್ನು ಗೆದ್ದಿದ್ದರೆ, ಪಠಾಣ್ ಬೆಲ್ಟ್‌ನಲ್ಲಿ ಇಮ್ರಾನ್ ಖಾನ್ ಕ್ಲೀನ್ ಸ್ವೀಪ್ ಮಾಡಿದ್ದಾರೆ.
ಪಾಕಿಸ್ತಾನ ತುಂಬಾ ಅಪಾಯಕಾರಿ ರೀತಿ ಯಲ್ಲಿ ಪ್ರಾಂತೀಯವಾದದತ್ತ ಹೊರಳುತ್ತಿದೆ. ತಮ್ಮ ಪಕ್ಷದ ಚುನಾವಣಾ ಚಿಹ್ನೆಯಾದ ಕ್ರಿಕೆಟ್ ಬ್ಯಾಟನ್ನು ಕಿತ್ತುಕೊಂಡು, ಪಕ್ಷದ ಅಭ್ಯರ್ಥಿಗಳೆಲ್ಲ ಪಕ್ಷೇತರರಂತೆ ಸ್ಪರ್ಧಿಸುವ ಅನಿವಾರ್ಯತೆಯನ್ನು ಸೃಷ್ಟಿಸುವ ಮೂಲಕ ಚುನಾವಣಾ ಆಯೋಗ ತಮ್ಮನ್ನು ದರೋಡೆ ಮಾಡಿಬಿಟ್ಟಿತು ಎಂದು ಇಮ್ರಾನ್ ಖಾನ್ ಕಣ್ಣೀರು ಹಾಕುತ್ತಾರೆ. ಇದು ಎಷ್ಟು ನಿಜ? ಮತ ಎಣಿಕೆಯ ದಿನ ಅವರ ಬೆಂಬಲಿ ಗರ ರಣೋತ್ಸಾಹ ಬಹಳ ಜೋರಿತ್ತು. ಆದರೆ ಕೊನೇ ಕ್ಷಣದಲ್ಲಿ ಅವರಿಗೆ ಸಿಕ್ಕ ಬಹುಮತದಲ್ಲಿ ಕೊಂಚ ಕೊರತೆಯಾಯಿತು. ಆದರೂ ಅವರ ಸ್ವತಂತ್ರ ಅಭ್ಯರ್ಥಿಗಳು ರಾಷ್ಟ್ರೀಯ ಸಂಸತ್ತಿಗೆ ದೊಡ್ಡ ಸಂಖ್ಯೆ ಯಲ್ಲೇ ಆಯ್ಕೆಯಾಗಿದ್ದಾರೆ. ಅವರಿಗೆ ೯೩ ಸೀಟು ಗಳು ಬಂದಿವೆ. ಇದರರ್ಥ, ಮತದಾರರಿಗೆ ತಾವೇನು ಮಾಡು ತ್ತಿದ್ದೇವೆ ಎಂಬುದು ಗೊತ್ತಿತ್ತು. ಇಮ್ರಾನ್ ಖಾನ್‌ಗಿರುವ ಮುಂದಿನ ಸವಾಲೆಂದರೆ ತಮ್ಮ ಸ್ವತಂತ್ರ ಸಂಸದರನ್ನು ಹಿಡಿದಿಟ್ಟುಕೊಳ್ಳುವುದು. ಅವರಲ್ಲಿ ಬಹಳ ಜನರಿಗೆ ಸರಕಾರ ರಚಿಸುವ ರಾಜಕೀಯ ಪಕ್ಷದಿಂದ ಹುದ್ದೆ ಅಥವಾ ಹಣದ ಆಮಿಷ ಬರಬಹುದು.
ಈ ಚುನಾವಣೆಯಲ್ಲೂ ಇಮ್ರಾನ್ ಖಾನ್‌ಗೆ ತಮ್ಮ ವ್ಯಕ್ತಿತ್ವಕ್ಕಿರುವ ಮಿತಿಯನ್ನು ಮೀರಿ ಬೆಳೆಯಲು ಸಾಧ್ಯವಾಗಿಲ್ಲ. ಅವರು ಪಾಕಿಸ್ತಾನಕ್ಕಿರುವ ಸಾಕಷ್ಟುಸಮಸ್ಯೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡುವಲ್ಲಿ ಯಶಸ್ವಿಯಾಗಿದ್ದರೂ, ಯಾವತ್ತೂ ಪರಿಹಾರಗಳನ್ನು ಜನರ ಮುಂದಿಟ್ಟಿಲ್ಲ. ಪ್ರಧಾನಿ ಯಾಗಿದ್ದಾಗಲೂ ಅವರು ಜನರ ವಿಶ್ವಾಸವನ್ನು ಪೂರ್ತಿಯಾಗಿ ಉಳಿಸಿಕೊಳ್ಳಲಿಲ್ಲ. ಇನ್ನೊಂದೆಡೆ ಸೇನಾಪಡೆಯನ್ನು ಕೂಡ ಎದುರುಹಾಕಿಕೊಂಡರು.ಅವರ ಕಣ್ಣೆದುರೇ ಪಾಕಿಸ್ತಾನದ ಆರ್ಥಿಕತೆ ಕುಸಿ ಯಿತು. ಎಲ್ಲಾ ನಾಯಕರಿಗೂ ಅಗಾಧ ಬುದ್ಧಿಶಕ್ತಿ ಇರುವುದಿಲ್ಲ. ಆದರೆ ಅದರ ಕೊರತೆಯನ್ನು ತುಂಬಿಕೊಳ್ಳಲು ಎಲ್ಲೆಲ್ಲಿ ಯಾವ್ಯಾವ ತಜ್ಞರನ್ನು ನಿಯೋಜಿಸ ಬೇಕು ಎಂಬುದು ಅವರಿಗೆ ಗೊತ್ತಿರಬೇಕು.
ಸದಾ ಇಮ್ರಾನ್ ಖಾನ್ ವಿರುದ್ಧ ವಿಷ ಕಾರುವ ಲಾಹೋರ್ ನ ಸಮಾಜ ಒಮ್ಮೆ ಅವರನ್ನು ‘ಇಮ್ ದಿ ಡಿಮ್’ ಎಂದು ಕರೆದಿತ್ತು. ಈ ಹಣೆಪಟ್ಟಿಯನ್ನು ತೊಡೆದು ಹಾಕಲು ಪ್ರಧಾನಿಯಾಗಿದ್ದಾಗ ಇಮ್ರಾನ್ ಖಾನ್ ಯತ್ನಿಸಿದರು. ಆದರೆ ಯಶಸ್ವಿಯಾಗಲಿಲ್ಲ. ಅವರ ಬಳಿಯಿರುವ ಅಪ್ರತಿಮ ಆಸ್ತಿಯೆಂದರೆಪ್ರಾಮಾಣಿಕತೆ. ಅವರು ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೇ ತಾನು ವಿಽಯ ಕೂಸು ಎಂದು ನಂಬುತ್ತಾರೆ. ಅದು ಇನ್ನೊಂದು ಕತೆ. ಎಲ್ಲಾ ಪ್ರಜಾ ಪ್ರಭುತ್ವವೂ ಒಂದಲ್ಲಾ ಒಂದು ಸಮಯದಲ್ಲಿ ಮಹತ್ವಾಕಾಂಕ್ಷಿಗಳಿಂದ ನಲುಗುತ್ತದೆ. ಅಧಿಕಾರಕ್ಕೇರಲು ಅಲ್ಲಿನ ನಾಯಕರು ಶತಪ್ರಯತ್ನಮಾಡು ತ್ತಾರೆ. ಅದಕ್ಕಾಗಿ ತಮ್ಮಲ್ಲಿರುವ ಎಲ್ಲಾ ಶಬ್ದಭಂಡಾರವನ್ನು ಖರ್ಚು ಮಾಡುತ್ತಾರೆ.
ಆದರೆ, ೨೦೨೪ರ ಪಾಕಿಸ್ತಾನದ ಚುನಾವಣೆಯಲ್ಲಿ ಬಂದ ಫಲಿತಾಂಶವನ್ನು ನೋಡಿದರೆ ಈ ಚುನಾವಣೆಯಲ್ಲಿ ನಾಯಕರು ಅಧಿಕಾರದಿಂದ ದೂರವಿರು ವುದಕ್ಕೇ ಸೆಣಸಾಟ ನಡೆಸಿದ್ದು ಕಾಣಿಸುತ್ತದೆ! ಷರೀಫ್ ಮತ್ತು ಭುಟ್ಟೋಗಳು ‘ಮೊದಲು ನೀವು’ ಎಂಬ ಮಾತನ್ನು ಅಕ್ಷರಶಃ ಜೋಕ್ ಮಾಡಿಬಿಟ್ಟಿದ್ದಾರೆ. ಲಂಡನ್ನಿನ ಅಜ್ಞಾತವಾಸ ಮುಗಿಸಿ ಪಾಕಿಸ್ತಾನದ ಜನರಿಗೆ ಸೂರ್ತಿ ತುಂಬಲು ಸ್ವದೇಶಕ್ಕೆ ಮರಳಿದ ಮಾಜಿ ಪ್ರಧಾನಿ ನವಾಜ್ ಷರೀ- ತಮ್ಮ ಸೋದರ ಶೆಹಬಾಜ್ ಷರೀ- ಪ್ರಧಾನಿಯಾಗಲಿ ಎಂದು ಹೇಳಿ ಪಕ್ಕಕ್ಕೆ ಸರಿದುಬಿಟ್ಟರು. ಇತಿಹಾಸದಲ್ಲಿ ತಾನೊಬ್ಬ ತ್ಯಾಗಜೀವಿ ಎಂಬ ಅಭಿದಾನದಿಂದ ದಾಖಲಾ ಗುವ ಆಸೆ ಅವರಿಗೆ ಇದ್ದಂತಿದೆ. ಅತ್ಯುನ್ನತ ಹುದ್ದೆಯ ಮೇಲೆ ಕಣ್ಣಿಟ್ಟುಕೊಂಡೇ ರಾಜಕೀಯಕ್ಕೆ ಬಂದ ಬಿಲಾವಲ್ ಭುಟ್ಟೋ ಕೂಡ ಫಲಿತಾಂಶ ಬಂದ ನಂತರ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಪಕ್ಷ ಷರೀಫ್ ಅವರ ಸರಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತದೆ ಎಂದುಬಿಟ್ಟಿದ್ದಾರೆ. ಯಾವಾಗ ಅವರು ಪೂರೈಕೆ ನಿಲ್ಲಿಸುತ್ತಾರೋ ಆಗ ಅವರ ಗ್ಯಾಸ್ ಸ್ಟೇಷನ್‌ಗಳು ಖಾಲಿಯಾಗುತ್ತವೆ. ಗ್ಯಾಸ್ ಉಚಿತವಲ್ಲ.
ಅವರ ತಂದೆ ಆಸಿಫ್ ಅಲಿ ಜರ್ದಾರಿ ಅಧ್ಯಕ್ಷರಾಗುತ್ತಾರೆ. ಅದೊಂದು ಅಲಂಕಾರಿಕ ಹುದ್ದೆಯಾದರೂ ಆ ಹುದ್ದೆಗೆ ಪರಮಾಧಿಕಾರವಿದೆ. ಒಂದು ಸರಕಾರದ ಅಳಿವು ಉಳಿವಿನ ನಿರ್ಧಾರವನ್ನು ಅಧ್ಯಕ್ಷರೇ ತೆಗೆದುಕೊಳ್ಳುತ್ತಾರೆ. ಗೊಂಬೆಯಾಡಿಸುವುದರಲ್ಲಿ ಜರ್ದಾರಿಗೆ ಸಾಕಷ್ಟು ಪರಿಣತಿಯಿದೆ.ಪಾಕಿಸ್ತಾನಕ್ಕೀಗ ಕುಬ್ಜ ಸರಕಾರ ಲಭಿಸುತ್ತಿದೆ. ನೀವು ಗೋಡೆಯ ಮೇಲೆ ಮೊಟ್ಟೆ ಇಡಬಹುದು, ಆದರೆ ಅದು ಬೀಳುವುದನ್ನು ತಪ್ಪಿಸಲು ಆಗದು. ಶೆಹಬಾಜ್ ಷರೀಫ್ ಅರೆಬರೆ ಸರಕಾರದ ಮುಖ್ಯಸ್ಥರಾಗುತ್ತಾರೆ. ಅದು ಎರಡನೇ ಹುಟ್ಟುಹಬ್ಬ ಆಚರಿಸಿಕೊಂಡರೆ ಅದೇ ದೊಡ್ಡ ಅದೃಷ್ಟ. ಪಾಕಿಸ್ತಾನದ ಎರಡನೇ ವಿತ್ತ ಮಂತ್ರಿ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್). ಅದು ಯಾವಾಗಲೂ ಪಾಕಿಸ್ತಾನದ ಸರಕಾರ ಉಸಿರಾಡುವುದಕ್ಕೆ ಬೇಕಾಗು ವಷ್ಟು ಸಾಲ ನೀಡುತ್ತದೆ.
ಐಎಂಎಫ್ ಗೆ ಮತಗಳಲ್ಲಿ ಆಸಕ್ತಿಯಿಲ್ಲ. ತನ್ನ ಔಷಧಿ ತೀರಾ ಕಹಿಯಾದಾಗ ಅದು ಆಸ್ಪತ್ರೆಯಲ್ಲಿ ನಿಂತು ಗಹಗಹಿಸಿ ನಗುತ್ತದೆ. ರಾಜಕಾರಣಿಗಳು ನಿರಾಸಕ್ತ ರಾಗಲು ರಾಜಕೀಯ ವ್ಯವಸ್ಥೆಯಲ್ಲಿ ಜಾಗವಿಲ್ಲ. ಹೀಗಾಗಿ ಅವರಿಗೆ ಅಪಾಯದ ಅರಿವು ಇದ್ದೇ ಇರುತ್ತದೆ. ಮೊದಲಿಗೆ ಹೀರೋ ಆಗಿದ್ದ ಪ್ರಧಾನಿ ಕೂಡ ದೇಶ ದಲ್ಲಿ ಬೆಲೆಗಳು ಏರಿಕೆಯಾಗಿ, ಜನರು ಪರದಾಡುವಂತಾಗಿ, ಹಾದಿಬೀದಿಗಳಲ್ಲಿ ಅಶಾಂತಿ ತಾಂಡವವಾಡ ತೊಡಗಿದರೆ ಜನರ ಕಣ್ಣಿಗೆ ರಾಕ್ಷಸನಾಗಿಬಿಡುತ್ತಾನೆ.
(ಮುಂದುವರಿಯುವುದು)(ಲೇಖಕರು ಹಿರಿಯ ಪತ್ರಕರ್ತರು)