ಭೌತಶಾಸ್ತ್ರದ ಪಿತಾಮಹ ಐನ್‌’ಸ್ಟೀನ್
ಸಂಸ್ಮರಣೆ
ಡಾ.ಕಾರ್ತಿಕ್ ಜೆ.ಎಸ್
‘ಯಾರು ತಮ್ಮ ಕೆಲಸದ ಕಡೆಗೆ ತಮ್ಮ ಸಂಪೂರ್ಣ ಶಕ್ತಿಯನ್ನು ಸಮರ್ಪಿಸಿ ಆತ್ಮಪೂರ್ವಕವಾಗಿ ಕಾರ್ಯ ನಿರ್ವಹಿಸುತ್ತಾರೋ ಅವರು ನಿಜವಾದ ನಿಪುಣರಾಗಲು ಸಾಧ್ಯ’- ಇದು ವಿಶ್ವಶ್ರೇಷ್ಠ ವಿಜ್ಞಾನಿ, ಮಾನವತಾವಾದಿ ಆಲ್ಬರ್ಟ್ ಐನ್‌ಸ್ಟೀನ್ ರ ನುಡಿಮುತ್ತು. ವಿಜ್ಞಾನ ಪ್ರಪಂಚದಲ್ಲಿ ಲೋಕೋತ್ತರ ಕೀರ್ತಿ ಪಡೆದ ವಿಜ್ಞಾನಿಗಳಲ್ಲಿ ಐನ್‌ಸ್ಟೀನ್‌ರಿಗೆ ಅಗ್ರಸ್ಥಾನವಿದೆ; ‘ಆಧುನಿಕ ಭೌತಶಾಸದ ಪಿತಾಮಹ’ ಎಂಬ ಹೆಗ್ಗಳಿಕೆಯೂ ಅವರಿಗಿದೆ.
೧೮೭೯ರ ಮಾರ್ಚ್ ೧೪ರಂದು ಜರ್ಮನಿಯ ವುಟೆನ್‌ಬರ್ಗ್ ಪ್ರಾಂತ್ಯದ ಉಲ್ಮ್ ಎಂಬಲ್ಲಿ ಜನಿಸಿದ ಐನ್‌ಸ್ಟೀನ್‌ರಿಗೆ ಬಾಲ್ಯದಿಂದಲೇ ವಿಜ್ಞಾನವು ಅಚ್ಚುಮೆಚ್ಚಿನ ವಿಷಯವಾಗಿತ್ತು. ೧೮೯೪ರಲ್ಲಿ ಸ್ವಿಜ ರ್ಲೆಂಡ್‌ನ ಪೌರರಾಗಿ ಅಲ್ಲಿಯೇ ಆರಂಭಿಕ ವಿದ್ಯಾಭ್ಯಾಸವನ್ನು ಮುಗಿಸಿ, ನಂತರ ಜೂರಿಚ್ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಗಿಟ್ಟಿಸಿ ಕೊಂಡು ೧೯೦೦ರಲ್ಲಿ ಪದವಿಗೆ ಭಾಜನರಾದರು. ೧೯೦೫ರಲ್ಲಿ ಅವರಿಗೆ ಜೂರಿಚ್ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿತು. ಅದೇ ವರ್ಷ ಐನ್‌ಸ್ಟೀನ್‌ರಿಂದ ಪ್ರಕಟಗೊಂಡ ಐದು ಸಂಶೋಧನಾ ಪ್ರಬಂಧಗಳು ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟವು.
೧೯೧೫ರಲ್ಲಿ ಅವರು ಮಂಡಿಸಿದ ‘ಸಾಪೇಕ್ಷತಾ ಸಿದ್ಧಾಂತ’ (ಥಿಯರಿ ಆಫ್ ರಿಲೇಟಿವಿಟಿ) ವೈಜ್ಞಾನಿಕ ಲೋಕದಲ್ಲಿ ಒಂದು ಕ್ರಾಂತಿಯನ್ನೇ ಉಂಟು ಮಾಡಿತು. ಆಕಾಶ/ಅವಕಾಶ, ಕಾಲ ಮತ್ತು ಗುರುತ್ವ ಇವುಗಳ ಮೇಲೆ ಬೆಳಕು ಚೆಲ್ಲಿದ ಈ ಸಿದ್ಧಾಂತವು ಆಧುನಿಕ ಭೌತಶಾಸದ ಆಧಾರಸ್ತಂಭ ಗಳಲ್ಲಿ ಒಂದು ಎಂದೇ ಹೆಸರುಪಡೆದಿದೆ. ಅವರು ಅನ್ವೇಷಿಸಿದ ಉ=Iಇಪಿ ಎಂಬ ದ್ರವ್ಯರಾಶಿ-ಶಕ್ತಿ ಸಮೀ ಕರಣವು ಪರಮಾಣು ಬಾಂಬ್‌ನ ಅನ್ವೇಷಣೆಗೆ ನಾಂದಿಹಾಡಿತು. ೧೯೨೧ರಲ್ಲಿ ಐನ್‌ಸ್ಟೀನ್ ಆವಿಷ್ಕರಿಸಿದ ‘ದ್ಯುತಿ ವಿದ್ಯುತ್ಪರಿಣಾಮ ನಿಯಮ’ (Seಛಿ ಔZಡಿ ಟ್ಛ Peಟಠಿಟಛ್ಝಿಛ್ಚಿಠ್ಟಿಜ್ಚಿ ಉಛ್ಚಿಠಿ) ಅವರಿಗೆನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟಿತು. ಅವರ ಇನ್ನೊಂದು ಸಂಶೋಧನೆ ‘ಬ್ರೌನಿಯನ್ ಚಲನೆ’ ಕುರಿತದ್ದಾಗಿದೆ.
ದ್ರವವೊಂದರಲ್ಲಿ ಸೂಕ್ಷ್ಮ ಕಣಗಳು ಸಾಗುವ ಯಾದೃಚ್ಛಿಕ (Zbಟಞ) ಜಾಡನ್ನು ಸೂತ್ರದ ಮೂಲಕ ಕರಾರುವಾಕ್ಕಾಗಿ ನಿರೂಪಿಸಿದ ಐನ್ ಸ್ಟೀನ್ ಭೌತಶಾಸದ ಪ್ರಮುಖ ಶಾಖೆಯಾದ ‘ಕ್ವಾಂಟಮ್ ಮೆಕ್ಯಾ ನಿಕ್ಸ್’ನ ಬೆಳವಣಿಗೆಗೆ ಶ್ರಮಿಸಿದವರಲ್ಲಿ ಪ್ರಮುಖರು. ಈ ಶಾಖೆಯು ಇಡೀ ವಿಶ್ವದ ಅಣು, ಪರಮಾಣುಗಳ ಅಧ್ಯಯನ ನಡೆಸುವ ಕ್ಷೇತ್ರ ವಾಗಿದೆ. ‘ಸರ್ವಂ ಅಣುಂ-ಪರಮಾಣು ಮಯಂ ಜಗತ್’ ಎಂಬ ತಾತ್ವಿಕ ನಿರೂಪಣೆಗೆ ಭದ್ರವಾದ ವೈಜ್ಞಾನಿಕ ತಳಪಾಯ ಹಾಕಿದವರು ಐನ್‌ಸ್ಟೀನ್. ತಮ್ಮ ಜೀವಿತಾವಽಯಲ್ಲಿ ೩೦೦ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದ ಹಿರಿಮೆ ಅವರದ್ದು. ಆ ಪೈಕಿ, ನಮ್ಮ ದೇಶದ ಹೆಮ್ಮೆಯ ವಿಜ್ಞಾನಿ ಸತ್ಯೇಂದ್ರ ನಾಥ ಬೋಸರ ಜತೆಗೂಡಿ ಬರೆದ ‘ಬೋಸ್-ಐನ್‌ಸ್ಟೀನ್ ಸ್ಟಾಟಿಸ್ಟಿಕ್ಸ್’ ಪ್ರಮುಖ ವಾದುದು.
ಎರಡನೇ ಮಹಾಯುದ್ಧದ ಸಂದರ್ಭ. ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್‌ನ ಉಪಟಳಕ್ಕೆ ರೋಸಿಹೋಗಿದ್ದ ಯೆಹೂದಿಗಳು ಅಮೆರಿಕಕ್ಕೆ ವಲಸೆ ಹೋದರು. ಹೀಗೆ ತೆರಳಿದವರಲ್ಲಿ ಮೂಲತಃ ಯೆಹೂದಿ ವಣಿಕರ ಕುಟುಂಬದವರಾಗಿದ್ದ ಐನ್‌ಸ್ಟೀನ್ ಕೂಡ ಒಬ್ಬರು. ಅಮೆರಿಕದ ಪ್ರಿನ್ಸ್‌ಟನ್ ವಿಶ್ವ ವಿದ್ಯಾಲಯ ಇವರ ಸಾಧನೆ ಗಳನ್ನು ಗುರುತಿಸಿ ಗೌರವಪೂರ್ವಕವಾಗಿ ಬರಮಾಡಿಕೊಂಡಿತು. ಹೀಗೆ ಅಮೆರಿಕದಲ್ಲಿ ತಮ್ಮ ಸಂಶೋಧನೆ ಮುಂದುವರಿ ಸಿದ ಐನ್ ಸ್ಟೀನ್, ಪರಮಾಣು ಬಾಂಬ್ ತಯಾರಿಕೆ ತಂಡದ ಸದಸ್ಯರಾಗಿಯೂ ಕೆಲಸ ಮಾಡಿದರು. ವಿಶ್ವಶಾಂತಿಗಾಗಿ ಪರಮಾಣು ಬಾಂಬ್ ತಯಾರಿ ಸುವುದು ಅವರ ಉದ್ದೇಶವಾಗಿತ್ತು; ಆದರೆ ಮಹಾಯುದ್ಧದ ಸಂದರ್ಭದಲ್ಲಿ ಪರಮಾಣು ಬಾಂಬ್ ಉಂಟುಮಾಡಿದ ಅಪಾರ ನಾಶ ಮತ್ತು ಅದರಿಂದ ಉದ್ಭವಿಸಿದ ಜಾಗತಿಕ ಪರಮಾಣು ಸ್ಪರ್ಧೆಯನ್ನು ಕಂಡ ಐನ್‌ಸ್ಟೀನ್ ಅತೀವವಾಗಿ ಪರಿತಪಿಸಿದರು. ವಿಜ್ಞಾನ ಪ್ರಪಂಚಕ್ಕೆ ಮಾತ್ರವೇ ತಮ್ಮ ಬದುಕನ್ನು ಸೀಮಿತ ಗೊಳಿಸದ ಐನ್‌ಸ್ಟೀನ್, ಅಮೆರಿಕದಲ್ಲಿದ್ದಾಗ ಆಫ್ರಿಕನ್-ಅಮೆರಿಕನ್ನರ ಹಕ್ಕುಗಳಿಗಾಗಿ ಹೋರಾಟವನ್ನೂ ಕೈಗೊಂಡಿದ್ದರು.
ನಮ್ಮ ದೇಶದ ಮಹಾಪುರುಷರಾದ ಮಹಾತ್ಮ ಗಾಂಧೀಜಿ, ರವೀಂದ್ರನಾಥ ಟ್ಯಾಗೋರ್‌ರೊಂದಿಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರ ಜತೆಗೆ ಅವರ ಚಿಂತನೆಗಳನ್ನು ಗೌರವಿಸುತ್ತಿದ್ದರು. ವೈಜ್ಞಾನಿಕ ಸಂಶೋಧನೆ ಗಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಐನ್‌ಸ್ಟೀನ್ ೧೯೫೫ರ ಏಪ್ರಿಲ್ ೧೮ರಂದುಅಮೆರಿಕದ ಪ್ರಿನ್ಸ್‌ಟನ್ ಆಸ್ಪತ್ರೆಯಲ್ಲಿ ಕೊನೆಯು ಸಿರೆಳೆದರು. ದಾರ್ಶನಿಕ ವಿಜ್ಞಾನಿ ಐನ್‌ಸ್ಟೀನ್‌ರ ‘ಇತರರಿಗಾಗಿ ಬದುಕಿದಾಗ ಮಾತ್ರವೇ ಬದುಕು ಸಾರ್ಥಕ’ ಎಂಬ ಜೀವನ ಸಂದೇಶವನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ.
(ಲೇಖಕರು ಹವ್ಯಾಸಿ ಬರಹಗಾರರು)