  : ಗೂಗಲ್ ಜೆಮಿನಿಯಲ್ಲಿ ಈಗ ಕನ್ನಡ ಸೇರಿದಂತೆ 7 ಭಾಷೆ ಲಭ್ಯ
ಬೆಂಗಳೂರು:ಗೂಗಲ್‌ನ 10 ನೇ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಗೂಗಲ್ ಎಐ ಚಾಲಿತ ಗೂಗಲ್‌ ಜೆಮಿನಿಯಲ್ಲಿ ( ) ಹೊಸ ಫೀಚರ್‌ಗಳು ಲಭ್ಯವಾಗಿವೆ.  ಹಿಂದಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು ಮತ್ತು ಉರ್ದು ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಜೆಮಿನಿ ಲೈವ್ ಎಐ ಅಸಿಸ್ಟೆಂಟ್ ಸಿಗಲಿದೆ.
   ! 💪  1.5         .     ,    ,        .#://./Yh38BPvqjphttps://./cekeC20iaY
ಜೆಮಿನಿ ಲೈವ್ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆಯೊಂದಿಗೆ  ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಟೈಪ್ ಮಾಡುವುದನ್ನ ಮತ್ತು ಪ್ರಾಂಪ್ಟ್‌ ಮಾಡುವುದನ್ನು ತಪ್ಪಿಸಲು ಇದು ನೆರವಾಗುತ್ತದೆ.  ಜೆಮಿನಿ ಲೈವ್ ಚಾಟ್ ಜಿಪಿಟಿಯಲ್ಲಿ ಜಿಪಿಟಿ -4 ಒ ಮೂಲಕ ಲಭ್ಯವಿರುವ ಧ್ವನಿ ವಿಶೇಷದ ಕಾರ್ಯನಿರ್ವಹಿಸುತ್ತದೆ ಮತ್ತು 10 ಧ್ವನಿಗಳನ್ನು ಬೆಂಬಲಿಸುತ್ತದೆ. ಇದು ತುಂಬಾ ನೈಸರ್ಗಿಕ ಧ್ವನಿ ಸಂಭಾಷಣೆಯನ್ನು ಹೊಂದುವ ಸಲುವಾಗಿ ಜೆಮಿನಿ ಎಐನಲ್ಲಿ ಮಾತನ್ನು ಮಧ್ಯದಲ್ಲಿ ನಿಲ್ಲಿಸುವ ಫೀಚರ್‌ ಕೂಡ ನೀಡಲಾಗಿದೆ.
ಇದನ್ನೂ ಓದಿ: : ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್; ಪುಣೆ-ಬೆಂಗಳೂರು ಇಂಡಿಗೋ ಫ್ಲೈಟ್ 5 ಗಂಟೆ ವಿಳಂಬ
ಜೆಮಿನಿ ಲೈವ್ ಹ್ಯಾಂಡ್ಸ್-ಫ್ರೀ ಸಪೋರ್ಟ್‌ನೊಂದಿಗೆ ಬರುತ್ತದೆ. ಅಂದರೆ ಅಪ್ಲಿಕೇಶನ್ ಬ್ಯಾಕ್‌ಗ್ರೌಂಡ್‌ನಲ್ಲಿದ್ದಾಗ ಅಥವಾ ಅವರ ಫೋನ್ ಲಾಕ್ ಆಗಿದ್ದರೂ ಬಳಕೆದಾರರು ಎಐ ಚಾಟ್‌ಜಿಪಿಟಿ ಜತೆ ಸಂಭಾಷಣೆ ನಡೆಸಬಹುದು.
ಈ ಫೀಚರ್ ಅನ್ನು ಮೊದಲು ಆಗಸ್ಟ್‌ನಲ್ಲಿ ಗೂಗಲ್‌  ಪಿಕ್ಸೆಲ್ 9 ಸರಣಿ ಬಿಡುಗಡೆ ಸಮಾರಂಭದಲ್ಲಿ ಘೋಷಿಸಲಾಗಿತ್ತು.  ಪ್ರಾರಂಭದಲ್ಲಿ ಜೆಮಿನಿ ಅಡ್ವಾನ್ಸ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಆದಾಗ್ಯೂ, ಕೆಲವು ದಿನಗಳ ಹಿಂದೆ ಗೂಗಲ್ ಜೆಮಿನಿ ಲೈವ್ ಈಗ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗುತ್ತಿದೆ ಎಂದು ಘೋಷಿಸಿದೆ.