ರಾಜಸ್ಥಾನದ 13 ಜಿಲ್ಲೆಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ
ಜೈಪುರ:ರಾಜಸ್ಥಾನ ಸರ್ಕಾರ 13 ಜಿಲ್ಲೆಗಳಾದ ಕೋಟಾ, ಜೈಪುರ, ಜೋದ್​ಪುರ, ಉದಯಪುರ, ಬಿಕಾನೆರ್, ಉದಯಪುರ, ಅಜ್ಮೀರ್, ಅಲ್ವಾರ್​, ಭಿಲ್ವಾರಾ, ನಾಗೋರ್​, ಪಾಲಿ, ಟೋಂಕ್​, ಸಿಕಾರ್​ ಹಾಗೂ ಗಂಗಾನಗರದಲ್ಲಿ ಡಿ.1ರಿಂದ 31ರವರೆಗೆ ಈ ಕರ್ಫ್ಯೂ ವಿಧಿಸಿದೆ.
ಎಲ್ಲ ಮಾರುಕಟ್ಟೆಗಳು ಹಾಗೂ ವಾಣಿಜ್ಯ ಸಂಕೀರ್ಣಗಳು ರಾತ್ರಿ 7 ಗಂಟೆಗೆ ಮುಚ್ಚಬೇಕು. ರಾತ್ರಿ ಪಾಳಿ ಹೊಂದಿರುವ ಕಾರ್ಖಾನೆ ಗಳು, ಮೆಡಿಕಲ್​ ಶಾಪ್ ಗಳು, ಆಸ್ಪತ್ರೆ, ಮದುವೆ ಸಮಾರಂಭಕ್ಕೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.
ಡಿ. 31ರವರೆಗೆ ಕಂಟೈನ್ಮೆಂಟ್ ಝೋನ್​ಗಳಲ್ಲಿ ಲಾಕ್​ಡೌನ್​ ಜಾರಿಯಲ್ಲಿರುತ್ತೆ. ಈ ವಲಯದಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ಇನ್ನುಳಿದಂತೆ ಶಾಲಾ – ಕಾಲೇಜುಗಳು, ಶಿಕ್ಷಣ ತರಬೇತಿ ಸಂಸ್ಥೆಗಳು ಡಿಸೆಂಬರ್​ 31ರವರೆಗೂ ಬಂದ್​ ಇರಲಿದೆ.