ಗ್ಯಾಸ್‌ ಸಿಲಿಂಡರ್‌ ಸ್ಫೋಟ: 16 ಮಂದಿಗೆ ಗಾಯ
ಮುಂಬೈ:ನಾಲ್ಕು ಮಹಡಿಯುಳ್ಳ ಕಟ್ಟಡವೊಂದರಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡ ಪರಿಣಾಮ ಒಟ್ಟು 16 ಮಂದಿಗೆ ಗಾಯಗಳಾಗಿವೆ.
ಲಾಲ್‌ಬಾಗ್‌ ಪ್ರದೇಶದಲ್ಲಿ ಘಟನೆ ಸಂಭವಿಸಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟಾಣಿ ಬಾಲಕಿ ಮತ್ತು ಒಬ್ಬ ಮಹಿಳೆ ಸೇರಿದಂತೆ ನಾಲ್ವರಿಗೆ ಶೇ.70- 90ರಷ್ಟು ಗಂಭೀರ ಗಾಯಗಳಾಗಿವೆ.
ಗಣೇಶ್‌ ಗಲ್ಲಿಯ ಸಾರಾಭಾಯಿ ಅವರಿಗೆ ಸೇರಿದ್ದ ಮನೆ ಕಟ್ಟಡದ 2ನೇ ಮಹಡಿಯಲ್ಲಿ ಜ್ವಾಲೆ ಕಾಣಿಸಿಕೊಂಡಿದೆ. ಸಿಲಿಂಡರ್‌ ಸ್ಫೋಟದ ಪರಿಣಾಮ ಕೊಠಡಿಯ ಗೋಡೆಗಳು ಕುಸಿದುಬಿದ್ದಿವೆ.
