‘ಭಾರತ್ ಬಂದ್’ಗೆ ಟಿಆರ್‌ಎಸ್ ಬೆಂಬಲ
ಹೈದರಾಬಾದ್:ಕೃಷಿ ಕಾನೂನುಗಳ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ‘ಭಾರತ್ ಬಂದ್’ಗೆ ತೆಲಂಗಾಣದ ಆಡಳಿತಾರೂಢ ಟಿಆರ್‌ಎಸ್ ಬೆಂಬಲ ಘೋಷಿಸಿದೆ.
ಈ ಕುರಿತು ಮಾತನಾಡಿರುವ ಟಿಆರ್‌ಎಸ್ ನಾಯಕಿ ಕೆ.ಕವಿತಾ, ರೈತರು ಕರೆ ನೀಡಿರುವ ಭಾರತ್ ಬಂದ್‌ಗೆ ಪಕ್ಷದದ ಸಂಪೂರ್ಣ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಈಗಾಗಲೇ ಸಂಸತ್ತಿನಲ್ಲಿ ಈ ಕಾನೂನು ಜಾರಿ ವಿರುದ್ಧ ಧ್ವನಿ ಎತ್ತಿದ್ದೇವೆ.
ರೈತರ ಹೋರಾಟ ನ್ಯಾಯಯುತವಾಗಿರುವುದರಿಂದ, ಭಾರತ್ ಬಂದ್‌ಗೆ ಪಕ್ಷ ಬೆಂಬಲ ನೀಡಲಿದೆ ಅವರು ಹೇಳಿದ್ದಾರೆ.