14ನೇ ದಿನಕ್ಕೆ ಕಾಲಿಟ್ಟ ’ದೆಹಲಿ ಚಲೋ’: ಇನ್ನೋರ್ವ ರೈತನ ಸಾವು
ನವದೆಹಲಿ:ದೆಹಲಿಯಲ್ಲಿ ರೈತ ಹೋರಾಟದ ಕಿಚ್ಚು ಹೆಚ್ಚಾಗಿದ್ದು, ಬುಧವಾರ ನಡೆಯಬೇಕಿದ್ದ ಆರನೇ ಸುತ್ತಿನ ಮಾತುಕತೆ ರದ್ದಾಗಿದೆ.
ರಾಜಧಾನಿಯಲ್ಲಿ ಚಳಿಯೂ ಹೆಚ್ಚಾಗಿರುವುದರಿಂದಾಗಿ 32 ವರ್ಷದ ರೈತನೊಬ್ಬ ಕೊನೆಯುಸಿರೆಳೆದಿದ್ದಾನೆ. ಹರಿಯಾಣ ಮೂಲದ ಅಜಯ್​ ಮೋರ್​ ಮೃತ ದುರ್ದೈವಿ. ಕಳೆದ 10 ದಿನಗಳಿಂದ ಹೋರಾಟದಲ್ಲಿ ಭಾಗವಹಿಸಿದ್ದ. ಚಳಿ ಹೆಚ್ಚಿದ್ದರಿಂದ ಅದನ್ನು ತಾಳಲಾರದೆ ಮಂಗಳವಾರ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಅಜಯ್​ಗೆ ವಯಸ್ಸಾದ ತಂದೆ ತಾಯಿಯಿದ್ದಾರೆ. ಮೂರು ಮಕ್ಕಳಿರುವುದಾಗಿ ವರದಿ ಮಾಡಿದೆ. ರೈತ ಹೋರಾಟ ಆರಂಭವಾದ 14 ದಿನಗಳಲ್ಲಿ ಐವರು ರೈತರು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ.