ಹರಿಯಾಣದ ಆರೋಗ್ಯ ಸಚಿವ ಆಸ್ಪತ್ರೆಗೆ ದಾಖಲು
ಅಂಬಾಲಾ:ಕೋವಿಡ್‌-19 ದೃಢಪಟ್ಟಿದ್ದರಿಂದ ಹರಿಯಾಣದ ಆರೋಗ್ಯ ಸಚಿವ ಅನಿಲ್‌ ವಿಜ್‌ ಅವರನ್ನು ರೋಹ್ಟಕ್‌ನ ಪಿಜಿಐಎಂಎಸ್‌ ಆಸ್ಪತ್ರೆಗೆ ಭಾನುವಾರ ಸ್ಥಳಾಂತರಿಸಲಾಗಿದೆ.
‘ಸಚಿವ ವಿಜ್‌ ಅಸ್ವಸ್ಥಗೊಂಡ ಕಾರಣ ರೋಹ್ಟಕ್‌ ಆಸ್ಪತ್ರೆಗೆ ಶನಿವಾರ ರಾತ್ರಿ ಸ್ಥಳಾಂತರಿಸಲಾಗಿದೆ. ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ’ ಎಂದು ಸಾರ್ವಜನಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಕ  ಸಿಂಗ್‌ ತಿಳಿಸಿದರು.
ಕೊವ್ಯಾಕ್ಸಿನ್‌ ಲಸಿಕೆಯನ್ನು 67 ವರ್ಷದ ಅನಿಲ್‌ ಅವರ ಮೇಲೂ ಪ್ರಯೋಗಿಸಲಾಗಿತ್ತು. ಅದಾದ ನಂತರ ಡಿ.5ರಂದು ಅವರಿಗೆ ಕೋವಿಡ್‌-19 ದೃಢಪಟ್ಟಿತು.