ಜನವರಿ 29-ಫೆ.15ರ ವರೆಗೆ ಕೇಂದ್ರ ಬಜೆಟ್‌ ಅಧಿವೇಶನ
ನವದೆಹಲಿ:ಪ್ರಸಕ್ತ ಸಾಲಿನ ಕೇಂದ್ರ ಬಜೆಟ್‌ ಅಧಿವೇಶನದ ಮೊದಲ ಸುತ್ತು ಇದೇ ಜನವರಿ ತಿಂಗಳ 29 ರಿಂದ ಫೆ.15ರ ವರೆಗೆ ಅಧಿವೇಶನ ನಡೆಯಲಿದೆ ಎಂದು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ತಿಳಿಸಿದೆ.
ಇದರ ಮುಂದುವರಿದ ಭಾಗ ಮಾರ್ಚ್‌ 8 ರಿಂದ ಏಪ್ರಿಲ್‌ 8 ರವರೆಗೆ ನಡೆಯಲಿದೆ.
ಈ ನಡುವೆ ಫೆಬ್ರವರಿ 1 ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸಲಿದ್ದಾರೆ.
