ಲಸಿಕೆ ಅಭಿಯಾನ: ಶುಭ ಕೋರಿದ ಭೂತಾನ್ ಪ್ರಧಾನಿ
ತಿಮ್ಫು (ಭೂತಾನ್):ಕೊರೋನಾ ವಿರುದ್ಧ ದೇಶವ್ಯಾಪಿ ಲಸಿಕೆ ಅಭಿಯಾನ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಭೂತನ್ ಪ್ರಧಾನಿ ಲೋಟೇ ಶೆರಿಂಗ್ ಶುಭಾಶಯಗಳನ್ನು ಕೋರಿದ್ದಾರೆ.
ಕೊರೋನಾ ಲಸಿಕೆ ಆಂದೋಲನಕ್ಕೆ ಚಾಲನೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಾಗೂ ಭಾರತದ ಜನತೆಗೆ ಶುಭಾಶಯಗಳನ್ನು ಕೋರಲು ಇಚ್ಛಿಸುತ್ತೇನೆಂದು ಹೇಳಿದ್ದಾರೆ.
ಲಸಿಕೆಯು ಸಾಂಕ್ರಾಮಿಕ ರೋಗದಿಂದ ನಾವು ಸಹಿಸಿಕೊಂಡ ಎಲ್ಲಾ ನೋವುಗಳನ್ನು ಸಮಾಧಾನಗೊಳಿಸುವ ಉತ್ತರವಾಗಿ ಹೊರಬರಲಿದೆ ಎಂದು ಭಾವಿಸುತ್ತೇವೆಂದು ತಿಳಿಸಿದ್ದಾರೆ.