ಟ್ರಕ್‌ ಹರಿದು ನಿದ್ದೆಯಲ್ಲಿದ್ದ 13 ಮಂದಿ ಸಾವು
ಸೂರತ್‌:ಗುಜರಾತ್‌ನ ಕೋಸಂಬಾದಲ್ಲಿ ಟ್ರಕ್‌ ಹರಿದು 13 ಮಂದಿ ಸಾವಿ ಗೀಡಾಗಿರುವ ದುರ್ಘಟನೆ ಸಂಭವಿಸಿದೆ.
ಮೃತರು ರಾಜಸ್ಥಾನದಿಂದ ಬಂದಿದ್ದ ವಲಸೆ ಕಾರ್ಮಿಕರು ಸೋಮವಾರ ರಾತ್ರಿ ಫೂಟ್‌ಪಾತ್‌ ಮೇಲೆ ನಿದ್ರೆಯಲ್ಲಿದ್ದಾಗ ಘಟನೆ ನಡೆದಿದೆ. ಕಾರ್ಮಿಕರೆಲ್ಲರೂ ರಾಜಸ್ಥಾನದ ಬಾಂಸ್ವಾಡಾ ಮೂಲದವರೆಂದು ವರದಿಯಾಗಿದೆ.
ಟ್ರ್ಯಾಕ್ಟರ್‌ಗೆ ಡಿಕ್ಕಿಯಾಗಿರುವ ಕಬ್ಬು ತುಂಬಿದ್ದ ಟ್ರಕ್‌, ಚಾಲಕನ ನಿಯಂತ್ರಣಕ್ಕೆ ಸಿಗದೆ ಫೂಟ್‌ಪಾತ್‌ ಮೇಲೆ ಸಾಗಿದೆ.  ಮಲಗಿದ್ದವರ ಪೈಕಿ 13 ಮಂದಿ ಮೃತ ಪಟ್ಟಿದ್ದು, ಗಾಯಗೊಂಡಿರುವ ಆರು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.