ಪಶ್ಚಿಮ ಬಂಗಾಳದ ಐಜಿಪಿ ಹುಮಾಯುನ್ ಕಬೀರ್ ರಾಜೀನಾಮೆ
ಕೊಲ್ಕತ್ತಾ:ಪಶ್ಚಿಮ ಬಂಗಾಳದ ಇನ್ಸ್ ಪೆಕ್ಟರ್ ಜನರಲ್(ಐಜಿಪಿ) ಗ್ರೇಡ್ ಅಧಿಕಾರಿ ಹುಮಾಯುನ್ ಕಬೀರ್ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆಗೆ ಬಿಜೆಪಿ ಕಾರ್ಯಕರ್ತರು ಕಾರಣ ಎಂದು ಆರೋಪಿಸಿದ್ದಾರೆ.
ಚಂದನನಗರ ಪೊಲೀಸ್ ಕಮೀಷನರ್ ಆಗಿದ್ದ ಅವರು “ಉಗ್ರಗಾಮಿಗಳಿಗೆ ಗುಂಡು ಹೊಡೆಯಿರಿ” ಎಂದು ಹೇಳಿದ್ದ ಮೂವರು ಬಿಜೆಪಿ ಕಾರ್ಯಕರ್ತರ ಬಂಧನಕ್ಕೆ ಆದೇಶಿಸಿದ್ದರು. ಘಟನೆ ನಡೆದು ಕೆಲವೇ ದಿನದಲ್ಲಿ ರಾಜೀನಾಮೆ ನೀಡಿದ್ದಾರೆ.
ವೈಯಕ್ತಿಕ ಕಾರಣಕ್ಕಾಗಿ ರಾಜೀನಾಮೆ ಕೊಡುತ್ತಿರುವುದಾಗಿ ತಮ್ಮ ಅಧಿಕೃತ ಪತ್ರದಲ್ಲಿ ತಿಳಿಸಿದ್ದಾರೆ.