 : ಅತ್ಯಾಚಾರ ತಡೆಯಲು ಬಂದಿದೆ ಆ್ಯಂಟಿ ರೇಪ್‌ ಕಾಂಡೋಮ್‌, ಬಲಾತ್ಕಾರಕ್ಕಿಳಿದ ಪುರುಷನ ಕತೆ ಅಷ್ಟೇ!
ನ್ಯೂಯಾರ್ಕ್‌:ಕೋಲ್ಕತ್ತಾದ ಟ್ರೈನಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ( ) ಹಾಗೂ ಕೊಲೆ ಪ್ರಕರಣ ( ) ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಹಿಳೆಯರ ಸುರಕ್ಷತೆಯ ಬಗ್ಗೆ ಪ್ರಶ್ನೆಗಳೆದ್ದಿವೆ. ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವು ರಾಜ್ಯಗಳಲ್ಲಿ ಬರ್ಬರ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಈ ಅತ್ಯಾಚಾರಿ ಪುರುಷರನ್ನು ಸ್ಥಳದಲ್ಲೇ ತಡೆಯಲು, ಅಲ್ಲೇ ಶಿಕ್ಷೆಯಾಗುವಂತೆ ಮಾಡಲು ಸಾಧ್ಯವಿಲ್ಲವೇ?
ಇದೆ ಅನ್ನುತ್ತದೆ ಹೊಸ ಆವಿಷ್ಕಾರ. ಈ ಸಮಸ್ಯೆಗೆ ವೈದ್ಯೆಯೊಬ್ಬರು ಉತ್ತಮ ಪರಿಹಾರ ಕಂಡುಕೊಂಡಿದ್ದಾರೆ. ಇದನ್ನು ಹೆಣ್ಣು ಬಳಸಿದರೆ ಅತ್ಯಾಚಾರಿಗಳು ಸುರಕ್ಷಿತವಾಗಿರುವುದು ಕಷ್ಟ.
ವರದಿಯ ಪ್ರಕಾರ, ಅತ್ಯಾಚಾರ ವಿರೋಧಿ ಸಾಧನವನ್ನು ಆವಿಷ್ಕರಿಸಿದವರು ಆಫ್ರಿಕಾದ ವೈದ್ಯೆ ಡಾ. ಸೋನೆಟ್ ಎಹ್ಲರ್ಸ್. ಹಲವು ವರ್ಷಗಳ ಸಂಶೋಧನೆಯ ನಂತರ ಈ ಸಾಧನವನ್ನು ರಚಿಸಿದ್ದಾರೆ. ಅತ್ಯಾಚಾರ ಸಂತ್ರಸ್ತೆಯೊಬ್ಬಳ ಪ್ರಕರಣ ಆಕೆಗೆ ಬಂದಾಗ ಆಕೆಯ ಸ್ಥಿತಿ ನೋಡಿ ಸೋನೆಟ್‌ ತುಂಬಾ ನೊಂದುಕೊಂಡಳು. ಅತ್ಯಾಚಾರ ಸಂತ್ರಸ್ತೆಯನ್ನು ಕ್ರೂರವಾಗಿ ನಡೆಸಿಕೊಳ್ಳಲಾಗಿತ್ತು. ಅವಳು ಸರಿಯಾಗಿ ಉಸಿರಾಡಲು ಸಹ ಸಾಧ್ಯವಿರಲಿಲ್ಲ ಮತ್ತು ನಿರ್ಜೀವ ಶವದಂತಿದ್ದಳು. ಈ ಪ್ರಕರಣದಿಂದಲೇ ಡಾ. ಸಾನೆಟ್ ಎಹ್ಲರ್ಸ್ ಈ ಸಾಧನವನ್ನು ತಯಾರಿಸುವ ಪ್ರೇರಣೆ ಪಡೆದರು.
ಈ ಅತ್ಯಾಚಾರ-ವಿರೋಧಿ ಸಾಧನಕ್ಕೆ - ಎಂದು ಹೆಸರಿಸಲಾಗಿದೆ. ಇದು ಕಾಂಡೋಮ್‌ನಂತೆಯೇ ಇದೆ. ಆದರೆ ಅದರೊಳಗೆ ಚೂಪಾದ ಮುಳ್ಳಿನ ಕೊಕ್ಕೆಗಳಿವೆ. ಒಬ್ಬ ಪುರುಷನು ಅತ್ಯಾಚಾರಕ್ಕೆ ಪ್ರಯತ್ನಿಸಿದಾಗ ಮಹಿಳೆಯರು ಅದನ್ನು ಬಳಸಬಹುದು. ಆಗ ಈ ಕಾಂಡೋಮ್ ನ ಮುಳ್ಳುಗಳಲ್ಲಿ ಆತನ ಖಾಸಗಿ ಅಂಗ ಸಿಲುಕಿ ನೋವಿನಿಂದ ಚೀರಾಡುತ್ತಾನೆ. ಅಂದರೆ ಇದನ್ನು ಮಹಿಳೆ ಅಪಾಯದ ಸನ್ನಿವೇಶಗಳಲ್ಲಿ ಧರಿಸಿರಬೇಕು.
ಸೊನೆಟ್ ಎಹ್ಲರ್ಸ್ ಪ್ರಕಾರ, ಇದು ನೋವುಂಟುಮಾಡುತ್ತದೆ, ಈ ಕಾಂಡೋಮ್‌ಗೆ ಆರೋಪಿಯ ಖಾಸಗಿ ಅಂಗ ಸಿಕ್ಕಿಹಾಕಿಕೊಂಡಾಗ, ಆರೋಪಿಯು ಮೂತ್ರ ವಿಸರ್ಜಿಸಲು ಸಾಧ್ಯವಿಲ್ಲ ಅಥವಾ ಅವನು ನಡೆಯಲೂ ಸಾಧ್ಯವಿಲ್ಲ. ಅವನು ಅದನ್ನು ತೆಗೆದುಹಾಕಲು ಪ್ರಯತ್ನಿಸಿದರೂ, ಕಾಂಡೋಮ್ ಗಟ್ಟಿಯಾಗಿ ಅಂಟಿಕೊಳ್ಳುವುದರಿಂದ ಅವನು ತೊಂದರೆ ಎದುರಿಸಬೇಕಾಗುತ್ತದೆ. ಈ ಸಾಧನವು ವ್ಯಕ್ತಿಯ ಖಾಸಗಿ ಭಾಗಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುವುದಿಲ್ಲ, ಆದರೆ ಕೆಲವು ದಿನಗಳ ನಂತರ ನೋವು ಗುಣವಾಗುತ್ತದೆ. ಈ ಮೂಲಕ ಮಹಿಳೆಯರು ಅತ್ಯಾಚಾರದಂತಹ ದೌರ್ಜನ್ಯಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಈ ಸಾಧನವನ್ನು ಆಂಟಿ ರೇಪ್ ಡಿವೈಸ್ ಎಂದೂ ಕರೆಯಲಾಗುತ್ತಿದೆ.