 : ತುಮಕೂರು- ಯಶವಂತಪುರ ಮೆಮು ರೈಲು ಓಡಾಟ ಶೀಘ್ರದಲ್ಲೇ ಆರಂಭ: ವಿ.ಸೋಮಣ್ಣ
ಬೆಂಗಳೂರು:ತುಮಕೂರು () ಜನತೆಯ ಬಹುದಿನಗಳ ಬೇಡಿಕೆಯಾದ ‘ರೆಗ್ಯುಲರ್ ಪ್ಯಾಸೆಂಜರ್ ಫ್ರೆಂಡ್ಲಿ ಮೆಮು ಟ್ರೈನ್’ ಸರ್ವಿಸ್ (  ) ಓಡಾಟ ಸದ್ಯದಲ್ಲೇ ಆರಂಭವಾಗಲಿದೆ. ಈ ರೈಲು ಓಡಾಟಕ್ಕೆ ರೈಲ್ವೆ ಇಲಾಖೆ ( ) ಅನುಮೋದನೆ ನೀಡಿರುವುದಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ( ) ತಿಳಿಸಿದ್ದಾರೆ.
ತುಮಕೂರುನಿಂದ ಬೆಂಗಳೂರು ಹಾಗೂ ಬೆಂಗಳೂರಿಂದ ತುಮಕೂರಿಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಪ್ಯಾಸೆಂಜರ್ ಟ್ರೈನ್ ಓಡಾಡಿಸಲು ತುಮಕೂರು ಜನತೆಯ ಬಹಳ ದಿನಗಳ ಬೇಡಿಕೆ ಇತ್ತು. ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ಹಾಗೂ ತುಮಕೂರಿನ ಸಂಸದರಾದ ವಿ.ಸೋಮಣ್ಣ ಅವರ ಬಳಿ ತುಮಕೂರಿನ ಜನತೆ ತಮ್ಮ ಬೇಡಿಕೆ ಇಟ್ಟಿದ್ದರು. ಇದಕ್ಕೆ ಸ್ಪಂದಿಸಿದ ಸಚಿವರು ಈ ಬಗ್ಗೆ ಕ್ರಮ ಜರುಗಿಸುವುದಾಗಿ ತುಮಕೂರಿನ ಜನತೆಗೆ ಮೊದಲ ಭೇಟಿಯಲ್ಲೇ ಭರವಸೆ ನೀಡಿದ್ದರು.
ದಿನಾಂಕ 02.09.2024 ರಂದು ರೈಲ್ವೆ ಇಲಾಖೆ ತುಮಕೂರು-ಯಶವಂತಪುರ ಮಾರ್ಗವಾಗಿ ಮೆಮು () ಟ್ರೈನ್ ಓಡಾಟಕ್ಕೆ ಅನುಮೋದನೆ ಹೊರಡಿಸಿದೆ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ.
ಮೆಮು ರೈಲು ಸೇವೆ ವಿವರ ಈ ಕೆಳಗಿನಂತಿದೆ:
ತುಮಕೂರು-ಯಶವಂತಪುರ ಮೆಮು ಟ್ರೈನ್ 06201(66561) ಬೆಳಗ್ಗೆ 8.55ಕ್ಕೆ ತುಮಕೂರಿಂದ ಹೊರಟು 10.25ಕ್ಕೆ ಯಶವಂತಪುರ ತಲುಪಲಿದೆ.
ಟ್ರೇನ್ ಸಂಖ್ಯೆ 06202(66562) ಯಶವಂತಪುರದಿಂದ 5.40ಕ್ಕೆ ಹೊರಟು ಸಾಯಂಕಾಲ 7.05ಕ್ಕೆ ತುಮಕೂರು ತಲುಪಲಿದೆ.
ಪ್ರತಿ ಸೋಮವಾರ ವಿಶೇಷ ಮೆಮು ಟ್ರೈನ್ ನಂಬರ್ 06205(6565) ಬಾಣಸವಾಡಿ ರೈಲ್ವೆ ನಿಲ್ದಾಣದಿಂದ 6.15ಕ್ಕೆ ಹೊರಟು ತುಮಕೂರಿಗೆ 8.35ಕ್ಕೆ ತಲುಪಲಿದೆ.
ಅದೇ ರೀತಿ ಪ್ರತಿ ಶನಿವಾರ ವಿಶೇಷ ಮೆಮು ಟ್ರೈನ್ ನಂಬರ್ 06206(66566) ತುಮಕೂರಿನಿಂದ ಸಾಯಂಕಾಲ 7.40ಕ್ಕೆ ಹೊರಟು ರಾತ್ರಿ 10.05ಕ್ಕೆ ಬಾಣಸವಾಡಿ ತಲುಪಲಿದೆ.
ಭಾನುವಾರ ಹೊರತುಪಡಿಸಿ ವಾರದ 6 ದಿನಗಳಲ್ಲಿ ತುಮಕೂರು-ಯಶವಂತಪುರ ಮಾರ್ಗದಲ್ಲಿ ಈ ಮೆಮು ರೈಲು ಚಲಿಸಲಿದೆ.
ನಿಲುಗಡೆ ನಿಲ್ದಾಣಗಳು:
ಕ್ಯಾತಸಂದ್ರಹೀರೇಹಳ್ಳಿದಾಬಸ್ ಪೇಟೆನಿಡವಂದಮುದ್ದಲಿಂಗನಹಳ್ಳಿದೊಡ್ಡಬೆಲೆಭೈರನಾಯಕನಹಳ್ಳಿಗೊಲ್ಲಹಳ್ಳಿಸೋಲದೇವನಹಳ್ಳಿಚಿಕ್ಕಬಾಣಾವರ
ಯಶವಂತಪುರ – ಹೊಸೂರು ಮೆಮು ರೈಲು ಓಡಾಟಕ್ಕೂ ಸಹ ರೈಲ್ವೆ ಇಲಾಖೆ ಅನುಮೋದನೆ ನೀಡಿದೆ.
ಟ್ರೈನ್ ಸಂಖ್ಯೆ 06203(66563) ಯಶವಂತಪುರ- ಹೊಸೂರು ಮಾರ್ಗವಾಗಿ ಮೆಮು ರೈಲು ಚಲಿಸಲಿದ್ದು ಬೆಳಗ್ಗೆ 10.45ಕ್ಕೆ ಯಶವಂತಪುರದಿಂದ ಹೊರಟು ಮಧ್ಯಾಹ್ನ 12.30ಕ್ಕೆ ಹೊಸೂರು ತಲುಪಲಿದೆ.
ಅದೇ ರೀತಿ 06204(66564) ಹೊಸೂರು – ಯಶವಂತಪುರ ಮೆಮು ಸಾಯಂಕಾಲ 3.20ಕ್ಕೆ ಹೊಸೂರಿನಿಂದ ಹೊರಟು ಸಾಯಂಕಾಲ 5.15ಕ್ಕೆ ಯಶವಶವಂತಪುರ ತಲುಪಲಿದೆ.
ನಿಲುಗಡೆ ನಿಲ್ದಾಣಗಳು:
ಹೆಬ್ಬಾಳಬಾಣಸವಾಡಿಬೆಳ್ಳಂದೂರು ರಸ್ತೆಕಾರ್ಮೆಲರಾಂಹೀಲಲಿಆನೆಕಲ್ ರಸ್ತೆ
ಕೆಲವೇ ದಿನಗಳಲ್ಲಿ ಈ ಎರಡು ಮಾರ್ಗಗಳಲ್ಲಿ ಮೆಮು () ರೈಲುಗಳ ಓಡಾಟಕ್ಕೆ ಚಾಲನೆ ನೀಡುವುದಾಗಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ. ಕರ್ನಾಟಕ ರಾಜ್ಯದ ಮತ್ತು ತುಮಕೂರಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸಿ ಮೆಮು ರೈಲುಗಳ ಸೇವೆಯನ್ನು ಒದಗಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ರಾಜ್ಯದ ಜನತೆಯ ಪರವಾಗಿ ಸೋಮಣ್ಣ ಅಭಿನಂದನೆ ತಿಳಿಸಿದ್ದಾರೆ.