ದೇಶದ 62 ರೈಲು ನಿಲ್ದಾಣಗಳಲ್ಲಿ ನಾಳೆಯಿಂದ ಇ-ಕ್ಯಾಟರಿಂಗ್ ಸೇವೆ ಆರಂಭ
ನವದೆಹಲಿ:ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ.
2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆ ಆರಂಭಿಸಿತ್ತು. ವೆಬ್ ಸೈಟ್ ಅಥವ ಪೋನ್ ಮೂಲಕ ಪ್ರಯಾಣಿ ಕರು ಆಹಾರವನ್ನು ಆರ್ಡರ್ ಮಾಡಿ ಪಡೆಯಬಹುದಾಗಿತ್ತು. ಆದರೆ, ಕೋವಿಡ್ ಸಮಯದಲ್ಲಿ ಭಾರತೀಯ ರೈಲ್ವೆ ಸ್ಥಗಿತಗೊಳಿಸಿತ್ತು. ಸುಮಾರು 1 ವರ್ಷದ ಬಳಿಕ ಈ ಸೇವೆಯನ್ನು ಪುನಃ ಆರಂಭಿಸಲಾಗುತ್ತಿದೆ.
ಫುಡ್ ಆನ್ ಟ್ರಾಕ್ ಅಪ್ಲಿಕೇಶನ್‌ ಮೂಲಕ ಪ್ರಯಾಣಿಕರು ಆಹಾರಕ್ಕಾಗಿ ಮನವಿ ಸಲ್ಲಿಸಬಹುದಾಗಿದೆ.
ದೆಹಲಿ, ಲಕ್ನೋ, ಭೋಪಾಲ್, ಪಾಟ್ನಾ, ಸೂರತ್, ಅಹಮದಾಬಾದ್, ಪುಣೆ, ಹೌರಾ, ವಿಜಯವಾಡಿ, ಎರ್ನಾಕುಲಂ, ಉಜ್ಜೈನಿ ಸೇರಿದಂತೆ ದೇಶದ 62 ರೈಲು ನಿಲ್ದಾಣಗಳಲ್ಲಿ ಸೋಮವಾರದಿಂದ ಇ-ಕ್ಯಾಟರಿಂಗ್ ಸೇವೆ ಆರಂಭವಾಗಲಿದೆ.
ಪ್ರಯಾಣಿಕರು 1323 ನಂಬರ್‌ಗೆ ಕರೆ ಮಾಡುವ ಮೂಲಕವೂ ಆಹಾರಕ್ಕಾಗಿ ಆರ್ಡರ್‌ ಸಲ್ಲಿಸಬಹುದು. ಜನರು ಐಆರ್‌ಸಿಟಿಸಿಯ    ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಬೇಡಿಕೆ ಸಲ್ಲಿಸಬಹುದು. ಜನರ ಉಪಯೋಗಕ್ಕಾಗಿ ಕ್ಯಾಶ್ ಆನ್ ಡೆಲಿವರಿ ವ್ಯವಸ್ಥೆ ಸಹ ಸ್ಥಾಪಿಸಲಾಗಿದೆ.