ಇಂದು ಕೇಂದ್ರ ಹಣಕಾಸು ಬಜೆಟ್ ಮಂಡನೆ
ನವದೆಹಲಿ:ಸೋಮವಾರ (ಫೆ.1) ಪ್ರಸಕ್ತ ಸಾಲಿನ  ಕೇಂದ್ರ ಬಜೆಟ್‌ ಮಂಡನೆಯಾಗುತ್ತಿದ್ದು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಲಿದ್ದಾರೆ.
ಇಂದಿನ ಬಜೆಟ್ ನ ‌ ತಂಡದ ಪ್ರಮುಖರ ವಿವರ ಇಂತಿದೆ.
ನಿರ್ಮಲಾ ಸೀತಾರಾಮನ್‌:ಕೇಂದ್ರ ಹಣಕಾಸು ಸಚಿವರಾಗಿ ಮೂರನೇ ಬಜೆಟ್‌ ಅನ್ನು ಮಂಡಿಸಲಿದ್ದಾರೆ.
ಅಜಯ್‌ ಭೂಷಣ್‌ ಪಾಂಡೆ:ಹಣಕಾಸು ಇಲಾಖೆಯ ಹಿರಿಯ ಕಾರ್ಯದರ್ಶಿ. ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಸಿಇಒ ಆಗಿದ್ದವರು. ವಿಶಿಷ್ಟ ಗುರುತಿನ ಪ್ರಾಧಿಕಾರದಲ್ಲಿ ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ ಮುಖ್ಯಸ್ಥರಾಗಿ ಒಂಬತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಕೃಷ್ಣಮೂರ್ತಿ ಸುಬ್ರಮಣಿಯನ್‌:ಮುಖ್ಯ ಆರ್ಥಿಕ ಸಲಹೆಗಾರರು. ಅರ್ಥಶಾಸ್ತ್ರ, ಬ್ಯಾಂಕಿಂಗ್‌, ಕಾರ್ಪೊರೇಟ್‌ ಆಡಳಿತ ತಜ್ಞರು.
ಟಿ.ವಿ ಸೋಮನಾಥನ್‌:ವೆಚ್ಚ ಇಲಾಖೆ ಕಾರ್ಯದರ್ಶಿ. 1987ರ ಬ್ಯಾಚ್‌ ನ ಐಎಎಸ್‌ ಅಧಿಕಾರಿ.
ತರುಣ್‌ ಬಜಾಜ್‌:ಆರ್ಥಿಕ ವ್ಯವಹಾರ ಇಲಾಖೆ ಕಾರ್ಯದರ್ಶಿ. 1988ರ ಬ್ಯಾಚ್‌ನ ಅಧಿಕಾರಿ (ಹರಿಯಾಣ). ಬಜಾಜ್ ಕಳೆದ ವರ್ಷ ಮೇ ತಿಂಗಳಲ್ಲಿ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು.
ತುಹಿನ್‌ ಕಾಂತಾ:ಹೂಡಿಕೆ ಮತ್ತು ಸಾರ್ವಜಿಕ ಆಸ್ತಿ ನಿರ್ವಹಣೆ ಇಲಾಖೆ ಕಾರ್ಯದರ್ಶಿ.
ದೇಬಶೀಷ್‌ ಪಾಂಡ:ಕಾರ್ಯದರ್ಶಿ ಹಣಕಾಸು ಇಲಾಖೆ. ಉತ್ತರ ಪ್ರದೇಶ ಕೇಡರ್ ನ 1987ನೇ ಬ್ಯಾಚ್ ನ ಐಎಎಸ್ ಅಧಿಕಾರಿಯಾಗಿದ್ದ ಪಾಂಡಾ ಅವರನ್ನು ಈ ಮೊದಲು ಹಣಕಾಸು ಸೇವೆಗಳ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು.