ಸರ್ಕಾರಿ ಮೆಸೇಜಿಂಗ್  ‘ಸಂದೇಶ್ ‘ ಶೀಘ್ರದಲ್ಲೇ
ನವದೆಹಲಿ:ಜನರ ಖಾಸಗಿ ಮಾಹಿತಿಗಳನ್ನು ರಕ್ಷಿಸುವುದರೊಂದಿಗೆ ಸ್ವದೇಶಿ ನಿರ್ಮಿತ ತಂತ್ರಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ‘ಸಂದೇಶ್ ‘ಎಂಬ ಸರ್ಕಾರಿ ಮೆಸೇಜಿಂಗ್ ಆಯಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದೆ.
ಕಳೆದ ವರ್ಷವೇ ಯೋಜನೆ ರೂಪಿಸಿರುವ ಸರ್ಕಾರ  (   ) ಅನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಇದೀಗ ಈ ಆಯಪ್ ಗೆ ‘ಸಂದೇಶ್’ ಎಂಬ ಹೆಸರಿಟ್ಟಿದೆ ಎನ್ನಲಾಗಿದೆ.
ವಾಟ್ಸ್ ಆಯಪ್ ಒಳಗೊಂಡಂತೆ ಪ್ರಸ್ತುತ ಬಳಕೆಯಲ್ಲಿರುವ ಇತರೆ ಮೆಸೇಜಿಂಗ್ ಆಯಪ್ ಗಳಿಗೆ ಪರ್ಯಾಯವಾಗಿ ಇದು ಕಾರ್ಯ ನಿರ್ವಹಿಸಲಿದ್ದು, ತನ್ನ ಬಳಕೆದಾರರಿಗೆ ಒದಗಿಸುವ ಎಲ್ಲಾ ವಿಧವಾದ ಸೌಲಭ್ಯಗಳನ್ನು ಇದು ಕೂಡಾ ನೀಡಲಿದೆ ಎನ್ನಲಾಗಿದೆ.
 ಹಾಗೂ ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್ಗಳಲ್ಲಿ ಬಳಸಬಹುದಾದ ಈ ತಂತ್ರಜ್ಞಾನವನ್ನು ಪ್ರಸ್ತುತ ಪ್ರಯೋಗಾತ್ಮಕವಾಗಿ ಬಳಕೆ ಮಾಡಲಾಗುತ್ತಿದ್ದು, ಕೇವಲ ಕೆಲವೇ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಬಳಕೆಗೆ ಅವಕಾಶ ಕಲ್ಪಿಸಲಾಗಿದೆ.