  2024: ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ನಲ್ಲಿದೆ ಉದ್ಯೋಗಾವಕಾಶ; ಹೀಗೆ ಅಪ್ಲೈ ಮಾಡಿ
ಬೆಂಗಳೂರು:10, 12ನೇ ತರಗತಿ, ಡಿಪ್ಲೋಮಾ ಓದಿ ಒಂದೊಳ್ಳೆ ಉದ್ಯೋಗ ಅರಸುತ್ತಿದ್ದೀರಾ? ಹಾಗಾದರೆ ಇಲ್ಲಿದೆ ಸುವರ್ಣಾವಕಾಶ. ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ (-   ) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (  2024). ಹೆಡ್‌ ಕಾನ್ಸ್‌ಟೇಬಲ್‌, ಕಾನ್ಸ್‌ಟೇಬಲ್‌ ಹುದ್ದೆಗಳಿವೆ. ಒಟ್ಟು 128 ಹುದ್ದೆಗಳಿಗೆ ನೇಮಕ ನಡೆಯಲಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ್‌ 29. ಈ ಹಿಂದೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 10 ಕೊನೆಯ ದಿನ ಎಂದು ಹೇಳಲಾಗಿತ್ತು. ಇದೀಗ ತಾಂತ್ರಿಕ ಕಾರಣಗಳಿಂದ ಸೆಪ್ಟೆಂಬರ್‌ 29ರವರೆಗೆ ಕೊನೆಯ ದಿನಾಂಕವನ್ನು ಮುಂದೂಡಲಾಗಿದೆ ( ).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಹೆಡ್‌ ಕಾನ್ಸ್‌ಟೇಬಲ್‌ – 9 ಹುದ್ದೆ, ವಿದ್ಯಾರ್ಹತೆ: 12ನೇ ತರಗತಿ (ದ್ವಿತೀಯ ಪಿಯುಸಿ) ಡಿಪ್ಲೋಮಾ ತೇರ್ಗಡೆಕಾನ್ಸ್‌ಟೇಬಲ್‌ – 119 ಹುದ್ದೆ, ವಿದ್ಯಾರ್ಹತೆ: 10ನೇ ತರಗತಿ ತೇರ್ಗಡೆ
ವಯೋಮಿತಿ
ಹೆಡ್‌ ಕಾನ್ಸ್‌ಟೇಬಲ್‌ ( ) – 18-27 ವರ್ಷಕಾನ್ಸ್‌ಟೇಬಲ್‌ (ಅನಿಮಲ್‌ ಟ್ರಾನ್ಸ್‌ಪೋರ್ಟ್‌- )-18-25 ವರ್ಷಕಾನ್ಸ್‌ಟೇಬಲ್‌ (ಕೆನ್ನಾಲ್‌ಮ್ಯಾನ್‌-) -18-27 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಮಾಜಿ ಸೈನಿಕರಿಗೆ 8 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ
ಎಸ್‌ಸಿ / ಎಸ್‌ಟಿ / ಮಾಜಿ ಸೈನಿಕರು / ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಇತರ ಎಲ್ಲಾ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಫಿಸಿಕಲ್‌ ಸ್ಟ್ಯಾಂಡರ್ಡ್‌ ಟೆಸ್ಟ್‌, ಲಿಖಿತ ಪರೀಕ್ಷೆ, ದಾಖಲಾತಿ ಪರಿಶೀಲನೆ, ವೈದ್ಯಕೀಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
ಮಾಸಿಕ ವೇತನ
ಆಯ್ಕೆಯಾದವರಿಗೆ ಹೆಡ್‌ ಕಾನ್ಸ್‌ಟೇಬಲ್‌ ಹುದ್ದೆಗೆ – 25,500 ರೂ.- 81,000 ರೂ. ಮತ್ತು ಕಾನ್ಸ್‌ಟೇಬಲ್‌ ಹುದ್ದೆಗೆ – 21,700 ರೂ. – 69,100 ರೂ. ಮಾಸಿಕ ವೇತನ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
  2024 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ
ಹೆಚ್ಚಿನ ವಿವರಗಳಿಗೆ ಇಂಡೋ-ಟಿಬೇಟಿಯನ್‌ ಬಾರ್ಡರ್‌ ಪೊಲೀಸ್‌ ಫೋರ್ಸ್‌ನ ವೆಬ್‌ಸೈಟ್‌ ವಿಳಾಸ:‌...inಕ್ಕೆ ಭೇಟಿ ನೀಡಿ.
ಈ ಸುದ್ದಿಯನ್ನೂ ಓದಿ: : ಐಡಿಬಿಐ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಹೀಗೆ ಅಪ್ಲೈ ಮಾಡಿ