ಮಾಜಿ ಸಚಿವರ ಸೋದರಳಿಯನ ಶವ ಪತ್ತೆ
ಅಮೇಥಿ:ಉತ್ತರ ಪ್ರದೇಶದ ಖರೌನಾ ಗ್ರಾಮದ ಬಳಿಯ ರೈಲ್ವೆ ಹಳಿ ಮೇಲೆ ಮಾಜಿ ಸಚಿವರ ಸೋದರಳಿಯನ ಶವ ಶುಕ್ರವಾರ ಪತ್ತೆಯಾಗಿದೆ.
ಶವವನ್ನು ಶುಭಂ (20) ಎಂದು ಪತ್ತೆ ಹಚ್ಚಲಾಗಿದ್ದು, ಗುರುವಾರ ಸಂಜೆ ಮನೆಯಿಂದ ಹೊರಗೆ ಬಂದವ ಬೆಳಗ್ಗೆ ರೈಲು ಹಳಿಗಳ ಮೇಲೆ ಶವವಾಗಿ ದೊರೆತಿರುವುದು ಅನುಮಾನಕ್ಕೆ ಆಸ್ಪದ ನೀಡಿದೆ ಎಂದು ಅಮೇಥಿ ಸ್ಟೇಷನ್ ಹೌಸ್ ಅಧಿಕಾರಿ ಶ್ಯಾಮ್ ಸುಂದರ್ ತಿಳಿಸಿದ್ದಾರೆ.
ದೇಹದಿಂದ ತಲೆ ಕತ್ತರಿಸಲ್ಪಟ್ಟಿರುವ ಶವವನ್ನು ಮೊದಲು ರೈಲ್ವೆ ಪೊಲೀಸರು ಪತ್ತೆ ಹಚ್ಚಿ, ನಂತರ ಸ್ಥಳೀಯ ಪೊಲೀಸರಿಗೆ ತಿಳಿಸಿದ್ದಾರೆ. ಶವವನ್ನು ಗುರುತಿಸಿದ ಪೊಲೀಸರು ಪರ್ಸಾವ ಗ್ರಾಮದ ಮಾಜಿ ಸಚಿವರ ಕಿರಿಯ ಸಹೋದರ ಜಗದೀಶ್ ಪ್ರಸಾದ್ ಪ್ರಜಾಪತಿಯ ಪುತ್ರನದ್ದೆಂದು ಪತ್ತೆ ಹಚ್ಚಿದ್ದಾರೆ.
