ಭಾರತೀಯ ಸಂಪಾದಕರ ಒಕ್ಕೂಟದ ವೆಬಿನಾರ್‌ ಮೇಲೆ ಸೈಬರ್‌ ದಾಳಿ
ನವದೆಹಲಿ:ಭಾರತೀಯ ಸಂಪಾದಕರ ಒಕ್ಕೂಟ ಶನಿವಾರ ‘ನಕ್ಸಲ್ ಪ್ರದೇಶಗಳಲ್ಲಿ ವರದಿ ಮಾಡುವಾಗ ಎದುರಾಗುವ ಸವಾಲು’ ಕುರಿತು ಆಯೋಜಿಸಿದ್ದ ವೆಬಿನಾರ್‌ ಮೇಲೆ ಸೈಬರ್‌ ದಾಳಿಯಾಗಿದ್ದು, ಕಾರ್ಯಕ್ರಮಕ್ಕೆ ಅಡ್ಡಿ ಉಂಟು ಮಾಡಿದ್ದಾರೆ ಎಂದು ಸಂಪಾದಕರ ಒಕ್ಕೂಟ ಆರೋಪಿಸಿದೆ.
‘ವೆಬಿನಾರ್‌ನಲ್ಲಿ ಪಾಲ್ಗೊಂಡಿದ್ದ ಅತಿಥೇಯರ ವಿಭಾಗಗಳನ್ನು ಮುಚ್ಚುತ್ತಿರುವಂತೆ, ವೆಬಿನಾರ್‌ಗೆ ಅಡ್ಡಿ ಪಡಿಸುವ ವ್ಯಕ್ತಿಗಳ ಕೆಟ್ಟ ಫೋಟೊಗಳು, ವಿಡಿಯೊಗಳು ಹೆಚ್ಚುತ್ತಿದ್ದವು. ಮತ್ತೊಂದು ಕಡೆ ಇಂಥದ್ದೇ ತಂಡ ಗ್ರೂಪ್‌ ಚಾಟ್‌ನಲ್ಲಿ ಅಶ್ಲೀಲ ಸಂದೇಶ ಗಳನ್ನು ಪೋಸ್ಟ್ ಮಾಡಲು ಆರಂಭಿಸಿತು. ಅತಿಥಿಗಳಿಗೆ ಭಾಷಣ ಮಾಡಲು ಅವಕಾಶ ಸಿಗದೇ, ಅರ್ಧಕ್ಕೆ ಮಾತು ನಿಲ್ಲಿಸಬೇಕಾ ಯಿತು’ ಎಂದು ಒಕ್ಕೂಟ ಹೇಳಿಕೆಯಲ್ಲಿ ವಿವರಿಸಿದೆ.
ಇದೊಂದು ಆತಂಕಕಾರಿ ಘಟನೆ’ ಎಂದು ಕರೆದಿರುವ ಒಕ್ಕೂಟ, ‘ವಾಕ್‌ ಸ್ವಾತಂತ್ರ್ಯದ ಮೇಲಿನ ಉಗ್ರ ದಾಳಿ’ ಎಂದು ಬಣ್ಣಿಸಿದೆ. ಈ ಘಟನೆ ಕುರಿತು ಸೈಬರ್ ಕ್ರೈಮ್ ವಿಭಾಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದೆ.
‘ಕೇಳದ ಧ್ವನಿಗಳು: ಸಂಘರ್ಷ ವಲಯಗಳಿಂದ ವರದಿಗಾರಿಕೆ’ ಕುರಿತ ಸರಣಿಯ ಭಾಗವಾಗಿ ವೆಬ್‌ನಾರ್ ಅನ್ನು ಆಯೋಜಿಸ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಕ್ಸಲ್ ಪ್ರದೇಶಗಳಿಂದ ವರದಿ ಮಾಡುತ್ತಿರುವ ಕೆಲವು ಭಾರತೀಯ ಭಾರತೀಯ ಪತ್ರಕರ್ತರೂ ಇದ್ದರು.