ಮಹಾರಾಷ್ಟ್ರ: ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಗಳು ಏ.23ರಿಂದ ಆರಂಭ
ಪುಣೆ:ಮಹಾರಾಷ್ಟ್ರ ಪ್ರೌಢ ಶಿಕ್ಷಣ ಮಂಡಳಿಯ 10 (ಎಸ್‌ಎಸ್‌ಸಿ) ಹಾಗೂ 12ನೇ ತರಗತಿ (ಎಚ್‌ಎಸ್‌ಸಿ) ಪರೀಕ್ಷೆಗಳು ಏ.23ರಿಂದ ಮೇ.21ರ ವರೆಗೆ ನಡೆಯಲಿವೆ ಎಂದು ಮಂಡಳಿಯ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್‌ಎಸ್‌ಸಿ ಪರೀಕ್ಷೆಗಳು ಏ. 29ರಿಂದ ಮೇ 20ರ ವರೆಗೆ, ಎಚ್‌ಎಸ್‌ಸಿ ಪರೀಕ್ಷೆಗಳು ಏ. 23ರಿಂದ ಮೇ 21ರ ವರೆಗೆ ನಡೆಯಲಿವೆ ಎಂದು ಕಾರ್ಯದರ್ಶಿ ಅಶೋಕ್‌ ಭೋಸ್ಲೆ ತಿಳಿಸಿದ್ದಾರೆ.
ಪರೀಕ್ಷೆಗಳನ್ನು ಪ್ರತಿ ವರ್ಷ ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಸಲಾಗುತ್ತಿತ್ತು. ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕಗಳನ್ನು ಬದಲಿಸಲಾಗಿದೆ ಎಂದರು. ನಾವು ಫೆಬ್ರವರಿ 16 ರಂದು ಪರೀಕ್ಷೆಯ ಪ್ರಸ್ತಾವಿತ ದಿನಾಂಕಗಳನ್ನು ಘೋಷಿಸಿ ದ್ದೆವು. ತಜ್ಞರಿಂದ ಸಲಹೆಗಳನ್ನು ಆಹ್ವಾನಿಸಿದ್ದೆವು, ಸೂಕ್ತ ಸಮಾಲೋಚನೆಯ ನಂತರ, ನಾವು ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ನಿಗದಿಪಡಿಸಿದ್ದೇವೆ” ಎಂದು ಘೋಷಿಸಿದ್ದಾಗಿ ಭೋಸಲೆ ಹೇಳಿದ್ದಾರೆ.