ಆಸ್ಟ್ರೇಲಿಯಾದ ಹೈಕಮಿಷನರ್ ಆಗಿ ಮನ್‌ಪ್ರೀತ್ ವೊಹ್ರಾ ನೇಮಕ
ನವದೆಹಲಿ: ಹಿರಿಯ ರಾಜತಾಂತ್ರಿಕ ಅಧಿಕಾರಿ ಮನ್‌ಪ್ರೀತ್ ವೊಹ್ರಾ ರನ್ನು ಆಸ್ಟ್ರೇಲಿಯಾದ ಮುಂದಿನ ಹೈಕಮಿಷನರ್ ಆಗಿ ಭಾರತ ನೇಮಕ ಮಾಡಿದೆ’ ಎಂದು ವಿದೇಶಾಂಗ ಸಚಿವಾಲಯದ ಪ್ರಕಟಣೆ ತಿಳಿಸಿದೆ.
1988ರ ತಂಡದ ಭಾರತೀಯ ವಿದೇಶಾಂಗ ಸೇವೆಯ(ಐಎಫ್‌ಎಸ್‌) ಅಧಿಕಾರಿ ವೊಹ್ರಾ ಅವರು ಪ್ರಸ್ತುತ ಮೆಕ್ಸಿಕೊದಲ್ಲಿ ಭಾರತದ ರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾವು ಇಂಡೊ-ಫೆಸಿಫಿಕ್ ಪ್ರದೇಶದಲ್ಲಿ ತಮ್ಮ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಪ್ರಯತ್ನಿಸುತ್ತಿದೆ.