ದೆಹಲಿ ಪುರಸಭೆ ಉಪ ಚುನಾವಣೆ ಮತ ಎಣಿಕೆ: ಎಎಪಿ ಮುನ್ನಡೆ
ನವದೆಹಲಿ:ದೆಹಲಿ ಪುರಸಭೆ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಬುಧವಾರ ಆರಂಭವಾಗಿದ್ದು, ನಾಲ್ಕು ವಾರ್ಡ್‌ಗಳಲ್ಲಿ ಆಡಳಿತಾರೂಢ ಎಎಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ.
ಶಾಲಿಮಾರ್‌ ಬಾಗ್‌, ಕಲ್ಯಾಣ್‌ಪುರಿ, ತ್ರಿಲೋಕ್‌ಪುರಿ ಮತ್ತು ರೋಹಿಣಿ- ಸಿ ವಾರ್ಡ್‌ಗಳಲ್ಲಿ ಎಎಪಿ ಅಭ್ಯರ್ಥಿಗಳು ಮುನ್ನಡೆ ಸಾಧಿಸಿದ್ದಾರೆ. ಚೌಹಾಣ್ ಬಂಗಾರ್‌ ವಾರ್ಡ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದಾರೆ.
ಕಳೆದ ಫೆ.28ರಂದು ನಡೆದ ಐದು ಪುರಸಭೆ ವಾರ್ಡ್‌ಗಳ ಉಪ ಚುನಾವಣೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಮತ ಮತದಾನವಾಗಿತ್ತು.
ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್‌ ಮುಖ್ಯ ಪ್ರತಿಸ್ಪರ್ಧಿಗಳಾಗಿದ್ದ ಎಲ್ಲಾ ಐದು ವಾರ್ಡ್‌ಗಳ ಫಲಿತಾಂಶ ಸಂಜೆ ವೇಳೆಗೆ ಹೊರಬರುವ ನಿರೀಕ್ಷೆಯಿದೆ.