ಐಪಿಎಲ್‌ 2021 ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ವೇಳಾಪಟ್ಟಿ
ಮುಂಬೈ:ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗಾಗಿನ ಬಹುನಿರೀಕ್ಷಿತ ವೇಳಾಪಟ್ಟಿ ಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಪಂದ್ಯಗಳನ್ನು ಚಿನ್ನಸ್ವಾಮಿ ಮೈದಾನದಲ್ಲಿ ನೋಡುವ ಆರ್‌ಸಿಬಿ ಅಭಿಮಾನಿಗಳ ಕನಸಿಗೆ ಹಿನ್ನೆಡೆಯಾಗಿದೆ. ಆರಂಭಿಕ ಹಂತದಲ್ಲಿ ಟೂರ್ನಿಯು ಮುಚ್ಚಿದ ಕ್ರೀಡಾಂಗಣದಲ್ಲಿ ಆಯೋಜನೆಯಾಗಲಿದ್ದು, ಮುಂದಿನ ಹಂತದಲ್ಲಿ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರೇಕ್ಷಕರಿಗೆ ಅನುಮತಿ ನೀಡಬೇಕೇ ಎಂಬುದರ ಕುರಿತು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸ ಲಿದೆ.
ಏಪ್ರಿಲ್ 9ರಂದು ಚೆನ್ನೈಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೊಚ್ಚಲ ಕಿರೀಟವನ್ನು ಎದುರು ನೋಡುತ್ತಿರುವ ವಿರಾಟ್ ಕೊಹ್ಲಿ ಬಳಗವು, ಐದು ಬಾರಿಯ ಹಾಗೂ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲನ್ನು ಎದುರಿಸಲಿದೆ. ಹಾಗಿದ್ದರೆ ತಡವೇಕೆ? ಆರ್‌ಸಿಬಿ ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯಗಳ ವಿವರ
ಏ.9, ಶುಕ್ರವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಮುಂಬೈ,ಏ.14, ಬುಧವಾರ, ತಾಣ: ಚೆನ್ನೈ, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಹೈದರಾಬಾದ್,ಏ.18, ಭಾನುವಾರ, ತಾಣ: ಚೆನ್ನೈ, ಸಮಯ: ಸಂಜೆ 3.30ಕ್ಕೆ ಆರ್‌ಸಿಬಿ  ಕೋಲ್ಕತ್ತ,ಏ.22, ಗುರುವಾರ, ತಾಣ: ಮುಂಬೈ, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ರಾಜಸ್ಥಾನ,ಏ.25, ಭಾನುವಾರ, ತಾಣ: ಮುಂಬೈ, ಸಮಯ: ಸಂಜೆ 3.30ಕ್ಕೆ ಆರ್‌ಸಿಬಿ  ಚೆನ್ನೈ,ಏ.27, ಮಂಗಳವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಡೆಲ್ಲಿ,ಏ.30, ಶುಕ್ರವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಪಂಜಾಬ್,ಮೇ 3, ಸೋಮವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಕೋಲ್ಕತ್ತ,ಮೇ 6, ಗುರುವಾರ, ತಾಣ: ಅಹಮದಾಬಾದ್, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಪಂಜಾಬ್,ಮೇ 9, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಹೈದರಾಬಾದ್,ಮೇ 14, ಶುಕ್ರವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಡೆಲ್ಲಿ,ಮೇ 16, ಭಾನುವಾರ, ತಾಣ: ಕೋಲ್ಕತ್ತ, ಸಮಯ: ಸಂಜೆ 3.30ಕ್ಕೆ ಆರ್‌ಸಿಬಿ  ರಾಜಸ್ಥಾನ,ಮೇ 20, ಗುರುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ ಆರ್‌ಸಿಬಿ  ಮುಂಬೈ,ಮೇ 23, ಭಾನುವಾರ, ತಾಣ: ಕೋಲ್ಕತ್ತ, ಸಮಯ: ರಾತ್ರಿ 7.30ಕ್ಕೆ  ಆರ್‌ಸಿಬಿ  ಚೆನ್ನೈ
ಪಂದ್ಯಗಳು ನಡೆಯಲಿವೆ.