ಬಹು ಚೇತರಿಕೆ ಕಂಡ ಷೇರು ಮಾರುಕಟ್ಟೆ: 568 ಪಾಯಿಂಟ್ಸ್‌ ಏರಿಕೆ
ಮುಂಬೈ:ಭಾರತೀಯ ಷೇರುಪೇಟೆ ಶುಕ್ರವಾರ ಚೇತರಿಕೆ ಕಂಡಿದೆ. ಸೆನ್ಸೆಕ್ಸ್ ದಿನದ ವಹಿವಾಟು ಅಂತ್ಯಕ್ಕೆ 568 ಪಾಯಿಂಟ್ಸ್‌ ಹೆಚ್ಚಾಗಿದೆ. ನಿಫ್ಟಿ 182 ಪಾಯಿಂಟ್ಸ್‌ ಏರಿಕೆಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್‌ 568.38 ಪಾಯಿಂಟ್ಸ್‌ ಏರಿಕೆಗೊಂಡು 49,008.50 ಪಾಯಿಂಟ್ಸ್‌ಗೆ, ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 182.40 ಪಾಯಿಂಟ್ಸ್ ಏರಿಕೆಗೊಂಡು 14,507.30 ಪಾಯಿಂಟ್ಸ್‌ಗೆ ತಲುಪಿದೆ.
1,283 ಷೇರುಗಳು ಕುಸಿತಗೊಂಡಿವೆ ಮತ್ತು 167 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇನ್ನು ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಖರೀದಿಯ ಮಧ್ಯೆ ಭಾರತೀಯ ರೂಪಾಯಿ ಮೌಲ್ಯ 11 ಡಾಲರ್ ಏರಿಕೆಯಾಗಿ, ಪ್ರತಿ ಡಾಲರ್‌ಗೆ 72.51 ರೂಪಾಯಿಗೆ ತಲುಪಿದೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ
://../