ಬಾವಿ ತೋಡುತ್ತಿದ್ದ ವೇಳೆ ಉಸಿರುಗಟ್ಟಿ ಕಾರ್ಮಿಕರ ಸಾವು
ಶಿಲ್ಲಾಂಗ್‌:ಮೇಘಾಲಯದ ವೆಸ್ಟ್‌ ಜೈಂತಿಯಾ ಹಿಲ್ಸ್ ಜಿಲ್ಲೆಯ ಮಿಹ್‌ಮಿಂತ್‌ಡು ಹಳ್ಳಿಯಲ್ಲಿ ಆಳವಾದ ಬಾವಿ ತೋಡುತ್ತಿದ್ದ ವೇಳೆ ಉಸಿರುಗಟ್ಟಿ ಐದು ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಜೊವೈ ಪಟ್ಟಣದ ಹೊರವಲಯದಲ್ಲಿ ಘಟನೆ ಸಂಭವಿಸಿದ್ದು,ಅಸ್ವಸ್ಥಗೊಂಡ ಇಬ್ಬರನ್ನು ರಕ್ಷಿಸಲಾಗಿದೆ.
’35 ಮೀಟರ್ ಆಳದ ಬಾವಿ ತೋಡಿ ಅದನ್ನು ಸಜ್ಜುಗೊಳಿಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ನೀರು ಸೆಳೆಯಲು ಬಳಸಿದ ಪಂಪ್‌ನಿಂದ ಬಿಡುಗಡೆಯಾದ ಹೊಗೆಯಿಂದ ಉಸಿರುಗಟ್ಟಿ ಕಾರ್ಮಿಕರು ಪ್ರಜ್ಞೆ ಕಳೆದುಕೊಂಡಿರುವ ಸಾಧ್ಯತೆ ಇದೆ’ ಎಂದು ಅಗ್ನಿಶಾಮಕ ವಿಭಾಗದ ಅಧೀಕ್ಷಕ ಹೇಳಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ