ದೇಶದಲ್ಲಿ 184,372 ಕೋವಿಡ್‌ ಹೊಸ ಪ್ರಕರಣಗಳ ಪತ್ತೆ, ಮಹಾರಾಷ್ಟ್ರದಲ್ಲಿ ನಿಷೇಧಾಜ್ಞೆ
ನವದೆಹಲಿ :ಭಾರತದಲ್ಲಿ ಬುಧವಾರ ಒಂದೇ ದಿನ 184,372 ಕೋವಿಡ್‌ ಹೊಸ ಪ್ರಕರಣಗಳು ದಾಖಲಾಗಿವೆ. ಐದು ತಿಂಗಳಲ್ಲಿ ಮೊದಲ ಬಾರಿಗೆ ಸಾವು ನೋವುಗಳು 1000 ರ ಗಡಿಯನ್ನು ದಾಟಿವೆ.
‘ಟಿಕಾ ಉತ್ಸವ’ದ (ಲಸಿಕೆ ಉತ್ಸವ) ಕೊನೆಯ ದಿನ ಈ ಅಂಕಿಅಂಶಗಳು ಬಂದಿವೆ.  ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ವೈರಲ್ ರೋಗದ ಹರಡುವಿಕೆ ತಡೆಯಲು ಹೊಸ ನಿರ್ಬಂಧಗಳನ್ನು ಘೋಷಿಸಿದೆ.
ಬುಧವಾರ, ಮಹಾರಾಷ್ಟ್ರದಲ್ಲಿ ಐದಕ್ಕಿಂತ ಹೆಚ್ಚು ಜನರ ಸಭೆಯನ್ನು ತಡೆಯುವ ಸೆಕ್ಷನ್144ರ ಅಡಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮಂಗಳವಾರ ಒಂದೇ ದಿನ 60000 ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ.