ಏಷ್ಯನ್ ಪೇಂಟ್ಸ್‌ ಫರ್ನಿಶಿಂಗ್ ಜಗತ್ತಿಗೆ ಪ್ರವೇಶಿಸುತ್ತದೆ
ಸಬ್ಯಸಾಚಿಯೊಂದಿಗಿನ ಸಹಯೋಗದೊಂದಿಗೆ ಭಾರತದ ಮೊಟ್ಟಮೊದಲ ಶ್ರೇಣಿಯ ಡಿಸೈನರ್ ಹೋಂ ಫರ್ನಿಶಿಂಗ್ ಆರಂಭ
ಗೃಹೋಪಯೋಗಿ ಜಾಲವನ್ನು ಸ್ಪರ್ಶಿಸಲು ದಿ ಪ್ಯೂರ್ ಕಾನ್ಸೆಪ್ಟ್‌ ನೊಂದಿಗೆ ಪಾಲುದಾರಿಕೆ
ನವದೆಹಲಿ:2020 ನಮ್ಮೆಲ್ಲರನ್ನೂ ಮಾಡಲು ಒತ್ತಾಯಿಸಿದ ಒಂದು ವಿಷಯವಿದ್ದಲ್ಲಿ, ಅದು ಮನೆಯಲ್ಲಿ ಹೆಚ್ಚು ಸಮಯ ವನ್ನು ಕಳೆಯುವುದು. ಇದರರ್ಥ, ಬಹಳಷ್ಟು ಜನರು, ತಾವು ಸಾಮಾನ್ಯಕ್ಕಿಂತ ಹೆಚ್ಚಾಗಿ ವಾಸಿಸತೊಡಗಿದ ತಮ್ಮ ಮನೆಗಳ ಅಲಂಕಾರವನ್ನು ನವೀಕರಿಸುವ ಕನಸು ಕಾಣುತ್ತಿದ್ದರು.
ಎಲ್ಲರ ಮನೆಯ ಅಲಂಕಾರವನ್ನು ತ್ವರಿತವಾಗಿ ಪರಿವರ್ತಿಸುವಲ್ಲಿ ಹೋಂ ಫರ್ನಿಶಿಂಗ್ ಯಾವಾಗಲೂ ಪ್ರಮುಖ ಪಾತ್ರ ವಹಿಸು ತ್ತಿದ್ದು, ಈ ವಿಭಾಗದಲ್ಲಿ ಹೆಚ್ಚುತ್ತಿರುವ ಬೇಡಿಕೆಯನ್ನು ಅರಿತುಕೊಂಡ ಏಷ್ಯನ್ ಪೇಂಟ್ಸ್‌, ಭಾರತದ ಅತ್ಯಂತ ಪ್ರಸಿದ್ಧ ಡಿಸೈನರ್ ಸಬ್ಯಸಾಚಿಯೊಂದಿಗಿನ ತನ್ನ ಸಹಯೋಗವನ್ನು ಪುನರುಜ್ಜೀವನಗೊಳಿಸಿ ನಿಲಯ ಬ್ರಾಂಡ್ ಅಡಿಯಲ್ಲಿ ಈ ರೀತಿಯ ಡಿಸೈನರ್ ಹೋಂ ಫರ್ನಿಶಿಂಗ್ ಗಳನ್ನು ಪ್ರಾರಂಭಿಸಿತು.
ಸಬ್ಯಸಾಚಿ ಅವರ ಮೊಟ್ಟಮೊದಲ ಹೋಂ ಫರ್ನಿಶಿಂಗ್ ಸಂಗ್ರಹಕ್ಕಾಗಿ ಸ್ಫೂರ್ತಿಯು ವಿವಿಧ ಅನುಭವಗಳಾದ – ಕೋರ ಮಾಂಡಲ್ ಕೋಸ್ಟ್‌ ನಿಂದ ಕೌಶಲ್ಯಮಯವಾಗಿ ಚಿತ್ರಿಸಿದ ಬಟ್ಟೆಗಳು; ಪ್ರಾಚೀನ ಪ್ರಪಂಚದ ಕಸೂತಿಗಳು; ಹಳೆಯ ಪ್ರಪಂಚದ ಕಲ್ಕತ್ತಾ ತನ್ನ ಮರೆಯಾಗುತ್ತಿರುವ ಐಷಾರಾಮಿ ಮತ್ತು ಮುರ್ಷಿದಾಬಾದ್ ಯುಗದ ಚಿಕಣಿ ತಜ್ಞರ ಸಂಪ್ರದಾಯಗಳಿಂದ ದೊರೆತಿದೆ.
ಇದರ ಫಲವೇ ಥಾರ್, ಮಖ್ಮಲ್, ಸೂಫಾ, ಹಜಾರಿಬಾಗ್ ಮತ್ತು ಚೌಕ್ ಎಂಬ ಐದು ಸೊಗಸಾದ ಸಂಗ್ರಹಗಳಿಂದ ಜೀವಂತಿಕೆ ಪಡೆದ ರೂಪಾಂತರದ ಅಸಾಮಾನ್ಯ ಮತ್ತು ಮರೆಯಲಾಗದ ಪ್ರಯಾಣವಾಗಿದೆ.
ಗೃಹೋಪಯೋಗಿ ಉದ್ಯಮದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಏಷ್ಯನ್ ಪೇಂಟ್ಸ್‌ ಪ್ರಮುಖ ಪ್ರೀಮಿಯಂ ಫರ್ನಿಶಿಂಗ್ ಬ್ರಾಂಡ್ ದಿ ಪ್ಯೂರ್ ಕಾನ್ಸೆಪ್ಟ್ ‌‌ನೊಂದಿಗೆ ಕೈಜೋಡಿಸಿದೆ. ಚನ್ಯಾ ಕೌರ್ ಮತ್ತು ದಲ್ಬೀರ್ ಸಿಂಗ್ ಅವರು 2012 ರಲ್ಲಿ ಸಹ-ಸ್ಥಾಪಿತ ದಿ ಪ್ಯೂರ್ ಕಾನ್ಸೆಪ್ಟ್‌ ಗುಣಮಟ್ಟ ಮತ್ತು ಸೃಜನಶೀಲತೆಯೊಂದಿಗೆ ಮನೆಗಳಿಗೆ ವಿಶಿಷ್ಟವಾದ ಫರ್ನಿಶಿಂಗ್ ವಸ್ತ್ರಗಳ ಹಿಂದಿನ ಪ್ರೇರಕ ಶಕ್ತಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಯಶಸ್ವಿ ಬ್ರಾಂಡ್ ಆಗಿ ಪೋಷಿಸಲಾಗಿದೆ.
ಸಹಯೋಗದ ಪರಿಣಾಮವಾಗಿ, ಅವರ ಎರಡು ಬ್ರ್ಯಾಂಡ್‌ಗಳಾದ ಪ್ಯೂರ್ ಫೈನ್ ಫರ್ನಿಶಿಂಗ್ ಮತ್ತು ದಿ ಪ್ಯೂರ್ ಕಾನ್ಸೆಪ್ಟ್‌ ಗಳನ್ನು ಏಷ್ಯನ್ ಪೇಂಟ್ಸ್‌‌ನ ಎರಡು ಅತ್ಯಂತ ಪ್ರಿಯ ಬ್ರಾಂಡ್‌ಗಳು, ಕ್ರಮವಾಗಿ ರಾಯಲ್ ಮತ್ತು ನಿಲಯಗಳೊಂದಿಗೆ ನಡೆಸಲು ಮರು ಹೆಸರಿಸಲಾಗಿದೆ. ಈ ಸಹಯೋಗದೊಂದಿಗೆ, ಏಷ್ಯನ್ ಪೇಂಟ್ಸ್‌ ಈಗ ಈ ಶ್ರೇಣಿಗಳ ಸಂಪೂರ್ಣ ಮಾರಾಟ ಮತ್ತು ಮಾರ್ಕೆ ಟಿಂಗ್ ಅನ್ನು ನಿರ್ವಹಿಸುತ್ತದೆ ಮತ್ತು ದಿ ಪ್ಯೂರ್ ಕಾನ್ಸೆಪಟ್‌‌ ‌ವಿನ್ಯಾಸ ಮತ್ತು ಉತ್ಪಾದನೆಯ ಮೇಲೆ ಕೇಂದ್ರೀಕರಿಸುತ್ತದೆ.
ಇದಲ್ಲದೆ, ಏಷ್ಯನ್ ಪೇಂಟ್ಸ್‌ ತಮ್ಮ ಅಡೋರ್ ಶ್ರೇಣಿಯ ವಸ್ತ್ರಗಳ ಅಡಿಯಲ್ಲಿ ಸಂಗ್ರಹವನ್ನು ಪ್ರಾರಂಭಿಸಿತು, ಇದು ಬಜೆಟ್ ಜಾಗೃತ ಗ್ರಾಹಕರಿಗಾಗಿ ಆಧುನಿಕ ಮತ್ತು ಸಮಕಾಲೀನ ಉತ್ಪನ್ನಗಳ ಸಂಗ್ರಹವಾಗಿದೆ.
