ನವದೆಹಲಿಯಲ್ಲಿ ನಾಳೆಯಿಂದ ’ವೀಕೆಂಡ್‌ ಲಾಕ್‌ ಡೌನ್‌’
ನವದೆಹಲಿ:ಕರೋನಾ ಎರಡನೇ ಅಲೆ ದೇಶದಾದ್ಯಂತ ಆರ್ಭಟಿಸು ತ್ತಿದೆ. ಇದರ ಹೊಡೆತಕ್ಕೆ ರಾಜಧಾನಿ ನವದೆಹಲಿ ಕೂಡಾ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಮಹತ್ವದ ತೀರ್ಮಾನ ಕೈಗೊಂಡಿದ್ದು, ವೀಕೆಂಡ್‌ ಲಾಕ್‌ ಡೌನ್‌ ಘೋಷಿಸಿದ್ದಾರೆ.
ಶುಕ್ರವಾರ ರಾತ್ರಿ 10 ಗಂಟೆಯಿಂದ ವೀಕೆಂಡ್‌ ಲಾಕ್‌ ಡೌನ್‌ ಜಾರಿಗೆ ಬರಲಿದ್ದು, ಸೋಮವಾರ ಬೆಳಿಗ್ಗೆ ಕೊನೆಗೊಳ್ಳಲಿದೆ. ವೀಕೆಂಡ್‌ ಲಾಕ್‌ ಡೌನ್‌ ಸಂದರ್ಭದಲ್ಲಿ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್‌ ಆಗಲಿವೆ. ಸೋಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವ ಕಾರಣ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ.