ಸೆಲ್‌ಗಳು, ಮಾಡ್ಯೂಲ್‌ ಉತ್ಪಾದನಾ ಸಾಮರ್ಥ್ಯ ದ್ವಿಗುಣಗೊಳಿಸಿದ ಟಾಟಾ ಪವರ್ ಸೋಲಾರ್
ನವದೆಹಲಿ:ಭಾರತದ ಅತಿದೊಡ್ಡ ಸಂಯೋಜಿತ ಸೌರ ಸಂಸ್ಥೆ ಮತ್ತು ಟಾಟಾ ಪವರ್‌ನ ಸಂಪೂರ್ಣ ಮಾಲೀಕತ್ವದ ಅಧೀನ ಸಂಸ್ಥೆೆಯಾದ ಟಾಟಾಪವರ್ ಸೋಲಾರ್ ಸಿಸ್ಟಮ್‌ಸ್‌ ಲಿಮಿಟೆಡ್, ಬೆಂಗಳೂರಿನ ತನ್ನ ಅತ್ಯಾಧುನಿಕ ಉತ್ಪಾದನಾ ಘಟಕದ ಮಹತ್ತರ ವಿಸ್ತರಣೆಯನ್ನು ಘೋಷಿಸಿದ್ದು, ಸೆಲ್‌ಗಳು ಹಾಗು ಮಾಡ್ಯೂಲ್‌ಗಳ ಒಟ್ಟೂ ಉತ್ಪಾದನಾ ಸಾಮರ್ಥ್ಯವನ್ನು 1,100 ಮೆ.ವ್ಯಾ.ಗಳಿಗೆ ಹೆಚ್ಚಿಸಿದೆ.
ಈ ಮಹತ್ತರವಾದ ವಿಸ್ತರಣೆಯನ್ನು, ತನ್ನ ಸೋಲಾರ್ ಮಾಡ್ಯೂಲ್‌ಗಳಿಗೆ ಮಹತ್ತರವಾದ ಹೆಚ್ಚಾದ ಬೇಡಿಕೆ ಮತ್ತು “ಆತ್ಮನಿರ್ಭರ ಭಾರತ”ವನ್ನು ಸೃಷ್ಟಿಸಲು ಇತ್ತೀಚೆಗೆ ಭಾರತ ಸರ್ಕಾರವು ಘೋಷಿಸಿದ ಬೆಂಬಲಾತ್ಮಕ ನೀತಿಗಳಿಂದಾಗಿ ಬೇಡಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯ ಆಧಾರದ ಮೇಲೆ ಕೈಗೊಳ್ಳಲಾಗಿದೆ.
ಟಾಟಾ ಪವರ್ ಸೋಲಾರ್, 31 ವರ್ಷಗಳ ದೀರ್ಘ ಕಾರ್ಯಾಚರಣೆಯ ಇತಿಹಾಸವನ್ನು ಹೊಂದಿದ ಜಾಗತಿಕ ಸಂಸ್ಥೆಗಳ ಪೈಕಿ ಒಂದಾಗಿದೆ. ಸೋಲಾರ್ ಮಾಡ್ಯೂಲ್‌ಗಳಿಗೆ ನೀಡಲಾಗುವ 25 ವರ್ಷಗಳ ವಾರಂಟಿಗೆ ಗೌರವ ಸಲ್ಲಿಸುವ ಸಂಸ್ಥೆಯ ಸಾಮರ್ಥ್ಯಕ್ಕೆ ಇದು ಪ್ರಬಲ ಪುರಾವೆಯಾಗಿದೆ.
ಟಾಟಾ ಪವರ್‌ನ ಸಿಇಒ ಮತ್ತು ಎಮ್‌ಡಿ, ಡಾ.ಸಿನ್ಹ, “ನಮ್ಮ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನಮ್ಮ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಹೊಸ ತಂತ್ರಜ್ಞಾನದಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ಮೂಲಕ ಅತ್ಯುತ್ಕೃಷ್ಟ ಗುಣಮಟ್ಟದ ಸೌರ ಉತ್ಪನ್ನಗಳನ್ನು ಒದಗಿಸುವಲ್ಲಿ ನಮಗಿರುವ 31 ವರ್ಷಗಳ ಅನುಭವವು ಸೋಲಾರ್ ಉತ್ಪಾದನೆ ಹಾಗು ಇಪಿಸಿ ಸೇವೆಗಳು ಎರಡರಲ್ಲೂ ನಾಯಕತ್ವ ಸ್ಥಾನವನ್ನು ಉಳಿಸಿಕೊಳ್ಳಲು ನೆರವಾಗಿವೆ.” ಎಂದರು.
ಬೆಂಗಳೂರಿನಲ್ಲಿರುವ ಟಾಟಾ ಪವರ್ ಸೋಲಾರ್‌ನ ಉತ್ಪಾದನಾ ಘಟಕವು ಭಾರತದ ಪ್ರೀನಿಯರ್ ಸಂಯೋಜಿತ ಸೆಲ್ ಮತ್ತು ಮಾಡ್ಯೂಲ್ ಉತ್ಪಾದನಾ ಘಟಕವಾಗಿದ್ದು, ಅತ್ಯುನ್ನತ ಮಟ್ಟದ ಉದ್ಯಮ ಮಾನದಂಡಗಳನ್ನು ಅನುಸರಿಸುತ್ತದೆ.
ವಿಶ್ವದಲ್ಲೇ ಅಗ್ರಮಾನ್ಯ ಸೌರ ಉತ್ಪಾದನಾ ಸಂಸ್ಥೆಗಳ ಪೈಕಿ ಒಂದಾಗಿರುವುದರ ಜೊತೆಗೆ ಟಾಟಾ ಪವರ್ ಸೋಲಾರ್, ಭಾರತದ ಅತಿದೊಡ್ಡ ನೈಪುಣ್ಯತೆ ಹೊಂದಿರುವ ಇಪಿಸಿ ಸಂಸ್ಥೆಯೂ ಆಗಿದೆ.
ಮೂರನೇ ತ್ರೈಮಾಸಿಕದಲ್ಲಿ ಲೆಕ್ಕಪರಿಶೋಧನೆ ಮಾಡಲಾದ ಹಣಕಾಸು “ವರಗಳ ಪ್ರಕಾರ, ಡಿಸಂಬರ್ 20ರವರೆಗಿನ ದಿನಾಂಕ ದವರೆಗೆ, ಟಾಟಾಪವರ್ ಸೋಲಾರ್‌ನ ಆದಾಯ 2353 ಕೋಟಿ ರೂಪಾಯಿಗಳ್ಟದ್ದು, ಏಪ್ರಿಲ್ 1,2021ರಂದು 10,000 ಕೋಟಿ ರೂಪಾಯಿ ಮೌಲ್ಯದ ಆರ್ಡರ್‌ಗಳು ಬಾಕಿ ಇದ್ದವು.