ವೈರಸ್ ಸೋಂಕಿನ ಅಬ್ಬರ: ಎರಡು ಲಕ್ಷ ದಾಟಿದ ಕರೋನಾ ಪ್ರಕರಣ
ನವದೆಹಲಿ :ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 2,17,353 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಕರೋನಕ್ಕಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ 1,18,302 ಮಂದಿ ಡಿಸ್ಚಾರ್ಜ್ ಆಗಿದ್ದು ಮತ್ತು 1,185 ಸಾವುಗಳು ಸಂಭವಿಸಿವೆ ಎಂದು  ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ. ಒಟ್ಟು 11,72,23,509 ಮಂದಿಗೆ ಲಸಿಕೆ ನೀಡಲಾಗಿದೆ.
ಒಟ್ಟು ಪ್ರಕರಣಗಳು: 1,42,91,917ಒಟ್ಟು ಚೇತರಿಕೆಗಳು: 1,25,47,866ಸಕ್ರಿಯ ಪ್ರಕರಣಗಳು: 15,69,743ಸಾವಿನ ಸಂಖ್ಯೆ: 1,74,308
