ಪರಿಸರ ಪಾಲನೆಯ ಬಹುಗುಣ ಸುಂದರ
ಅವರ ಕಾಳಜಿಯನ್ನೂ ನಾವು ಪಾಲಿಸುವುದೇ ಸುಂದರಲಾಲ್ ಬಹುಗುಣ ಅವರಿಗೆ ನಾವು ನೀಡುವ ಗೌರವ
ಪರಿಸರ ಹೋರಾಟಗಾರರಾಗಿ ಜನರಲ್ಲಿ ಪರಿಸರ ಉಳಿಸುವ ಮಹತ್ವವನ್ನು ಆಳವಾಗಿ ಬಿತ್ತಿದ ಪ್ರಮುಖರಲ್ಲಿ ಸುಂದರಲಾಲ್ ಬಹುಗುಣ ಪ್ರಮುಖರು. ಗರ್ವಾಲಿ ಪರಿಸರವಾದಿಯಾಗಿ ಹಾಗೂ ಚಿಪ್ಕೊ ಚಳುವಳಿಯ ನಾಯಕರಾಗಿ ಅವರು ಮಾಡಿದ ಕಾಯಕ ವಿಶ್ವದೆಲ್ಲೇ ಲೋಕಮಾನ್ಯವಾಗಿತ್ತು.
ತಮ್ಮ ಹದಿಮೂರನೇ ವಯಸ್ಸಿನಲ್ಲಿ ಅಹಿಂಸಾ ವಾದದಲ್ಲಿ ಕ್ರಿಯಾಶೀಲರಾಗಿದ್ದ ಬಹುಗುಣ, ಶ್ರೀದೇವ್ ಸುಮನ್ ಅವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆ ಆರಂಭಿಸಿದ್ದರು.1947ರ ಮುಂಚಿತವಾಗಿ ವಸಾಹತು ಆಡಳಿತದ ವಿರುದ್ಧಜನರನ್ನು ಸಜ್ಜುಗೊಳಿಸಿದ್ದರು. ನಂತರದ ದಿನಗಳಲ್ಲಿ ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಅವರು 1965ರಿಂದ 1970ಅವಽಯಲ್ಲಿ ಮದ್ಯಪಾನದ ವಿರುದ್ಧ ಗಿರಿವಾಸಿ ಮಹಿಳೆಯರನ್ನು ಸಂಘಟಿಸಿದರು. ತಮ್ಮ ಜೀವನದಲ್ಲಿ ಗಾಂಧಿವಾದಿ ತತ್ವ ಅಳವಡಿಸಿ ಕೊಂಡಿದ್ದ ಅವರು ಅದೇ ಪ್ರೇರಣೆಯಿಂದಾಗಿ, ಸುಮಾರು 4700 ಕಿಲೋ ಮೀಟರ್ ಅಷ್ಟು ಹಿಮಾಲಯದ ಕಾಡು ಹಾಗೂ ಬೆಟ್ಟ ಗಳ ನಡುವೆ ಪಾದಯಾತ್ರೆ ಕೈಗೊಂಡರು.  ದೊಡ್ಡ ಹೆಸರಿನ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಹಿಮಾಲಯದ ಪರಿಸರಕ್ಕೆ ಆದ ಹಾನಿ ಕಂಡು ನೊಂದು ಹೋದರು.
ಚಿಪ್ಕೋ ಅಭಿಯಾನ:1974ರ ಮಾರ್ಚ್26ರಂದು ಉತ್ತರಪ್ರದೇಶದಲ್ಲಿನ ಕಾಡುಗಳಲ್ಲಿ ಗುತ್ತಿಗೆದಾರರು ಮರಕಡಿಯುವ ವಿರುದ್ಧ ಚಿಪ್ಕೊ’ ಚಳುವಳಿಯನ್ನು ಬಹುಗುಣ ಆರಂಭಿಸಿದರು. ಗುತ್ತಿಗೆದಾರರು ಮರ ಕಡಿಯುವ ಸಮಯದಲ್ಲಿ ಅದನ್ನು ಅಪ್ಪಿಕೊಳ್ಳುವುದು ಹೋರಾಟದ ಸ್ವರೂಪವಾಗಿತ್ತು. ಹಳ್ಳಿಯಿಂದ ಹಳ್ಳಿಗೆ ಪಯಣಿಸಿ ತಮ್ಮ ಚಳುವಳಿಗೆ ವ್ಯಾಪಕ ಜನ ಬೆಂಬಲ ವನ್ನು ಪಡೆದರು. ಪರಿಸರವೇ ಶಾಶ್ವತ ಆರ್ಥಿಕತೆ ಎಂಬುದು ಸುಂದರಲಾಲ್ ಬಹುಗುಣ ಚಿಪ್ಕೊ ಚಳುವಳಿಗೆ ನೀಡಿದ ಘೋಷ ವಾಖ್ಯ. ಅವರು ತಮ್ಮ ಚಳುವಳಿ ವ್ಯಾಪಕಗೊಳಿಸಲು1981ರಿಂದ1983ರವರೆಗೆ ಹಳ್ಳಿಯಿಂದ ಹಳ್ಳಿಗೆ ಸುಮಾರು5000ಕಿಲೋ ಮೀಟರ್ ದೂರ ಕ್ರಮಿಸಿ ಚಳುವಳಿಗೆ ಮತ್ತಷ್ಟು ಜನಜಾಗೃತಿ ಹೆಚ್ಚಿಸಿದರು.
ಪ್ರಧಾನಿ ಇಂದಿರಾಗಾಂಧಿ ಜೊತೆ 1980ರಲ್ಲಿ ನಡೆಸಿದ ಮಾತುಕತೆಯ ಫಲವಾಗಿಯೇ 1980ರಿಂದ15ವರ್ಷಗಳ ಕಾಲ ಮರ ಗಳನ್ನು ಕಡಿಯದಿರುವ ಆಜ್ಞೆ ಹೊರಬಂತು. ಸುಂದರಲಾಲ್ ಬಹುಗುಣ ಅವರ ಕಾರ್ಯದಲ್ಲಿ, ಪರಿಸರ ಉಳಿಯುವಿಕೆಗೆ ಮಹತ್ವದ ಕೆಲಸ ಮಾಡಿದ ಗೌರಾ ದೇವಿ ಅವರು ಸಮೀಪವರ್ತಿಯಾಗಿದ್ದರು. ಸುಂದರಲಾಲ್ ಬಹುಗುಣ ತೆಹ್ರಿ ಅಣೆಕಟ್ಟಿನನಿರ್ಮಾಣದ ವಿರುದ್ಧವೂ ನಿರಂತರ ಹೋರಾಟ ನಡೆಸಿದರು.
ಅಣೆಕಟ್ಟು 2004ರಲ್ಲಿ ಅದರ ನಿರ್ಮಾಣ ತಪ್ಪಿಸಲಾಗದಿದ್ದರೂ ಅಣೆಕಟ್ಟಿನ ನಿರ್ಮಾಣ ಸಮಯದಲ್ಲಿ ಹಾಗೂ ನಂತರದಲ್ಲಿ ಪರಿಸರ ಪ್ರಜ್ಞೆಯ ಕುರಿತಾದ ಜವಾಬ್ಧಾರಿಗಳ ಕುರಿತು ಸಮಾಜದ ಸಾಕ್ಷಿಪ್ರeಯನ್ನು ಉಳಿಸುವಲ್ಲಿ ಅವರ ಹೋರಾಟ ಪ್ರೇರಣೆ ಯನ್ನು ನೀಡಿತು. ಬಹುಗುಣ ಅವರ ಹಿಮಾಲಯದ ಪ್ರೀತಿ ಇಂದು ಕೂಡಾ ನಮಗಾಗಿ ಒಂದಷ್ಟು ಈ ಪ್ರಕೃತಿಯ ಕೊಡುಗೆಉಳಿಯುವಂತೆ ಮಾಡಿದೆ ಎಂದರೆ ತಪ್ಪಾಗದು.
ಪ್ರಶಸ್ತಿಗಳಿಗೆ ಗೌರವ!
ಬಹುಗುಣರಿಗೆ ಪದ್ಮಶ್ರೀ (ಸ್ವೀಕರಿಸಲಿಲ್ಲ), ರೈಟ್ ಲೈವ್ಲಿಹುಡ್ ಅವಾರ್ಡ್ (ಚಿಪ್ಕೊ ಚಳುವಳಿ) ಜಮ್ನಾಲಾಲ್ ಬಜಾಜ್ ಪ್ರಶಸ್ತಿ,ಐಐಟಿ ರೂರ್ಕಿಯಿಂದ ಡಾಕ್ಟರ್ ಆಫ್ ಸೋಷಿಯಲ್ ಸೈನ್ಸಸ್ ಗೌರವ, ಪದ್ಮವಿಭೂಷಣ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಪತ್ನಿಯೂ ಪರಿಸರ ಪ್ರೇಮಿ
ವಿಮಲಾ ಅವರನ್ನು ಮದುವೆ ಆದ ಸಮಯದಲ್ಲಿ ತಮಗೆ ಗುಡ್ಡಗಾಡು ಪ್ರದೇಶಗಳ ಜನರ ನಡುವೆ ಸರಳ ಜೀವನ ನಡೆಸುವಇಚ್ಛೆಗೆ ಒಪ್ಪಿಗೆ ಇದ್ದಲ್ಲಿ ಮಾತ್ರಾ ತಮ್ಮನ್ನು ಮದುವೆ ಆಗಬಹುದು ಎಂದರಂತೆ. ಚಿಪ್ಕೊ ಚಳುವಳಿಗೆ ಸುಂದರಲಾಲ್ ಬಹುಗುಣ ರಿಗೆ ಪ್ರೇರಣೆ ನೀಡಿದವರು ಅವರ ಪತ್ನಿ ವಿಮಲಾ.
ಕರುನಾಡಿಗೂ ಅಪ್ಪಿಕೋಚಿಪ್ಕೊ ಚಳುವಳಿಯು, ಕರ್ನಾಟಕದಲ್ಲಿ ಅಪ್ಪಿಕೊ ಚಳುವಳಿಗೆ ಸ್ಫೂರ್ತಿ ನೀಡಿತು. ಇದೇ ರೀತಿಯಲ್ಲಿ ದೇಶದಲ್ಲಿ ನಡೆದ ಅನೇಕ ಪರಿಸರ ಹಾನಿಯ ವಿರುದ್ಧದ ಚಳವಳಿಗಳಿಗೆ ಬಹುಗುಣರ ಚಿಪ್ಕೊ ಚಳುವಳಿ ಪ್ರೇರಣೆ ನೀಡಿದೆ.
ಬಹುಗುಣ ಯಾನಸುಂದರಲಾಲ್ ಬಹುಗುಣ ಉತ್ತರಾಖಂಡದ ತೆಹ್ರಿ ಬಳಿಯ ಮರೊಡ ಎಂಬ ಹಳ್ಳಿಯಲ್ಲಿ 1927ರ ಜನವರಿ9ರಂದು ಜನಿಸಿದರು. ಅವರ ಪೂರ್ವಜರು ಬಂಡೋಪಾಧ್ಯಾಯ ಎಂಬ ವಂಶಾವಳಿಗೆ ಸೇರಿದವರಾಗಿದ್ದು ಸುಮಾರು ವರ್ಷಗಳ ಹಿಂದೆ ಬಂಗಾಳದಿಂದ ತೆಹ್ರಿ ಗ್ರಾಮಕ್ಕೆ ವಲಸೆ ಬಂದಿದ್ದರಂತೆ