ಅಸೋಸಿಯೇಟೆಡ್ ಪ್ರೆಸ್’ನಿಂದ ಯುವ ಪತ್ರಕರ್ತೆ ಎಮಿಲಿ ವೈಲ್ಡರ್ ವಜಾ
ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್ ಗಾಗಿ ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯಿಂದ ವಜಾ ಗೊಂಡಿದ್ದ ಯುವ ಪತ್ರಕರ್ತೆ ಎಮಿಲಿ ವೈಲ್ಡರ್ ತಮ್ಮನ್ನು “ವಸ್ತುನಿಷ್ಠತೆ ಮತ್ತು ಸಮಾಜ ಮಾಧ್ಯಮದ ನಿಯಮಾವಳಿಯ ಅಸಮಾನ ಜಾರಿಯ ಸಂತ್ರಸ್ತೆ” ಎಂದು ಕರೆದುಕೊಂಡಿದ್ದಾರೆ.
ಮಧ್ಯಪ್ರಾಚ್ಯದ ಸ್ಥಿತಿಗತಿ ಬಗೆಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದ ಎಮಿಲಿಯವರನ್ನು ಎಪಿ ಸುದ್ದಿಸಂಸ್ಥೆ ವಜಾ ಮಾಡಿತ್ತು. ಸಂಸ್ಥೆಯ ಕ್ರಮಕ್ಕಾಗಿ ವಾಗ್ದಾಳಿ ನಡೆಸಿರುವ ಅವರು, ನ್ಯಾಯದ ಬಗೆಗೆ ಒಲವು ಹೊಂದಿದ ಪರಿಣಾಮ ಬೀರಬಲ್ಲ ಕಥೆ ಹೇಳಲು ಹೊರಟಿರುವ ಯುವ ಜನಾಂಗಕ್ಕೆ ಯಾವ ಸಂದೇಶ ನೀಡಬಯಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಕ್ರೂರ ಟ್ರೋಲಿಂಗ್ ಮಾಡುವವರಿಗೆ ಅಸೋಸಿಯೇಟೆಡ್ ಪ್ರೆಸ್‍ ಸಂಸ್ಥೆ ಬಲಿಯಾಗುವ ಮೂಲಕ ಮಹತ್ವಾಕಾಂಕ್ಷಿ ವರದಿಗಾರರಿಗೆ ಯಾವ ಭವಿಷ್ಯದ ಭರವಸೆ ನೀಡುತ್ತದೆ ಎಂದು ಕೇಳಿದ್ದಾರೆ. ನನ್ನ ಧ್ವನಿಯನ್ನು ಹತ್ತಿಕ್ಕಿ ದಮನಿಸಲಾಗದು. ನಾನು ಶೀಘ್ರವೇ ಹಿಂದಿರುಗುತ್ತೇನೆ” ಎಂದು ಹೇಳಿದ್ದಾರೆ.
