ಕರೋನಾ ನ್ಯಾಷನಲ್‌ ಬ್ರೇಕಿಂಗ್‌: 1,96,427 ಜನರಲ್ಲಿ ಸೋಂಕು ಪತ್ತೆ, 3,511 ಮಂದಿ ಬಲಿ
ನವದೆಹಲಿ:ಭಾರತದಲ್ಲಿ ಕರೋನಾ ಅಟ್ಟಹಾಸ ಮುಂದುವರೆದಿದೆ. ಕಳೆದ 24 ಗಂಟೆಯಲ್ಲಿ 1,96,427 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2,69,48,874ಕ್ಕೆ ಏರಿಕೆಯಾಗಿದೆ. 3,511 ಜನರು ಮಹಾಮಾರಿಗೆ ಬಲಿಯಾಗಿ, ಈ ಬಲಿಯಾದವರ ಸಂಖ್ಯೆ 3,07,231 ಕ್ಕೆ ಏರಿಕೆಯಾಗಿದೆ.
25,86,782 ಕೋವಿಡ್ ಸಕ್ರಿಯ ಪ್ರಕರಣಗಳಿದ್ದು 2,40,54,861 ಸೋಂಕಿತರು ಗುಣಮುಖರಾಗಿದ್ದಾರೆ. 3,26,850 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಈವರೆಗೆ 33,25,94,176 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. 19,85,38,999 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ.